ಈ ದಿನದಂದು ಗ್ರಹಲಕ್ಷ್ಮಿ ಯೋಜನೆಯ 9ನೇ ಕಂತಿನ ಹಣ ಬಿಡುಗಡೆಯಾಗಲಿದೆ, ಇಲ್ಲಿದೆ ಸಂಪೂರ್ಣ ಮಾಹಿತಿ.

ಗೃಹಲಕ್ಷ್ಮಿ ಯೋಜನೆಯ 9ನೇ ಕಂತಿನ ಹಣ ಬಿಡುಗಡೆ:

ರಾಜ್ಯ ಸರ್ಕಾರವು ರೂಪಿಸಿರುವಂತಹ ಯೋಜನೆಗಳಲ್ಲೊಂದಾದ, ಗೃಹಲಕ್ಷ್ಮಿ ಯೋಜನೆಯ 9ನೇ ಕಂತಿನ ಹಣವು ಬಿಡುಗಡೆಯಾಗಲಿದೆ. ಈಗಾಗಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳಿಗೆ ಮೊದಲನೇ ಕಂತಿನ ಜಮಾ ಆಗಿದೆ. ಅದರಂತೆ ಏಳನೇ ಕಂತಿನ ಹಣವನ್ನು ಇದೇ ತಿಂಗಳಿನ ಎರಡನೇ ವಾರದಲ್ಲಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರವು ಸಿದ್ಧತೆಯನ್ನು ನಡೆಸುತ್ತಿದೆ. ಕೆಲವು ಮಹಿಳೆಯರಿಗೆ ಮೊದಲೆರಡು ಕಂತಿನ ಹಣ ದೊರೆತಿದ್ದು ನಂತರ 5,6 7 8ಕಂತಿನ ಹಣ ಬರದೆ ಇದ್ದವರಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿಯನ್ನು ನೀಡಿದೆ.  ವಿಷಯಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಳನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ. ಉಚಿತ ಸರ್ಕಾರಿ ಯೋಜನೆಗಳ ಮಾಹಿತಿ ಪಡೆಯಲು ನಮ್ಮನ್ನು ಫಾಲೋ ಮಾಡಿ.

ಈ ದಿನಾಂಕದಂದು ಗ್ರಹಲಕ್ಷ್ಮಿ ಯೋಜನೆಯ 9 ನೇ ಹಣ ಜಮಾ ಆಗಲಿದೆ:

WhatsApp Group Join Now
Telegram Group Join Now

ರಾಜ್ಯ ಸರ್ಕಾರವು ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಪ್ರತಿ ತಿಂಗಳು ಮನೆಯ ಯಜಮಾನಿಯ ಖಾತೆಗೆ 2,000ಗಳನ್ನು ಜಮಾ ಮಾಡುತ್ತಿದೆ. ಇದುವರೆಗೆ ಅರ್ಜಿ ಸಲ್ಲಿಸಿದ ಅರ್ಹ ಮಹಿಳಾ ಫಲಾನುಭವಿಗಳಿಗೆ ಈ ಯೋಜನೆಯ8 ಕಂತಿನ ಹಣ ಜಮಾ ಆಗಿದೆ. ಒಂದು ಕಂತಿನ ಹಣ ಬರದೆ ಇರುವ, ಹಲವು ಮಹಿಳಾ ಫಲಾನುಭವಿಗಳಿಗೆ ಜನವರಿ ತಿಂಗಳ ಕೊನೆಯಲ್ಲಿ ಒಟ್ಟಿಗೆ 10 ಸಾವಿರ ರೂಪಾಯಿಗಳು ಜಮಾ ಆಗಿದೆ. ಗೃಹಲಕ್ಷ್ಮಿ ಯೋಜನೆಯ ಏಳನೇ ಕಂತಿನ ಹಣವನ್ನು  15 ಮಾರ್ಚ್ 2024 ರಂದು ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಸರ್ಕಾರವು ನಿರ್ಧರಿಸಿದೆ. ಮಾರ್ಚ್ ತಿಂಗಳ ಕೊನೆಯ ದಿನಾಂಕದ ಒಳಗೆ ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಲಿದೆ.

10 ಸಾವಿರ ರೂಪಾಯಿಗಳು ಒಟ್ಟಿಗೆ ಜಮಾ:

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳಾ ಫಲಾನುಭವಿಗಳ ಖಾತೆಗೆ ಒಂದು ಕಂತಿನ ಹಣ ಬರದೇ, ಜನವರಿ ತಿಂಗಳ ಅಂತ್ಯದಲ್ಲಿ ಅಂದರೆ 23, 24, 25 ನೇ ದಿನಾಂಕದಂದು ಸಾಕಷ್ಟು ಮಹಿಳೆಯರ ಖಾತೆಗೆ ತಲಾ ಎರಡು ಸಾವಿರ ರೂಪಾಯಿಗಳಂತೆ ಸತತವಾಗಿ ಹಣ ಬಂದು ತಲುಪಿದೆ. ಸರ್ಕಾರವು ಗೃಹಲಕ್ಷ್ಮಿ ಯೋಜನೆಯ 2,000 ಗಳನ್ನು ಪ್ರತಿ ತಿಂಗಳ ಎರಡನೇ ವಾರದಂದು DBT ಮೂಲಕ ಜಮಾ ಮಾಡುತ್ತಿದೆ. ಮಹಿಳೆಯರು ಅರ್ಜಿ ಸಲ್ಲಿಸುವಾಗ ಮಾಡಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡು, ಸರ್ಕಾರದ ನಿಯಮಗಳನ್ನು ಪಾಲಿಸಿದ ಎಲ್ಲಾ ಮಹಿಳೆಯರು ಗ್ರಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಹಣವನ್ನು ಒಟ್ಟಿಗೆ ಪಡೆದುಕೊಂಡಿದ್ದಾರೆ. ಅರ್ಜಿ ಸಲ್ಲಿಸಿದ ದಿನದಿಂದ ಒಂದು ಕಂತಿನ ಹಣ ಬರದೆ ಇರುವ ಮಹಿಳೆಯರು, ಒಟ್ಟಿಗೆ 10,000/- ಗಳನ್ನು ಸರ್ಕಾರದಿಂದ ಪಡೆದುಕೊಂಡಿದ್ದಾರೆ.ಹಣ ಬರೆದೆ ಇರುವ ಮಹಿಳೆಯರ ಖಾತೆಗೆ ಸರ್ಕಾರವು ಹಣವನ್ನು ಜಮಾ ಮಾಡಲು ನಿರ್ಧರಿಸಿದೆ. ಮಹಿಳೆಯರು ಈಗಲೂ ಸಹ ತಮ್ಮ ಖಾತೆಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಉಳಿದ ಹಣವನ್ನು ಸರ್ಕಾರವು ಜಮಾ ಮಾಡಲು ನಿರ್ಧರಿಸಿದೆ. ಅರ್ಜಿ ಸಲ್ಲಿಸಿ ಹಣ ಬಾರದೇ ಇರುವ ಮಹಿಳಾ ಫಲಾನುಭವಿಗಳು ಸಮಸ್ಯೆಗಳನ್ನು ಪರಿಹರಿಸಿಕೊಂಡರೆ, ಸರ್ಕಾರವು ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡಲಿದೆ.

ಯಾವ ಕಾರಣಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿಲ್ಲ:

ಸರ್ಕಾರ ರೂಪಿಸಿರುವಂತಹ ಐದು ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಯು, ಅರ್ಹ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2000 ರೂಪಾಯಿಗಳನ್ನು ಜಮಾ ಮಾಡುತ್ತಿದೆ. ಬ್ಯಾಂಕ್ ಖಾತೆಯ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡು ಅರ್ಜಿ ಸಲ್ಲಿಸಿದ ಮಹಿಳೆಯರ ಖಾತೆಗೆ ಹಣ ಜಮಾ ಆಗುತ್ತಿದೆ. ಇದುವರೆಗೂ 6 ಕಂತಿನ ಹಣ ಜಮಾ ಆಗಿದೆ. ಆದರೆ ಕೆಲವೊಂದಿಷ್ಟು ಮಹಿಳೆಯರ ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ. ಯಾವ ಕಾರಣಗಳಿಂದ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ ಎಂಬ ಮಾಹಿತಿಯು ಈ ಕೆಳಗಿನಂತಿವೆ.

  • ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗದೆ ಇದ್ದರೆ ಹಣ ಜಮಾ ಆಗುವುದಿಲ್ಲ.
  • ರೇಷನ್ ಕಾರ್ಡ್ ನಲ್ಲಿ ಮಹಿಳೆಯ ಹೆಸರು ಯಜಮಾನಿ ಸ್ಥಾನದಲ್ಲಿ ಇಲ್ಲದೆ ಇದ್ದರೆ ಹಣ ಜಮಾ ಆಗುವುದಿಲ್ಲ.
  • ಎನ್.ಪಿ.ಸಿ.ಸಿ ಮ್ಯಾಪಿಂಗ್ ಆಗದೆ ಇದ್ದರೆ ಹಣ ಜಮಾ ಆಗುವುದಿಲ್ಲ.
  • E-KYC ಅಪ್ಡೇಟ್ ಆಗದಿದ್ದರೂ ಸಹ ಹಣ ಜಮಾ ಆಗುವುದಿಲ್ಲ.
  • ದಾಖಲೆಗಳಲ್ಲಿ ಮಹಿಳೆಯರ ಹೆಸರು ಒಂದೇ ರೀತಿಯಲ್ಲಿ ಇರದಿದ್ದರೆ ಅಂದರೆ ಸ್ಪೆಲ್ಲಿಂಗ್ ಮಿಸ್ಟೇಕ್ ಆದರೂ ಸಹ ಹಣ ಜಮ ಆಗುವುದಿಲ್ಲ.
  • ಮಹಿಳೆಯು ಸರ್ಕಾರಿ ನೌಕರರಾಗಿ ಕೆಲಸ ಮಾಡುತ್ತಿದ್ದರೆ, ಅವರ ಖಾತೆಗೆ ಹಣ ಜಮಾ ಆಗುವುದಿಲ್ಲ.
  • ಫಲಾನುಭವಿಯು ಆದಾಯ ತೆರಿಗೆ ಪಾವತಿದಾರರಾಗಿದ್ದರೆ ಹಣ ಜಮಾ ಆಗುವುದಿಲ್ಲ.
  • ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಲಿಂಕ್ ಆಗದೇ ಇದ್ದರೆ.

ಈ ಮೇಲಿನ ಎಲ್ಲಾ ಸಮಸ್ಯೆಗಳನ್ನು ಇದ್ದುಕೊಂಡು ಸಹ, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳಾ ಫಲಾನುಭವಿಗಳಿಗೆ ಹಣ ಜಮಾ ಆಗುವುದಿಲ್ಲ. ಕೆಲವೊಂದಿಷ್ಟು ಖಾತೆಗಳಿಗೆ ಡಿ.ಬಿ.ಟಿ(DBT)ಮೂಲಕ ಹಣದ ವರ್ಗಾವಣೆ ಸಂಪೂರ್ಣ ಆಟೋಮ್ಯಾಟಿಕ್ ಆಗಿದ್ದು ಕೆಲವೊಮ್ಮೆ ಸರ್ವರ್ ಸಮಸ್ಯೆ ಅಥವಾ ತಾಂತ್ರಿಕ ದೋಷಗಳಿದ್ದರು ಸಹ ಜಮಾ ಆಗಿರುವುದಿಲ್ಲ. ಅರ್ಹ ಫಲಾನುಭವಿಯು ಮೇಲಿನ ಎಲ್ಲ ಸಮಸ್ಯೆಗಳನ್ನು ಆದಷ್ಟು ಬೇಗ ಸರಿಪಡಿಸಿ ಕೊಂಡರೆ ಉಳಿದುಕೊಂಡಿರುವ ಎಲ್ಲಾ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ. 

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಹಣ ಬಾರದೆ ಇರುವ ಮಹಿಳೆಯರು ನಿಮ್ಮ ಸಮಸ್ಯೆಗಳನ್ನು ಹತ್ತಿರವಿರುವ ಸಹಾಯ ಕೇಂದ್ರಕ್ಕೆ ಭೇಟಿ ನೀಡುವ ಮುಖಾಂತರ ಬಗೆಹರಿಸಿಕೊಳ್ಳಬಹುದು. ಉತ್ತಮ ಮಾಹಿತಿಯನ್ನು ಹೊಂದಿದ ಲೇಖನವನ್ನು ನಿಮ್ಮ ಸ್ನೇಹಿತರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ. ಈ ಲೇಖನವನ್ನು ಓದಿದ ಎಲ್ಲರಿಗೂ ಧನ್ಯವಾದಗಳು.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment