Water Bill: ರಾಜ್ಯದಲ್ಲಿ ಹೊಸ ನಿಯಮ ಜಾರಿ! ಇನ್ನು ಮುಂದೆ ನೀರಿಗೂ ಕೊಡಬೇಕು 10 ರೂಪಾಯಿ
ದೇಶದಲ್ಲಿ ಈಗ ವರ್ಷದಿಂದ ವರ್ಷಕ್ಕೆ ವಸ್ತುಗಳ ಬೆಲೆ ಏರಿಕೆ ಆಗುತ್ತಲೇ ಇದೆ, ಜಲಸಾಮಾನ್ಯರು ಹಣದುಬ್ಬರದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಪ್ರತಿ ವರ್ಷವೂ ಒಂದಲ್ಲ ಒಂದು ವಸ್ತುಗಳ ಬೆಲೆಯು ಏರಿಕೆ ಆಗುತ್ತಿದೆ. ದಿನ ಬಳಕೆ ವಸ್ತುಗಳ ಬೆಲೆಯಂತೂ ಕೇಳುವುದೇ ಬೇಡ ಆಗಾಗ ಏರಿಕೆ ಆಗುತ್ತಲೇ ಇರುತ್ತದೆ.
ಇದೀಗ ರಾಜ್ಯದಲ್ಲಿ ದಿನ ಬಳಕೆಯ ವಸ್ತುವಾದ ನೀರಿನ ಬೆಲೆಯು ಕೂಡ ಏರಿಕೆಯಾಗಿದೆ(Water bill hiked), ಮೊದಲೇ ಕಳೆದುಬ್ಬರದ ಪರಿಸ್ಥಿತಿಯಲ್ಲೂ ಎದುರಿಸುತ್ತಿರುವ ಜಲಸಾಮಾನ್ಯರಿಗೆ, ಇದೀಗ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದಂತಾಗಿದೆ. ರಾಜ್ಯದಲ್ಲಿ ನೀರಿನ ದರ ಎಷ್ಟು ಹೆಚ್ಚಾಗಿದೆ ಎನ್ನುವ ಮಾಹಿತಿಯು ಕೆಳಗಿನಂತಿದೆ.
ರಾಜ್ಯದಲ್ಲಿ ನೀರಿನ ದರ ಹೆಚ್ಚಳ!
ಸದ್ಯ ರಾಜ್ಯದಲ್ಲಿ ಮತ್ತೊಂದು ಅಗತ್ಯ ವಸ್ತುವಿನ ದರ ಏರಿಕೆಯಾಗಿದೆ, ಕೇವಲ 5 ರೂಪಾಯಿಗೆ ಸಿಗುತ್ತಿದ್ದ ಶುದ್ಧ ಕುಡಿಯುವ ನೀರು ಬೆಲೆ ಏರಿಕೆಯಾಗಿದೆ, ನೀರು ನಿರ್ವಹಣಾ ಮಂಡಳಿಗಳು ಪ್ರತಿ 20 ಲೀಟರ್ ಗೆ 5 ರಿಂದ 10 ರೂಪಾಯಿ ಹೆಚ್ಚಿಸುವ ಮೂಲಕ ಸಾರ್ವಜನಿಕರಿಗೆ ಬೀಗ್ ಶಾಕ್ ನೀಡಿದ್ದಾರೆ. ವಿದ್ಯುತ್ ಬಿಲ್ ಮತ್ತು ಯೂನಿಟ್ ನಿರ್ವಹಣಾ ವೆಚ್ಚದ ಹೆಚ್ಚಳದಿಂದಾಗಿ ಆರ್‌ಒ (RO)ಘಟಕಗಳನ್ನು ನಿರ್ವಹಿಸುತ್ತಿರುವ ಹಲವು ಏಜೆನ್ಸಿಗಳು ದರವನ್ನು ರೂ.5 ರಿಂದ 10 ಕ್ಕೆ ಏರಿಕೆ ಮಾಡಿದೆ.
ಈಗ ಕುಡಿಯುವ ನೀರಿನ ಘಟಕಗಳಲ್ಲಿ 20 ಲೀಟರ್ ನೀರು ಪಡೆಯಲು 5 ರೂಪಾಯಿ ಎರಡು ಕಾಯಿನ್ಗಳನ್ನು ಬಳಸಬೇಕಾಗುತ್ತದೆ. ನಗರಗಳಲ್ಲಿ ಒಟ್ಟು 1,052 ಕುಡಿಯುವ ನೀರಿನ ಘಟಕಗಳಿವೆ. ಜಲಸಾಮಾನ್ಯರು ಕುಡಿಯುವ ನೀರಿಗಾಗಿ ಪ್ರತಿದಿನ 5 ರೂಪಾಯಿಯ ಒಂದು ಕಾಯಿನ್(Coin) ಬಳಸಿ 20 ಲೀಟರ್ ನೀರನ್ನು ಪಡೆಯುತ್ತಿದ್ದರು. ಆದರೆ ಈಗ 5 ರೂಪಾಯಿಯ 2 ಕಾಯಿಳನ್ನು ಬಳಸಬೇಕಾದ ಪರಿಸ್ಥಿತಿ ಎದುರಾಗಿದೆ.
ಇನ್ನುಮುಂದೆ ನೀರಿಗೆ 5 ರೂ. ಬದಲು 10 ರೂ. ಹೆಚ್ಚಿಗೆ ನೀಡಬೇಕು
ರಾಜ್ಯದಲ್ಲಿ ಹೆಚ್ಚಿನ ಜನರು, ಚಾಟ್ಸ್ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಪಿ.ಜಿ ನಿರ್ವಹಣೆ ಮಾಡುವವರು, ರಸ್ತೆ ಬದಿಯ ಫಾಸ್ಟ್ ಫುಡ್(fast Food) ವ್ಯಾಪಾರಿಗಳು, ಮನೆಯಲ್ಲಿ ನೀರನ್ನು ಶುದ್ಧೀಕರಿಸಲು ಸಾಧ್ಯವಾಗದ ಅನೇಕರು ಕುಡಿಯಲು RO ಫ್ಲಾಟ್‌ಗಳನ್ನು ಅವಲಂಬಿಸಿದ್ದರು.
ಯಾವುದೇ ಸೂಚನೆಯನ್ನು ನೀಡಿದೆ ನೀರಿನ ಬೆಲೆ ಹೆಚ್ಚಿಸಿರುವುದು ಸರಿಯಾದ ಕ್ರಮವಲ್ಲ ಎಂದು ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ, ಈಗಾಗಲೇ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ ಈಗ ನೀರಿನ ಬೆಲೆ ಏರಿಕೆಯಿಂದ ಜನರಿಗೆ ಇನ್ನಷ್ಟು ಹೊರೆಯಾಗಲಿದೆ ಎನ್ನಬಹುದು.