Sukanya Samriddhi: ಸುಕನ್ಯಾ ಸಮೃದ್ಧಿ ಯೋಜನೆಗಳಲ್ಲಿ ಹೊಸ ಬದಲಾವಣೆ! ಇಲ್ಲಿದೆ ಸಂಪೂರ್ಣ ಮಾಹಿತಿ.

Sukanya Samriddhi: ಸುಕನ್ಯಾ ಸಮೃದ್ಧಿ ಯೋಜನೆಗಳಲ್ಲಿ ಹೊಸ ಬದಲಾವಣೆ! ಇಲ್ಲಿದೆ ಸಂಪೂರ್ಣ ಮಾಹಿತಿ.

ಅನಿಯಮಿತವಾಗಿ ತೆರೆಯಲಾಗಿರುವ ಸ್ಮಾಲ್ ಸೇವಿಂಗ್ಸ್ ಸ್ಕೀಮ್ ಖಾತೆಗಳನ್ನು(Small Shavings Account) ರೆಗ್ಯುಲರೈಸ್ ಮಾಡಲಾಗುತ್ತಿದೆ, ಈ ಹಿನ್ನೆಲೆಯಲ್ಲಿ ಅಕ್ಟೋಬರ್ 1ರಿಂದ ಹೊಸ  ನಿಯಮಗಳು ದೇಶದಾದ್ಯಂತ ಜಾರಿಗೆ ಬರಲಿದೆ. ಈ ನಿಯಯಕ್ಕೆ ವಿರುದ್ಧವಾಗಿ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ತೆರೆಯಲಾಗಿದ್ದರೆ, ಹೆಚ್ಚುವರಿ ಖಾತೆಗಳನ್ನು ರದ್ದುಗೊಳಿಸಲಾಗುತ್ತದೆ, ಯಾವ ಯಾವ ನಿಯಮಗಳಲ್ಲಿ ಬದಲಾವಣೆ ಆಗುತ್ತದೆ ಎನ್ನುವುದನ್ನು ಈ ಲೇಖನ ಮೂಲಕ ತಿಳಿಯೋಣ, ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

ಯೋಜನೆಗೆ ಸಂಬಂಧಿಸಿದ ಹಾಗೆ ತೆರೆಯಲಾದ ನ್ಯಾಷನಲ್ ಸ್ಮಾಲ್ ಸೇವಿಂಗ್ಸ್ (Nationala Small Savings) ಯೋಜನೆಗಳ ಅಡಿಯಲ್ಲಿ ತೆರೆಯಲಾದ ವಿವಿಧ ಖಾತೆಗಳಿಗೆ ಸಂಬಂಧಿಸಿದ ಹಾಗೆ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ, ಹೆಚ್ಚುವರಿ ಬಡ್ಡಿ ದರಗಳ ವಿಷಯಕ್ಕೆ ಸಂಬಂಧಿಸಿದ್ದು ಅಲ್ಲ, ನಿಯಮಗಳ ಪ್ರಕಾರಗಳಲ್ಲಿ ಇಲ್ಲದ ಖಾತೆಗಳನ್ನು ರೆಗುಲೇಷನ್ ಮಾಡುವ ದೃಷ್ಟಿಯಿಂದ ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆಯು ಕೆಲ ನಿಯಮಗಳನ್ನು ಆಗಸ್ಟ್ ತಿಂಗಳಿನಲ್ಲಿ ಸುತ್ತೋಲೆಯನ್ನು ಹೊರಡಿಸಿತ್ತು, ಅದರ ಪ್ರಕಾರವಾಗಿ ಅಕ್ಟೋಬರ್ ಒಂದರಿಂದ ಹೊಸ ನಿಯಮಗಳು ದೇಶದಾದ್ಯಂತ ಜಾರಿಗೆ ಬರಲಿದೆ.

WhatsApp Group Join Now
Telegram Group Join Now

ಅನಿಯಮಿತ ಎನ್ಎಸ್ಎಸ್ ಖಾತೆಗಳು

ನ್ಯಾಷನಲ್ ಸೇವಿಂಗ್ಸ್ ಯೋಜನೆ ಅಡಿಯಲ್ಲಿ ಒಬ್ಬರೇ ವ್ಯಕ್ತಿಯಿಂದ ಎರಡು ಖಾತೆಗಳನ್ನು ಶುರು ಮಾಡಲಾಗಿದ್ದರೆ, ಮೊದಲು ತೆರೆದ ಖಾತೆಯನ್ನು ಮಾನ್ಯ ಮಾಡಲಾಗುತ್ತದೆ, ಎರಡನೇ ಖಾತೆಗೆ ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟಿನ ದರದ ಪ್ರಕಾರ ಬಡ್ಡಿ ಹಾಗೂ ಶೇ.2ರಷ್ಟು ಹೆಚ್ಚುವರಿ ಬಡ್ಡಿಯನ್ನು ನೀಡಲಾಗುತ್ತದೆ. ಆದರೆ ಯೋಜನೆಯ ಮೊದಲು ಯಾವ ಖಾತೆಯನ್ನು ತೆರೆದಿದ್ದಾರೋ ಆ ಖಾತೆಯನ್ನು ಮಾತ್ರ ಮಾನ್ಯ ಮಾಡುತ್ತದೆ, ಎರಡನೇ ಖಾತಿಯನ್ನು ಅಂಚೆ ಕಚೇರಿ ಅನುಗುಣವಾಗಿ ಬಡ್ಡಿ ದರದ ಆಧಾರದ ಮೇಲೆ ಸೀಮಿತವಾಗಿ ನಡೆಸಲಾಗುತ್ತದೆ.

ಇದನ್ನು ಓದಿ:DLSA RECRUITMENT| ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ನೇಮಕಾತಿ 2024

ಇಲ್ಲಿ ಎನ್ಎಸ್ಎಸ್ ಖಾತೆಗೆ ನಿಗದಿ ಮಾಡಲಾಗಿರುವ ವಾರ್ಷಿಕ ಠೇವಣಿ ಮಿತಿಯೊಳಗೆ ಇರುವ ಹಣಕ್ಕೆ ಮಾತ್ರವೇ ಈ ಯೋಜನೆ ಅಡಿಯಲ್ಲಿ ಬಡ್ಡಿ ಸಿಗುತ್ತದೆ. ಹೆಚ್ಚುವರಿ ಹಣವನ್ನು ಹೂಡಿಕೆ ಮಾಡಿದ್ದರೆ, ಬಡ್ಡಿ ಇಲ್ಲದೇ ಕೇವಲ ಅಸಲು ಹಣವನ್ನು ಹೂಡಿಕೆದಾರರಿಗೆ ಹಿಂತಿರುಗಿಸಲಾಗುತ್ತದೆ.

ಅಪ್ರಾಪ್ತರ ಹೆಸರಲ್ಲಿ ಪಿಪಿಎಫ್ ಖಾತೆ ತೆರೆದಿದ್ದರೆ…

ನೀವೇನಾದರೂ ಚಿಕ್ಕ ಮಕ್ಕಳ ಹೆಸರಿನಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ತೆರೆದಿದ್ದರೆ ಅದಕ್ಕೆ ರೆಗುಲರ್ ಸ್ಕೀಮ್ (Regular Scheme) ಪ್ರಕಾರ ಬಡ್ಡಿ ದೊರೆಯುವುದಿಲ್ಲ, ಇದನ್ನು ಇಲಾಖೆಯು ಇರ್ ರೆಗ್ಯುಲರ್ ಅಕೌಂಟ್ ಎಂದು ಪರಿಗಣನೆ ಮಾಡುತ್ತದೆ. ಉಳಿತಾಯ ಖಾತೆಯ ಬಡ್ಡಿದರ ಮಾತ್ರವೇ ಇಲ್ಲಿ ಅನುಗುಣವಾಗುತ್ತದೆ. ಮಗುವಿಗೆ 18 ವರ್ಷ ತುಂಬಿದ ಬಳಿಕ ಆ ಉಳಿತಾಯ ಖಾತೆಯು ರೆಗುಲರ್ ಆಗಿ ಚಾಲ್ತಿಯಲ್ಲಿ ಮುಂದುವರಿಯುತ್ತದೆ. ಸರಿಯಾದ ವಯಸ್ಸಿನ ಅನುಗುಣವಾಗಿ ಬಡ್ಡಿದರ ಇಲ್ಲಿ ಅನ್ವಯವಾಗುತ್ತದೆ, 18 ವರ್ಷ ವಯಸ್ಸಿನಿಂದಲೇ ಮೆಚುರಿಟಿ ಅವಧಿಯ ಲೆಕ್ಕ ಶುರುವಾಗುತ್ತದೆ.

ಇದನ್ನು ಓದಿ: PDO RECRUITMENT| ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆ ನೇಮಕಾತಿ 2024

ಒಂದಕ್ಕಿಂತ ಹೆಚ್ಚು ಪಿಪಿಎಫ್ ಖಾತೆಗಳಿದ್ದರೆ…

ಸರ್ಕಾರದ ನಿಯಮದ ಪ್ರಕಾರ, ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದೇ ಪಿಪಿಎಫ್(PPF) ಖಾತೆ ತೆರೆಯಲು ಅವಕಾಶ ಇದೆ, ಒಂದು ವೇಳೆ ಒಂದಕ್ಕಿಂತ ಹೆಚ್ಚು ಅಕೌಂಟ್ಗಳನ್ನು ಹೊಂದಿದ್ದು ಅದನ್ನು ಚಾಲ್ತಿ ಮಾಡುತ್ತಿದ್ದಾರೆ, ಆಗ ಪ್ರಾಥಮಿಕ ಖಾತೆಗೆ ರೆಗ್ಯುಲರ್ ಇಂಟರೆಸ್ಟ್(Ragular Intrest) ಸಿಗುತ್ತದೆ. ಉಳಿದ ಉಳಿತಾಯ ಖಾತೆಗಳನ್ನು ಪ್ರೈಮರಿ ಅಕೌಂಟ್ನೊಂದಿಗೆ ವಿಲೀನ ಮಾಡಲಾಗುತ್ತದೆ. ಇಲ್ಲಿ ನೀವು ಪಿಪಿಎಫ್ಗೆ(PPF) ವಾರ್ಷಿಕ ಹೂಡಿಕೆ ಮಿತಿ ಒಂದೂವರೆ ಲಕ್ಷ ರೂ ಇದೆ. ಒಂದು ವೇಳೆ ಬಹುಖಾತೆಗಳಿದ್ದು ಎಲ್ಲೆಡೆ ಮಾಡಲಾಗಿರುವ, ಒಟ್ಟಾರೆ ಹೂಡಿಕೆಯು ಈ ಮಿತಿಗಿಂತ ಹೆಚ್ಚು ಇದ್ದಲ್ಲಿ, ಹೆಚ್ಚುವರಿ ಹಣವನ್ನು ಬಡ್ಡಿರಹಿತವಾಗಿ ಹೂಡಿಕೆದಾರರಿಗೆ ಹಿಂತಿರುಗಿಸಲಾಗುತ್ತದೆ.

ಇದನ್ನು ಓದಿ: Zilla Panchayat Recruitment| ಜಿಲ್ಲಾ ಪಂಚಾಯತ್ ನೇಮಕಾತಿ 2024

ಎನ್ಆರ್ಐಗೆ ಪಿಪಿಎಫ್ ಖಾತೆ

ಅನಿವಾಸಿಯಾದ ಭಾರತೀಯರಿಗೆ ಈಗ ಪಿಪಿಎಫ್(PPF) ಸ್ಕೀಮ್ ಲಭ್ಯವಿರುವುದಿಲ್ಲ. ಆದರೆ, 1968ರ ಪಿಪಿಎಫ್ ಸ್ಕೀಮ್(PPF Scheme) ಅಡಿಯಲ್ಲಿ ಫಾರ್ಮ್ ಎಚ್ನಲ್ಲಿ ವಾಸಸ್ಥಳವನ್ನು ಕೇಳಲಾಗುತ್ತಿರಲಿಲ್ಲ, ಆಗ ಎನ್ಆರ್ಐಗಳೂ(NRI) ಪಿಪಿಎಫ್ ಅಕೌಂಟ್(PPF Account) ತೆರೆಯಬಹುದಿತ್ತು. ಅಂಥ ಸಂದರ್ಭದಲ್ಲಿ ಎನ್ಆರ್ಐಗಳು(NRI) ಪಿಪಿಎಫ್(PPF) ಖಾತೆ ತೆರೆದಿದ್ದರೂ ಅದನ್ನು ರೆಗ್ಯುಲರ್ ಅಕೌಂಟ್(Regularly Account) ಎಂದು ಮಾನ್ಯ ಮಾಡಲಾಗುವುದಿಲ್ಲ, ಈಗಲೂ ಆ ಖಾತೆ ಸಕ್ರಿಯವಾಗಿದ್ದರೆ ಸೇವಿಂಗ್ಸ್ ಅಕೌಂಟ್ನ ಬಡ್ಡಿದರ ಮಾತ್ರವೇ ನೀಡಲಾಗುತ್ತದೆ. ಅಕ್ಟೋಬರ್ 1ರಿಂದ ಅದೂ ಕೂಡ ನಿಮಗೆ ದೊರೆಯುವುದಿಲ್ಲ. ನೀವಿದ್ದಾದರೂ ಬೇರೆ ದೇಶದ ಅನಿವಾಸಿಯಾಗಿದ್ದರೆ ಇಲ್ಲಿ ಪಿಪಿಎಫ್ ಖಾತೆ ತೆರೆದಿದ್ದರೆ ಅದಕ್ಕೆ ನಿಮಗೆ ಬಡ್ಡಿ ದರ ದೊರೆಯುವುದಿಲ್ಲ, ಮೊದಲು ವಾಸ ಸ್ಥಳ ಭರ್ತಿ ಮಾಡುವ ಅವಶ್ಯಕತೆ ಇಲ್ಲದಿದ್ದ ಕಾರಣ ಎಲ್ಲರೂ ಖಾತೆಯನ್ನು ಹೊಂದಿದ್ದರು ಈಗ ಆ ನಿಯಮಗಳು ಜಾರಿಗೆ ಬಂದ ನಂತರ ಆನಿವಾಸಿಗಳಿಗೆ ಪಿಪಿಎಫ್ ಖಾತೆ ಹೊಂದುವ ಅವಕಾಶವಿರುವುದಿಲ್ಲ, ಒಂದು ವೇಳೆ ಹೊಂದಿದ್ದರೂ ಅದರಲ್ಲಿ ಹಣವನ್ನು ಹೂಡಿಕೆ ಮಾಡಿದರೆ, ಅದಕ್ಕೆ ಬಡ್ಡಿ ರಹಿತ ಹೂಡಿಕೆ ಅವರಿಗೆ ಹಿಂತಿರುಗುತ್ತದೆ.

ಇದನ್ನು ಓದಿ: Jio Offer: ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ! ಕೇವಲ ರೂ.10ಕ್ಕೆ 2ಜಿಬಿ 5ಜಿ ಡಾಟಾ; 98 ದಿನಗಳಿಗೆ ರೂ.999 ರ ಹೊಸ ರಿಚಾರ್ಜ್ ಪ್ಲಾನ್!

ಅಜ್ಜ ಅಥವಾ ಅಜ್ಜಿಯಿಂದ ಸುಕನ್ಯ ಸಮೃದ್ಧಿ ಅಕೌಂಟ್ ತೆರೆಯಲಾಗಿದ್ದರೆ…

ಸುಕನ್ಯ ಸಮೃದ್ಧಿ ಯೋಜನೆಯನ್ನು ಅಪ್ರಾಪ್ತ ವಯಸ್ಸಿನ ಹೆಣ್ಮಕ್ಕಳ ಹೆಸರಿನಲ್ಲಿ ಅವರ ಪಾಲಕರು ಆರಂಭಿಸಬಹುದು, ಆದರೆ ಇಲ್ಲಿ ಹೆಣ್ಮಗುವಿನ ತಂದೆ ಅಥವಾ ತಾಯಿಯನ್ನು ಸಹಜ ಪಾಲಕರೆಂದು ಪರಿಗಣಿಸಲಾಗುತ್ತದೆ. ಅಜ್ಜ ಅಥವಾ ಅಜ್ಜಿಯನ್ನು ನ್ಯಾಚುರಲ್ ಗಾರ್ಡಿಯನ್(Naturala Gardian) ಎಂದು ಪರಿಗಣಿಸಲಾಗುವುದಿಲ್ಲ. ಒಂದು ವೇಳೆ ಇವರ ಹೆಸರಿನಲ್ಲಿ ಸುಕನ್ಯ ಸಮೃದ್ಧಿ ಅಕೌಂಟ್(Sukanya Samriddhi Account) ತೆರೆಯಲಾಗಿದ್ದರೆ, ಅದನ್ನು ನ್ಯಾಚುರಲ್ ಗಾರ್ಡಿಯನ್ ಅಥವಾ ಲೀಗಲ್ ಗಾರ್ಡಿಯನ್ಗೆ ವರ್ಗಾವಣೆ ಮಾಡಲಾಗುತ್ತದೆ.

ಇದನ್ನು ಓದಿ: KPSC RECRUITMENT| ಕೃಷಿ ಇಲಾಖೆಯ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿ 2024

ಪಾಲಕರು ತಮ್ಮ ಮಕ್ಕಳಿಗೆ ಅವರ ತಂದೆ ತಾಯಿಯ ಹೆಸರಿನಲ್ಲಿ ಸುಕನ್ನ ಸಮೃದ್ಧಿ ಯೋಜನೆಯನ್ನು ಶುರು ಮಾಡಿದ್ದರೆ ಅದನ್ನು ಪರಿಗಣಿಸಲಾಗುವುದಿಲ್ಲ. ಅದಕ್ಕಾಗಿ ಅವರು ಪಾಲಕರು ಮಾತ್ರವೇ ತಮ್ಮ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ತೆರೆಯಬಹುದು.

ಕೇಂದ್ರ ಸರ್ಕಾರವು ಈ ಯೋಜನೆಗೆ ಸಂಬಂಧಿಸಿ ದಾಗಿ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ, ಏಕೆಂದರೆ ಬೇರೆ ಬೇರೆಯ ವ್ಯಕ್ತಿಗಳು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಇದರಲ್ಲಿ ಹೊಂದಿದ್ದಾರೆ ಆದ್ದರಿಂದ ಅವರ ಖಾತೆಗಳನ್ನು ಪರಿಗಣನೆ ಮಾಡಿ, ಅಂತಹ ಖಾತೆಗಳನ್ನು ರದ್ದು ಮಾಡುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರವು ಎಚ್ಚರಿಕೆಯನ್ನು ನೀಡಿದೆ.

ಓದುಗರ ಗಮನಕ್ಕೆ: ನಮ್ಮ ಸಿಹಿವಾಣಿ ತಂಡವು ತನ್ನೆಲ್ಲ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಒದಗಿಸುತ್ತದೆ ಯಾವುದೇ ಸುಳ್ಳು ಅಥವಾ ಅನಧಿಕೃತ ಮಾಹಿತಿಗಳನ್ನು ಒದಗಿಸುವುದಿಲ್ಲ.

ಕನ್ನಡ ನೀಡ್ಸ್ ವೆಬ್ ಸೈಟ್ ಗೆ ಯಾವುದೇ ರೀತಿಯ ಸರ್ಕಾರಿ ಸಂಬಂಧವಿಲ್ಲ, ಹಾಗೂ ನಮ್ಮ ವೆಬ್ಸೈಟ್ ಯಾವುದೇ ತರಹದ ಸರ್ಕಾರಿ ಪ್ರಚಾರದ ಜಾಲತಾಣವಲ್ಲ.

ನಾವು ಈ ವೆಬ್ಸೈಟ್ ರಚಿಸಿರುವುದರ ಹಿಂದಿನ ಉದ್ದೇಶವೇನೆಂದರೆ, ನಿಮ್ಮಿಂದ ಯಾವುದೇ ರೀತಿಯ ಹಣವನ್ನು ಪಡೆಯುವುದು ಅಲ್ಲ. ನಮ್ಮ ಎಲ್ಲಾ ಸುದ್ದಿಗಳನ್ನು ಓದಲು ನೀವು ಯಾವುದೇ ರೀತಿ ಹಣವನ್ನು ಪಾವತಿಸಬೇಕಾಗಿಲ್ಲ. ಎಲ್ಲ ಮಾಹಿತಿಯು ನಿಮಗೆ ಉಚಿತವಾಗಿ ದೊರೆಯುತ್ತದೆ. ನಿಖರವಾದ ಅಥವಾ ಸತ್ಯವಾದ ಮಾಹಿತಿಗಳನ್ನು ಒದಗಿಸುವುದೇ ನಮ್ಮ ವೆಬ್ ಸೈಟ್ ನ ಪ್ರಮುಖ ಉದ್ದೇಶವಾಗಿದೆ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment