april ತಿಂಗಳಿನಲ್ಲಿ ರೇಷನ್ ಕಾರ್ಡ್ ರದ್ದಾದವರ ಪಟ್ಟಿ ಬಿಡುಗಡೆ ಆಗಿದೆ. ನಿಮ್ಮ ರೇಷನ್ ಕಾರ್ಡ್ ಇದೆಯ ಎಂದು ಚೆಕ್ ಮಾಡಿಕೊಳ್ಳಿ.

ಬಿಪಿಎಲ್ (BPL)ಕಾರ್ಡ್ ರದ್ದಾದವರ ಪಟ್ಟಿ ಬಿಡುಗಡೆ:

ಕನ್ನಡ ನೀಡ್ಸ್ ಓದುಗರಿಗೆ ಎಲ್ಲರಿಗೂ ನಮಸ್ಕಾರ. ಇಂದಿನ ವರದಿಯ ಮುಖ್ಯಾಂಶವೇನೆಂದರೆ, ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರ ಕಾರ್ಡ್ ಮಾರ್ಚ್ ತಿಂಗಳಿನಲ್ಲಿ ರದ್ದಾಗಿದೆ.ಏಕೆ ರದ್ದಾಗಿದೆ ಎಂದು ತಿಳಿದುಕೊಳ್ಳೋಣ. ಪ್ರತಿದಿನ ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಉಚಿತ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ಕೆಳಗಡೆ ಬಲಭಾಗದಲ್ಲಿರುವ  ರೆಡ್ ಬಟನ್ ಅನ್ನು ಕ್ಲಿಕ್ ಮಾಡುವ ಮುಖಾಂತರ ನಮ್ಮನ್ನು ಫಾಲೋ ಮಾಡಿಕೊಳ್ಳಬಹುದು.

ಸದ್ಯ ಜಾರಿಯಲ್ಲಿರುವ ರಾಜ್ಯ ಸರ್ಕಾರವು ರೇಷನ್ ಕಾರ್ಡ್ ಗಳ ಬಗ್ಗೆ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಏಕೆಂದರೆ ರಾಜ್ಯದಲ್ಲಿ ಕೆಲವರು ಸರ್ಕಾರದಿಂದ ರೇಷನ್ ಕಾರ್ಡ್ ಪಡೆದಿದ್ದರೂ ಕೆಲವು ಸೌಲಭ್ಯಗಳನ್ನು ಪಡೆಯಲು ಪಡಿತರ ಚೀಟಿಯನ್ನು ಮಾಡಿಸಿದ್ದರು. ಸರ್ಕಾರ ರೂಪಿಸಿರುವಂತಹ ಯೋಜನೆಗಳನ್ನು ಪಡೆದುಕೊಳ್ಳುವುದರಲ್ಲಿ ನಿರತರಾಗಿರುವ ನಮ್ಮ ಜನ ಸಾಮಾನ್ಯರಿಗೆ ಒಂದು ಶಾಕಿಂಗ್ ಸುದ್ದಿಯಾಗಿದೆ. ಅದೇನೆಂದರೆ ತುಂಬಾ ಜನ ರೇಷನ್ ಕಾರ್ಡ್ ರದ್ದಾಗಿವೆ ಹಾಗೂ ರದ್ದಾಗುವ ಸಾಧ್ಯತೆ ಇದೆ. ಯಾವೆಲ್ಲ ಕಾಡುಗಳನ್ನು ರದ್ದುಗೊಳಿಸಲಾಗುತ್ತಿದೆ ಮತ್ತು ಎಕೆ ಕಾರ್ಡುಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ಈ ಕೆಳಗೆ ಮಾಹಿತಿಯನ್ನು ನೀಡಲಾಗುತ್ತದೆ. ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಿ.

WhatsApp Group Join Now
Telegram Group Join Now

ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸರ್ಕಾರ!

