Union Ministry: ಕೇಂದ್ರದಿಂದ ಈ ಅಕೌಂಟ್ ಹೊಂದಿದವರಿಗೆ ಬಿಗ್ ಅಪ್ಡೇಟ್; ಗೃಹಲಕ್ಷ್ಮಿ ಯೋಜನೆಗೆ ಸೆಡ್ಡು ಕೊಡಲು ಮುಂದಾದ ಕೇಂದ್ರ ಸರ್ಕಾರ!
ಕೇಂದ್ರ ಸರ್ಕಾರವು ರೂಪಿಸಿರುವಂತಹ ಪ್ರಧಾನ ಮಂತ್ರಿ ಜನ್ ಧನ ಯೋಜನೆಯಡಿಯಲ್ಲಿ ಜನರಿಗೆ ಅನುಕೂಲವಾಗುವಂತಹ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಫಲಾನುಭವಿಗಳು ಈ ಯೋಜನೆ ಅಡಿ ಅರ್ಜಿ ಸಲ್ಲಿಸಿ(Application) ಸಿಗುವ ಸವಲತ್ತುಗಳನ್ನು ಬಳಕೆ ಮಾಡಿಕೊಂಡು ಜೀವನವನ್ನು ನಡೆಸುತ್ತಿದ್ದಾರೆ. ಅದರಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದೀಗ ವಿಶೇಷವಾದ ಜನಧನ್(Jan Dan) ಯೋಜನೆಯನ್ನು ಜಾರಿಗೊಳಿಸಿದ್ದು, ಅರ್ಹ ಫಲಾನುಭವಿಗಳು ಈ ಯೋಜನೆಯೆಲ್ಲಿ ಪ್ರತಿ ತಿಂಗಳು ರೂ.2,000 ಹಣವನ್ನು ಪಡೆಯಬಹುದಾಗಿದೆ.
ಪ್ರಧಾನ ಮಂತ್ರಿ ಜನ್ ಧನ್ ಯೋಜನೆ!
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2014ರ ಲೋಕಸಭಾ ಚುನಾವಣೆ ಗೆದ್ದ ಬಳಿಕ, ಆಗಸ್ಟ್ 14 2014 ರಂದು ಪ್ರಧಾನ ಮಂತ್ರಿ ಜನ್ ಧನ್ ವಿಶೇಷ ಆರ್ಥಿಕ ಯೋಜನೆಯನ್ನು ಜಾರಿಗೆಗೊಳಿಸಿದ್ದಾರೆ. ಯೋಜನೆಯ ಮುಖ್ಯ ಉದ್ದೇಶವೇನೆಂದರೆ ಭಾರತದ ಪ್ರತಿಯೊಬ್ಬ ಗ್ರಾಹಕನು ATS ಸರ್ವಿಸ್ ಗೆ (services) ಸಂಪರ್ಕಗೊಳಿಸುವುದಾಗಿದೆ. ಜಗತ್ತು ಎಷ್ಟೇ ಮುಂದುವರಿದರು, ತಂತ್ರಜ್ಞಾನ ಕ್ಷೇತ್ರದಲ್ಲಿ(Digitel) ಎಷ್ಟೇ ಸಾಧನೆ ಮಾಡಿದರು ಕೂಡ ಗ್ರಾಮೀಣ ಭಾಗದಲ್ಲಿರುವ ಜನರು ಈಗಲೂ ಸಹ ಬ್ಯಾಂಕ್ ಮತ್ತು ಹೊರಗಿನ ಆಧುನಿಕ ಪ್ರಪಂಚದೊಂದಿಗೆ ಸಂಪರ್ಕವನ್ನು ಹೊಂದಿಲ್ಲ, ಹೀಗಾಗಿ ಗ್ರಾಮೀಣ ಭಾಗದ ಜನರು ಜನ್ ಧನ್ ಯೋಜನೆಯ ಮೂಲಕ ಬ್ಯಾಂಕುಗಳ (Banks) ಸಂಪರ್ಕವನ್ನು ಬಳಸಿಕೊಂಡು ಅದರ ಉಪಯೋಗವನ್ನು ಪಡೆದುಕೊಳ್ಳಬೇಕೆಂಬುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಪ್ರಯೋಜನಗಳು
- ಈ ಯೋಜನೆಯಡಿ ಬ್ಯಾಂಕ್ ಖಾತೆಯನ್ನು ತೆರೆದರೆ ಸರಾಸರಿ ಒಂದು ಲಕ್ಷದ ವರೆಗೂ ಆಘಾತ ವಿಮೆಯನ್ನು ಪಡೆಯಬಹುದು.
