Loan: ಬಡ್ಡಿ ಇಲ್ಲದೆ 03 ಲಕ್ಷದವರೆಗೆ ಸಾಲ, ಮೋದಿ ಅವರ ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ!
ಸರ್ಕಾರ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎನ್ನುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ರೂಪಿಸುತ್ತಾ ಇದೆ, ಅವರು ಸ್ವಾವಲಂಬಿಯಾಗಿ ಬದುಕನ್ನು ನಡೆಸಬೇಕು ಎಂಬುವುದು ಸರ್ಕಾರದ ಗುರಿಯಾಗಿದೆ. ಇದೀಗ ಮಹಿಳೆಯರು ತಮ್ಮ ಸ್ವಂತ ಉದ್ಯೋಗದ ಕನಸಿಗೆ ಸರ್ಕಾರವು ನೆರವಾಗಲಿದೆ.
ಮಹಿಳೆಯರು ಸರ್ಕಾರದ ಯೋಜನೆಯಿಂದ ಲಾಭವನ್ನು ಪಡೆಯಬಹುದು, ಹಾಗೂ ತಮ್ಮ ಆರ್ಥಿಕ ಜೀವನವನ್ನು ಸುಧಾರಿಸಿಕೊಳ್ಳಬಹುದು. ಮಹಿಳೆಯರಿಗಾಗಿ ಕೇಂದ್ರ ಸರ್ಕಾರವು ಯಾವ ಯೋಜನೆಯನ್ನು ಜಾರಿಗೆ ತಂದಿದೆ ಎಂಬ ಮಾಹಿತಿಯನ್ನು ಮೂಲಕ ತಿಳಿಯೋಣ.
ಮಹಿಳೆಯರಿಗಾಗಿ 3 ಲಕ್ಷ ಬಡ್ಡಿ ರಹಿತ ಸಾಲ
ಸರ್ಕಾರವು ಮಹಿಳೆಯರಿಗಾಗಿ ರೂಪಿಸಿದ ಯೋಜನೆಯೇ, ಉದ್ಯೋಗಿನಿ ಯೋಜನೆ(Udyogini Yojana)ಯಾಗಿದೆ. ಈ ಯೋಜನೆ ಅಡಿ ಮಹಿಳೆಯರಿಗೆ 3 ಲಕ್ಷದವರೆಗೆ ಸಾಲವನ್ನು(Loan) ನೀಡಲಾಗುತ್ತದೆ, ಮಹಿಳೆಯರಿಗೆ 88 ಬಗೆಯ ಸಣ್ಣ ಉದ್ಯೋಗಗಳನ್ನು(small Business) ಸ್ಥಾಪಿಸಲು ಯೋಜನೆಯು ಸಹಾಯವಾಗಲಿದೆ.
ಸರ್ಕಾರವು ಉದ್ಯೋಗಿನಿ ಯೋಜನೆ(Udyogini ಸ್ಕೀಮ್)ಯನ್ನು ಜಾರಿಗೊಳಿಸಿರುವ ಹಿಂದಿನ ಉದ್ದೇಶವೇನೆಂದರೆ, ಮಹಿಳೆಯರು ಉದ್ಯಮಿಗಳಾಗಿ ಬೆಳೆದು ತಮ್ಮ ಸ್ವಂತ ಕಾಲಿನಲ್ಲಿ ನಿಲ್ಲಬೇಕು ಎನ್ನುವುದು ಸರ್ಕಾರದ ಮೂಲ ಉದ್ದೇಶವಾಗಿದೆ. ಸರ್ಕಾರವು ಗ್ರಾಮೀಣ(Rural) ಭಾಗದ ಮಹಿಳೆಯರಿಗೆ ಆರ್ಥಿಕ ನೆರವಾಗಲು ಈ ಯೋಜನೆಯನ್ನು ರೂಪಿಸಿದೆ. ಈಗಾಗಲೇ ಈ ಯೋಜನೆಯಡಿಯಲ್ಲಿ, 48,000 ಮಹಿಳೆಯರು ಸಣ್ಣ ಉದ್ಯಮಿಗಳಾಗಿದ್ದಾರೆ. 18 ರಿಂದ 55 ವರ್ಷದೊಳಗಿನ ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆಯಬಹುದು.
ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ, ಯೋಜನೆಯ ಲಾಭವನ್ನು ಪಡೆದುಕೊಳ್ಳಿ!
ಈ ಯೋಜನೆಯಡಿಯಲ್ಲಿ ಮಹಿಳೆಯರು 03 ಲಕ್ಷದವರೆಗೆ ಸಾಲವನ್ನು ಪಡೆಯಬಹುದು, ಹಾಗೂ ವಿಧವೆಯರಿಗೆ, ಅಂಗವಿಕಲ ಮಹಿಳೆಯರಿಗೆ ಸಾಲದ(Loan) ಮಿತಿ ಇಲ್ಲ. ವಿದ್ಯಾರ್ಹತೆ ಮತ್ತು ವ್ಯವಹಾರದ ಆಧಾರದ ಮೇಲೆ ಅಂಗವಿಕಲ ಮಹಿಳೆಯರಿಗೆ ಮತ್ತು ವಿಧವೆಯರಿಗೆ ಹೆಚ್ಚಿನ ಸಾಲವನ್ನು ನೀಡಲಾಗುತ್ತದೆ.
ಅಂಗವಿಕಲ ಮಹಿಳೆಯರಿಗೆ ಮತ್ತು ವಿಧವೆಯರಿಗೆ ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತದೆ, ಇತರ ಮಹಿಳೆಯರಿಗೆ ಶೇ.10 ರಿಂದ 12 ರ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಜನನ ಪ್ರಮಾಣ ಪತ್ರ
ಹಾಗೂ ಇನ್ನಿತರ ಮುಖ್ಯ ದಾಖಲೆಗಳ ವಿವರಗಳನ್ನು ನೀಡಿ, ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.