Repo Rate: RBI ಕಡೆಯಿಂದ ಬ್ಯಾಂಕ್ ಸಾಲ ಮಾಡಿದವರಿಗೆ ಸಿಹಿ ಸುದ್ದಿ ಬಡ್ಡಿ! ದರದ ಮೇಲೆ ಮಹತ್ವದ ಘೋಷಣೆ!
ಜೂನ್ ನಲ್ಲಿ ನಡೆದ ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ಸಮಿತಿಯು(MPC) ಸತತ 8ನೇ ಬಾರಿಗೆ ರೇಪೋ ದರವನ್ನು 6.5 ರಷ್ಟು ಯಥಾ ಸ್ಥಿತಿಯಲ್ಲಿ ಇರಿಸಲು ನಿರ್ಧರಿಸಿದ್ದು, ಇದರ ಬಗ್ಗೆ ಆರ್ಬಿಐ ಗವರ್ನರ್ ಆಗಿರುವ ಶಕ್ತಿಕಾಂತ್ ದಾಸ್ ಅವರು ದ್ವೈಮಾಸಿಕ ನೀತಿ ಸಭೆಯ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.
ಸತತ ಎಂಟನೇ ಬಾರಿಗೂ ರೆಪೊ ದರವನ್ನು 6.5% ಗೆ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ, ಪ್ರಸ್ತುತವಾಗಿ ನಡೆದ RBI ನಿರ್ಧಾರದ ನಂತರ ಮತ್ತೊಮ್ಮೆ ಬಡ್ಡಿದರವು ಶೇಕಡ 6.5 ರಲ್ಲೇ ಉಳಿದಿದೆ. ಜನರು ರೆಪೋ ದರದ(Repo Rate) ಕಡಿತದ ಬಗ್ಗೆ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು, ಇದೀಗ RBI ಗವರ್ನರ್ ಶಕ್ತಿಕಾಂತ್ ದಾಸ್ ರೆಪೋ ದರದ ಕಡಿತದ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ದೇಶದಲ್ಲಿ ರೆಪೋ ದರ ಕಡಿಮೆಯಾಗಲಿದೆಯಾ?
ಕಿಲ್ಲರೆ ಹಣದುಬ್ಬರವನ್ನು 4% ಒಳಗೆ ಇಡುವುದು ಆರ್ ಬಿಐ ನ ಗುರಿಯಾಗಿದೆ, ಸದ್ಯ ಇರುವ ಹಣಕಾಸು ಸ್ಥಿತಿ ಆಧಾರದ ಮೇಲೆ ರೆಪೋ ದರವನ್ನು ಕಡಿತಗೊಳಿಸುವುದು ಅಪಕ್ವವಾಗಿ ತೋರುತ್ತದೆ ಎಂದು ಗವರ್ನರ್ ಶಕ್ತಿ ದಾಸ್ ಹೇಳಿದ್ದಾರೆ. ಗ್ರಾಹಕರ ಬೆಲೆ ಸೂಚ್ಯಂಕವೂ(CPI) ಹಣದುಬ್ಬರದ ಗುರಿಯ ಹಾದಿಯಲ್ಲಿ ಚಲಿಸುವ ನಿರೀಕ್ಷೆ ಇದೆ. ಆಗ ಮಾತ್ರ ರೆಪೋ ದರವನ್ನು ಕಡಿಮೆ ಮಾಡುವ ಬಗ್ಗೆ ವಿಶ್ವಾಸ ಹೊಂದುತ್ತೇವೆ, ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರೆಪೋ ದರ ಕಡಿತದ ಬಗ್ಗೆ ಸ್ಪಷ್ಟನೆ
ದೇಶದಲ್ಲಿ ಹಣದುಬ್ಬರ ನಿಯಂತ್ರಣ ಪತ್ರಿಕೆಯು ನಡೆಯುತ್ತಿದೆ, ಆದರೆ ನಿಗದಿತ ಗುರಿಯಲ್ಲಿ ನಿಯಂತ್ರಿಸುವುದು ಕಷ್ಟವಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಹಣದುಬ್ಬರವು 4.9%, ಎರಡನೇ ತ್ರೈಮಾಸಿಕದಲ್ಲಿ 3.8%, ಮೂರನೇ ತ್ರೈಮಾಸಿಕ ವರ್ಷದಲ್ಲಿ 4.6% ಮತ್ತು ನಾಲ್ಕನೇ ತ್ರೈಮಾಸಿಕ ವರ್ಷದಲ್ಲಿ 4.5% ಹಳದುಬ್ಬರ ದಾಖಲಾಗಲಿದೆ ಎಂದು RBI ಅಂದಾಜಿಸಿದೆ.
ಈ ವರ್ಷದ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಹಣದುಬ್ಬರವು ಇಳಿಕೆಯ ಹಾದಿಯಲ್ಲಿದೆ, ಆದರೆ ಆಹಾರ ಪದಾರ್ಥಗಳ ಬೆಲೆ ಏರಿಕೆಯ ಹಣದುಬ್ಬರ ತಗ್ಗಿಸಲು ಸವಾಲಾಗಿದೆ. ಬೆಳೆ ಕಾಳುಗಳು ಮತ್ತು ತರಕಾರಿಗಳ ಬೆಲೆಯಂತೂ ಎರಡಂಕಿ ದಾಟಿದೆ. ಜಿಡಿಪಿ (GDP) ಬೆಳವಣಿಗೆಯು FY 2023-24 ಕೊನೆಯ ತ್ರೈಮಾಸಿಕದಲ್ಲಿ ದೃಢವಾಗಿದೆ. ಪ್ರಸಕ್ತ ಹಣಕಾಸಿನ ವರ್ಷದಲ್ಲೂ ಇದೆ ದರ ಮುಂದುವರಿವ ಸಾಧ್ಯತೆ ಇದೆ ಎಂದು ಗವರ್ನರ್ ಅಭಿಪ್ರಾಯ ಪಟ್ಟಿದ್ದಾರೆ. ಈ ಬಗ್ಗೆ ರೆಪೋ ದರದ ವಿಚಾರವಾಗಿ ಯಾವುದೇ ಯೋಜನೆಯನ್ನು ಹಾಕಿಕೊಂಡಿಲ್ಲವೆಂದು ಶಕ್ತಿಕಾಂತ್ ದಾಸ್ ಅವರು ತಿಳಿಸಿದ್ದಾರೆ.