- ಯಾವುದೇ ಬ್ಯಾಂಕಿನಲ್ಲಿ ಶೂನ್ಯ ಬ್ಯಾಲೆನ್ಸ್(Zero Balance) ಖಾತೆಯನ್ನು ತೆರೆಯುವ ಅವಕಾಶ ಈ ಯೋಜನೆ ಯಲ್ಲಿದೆ.
- ಚಂದನ್ ಯೋಜನೆಯಡಿ ಖಾತೆಯನ್ನು ಹೊಂದಿದವರಿಗೆ ಡೆಬಿಟ್ ಕಾರ್ಡ್ (Debit Card) ಸೌಲಭ್ಯ ಸಿಗುತ್ತದೆ, ಇದರಿಂದ ಸುಲಭವಾಗಿ ATM ಮೂಲಕ ಹಣವನ್ನು ತೆಗೆಯಬಹುದು.
- ಓವರ್ ಡ್ರಾಫ್ಟ್ ಸೌಲಭ್ಯವನ್ನು ಕೂಡ ಕಲ್ಪಿಸಿಕೊಡಲಾಗಿದೆ.
ಪ್ರಧಾನಮಂತ್ರಿ ಜನ್ ಧನ್ ಯೋಜನೆಯಡಿ ಖಾತೆಯನ್ನು ಹೊಂದಿದವರಿಗೆ ರೂ.2,000 ದೊರೆಯಲಿದೆ.
ಈ ಯೋಜನೆಯಡಿ ಖಾತೆಯನ್ನು ಹೊಂದಿದವರಿಗೆ ಸಾಕಷ್ಟು ಪ್ರಯೋಜನಗಳು ದೊರಕಲಿದೆ, ಅದರಲ್ಲೂ ಮುಖ್ಯವಾಗಿ ನಿಮ್ಮ ಖಾತೆಯಲ್ಲಿ ಜೀರೋ ಬ್ಯಾಲೆನ್ಸ್(Zero Balance) ಹೊಂದಿದರೂ ಕೂಡ 2000 ರೂಪಾಯಿಯನ್ನು ವಿತ್ ಡ್ರಾ(Withdrawal) ಮಾಡಬಹುದಾಗಿದೆ.
ಈ ಯೋಜನೆಯಲ್ಲಿ ನಿಮ್ಮ ಖಾತೆಯಲ್ಲಿ ಹಣ ಇಲ್ಲದಿದ್ದರೂ ಕೂಡ ತುರ್ತು ನಿಧಿಯನ್ನು ನೀಡಲಾಗುತ್ತದೆ. ಗ್ರಾಹಕರು ನ್ಯಾಷನಲ್ ಬ್ಯಾಂಕುಗಳಲ್ಲಿ(National Banks) ತಮ್ಮ ಖಾತೆಯನ್ನು ತೆರೆದರೆ 2000 ರೂಪಾಯಿಯಿಂದ 10,000 ದವರೆಗೆ ಓವರ್ಡ್ರಾಫ್ಟ್ ಹಣವನ್ನು ತೆಗೆಯಬಹುದು.
ಗ್ರಾಹಕರಿಗೆ ಯಾವುದೇ ತುರ್ತು ಸಂದರ್ಭದಲ್ಲಿ ಈ ಖಾತೆಯಿಂದ ಹಣವನ್ನು ತೆಗೆಯಬಹುದು, ಅದನ್ನು ನಿಗದಿತ ಅವಧಿಯೊಳಗೆ ಯಾವುದೇ ಹೆಚ್ಚುವರಿ ಬಡ್ಡಿ (Intrest) ಇಲ್ಲದೆ ಮರುಪಾವತಿ ಮಾಡಬಹುದಾಗಿದೆ.