RBI RECRUITMENT| ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2024
ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಗ್ರೇಡ್ ಬಿ ಹುದ್ದೆಗಳು ಖಾಲಿ ಇದ್ದು, ನಿಮ್ಮ ಖಾತೆಗಾಗಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ, ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
ರಿಸರ್ವ್ ಬ್ಯಾಂಕಿನಲ್ಲಿ(RBI) ಖಾಲಿ ಇರುವ ಗ್ರೇಡ್ ಬಿ(Grade-B) ಹುದ್ದೆಗಳಿಗೆ ಸಂಬಂಧಿಸಿದ ಹಾಗೆ ಅಧಿಕೃತ ಅಧಿಸೂಚನೆ ಈಗಾಗಲೇ ಬಿಡುಗಡೆಯಾಗಿದೆ, ಅಧಿಸೂಚನೆಯ ಪ್ರಕಾರ ಶೈಕ್ಷಣಿಕ ಅರ್ಹತೆ, ವೇತನ ಶ್ರೇಣಿ, ಅರ್ಜಿ ಶುಲ್ಕ ಹಾಗೂ ಹುದ್ದೆಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ.
ಹುದ್ದೆಗಳಿಗೆ ಸಂಬಂಧಿಸಿದ ವಿವರಗಳು
ಇಲಾಖೆಯ ಹೆಸರು | ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) |
ಹುದ್ದೆಯ ಹೆಸರು | ಗ್ರೇಡ್ ಬಿ (Grade -B) |
ಖಾಲಿ ಇರುವ ಹುದ್ದೆಗಳು | 97 |
ಉದ್ಯೋಗ ಸ್ಥಳ | All India |
ವೇತನ ಶ್ರೇಣಿ | ಅಧಿ ಸೂಚನೆಯ ಪ್ರಕಾರ |
ಅರ್ಜಿ ಸಲ್ಲಿಸುವ ಬಗೆ | Online |
ಶೈಕ್ಷಣಿಕ ಅರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಅಥವಾ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.
ವಯೋಮಾನ ಪ್ರಕ್ರಿಯೆ: ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ 21 ವರ್ಷ ಗರಿಷ್ಠ 30 ವರ್ಷ ವಯೋಮಿತಿಯನ್ನು ಮೀರಿರಬಾರದು.
ಅರ್ಜಿ ಶುಲ್ಕ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ಪ್ರವರ್ಗದ ಆಧಾರದ ಮೇಲೆ ಅರ್ಜಿ ಶುಲ್ಕವನ್ನು ಪಾವತಿಸಬೇಕು.
- ಎಲ್ಲಾ ಸಾಮಾನ್ಯ ಅಭ್ಯರ್ಥಿಗಳು ರೂ.850,
- SC/ST/PWD/EXS ಅಭ್ಯರ್ಥಿಗಳು ರೂ.100 ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಅರ್ಜಿ ಸಲ್ಲಿಸುವಿಕೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭವಾಗುವ ದಿನಾಂಕ | 25/07/2024 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 16/08/2024 |
ಆಯ್ಕೆಯ ವಿಧಾನ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು 1-2 ಆನ್ಲೈನ್ ಪರೀಕ್ಷೆ ನಡೆಸಿ ನಂತರ ಸಂದರ್ಶನ ಮಾಡುವ ಮುಖಾಂತರ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ವೇತನ ಶ್ರೇಣಿ: ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.55,200 ರಿಂದ 83,254 ರ ವರೆಗೆ ವೇತನವನ್ನು ನೀಡಲಾಗುತ್ತದೆ.
ಪ್ರಮುಖ ಲಿಂಕ್ ಗಳು
ಅಧಿಕೃತ ವೆಬ್ಸೈಟ್ | rbi.org.in |
ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸುವ ಲಿಂಕ್ | Download Now |