State Bank of India has hiked the loan interest rate:
ಭಾರತ ದೇಶದ ಅತಿ ದೊಡ್ಡ ಸಾರ್ವಜನಿಕ ವಲಯ ಬ್ಯಾಂಕ್ ಆಗಿರುವ SBI ತನ್ನ ಲಕ್ಷಾಂತರ ಗ್ರಾಹಕರಿಗೆ ಶಾಕಿಂಗ್ ಸುದ್ದಿಯನ್ನು ನೀಡಿದೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State Bank of India)ದ ಸಾಲದ ಬಡ್ಡಿದರ(Loan Interest Rate)ವನ್ನು ಹೆಚ್ಚಳ ಮಾಡಲಾಗಿದೆ, ಈ ಹೊಸ ದರಗಳು ಜೂನ್ 15 ರಂದು ಜಾರಿಗೆ ಬರಲಿದೆ, ಪ್ರತಿನಿತ್ಯ ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ಬ್ಯಾಂಕ್ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ನ ಬೇಸಡ್ ಲೆಂಡಿಂಗ್ ದರವನ್ನು(MCLR) 10 ಬೇಸಿಸ್ ಪಾಯಿಂಟ್ ಗಳಷ್ಟು ಏರಿಸಿದೆ, ಇದರ ಅಡಿಯಲ್ಲಿ ಒಂದು ವರ್ಷದ MCLR 8,75% ಕ್ಕೆ ಹೆಚ್ಚಿಸಿದೆ. ಆದರೆ ಹೆಚ್ಚಿನ ಮಾನದಂಡದ ದರವು ಶೇಕಡ 8.95% ಆಗಿದೆ.
ಬ್ಯಾಂಕ್ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ನ ಬೇಸಡ್ ಲೆಂಡಿಂಗ್ ದಲ್ಲಿನ ಯಾವುದೇ ಬದಲಾವಣೆಯು ಸಾಲದ ಮೇಲಿನ EMI ನ ಮೇಲೆ ನೇರವಾಗಿ ಪರಿಣಾಮ ಬೀರಲಿದೆ, ಈ ಹಿಂದೆ, ಬ್ಯಾಂಕ್ ಆಫ್ ಮಹಾರಾಷ್ಟ್ರವೂ (Bank Of Maharashtra) ಕೂಡ ಸಾಲದ ವೆಚ್ಚವನ್ನು ಹೆಚ್ಚಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಹೆಚ್ಚಿಸಿದ ಬಡ್ಡಿದರವು, ಅಧಿಕೃತ ವೆಬ್ಸೈಟ್ನ ಪ್ರಕಾರ ಜೂನ್ 15 ರಂದು ಜಾರಿಗೆ ಬರಲಿದೆ, MCLR ದರವು ಒಂದು ವರ್ಷದ ಅವಧಿಗೆ 8.75% ಏರಿಕೆಯಾಗಿದೆ, ಎರಡು ವರ್ಷಗಳ ಅವಧಿಗೆ 8.85% ಹಾಗೂ ಮೂರು ವರ್ಷಗಳ ಅವಧಿಗೆ 8.95% ಅಲ್ಪಾವಧಿ ದರಗಳನ್ನು ಬದಲಾಯಿಸಲಾಗಿದೆ.
ಅಧಿಕೃತ ವೆಬ್ಸೈಟ್ನ ಪ್ರಕಾರ, SBI ಒದಗಿಸಿದ ಒಂದು ದಿನದ MCLR 8.10% ಮೂರು ಮತ್ತು ಆರು ತಿಂಗಳ ಅವಧಿಯ ಸಾಲದ ದರ 8.30%, 10 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಾಗಿದೆ. ಜೂನ್ 15 ರ ಮೊದಲು ಒಂದು ವರ್ಷದ MCLR ದರವು 8.65% ರಸ್ಟು ಆಗಿತ್ತು, ಅದೇ ರೀತಿ ಸಾಲದವರವು ಎರಡು ವರ್ಷಗಳಿಗೆ 8.75%, ಮೂರು ವರ್ಷಗಳಿಗೆ 8.85% ಮೂರು ಮತ್ತು ಆರು ತಿಂಗಳಿಗೆ 8.20% ಹಾಗಿತ್ತು.
SBI ನ ಗೃಹ ಸಾಲದ ಬಡ್ಡಿ ದರವೇಷ್ಟು?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡುವ ಗೃಹ ಸಾಲದ ಬಡ್ಡಿ ದರವು, ಗ್ರಾಹಕರ CIBIL SCORE ಅನ್ನು ಆದರಿಸಿರುತ್ತದೆ, ಅಂದರೆ ಗ್ರಾಹಕರ CIBIL SCORE 750 ಅಥವಾ ಅದಕ್ಕಿಂತ ಹೆಚ್ಚಿನದಾಗಿದ್ದರೆ, ಬಡ್ಡಿದರವು 9.55% ಆಗಲಿದೆ, ಹಾಗೆಯೇ ಗ್ರಾಹಕರ CIBIL SCORE 700 ರಿಂದ 749 ರ ನಡುವೆ ಇದ್ದರೆ ಬಡ್ಡಿದರ 9.75% ಆಗಲಿದೆ, ಗ್ರಾಹಕರ ಸಿಬಿಲ ಸ್ಕೋರ್ 650 ರಿಂದ 699 ನಡುವೆ ಇದ್ದರೆ ಬಡ್ಡಿದರವು 9.85% ಆಗಲಿದೆ ಮತ್ತು ಸಿಬಿಲ್ ಸ್ಕೋರ್ 550 ರಿಂದ 649 ರ ನಡುವೆ ಇದ್ದರೆ ಗ್ರಾಹಕರಿಗೆ SBI ನೀಡುವ ಬಡ್ಡಿದರವು 10.15% ಆಗಲಿದೆ.