ಅರ್ಹ ಪಲಾನುಭವಿಗಳ ಜೊತೆಗೆ ಕೆಲವು ಅನರ್ಹ ಫಲಾನುಭವಿಗಳು ಸೇರಿಕೊಂಡಿದ್ದಾರೆ, ಆದ್ದರಿಂದ ಆಹಾರ ಇಲಾಖೆಯು ಅನರ್ಹ ಫಲಾನುಭವಿಗಳ ಬಿಪಿಎಲ್ ಕಾರ್ಡ್ಗಳನ್ನು ಕುಲಂಕುಶವಾಗಿ ಪರಿಶೀಲಿಸಿ, ಅರ್ಹರಲ್ಲದ ಫಲಾನುಭವಿಗಳ ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ. ಜನವರಿ ತಿಂಗಳಲ್ಲಿ ಸುಮಾರು ಜನರ ಪಡಿತರ ಚೀಟಿಯನ್ನು ಅನರ್ಹಗಳಿಸಿರುವ ಪಟ್ಟಿ ಬಿಡುಗಡೆ ಮಾಡಿದ್ದು, ಅವರಿಗೆ ನೂತನ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಹಣವು ಕೂಡ ಅನ್ವಯವಾಗುವುದಿಲ್ಲ. ಸುತ್ತಮುತ್ತಲಿನ ತೆರಿಗೆ ಪಾವತಿದಾರರು ಹಾಗೂ ಸರ್ಕಾರಿ ನೌಕರರ ಬಳಿಯೂ ಬಿಪಿಎಲ್ ಕಾರ್ಡ್ ಇದ್ದು, ಇಂಥವರಿಗೆ ಸರ್ಕಾರವು ಅವರ ಪಡಿತರ ಚೀಟಿಯನ್ನು ರದ್ದುಗೊಳಿಸಿ, ಜೊತೆಗೆ ದಂಡದ ರುಚಿಯನ್ನು ಸಹಿತ ತೋರಿಸಲಾಗುತ್ತಿದೆ. ಬಡವರಿಗೆ ಸಿಗಬೇಕಾದ ಎಲ್ಲಾ ಸರ್ಕಾರಿ ಯೋಜನೆಗಳ ಭಾಗ್ಯಗಳನ್ನು ಅನುಕೂಲಸ್ಥರು ಕೂಡ ಪಡೆದುಕೊಳ್ಳುತ್ತಿರುವುದು ವಿಷಾದಕರವಾದ ಸಂಗತಿಯಾಗಿದೆ. ಆದ್ದರಿಂದ ಆಹಾರ ಇಲಾಖೆಯು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.

ನಮ್ಮ ರಾಜ್ಯದಲ್ಲಿ ಸರಿಸುಮಾರು ಒಂದು ಪಾಯಿಂಟ್ 2.7 ಕೋಟಿ ಬಿಪಿಎಲ್ ಕಾರ್ಡ್ ಗಳಿದ್ದು, ಅದರಲ್ಲಿ 4.36 ಕೋಟಿ ಜನರಿಗೆ ಬಿಪಿಎಲ್ ಕಾರ್ಡ್ ಗಳು ಅನುಕೂಲವಾಗಿದೆ. ಆದರೆ ಇದರಲ್ಲಿ ಬಿಪಿಎಲ್ ಕಾರ್ಡ್ ಗೆ ಅರ್ಹರಲ್ಲದ ಫಲಾನುಭವಿಗಳು ಉಚಿತ ಆಹಾರ ಧಾನ್ಯಗಳನ್ನು ಪಡೆಯುತ್ತಿದ್ದಾರೆ. ಎಂಬ ದೂರಿನ ಅನ್ವಯ, ಆಹಾರ ಮತ್ತು ನಾಗರಿಕ ಸರಬರಾಜ ಇಲಾಖೆಯು ಬಿಪಿಎಲ್ ಕಾರ್ಡಿಗೆ ಅರ್ಹರಲ್ಲದ ಸರಿಸುಮಾರು 4.59 ಲಕ್ಷ ಬಿಪಿಎಲ್ ಕಾರ್ಡ್ಗಳ ಫಲಾನುಭವಿಗಳ ಸೂಕ್ತ ದಾಖಲೆಗಳನ್ನು ಪಡೆದು ಅವುಗಳನ್ನು ರದ್ದು ಮಾಡಿದೆ.

2022 ರಲ್ಲಿ ಬಿಪಿಎಲ್ ಕಾರ್ಡಿಗೆ ಅರ್ಹರಲ್ಲದ ಸರಿಸುಮಾರು 4 ಲಕ್ಷ ಕಾಡುಗಳನ್ನು ಸರ್ಕಾರವು ರದ್ದು ಮಾಡಿ, ಅವರ ಬಳಿ 13 ಕೋಟಿ ರೂಪಾಯಿ ದಂಡವನ್ನು ವಸೂಲಿ ಮಾಡಿದೆ. ಅದರಂತೆಯೆ ಈ ವರ್ಷವೂ ಕೂಡ ಚುರುಕಿನ ಕಾರ್ಯಾಚರಣೆ ಮೂಲಕ ಬಿಪಿಎಲ್ ಕಾರ್ಡಿಗೆ ಅರ್ಹರಲ್ಲದ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವ ಮೂಲಕ, ಅರ್ಹ ಫಲಾನುಭವಿಗಳಿಗೆ ಹೆಚ್ಚಿನ ಸೌಲಭ್ಯಗಳ ಲಾಭ ಆಗುವಂತೆ ನೋಡಿಕೊಳ್ಳುವ ಭರವಸೆಗಳನ್ನು ಆಹಾರ ಇಲಾಖೆಯು ಹೊಂದಿದೆ.

ಸರ್ಕಾರವು ಬಿಪಿಎಲ್ ಕಾರ್ಡ್ ನೀಡುತ್ತಿರುವ ಉದ್ದೇಶವೇನೆಂದರೆ, ಸಮಾಜದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಜೀವನ ಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಈ ಕಾರ್ಡ್ ಗಳನ್ನು ಸರ್ಕಾರವು ನೀಡುತ್ತಿದೆ. ಆದರೆ, ಇದರಲ್ಲೂ ಬಡವರ ತುತ್ತಿನ ಚೀಲಕ್ಕೆ ಉಳ್ಳವರು ಕನ್ನ ಹಾಕುತ್ತಿದ್ದಾರೆ. ಇಂತಹ ಸಾವಿರಾರು ಫಲಾನುಭವಿಗಳಿಗೆ ದಂಡದ ರುಚಿ ತೋರಿಸಲಾಗಿದೆ, ಇನ್ನು ಕೆಲವರಿಗೆ ದಂಡದ ರುಚಿ ಬೀಳುವ ಸಮಯವು ಬಂದಿದೆ.

ಆಹಾರ ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ನಿರಂತರವಾಗಿ, ಅರ್ಹತೆ ಇರದಿದ್ದರೂ ಬಿಪಿಎಲ್ ಕಾರ್ಡ್ ಗಳನ್ನು ಹೊಂದಿದ್ದರೆ ಅಂತವರ ಕಾರ್ಡ್ ಹಿಂತಿರುಗಿಸಬೇಕೆಂದು ತಿಳುವಳಿಕೆ ಮೂಡಿಸುತ್ತದೆ. ಆದರೆ ಸಾವಿರಾರು ಅನರ್ಹರು ಸರ್ಕಾರಿ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಇಂಥವರ ಪತ್ತೆಯ ಕಾರ್ಯಾಚರಣೆ ನಡೆಯುತ್ತಿದ್ದು, ಪತ್ತೆ ಹಚ್ಚಿ ಕಾರ್ಡುಗಳನ್ನು ರದ್ದುಪಡಿಸಲಾಗುತ್ತದೆ.

ರೇಷನ್ ಕಾರ್ಡ್ ರದ್ದು ಮಾಡಿದ ಪಟ್ಟಿ ಬಿಡುಗಡೆಯಾಗಿದೆ. ನಿಮ್ಮ ಕಾರ್ಡ್ ಇದೆಯಾ ಎಂದು ಚೆಕ್ ಮಾಡಿಕೊಳ್ಳಿ.

ರದ್ದಾದ ರೇಷನ್ ಕಾರ್ಡ್ಗಳನ್ನು ಚೆಕ್ ಮಾಡುವ ವಿಧಾನಗಳು ಕೆಳಗಿನಂತಿವೆ;

https://ahara.kar.nic.in/Home/EServices

  • ಮೊದಲನೇದಾಗಿ ಅಭ್ಯರ್ಥಿಯು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಇಲ್ಲವೇ ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಂತರ ಎಡ ಭಾಗದಲ್ಲಿರುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ.
  • ನಂತರ ಪಡಿತರ ಚೀಟಿ ಎಂಬ ಆಯ್ಕೆಯಲ್ಲಿ, ರದ್ದು ಮಾಡಲಾದ ಅಥವಾ ತಡೆಹಿಡಿಯಲಾದ ಪಡಿತರ ಚೀಟಿಯ ಪಟ್ಟಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
  • ಕೊನೆಯಲ್ಲಿ ನಿಮಗೆ ಲಿಸ್ಟ್ ಓಪನ್ ಆಗುತ್ತದೆ. ಅದರಲ್ಲಿ ನಿಮ್ಮ ಜಿಲ್ಲೆ ತಾಲೂಕು ಹಾಗೂ ತಿಂಗಳನ್ನು ಆಯ್ಕೆ ಮಾಡಿಕೊಳ್ಳಿ ನಂತರ ನಿಮಗೆ ರದ್ದಾದ ಪಡಿತರ ಚೀಟಿಯ ಪಟ್ಟಿಯು ಕಾಣಸಿಗುತ್ತದೆ. ಅದರಲ್ಲಿ ಕೆಲವೊಮ್ಮೆ ರದ್ದು ಆಗಿರುವುದಕ್ಕೆ ಕಾರಣವನ್ನು ಕೂಡ ನೀಡಲಾಗಿರುತ್ತದೆ.

ನಿಮ್ಮ ರೇಷನ್ ಕಾರ್ಡಿನ ಸ್ಥಿತಿಯು ಹೇಗಿದೆ ಎಂದು ತಿಳಿದುಕೊಳ್ಳಲು ಕೆಳಗಿನ ವಿಧಾನಗಳನ್ನು ಅನುಸರಿಸಿ:

https://mahitikanaja.karnataka.gov.in/FCS/MyRationCard?ServiceId=1036&Type=TABLE&DepartmentId=1010

  • ರೇಷನ್ ಕಾರ್ಡಿನ ಸ್ಥಿತಿಯನ್ನು ಚೆಕ್ ಮಾಡಲು ಮೊದಲಾಗಿ “ಮಾಹಿತಿ ಕಣಜ” ವೆಬ್ಸೈಟ್ ಇಲ್ಲವೇ ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಂತರ ಮೈ ರೇಷನ್ ಕಾರ್ಡ್ ಡೀಟೇಲ್ಸ್ ( My Ration card details)ವಿವರಗಳ ಪುಟ ತೆರೆದುಕೊಳ್ಳುತ್ತದೆ.
  • ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಮತ್ತು ನಿಮ್ಮ ಜಿಲ್ಲೆಯನ್ನು ನಮೂದಿಸಬೇಕು. ನಂತರ ಸಲ್ಲಿಸು/Submit ಬಟನ್ ಮೇಲೆ ಕ್ಲಿಕ್ ಮಾಡಿ. ಅದಾದ ನಂತರ ನನ್ನ ಪಡಿತರ ಅಂಗಡಿ ವಿವರದ ಪುಟ ತೆರೆಯುತ್ತದೆ/my Ration shop details. ಕೊನೆಯಲ್ಲಿ ಕಾರ್ಡ್ ಸ್ಥಿತಿ ಸಕ್ರಿಯ/card status active ಎಂದು ತೋರಿಸಿದರೆ ನಮ್ಮ ರೇಷನ್ ಕಾರ್ಡ್ ಚಾಲ್ತಿಯಲ್ಲಿ ಇದೆ ಎಂದು ನಾವು ಕಾಣಬಹುದು.

ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಯು ಮೇಲಿನ ಹಂತಗಳನ್ನು ಪಾಲಿಸುವ ಮುಖಾಂತರ, ರೇಷನ್ ಕಾರ್ಡ್ ಸ್ಥಿತಿಯನ್ನು ತಿಳಿದುಕೊಳ್ಳಬಹುದು. ಉತ್ತಮ ಮಾಹಿತಿಯನ್ನು ಹೊಂದಿದ ಲೇಖನವನ್ನು ನಿಮ್ಮ ಸ್ನೇಹಿತರಿಗೆ ಹಾಗೂ ಬಂಧುಗಳೆಲ್ಲರಿಗೂ ಶೇರ್ ಮಾಡಿ. ಲೇಖನವನ್ನು ಓದಿದ ಎಲ್ಲರಿಗೂ ಧನ್ಯವಾದಗಳು.

ಪ್ರತಿದಿನ ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಎಲ್ಲಾ ತರಹದ ಸರ್ಕಾರಿ ಯೋಜನೆಗಳು ಉದ್ಯೋಗ ವಾರ್ತೆಗಳು ಹಾಗೂ ಇನ್ನಿತರ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿಯನ್ನು ಪಡೆಯಲು ನಮ್ಮ ಗ್ರೂಪ್ ಸೇರಿಕೊಳ್ಳಿ. ಸೇರಲು ಇಲ್ಲಿ ಕ್ಲಿಕ್ ಮಾಡಿ.

ಓದುಗರ ಗಮನಕ್ಕೆ:  ನಮ್ಮ ಕನ್ನಡ ನೀಡ್ಸ್ ತಂಡವು ತನ್ನೆಲ್ಲ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಒದಗಿಸುತ್ತದೆ. ಯಾವುದೇ ಸುಳ್ಳು ಅಥವಾ ಅನಧಿಕೃತ ಮಾಹಿತಿಗಳನ್ನು ಒದಗಿಸುವುದಿಲ್ಲ.

ನಮ್ಮ ವೆಬ್ಸೈಟ್ ಗೆ ಯಾವುದೇ ರೀತಿಯ ಸರ್ಕಾರಿ ಸಂಬಂಧ ಹೊಂದಿಲ್ಲ ಹಾಗೂ ನಮ್ಮ ವೆಬ್ಸೈಟ್ ಯಾವುದೇ ರೀತಿಯ ಸರ್ಕಾರಿ ಪ್ರಚಾರದ ಜಾಲತಾಣವಲ್ಲ.

ನಾವು ಈ ಬ್ಲಾಗ್ ಮಾಡಿರೋ ಉದ್ದೇಶ ನಿಮ್ಮಿಂದ ಯಾವುದೇ ರೀತಿ ಹಣವನ್ನು ಪಡೆಯುವುದು ಅಲ್ಲ. ನಮ್ಮೆಲ್ಲ ಮಾಹಿತಿಯನ್ನು ಓದಲು ನೀವು ಯಾವುದೇ ರೀತಿ ಹಣವನ್ನು ಪಾವತಿಸಬೇಕಾಗಿಲ್ಲ. ಎಲ್ಲಾ ಮಾಹಿತಿಯು  ನಿಮಗೆ ಉಚಿತವಾಗಿ ದೊರೆಯುತ್ತದೆ. ನಿಖರವಾದ ಮಾಹಿತಿಗಳನ್ನು ಒದಗಿಸುವುದು ನಮ್ಮ ಬ್ಲಾಗ ನ ಪ್ರಮುಖ ಉದ್ದೇಶವಾಗಿದೆ.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment