Tax Saving: ಇನ್ನು ಮುಂದೆ ಇಂಥವರು 10 ಲಕ್ಷ ಆದಾಯ ಇದ್ದರೂ ತೆರಿಗೆ ಕಟ್ಟುವ ಅವಶ್ಯಕತೆ ಇಲ್ಲ, ಹೊಸ ನಿಯಮ ಜಾರಿ..!
ದೇಶದಲ್ಲಿ ಹೊಸ ಬಜೆಟಿನ ಅನುಸಾರವಾಗಿ, ತೆರಿಗೆಯ ನಿಯಮಗಳು ದಿನದಿಂದ ದಿನಕ್ಕೆ ಬದಲಾಗುತ್ತಾ ಇದೆ. ಆದಾಯ ತೆರಿಗೆ ಪಾವತಿದಾರರು ಜುಲೈ 31ರ ಒಳಗೆ ITR ಕಲಿಸಬೇಕಿದೆ, ಐಟಿಆರ್ (ITR) ಸಲ್ಲಿಸುವ ಗಡುವು ಕೂಡ ಹತ್ತಿರವಾಗುತ್ತಿದೆ. ಪಾವತಿ ದಾರರು ತೆರಿಗೆ ಉಳಿತಾಯದ ಕಡೆ ಹೆಚ್ಚಿನ ಗಮನಹರಿಸುತ್ತಿದ್ದಾರೆ, ಇನ್ನು ಆದಾಯ ಇಲಾಖೆಯು ಕೆಲವು ಮೂಲದ ಆದಾಯಗಳಿಗೆ ತೆರಿಗೆಯ ವಿನಾಯಿತಿಯನ್ನು ನೀಡುತ್ತಿದೆ.
ತೆರಿಗೆ ಇಲಾಖೆಯ ಪ್ರಕಾರ, ನಿಮ್ಮ ಆದಾಯವು ಈ ಎರಡು ವ್ಯವಸ್ಥೆಗಳಿಗಿಂತ ಹೆಚ್ಚಿದ್ದರೆ ನೀವು ತೆರಿಗೆ ಉಳಿಸಲು ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ನಿಮ್ಮ ಆದಾಯ 10 ಲಕ್ಷ ಆಗಿದ್ದರೆ ನೀವು ತೆರಿಗೆಯ ವಿನಾಯಿತಿಯನ್ನು(Tax Relaxation) ಕೂಡ ಪಡೆಯಬಹುದು. ಯಾವ ಸಮಯದಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಬಹುದು? ತೆರಿಗೆ ವಿನಾಯಿತಿಯನ್ನು ಹೇಗೆ ಪಡೆಯುವುದು? ಎಂಬ ಮಾಹಿತಿಯು ಕೆಳಗಿನಂತಿವೆ.
ಇನ್ಮುಂದೆ 10 ಲಕ್ಷದ ಈ ಆದಾಯಕ್ಕೆ ರೂ.1 ಕೂಡ, ತೆರಿಗೆ ಕಟ್ಟುವ ಹಾಗಿಲ್ಲ.
ನಿಮ್ಮ 10 ಲಕ್ಷದ ವಾರ್ಷಿಕ ಆದಾಯದ ಮೇಲೆ ತೆರಿಗೆ ಉಳಿಸಲು ನೀವು ಹಳೆಯ ತೆರಿಗೆ ಪದ್ಧತಿಯನ್ನು ಅನುಸರಿಸಬೇಕಾಗುತ್ತದೆ. ಹಳೆಯ ತೆರಿಗೆ ಪದ್ಧತಿಯಲ್ಲಿ ನಿಮಗೆ ವಿವಿಧ ತೆರಿಗೆ ಸ್ಲಾಬ್ಗಳು ಲಭ್ಯವಿದೆ. ತೆರಿಗೆ ಇಲಾಖೆಯ ನಿಯಮದ ಪ್ರಕಾರ 2.5 ಲಕ್ಷದವರೆಗಿನ ವಾರ್ಷಿಕ ಆದಾಯದ ಮೇಲೆ ಯಾವುದೇ ತೆರಿಗೆಯನ್ನು ಪಾವತಿಸುವ ಹಾಗಿಲ್ಲ, 2.5 ರಿಂದ 5 ಲಕ್ಷ ಆದಾಯದ ಮೇಲೆ 5% ರಷ್ಟು ತೆರಿಗೆಯನ್ನು ನಿಗದಿಪಡಿಸಲಾಗಿದೆ.
ಇನ್ನು ಐದು ಲಕ್ಷದಿಂದ 10 ಲಕ್ಷದ ವಾರ್ಷಿಕ ಆದಾಯದ ಮೇಲೆ ಶೇಕಡ 20 ತೆರಿಗೆ ಪಾವತಿಸಬೇಕಾಗುತ್ತದೆ, 10 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರು 30% ತೆರಿಗೆ ಸ್ಲಾಬ್(Slab) ಕಟ್ಟಬೇಕು. ನಿಮ್ಮ ಆದಾಯ(Income) 10 ಲಕ್ಷ ಆಗಿದ್ದರೆ ನೀವು ಶೇಕಡ 30ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ, ಆದರೆ ಒಂದು ರೂಪಾಯಿಯನ್ನು ಕೂಡ ತೆರಿಗೆ ಪಾವತಿಸಿದೆ ಇರಬೇಕೆಂದರೆ, ನೀವು ಕೆಲವು ಹೂಡಿಕೆಗಳನ್ನು (Investment) ಮಾಡುವ ಮೂಲಕ ಕಡಿತಗಳನ್ನು ಪಡೆಯುವ ಮೂಲಕ ಸಂಪೂರ್ಣ ತೆರಿಗೆಯನ್ನು ಉಳಿಸಬಹುದು.
ಯಾವ ವಿಧಾನವನ್ನು ಅನುಸರಿಸಿದರೆ ತೆರಿಗೆಯನ್ನು ಉಳಿಸಬಹುದು..!
- ಸ್ಟ್ಯಾಂಡರ್ಡ್ ಡಿಡಕ್ಷನ್ ಅನುಸಾರವಾಗಿ 50,000 ವರೆಗೆ ರಿಯಾಯಿತಿ ಲಭ್ಯವಿದೆ, ಇಂತಹ ಪರಿಸ್ಥಿತಿಯಲ್ಲಿ ನಿಮಗೆ 9.50 ಲಕ್ಷ ಆದಾಯದ ಮೇಲೆ ತೆರಿಗೆ ವಿಧಿಸಲಾಗುತ್ತದೆ.
- ನೀವು ಪೆನ್ಷನ್ ಸ್ಕೀಮ್ ಗಳಲ್ಲಿ ಹೂಡಿಕೆ ಮಾಡುವ ಮೂಲಕ, section 80c ಅಡಿಯಲ್ಲಿ 1.5 ಲಕ್ಷ ರೂಪಾಯಿಯ ತೆರಿಗೆಯನ್ನು ಉಳಿಸಬಹುದು, ಅಂದರೆ ನೀವು ಉಳಿದ 8.5 ಲಕ್ಷ ಆದಾಯಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ.
- ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ವಾರ್ಷಿಕವಾಗಿ ರೂ.50,000 ಹೂಡಿಕೆ ಮಾಡಿದರೆ Section 80C ಅಡಿಯಲ್ಲಿ 50,000 ಹೆಚ್ಚುವರಿ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಈಗ ನಿಮ್ಮ ಆದಾಯ 50,000 ಕಡಿಮೆಯಾದ ನಂತರ ಉಳಿದ ತೆರಿಗೆ 7.50 ಲಕ್ಷ.
- ನೀವು ಗೃಹ ಸಾಲವನ್ನು ತೆಗೆದುಕೊಂಡರೆ ಬಡ್ಡಿಯಲ್ಲಿ 2 ಲಕ್ಷದವರೆಗೆ ಉಳಿಸಬಹುದು.7.50 ಲಕ್ಷದಿಂದ ಎರಡು ಲಕ್ಷ ಕಳೆದರೆ ಉಳಿದ ತೆರಿಗೆಯ ಪಾವತಿಯ ಮೊತ್ತ ರೂ.5.50 ಲಕ್ಷ.
- ಸೆಕ್ಷನ್ 80D ಅಡಿಯಲ್ಲಿ ವೈದ್ಯಕೀಯ ಪಾಲಿಸಿಯನ್ನು(Health Insurance) ತೆಗೆದುಕೊಳ್ಳುವ ಮೂಲಕ 25,000 ವರೆಗೆ ತೆರಿಗೆ ಉಳಿಸಬಹುದು.