Post Office Scheme: ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ! ಮನೆಯಲ್ಲಿಯೇ ಕುಳಿತುಕೊಂಡು ಹಣವನ್ನು ಗಳಿಸಬಹುದು..
ಭಾರತೀಯ ಅಂಚೆ ಇಲಾಖೆಯು ಜನಸಾಮಾನ್ಯರಿಗಾಗಿ ವಿವಿಧ ರೀತಿಯ ಉಳಿತಾಯ ಯೋಜನೆಗಳನ್ನು(Saving Scheme) ಪರಿಚಯಿಸಿದೆ, ಜನಸಾಮಾನ್ಯರು Post office ನ ವಿವಿಧ ಯೋಜನೆಯಲ್ಲಿ ಹೂಡಿಕೆ(Imvestment) ಮಾಡುತ್ತಾ ