Railway: ಜನರಲ್ ಬೋಗಿಗಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ! ಇಲ್ಲಿದೆ ಸಂಪೂರ್ಣ ಮಾಹಿತಿ.

ನೈರುತ್ಯ ರೈಲ್ವೆ ಇಲಾಖೆ(South Western Railway)ಯು ಪ್ರಯಾಣಿಕರ ಅನುಕೂಲ ವಾಗುವಂತೆ ಹಲವಾರು ಯೋಜನೆಗಳನ್ನು ಜಾರಿ ಮಾಡುತ್ತಲೇ ಇರುತ್ತದೆ. ಹಾಗೆಯೇ ಈಗ ಜನರಲ್ ಭೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ ಒಂದನ್ನು ನೀಡಿದೆ, ಆ ಸಿಹಿ ಸುದ್ದಿಯ ಬಗ್ಗೆ ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ, ಪ್ರತಿನಿತ್ಯ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು

ಈ ಹಿಂದೆ ರೈಲ್ವೆ ಇಲಾಖೆಯು ಬೆಂಗಳೂರು ವಿಭಾಗದ ಟಿಕೆಟ್ ಖರೀದಿಸಲು ವ್ಯವಸ್ಥೆ ಮಾಡುವ ಉದ್ದೇಶದಿಂದ, ಕ್ಯೂ ಆರ್ ಕೋಡ್(QR Code) ಆಧಾರಿತ ಡಿಜಿಟಲ್ ಪಾವತಿಯನ್ನು ಆರಂಭ ಮಾಡಿದ್ದು, ಈ ಹೊಸ ವ್ಯವಸ್ಥಯು ಟಿಕೆಟ್ ಕೌಂಟರ್(Ticket Counter) ಗಳಲ್ಲಿ ಉಂಟಾಗುತ್ತಿದ್ದ ಚಿಲ್ಲರೆ ಸಮಸ್ಯೆಯನ್ನು ನಿಯಂತ್ರಿಸುತ್ತಿದೆ.

ಬಹುತೇಕ ಎಲ್ಲಾ ರೈಲ್ವೆ ನಿಲ್ದಾಣದಲ್ಲಿ ಪ್ರತಿನಿತ್ಯ ರೈಲಿನ ಹವಾ ನಿಯಂತ್ರಣ ರಹಿತ ಸ್ಲೀಪರ್(Non Ac Sleeper), ಹವಾ ನಿಯಂತ್ರಿತ ಸ್ಲೀಪರ್ (Ac Sleeper) ಹಾಗೂ ಐಷಾರಾಮಿಕೋಚಗಳಲ್ಲಿ ಸಂಚಾರ ಮಾಡುವ ಪ್ರಯಾಣಿಕರಿಗೆ ಆನ್ಲೈನ್ ಟಿಕೆಟ್(Online Ticket) ಗಳನ್ನು ಕಾಯ್ದಿರಿಸಿ ಡೀಟೇಲ್ ಮೂಲಕ ಹಣ ಪಾವತಿ(Digitel Pay) ಮಾಡಲು ಅವಕಾಶಗಳನ್ನು ಕಲ್ಪಿಸಲಾಗಿತ್ತು. ಆದರೆ ಇದೀಗ ಜನರಲ್ ಭೋಗಿಗಳಲ್ಲಿ(General Coch) ಪ್ರಯಾಣಿಸುವ ಪ್ರಯಾಣಿಕರಿಗೂ ಕೂಡ ಬೆಂಗಳೂರು ರೈಲ್ವೆ ವಿಭಾಗವು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಯುಪಿಐ(UPI) ಸೇವೆಯನ್ನು ಒದಗಿಸಲಾಗಿದೆ, ಇದರಿಂದ ಎಲ್ಲಾ ಪ್ರಯಾಣಿಕರಿಗೆ ತುಂಬಾ ಸಹಕಾರಿಯಾಗುವಂತಹ ವ್ಯವಸ್ಥೆಯಾಗಲಿದೆ.

WhatsApp Group Join Now
Telegram Group Join Now

ಹೊಸ ವ್ಯವಸ್ಥೆ ಜಾರಿಯಾದ ನಂತರ ಪ್ರತಿನಿತ್ಯ ಸುಮಾರು 300ಕ್ಕೆ ಹೆಚ್ಚು ಪ್ರಯಾಣಿಕರು ಕೆ ಎಸ್ ಆರ್ (KSR) ನಿಲ್ದಾಣದ ಕೌಂಟರ್ ನಲ್ಲಿ ಯುಪಿಐ (UPI) ಮೂಲಕ ಹಣವನ್ನು ಪಾವತಿಸಿ ಟಿಕೆಟ್ ಖರೀದಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಯಾಣಿಕರು ಹೋಗಬೇಕಾದ ಸ್ಥಳದ ಹೆಸರು ಹೇಳಿದ ತಕ್ಷಣ ಕೌಂಟರ್ನಲ್ಲಿ ಟಿಕೆಟ್(Ticket) ನೀಡಲಾಗುತ್ತದೆ ಅದರ ಬಳಿಕ ಅಲ್ಲಿ ಅಳವಡಿಸಲಾದ ಕ್ಯೂಆರ್ ಕೋಡ್(QR Code) ಅನ್ನು ಸ್ಕ್ಯಾನ್ ಮಾಡಿ ವಿವಿಧ ಡಿಜಿಟಲ್ ಪಾವತಿ(Digitel Pay)ಯ ಮೂಲಕ ಹಣವನ್ನು ಪಾವತಿ ಮಾಡಬಹುದಾಗಿದೆ.

ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ಕೆಎಸ್ಆರ್ ನಿಲ್ದಾಣದಲ್ಲಿ ಈ ಹೊಸ ಕ್ಯೂಆರ್ ಕೋಡ್(QR Code) ಆಧಾರಿತ ಯುಪಿಐ(UPI) ಹಣವನ್ನು ಪಾವತಿಸುವ ಸೇವೆಯನ್ನು ಆರಂಭ ಮಾಡಲಾಗಿದೆ. ಇದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(KSR) ನಿಲ್ದಾಣದ ಎರಡು ದಂಡು ರೈಲು ನಿಲ್ದಾಣದಲ್ಲಿ ಒಂದು ಡಿಜಿಟಲ್ ಹಣ ಪಾವತಿಯ ಕೌಂಟರ್ ಸೇವೆಯನ್ನು ಕಲ್ಪಿಸಲಾಗಿದೆ. ಆದರೆ ಈ ವ್ಯವಸ್ಥೆಯ ಬಗ್ಗೆ ಬಹುತೇಕ ಪ್ರಯಾಣಿಕರಿಗೆ ಮಾಹಿತಿ ಇಲ್ಲ, ಆದ್ದರಿಂದ ಪ್ರಯಾಣಿಕರು ಎರಡು ಕೌಂಟರ್ ಗಳಲ್ಲಿ ಟಿಕೆಟ್ ಪಡೆಯಲು ಮುಂದಾಗುತ್ತಿದ್ದಾರೆ ಚಿಲ್ಲರ ಸಮಸ್ಯೆ ಉಂಟಾದಾಗ ಮಾತ್ರ ಎಲ್ಲಿ ಸಿಬ್ಬಂದಿ ಡಿಜಿಟಲ್ ಪಾವತಿ (Digitel Pay) ಕೌಂಟರ್ ಗಳಲ್ಲಿ ಟಿಕೆಟ್ ಪಡೆಯುವಂತೆ ಮಾಹಿತಿಯನ್ನು ತಿಳಿಸುತ್ತಿದ್ದಾರೆ.

ನೈರುತ್ಯ ಇಲಾಖೆಯು ಯೋಜಿಸಿರುವಂತಹ ಈ ವ್ಯವಸ್ಥೆಯಿಂದ ಪ್ರಯಾಣಿಕರು ಸರದಿಯ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲುವುದು ತಪ್ಪಿದಂತಾಗುತ್ತದೆ. ಆದರೆ ಈ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿಯೇ ಇಲ್ಲದಂತಾಗಿದೆ, ಆದ್ದರಿಂದ ಬೆಂಗಳೂರು ವಿಭಾಗದ ರೈಲ್ವೆ ಅಧಿಕಾರಿಗಳು ಎಲ್ಲಾ ಪ್ರಯಾಣಿಕರಿಗೂ ಈ ಮಾಹಿತಿಯನ್ನು ತಿಳಿಸಲಾಗುವುದು ಎಂದು ಹೇಳಿದ್ದಾರೆ. ಹೆಚ್ಚಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment