SBI Loan: ಸ್ಟೇಟ್ ಬ್ಯಾಂಕಿನ ಈ ಯೋಜನೆಯಲ್ಲಿ 20 ಲಕ್ಷದವರೆಗೂ ಸಾಲ ಸಿಗಲಿದೆ, ಕಡಿಮೆ ಬಡ್ಡಿದರ

SBI: ಸ್ಟೇಟ್ ಬ್ಯಾಂಕಿನ ಈ ಯೋಜನೆಯಲ್ಲಿ 20 ಲಕ್ಷದವರೆಗೂ ಸಾಲ ಸಿಗಲಿದೆ, ಕಡಿಮೆ ಬಡ್ಡಿದರ

ಕೆಲವು ವರ್ಷಗಳ ಹಿಂದೆ ಮಹಿಳೆಯರು ಕೇವಲ ಅಡುಗೆ ಮನೆ ಮತ್ತು ಮನೆ ಕೆಲಸಕ್ಕೆ ಮಾತ್ರ ಸೀಮಿತರಾಗಿದ್ದರು, ಆದರೆ ಈಗ ವಾಣಿಜ್ಯ ಕ್ಷೇತ್ರದಿಂದ ಬಾಹ್ಯಾಕಾಶದವರಿಗೂ ಎಲ್ಲಾ ಕಡೆ ಮಹಿಳೆಯರು ರಾರಾಜಿಸುತ್ತಿದ್ದಾರೆ, ವಾಣಿಜ್ಯ ವಿಷಯಗಳ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ಈಗಿನ ಸರ್ಕಾರವೂ ಕೂಡ, ಮಹಿಳೆಯರು ಸಬಲರಾಗುವಂತೆ ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಏನಾದರೂ ಸಾಧನೆ ಮಾಡಬೇಕು, ಬಿಸಿನೆಸ್(Business) ಮಾಡಿ ಹೆಚ್ಚಿನ ಸ್ಥಾನಮಾನ ಕೊಂಡುಕೊಳ್ಳಬೇಕು ಎನ್ನುವ ಮಹಿಳೆಯರಿಗೆ ಈಗ ಸಿಹಿ ಸುದ್ದಿ(Good News) ಒಂದು ಸಿಕ್ಕಿದೆ.

WhatsApp Group Join Now
Telegram Group Join Now

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI), ಮಹಿಳೆಯರು ಕೌಶಲ್ಯವನ್ನು ಕಲಿತು ಚಿಕ್ಕ ಉದ್ದಿಮೆಯನ್ನು(small Business) ಆರಂಭಿಸಲು ಅಥವಾ ಈಗಾಗಲೇ ಉದ್ಯಮಿಯನ್ನು(Business) ಆರಂಭಿಸಿದ್ದರೆ ಅದನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬೇಕು ಎಂದುಕೊಂಡವರಿಗೆ ಸ್ತ್ರೀಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ.

SBI ಸ್ತ್ರೀ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಒಂದರಿಂದ 20 ಲಕ್ಷದವರೆಗೂ ಸ್ವಂತ ಉದ್ದಿಮೆಯನ್ನು ಆರಂಭಿಸುವುದಕ್ಕೆ ಸಾಲ ಸೌಲಭ್ಯ (SBI Business Loan) ಸಿಗಲಿದೆ.

ಸ್ತ್ರೀ ಶಕ್ತಿ ಯೋಜನೆಯಿಂದ ಪಡೆಯುವ ಸಾಲಕ್ಕೆ ಕಡಿಮೆ ಬಡ್ಡಿ ದರ(Low Interest Rate) ಇರುತ್ತದೆ, 1 ರಿಂದ 5 ಲಕ್ಷದವರೆಗಿನ ಸಾಲಕ್ಕೆ ಹೆಚ್ಚಿನ ಡಾಕ್ಯುಮೆಂಟ್ ಗಳ(Documnets) ಅಗತ್ಯ ಇರುವುದಿಲ್ಲ ಆದರೆ 5 ರಿಂದ 20 ಲಕ್ಷದ ವರೆಗಿನ ದೊಡ್ಡ ಮೊತ್ತದ ಸಾಲಕ್ಕೆ ಒಂದಿಷ್ಟು ಅರ್ಹ ದಾಖಲೆಗಳ ಅವಶ್ಯಕತೆ ಇದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲವನ್ನು (SBI loan) ನೀಡುವಾಗ, ನಿಮ್ಮ ಉದ್ದಿಮೆ ಹೇಗಿದೆ? ಅದನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎಂದು ಯೋಜನೆಯನ್ನು ಹಾಕಿಕೊಂಡಿದ್ದೀರಿ? ಇದೆಲ್ಲದನ್ನು ಪರಿಶೀಲನೆ ಮಾಡಿ ಅದರ ಅನುಸಾರವಾಗಿ ನಿಮಗೆ ಸಾಲದ ಮೊತ್ತವನ್ನು ನೀಡಲಾಗುತ್ತದೆ.

ಯೋಜನೆಯಿಂದ ಪಡೆಯುವ ಸಾಲದ ಮೊತ್ತಕ್ಕೆ, ಸಾಲದ ಆಧಾರದ ಮೇಲೆ 1% ರಿಂದ 15% ಬಡ್ಡಿಯನ್ನು(Intrest) ವಿಧಿಸಲಾಗುತ್ತದೆ, ಕಡಿಮೆ ಮೊತ್ತದ ಸಾಲವು 4 ರಿಂದ 8 ವಾರಗಳಲ್ಲಿ ನಿಮ್ಮ ಕೈ ಸೇರಲಿದೆ, ಆದರೆ ಹೆಚ್ಚಿನ ಮೊತ್ತದ ಸಾಲವು(Loan) 08 ರಿಂದ 12 ವಾರಗಳ ಸಮಯದಲ್ಲಿ ನಿಮಗೆ ಸಿಗಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯೋಜನೆಯನ್ನು(SBI Scheme) ವಿಶೇಷವಾಗಿ ಮಹಿಳೆಯರಿಗೋಸ್ಕರ ಜಾರಿಗೆ ತಂದಿದೆ, ಉದ್ದಿಮೆಯನ್ನು ಆರಂಭಿಸಬೇಕು ಅಥವಾ ಯಾವುದೇ ಉಪಕಸುಬಿನ ಬಿಸಿನೆಸ್(Business) ಮಾಡಬೇಕು ಎಂದುಕೊಂಡ ಮಹಿಳೆಯರಿಗೆ ಈ ಯೋಜನೆಯ ಸಾಲವು ಸಿಗುತ್ತದೆ.

ಯಾರೆಲ್ಲ SBI ಸಾಲವನ್ನು (SBI loan) ಪಡೆಯಬಹುದು?

SBI ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಯರ ವಯಸ್ಸು 18 ರಿಂದ 60 ವರ್ಷ ವಳಗೆ ಇರಬೇಕು, ಈ ಮಹಿಳೆಯರು EDP ಗೆ ಹಾಜರ್ ಆಗಿರಬೇಕು ಜೊತೆಗೆ ಬಿಸಿನೆಸ್(Business) ಬಗ್ಗೆ ಸ್ವಲ್ಪ ತಿಳುವಳಿಕೆ ಇರಬೇಕು.

EDP ಅಂದರೆ employment development project ಇದರಲ್ಲಿ ಮಹಿಳೆಯರಿಗೆ ವಿವಿಧ ಕೌಶಲ್ಯಗಳನ್ನು ನೀಡಲಾಗುತ್ತದೆ, ಹಾಗಾಗಿ ಲೋನ್ಗಾಗಿ(Loan) ಅರ್ಜಿ ಸಲ್ಲಿಸುವ ಮಹಿಳೆಯರು EDP ಹಾಜರ್ ಆಗಿದ್ದಾರಾ ಎಂದು ನೋಡುತ್ತದೆ.

ಸಾಲವನ್ನು ಪಡೆಯಲು ಬೇಕಾದ ದಾಖಲೆಗಳು

  • Aadhar card
  • PAN card
  • Voter ID
  • Address proof
  • Passport photo
  • Driving licence
  • ITR Returns

ಮೇಲಿನ ಎಲ್ಲಾ ದಾಖಲೆಗಳು, SBI ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಮುಖ್ಯ ದಾಖಲೆಗಳಾಗಿವೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ತ್ರೀಶಕ್ತಿ ಯೋಜನೆಯಿಂದ ಸಾಲವನ್ನು ಪಡೆದುಕೊಂಡು ನೀವು, ಫೋನ್ ಅಂಗಡಿ, ಬ್ಯೂಟಿಸಿಯನ್ ಟೈಲರಿಂಗ್, ಮಿಲ್ಕ್ ಪ್ರಾಡಕ್ಟ್, ಕಿರಾಣಿ ಅಂಗಡಿ, ಸೋಪ್ ತಯಾರಿಕೆ, ಸೀರೆ ತಯಾರಿಕೆ, ಈ ಎಲ್ಲ ಉದ್ಯಮಿಗಳನ್ನು ಆರಂಭಿಸಬಹುದು, ಜೊತೆಗೆ ಸಾಲದ ಮೇಲೆ ನಿಮಗೆ ವಿನಾಯಿತಿ ಕೂಡ ದೊರೆಯುತ್ತದೆ, ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment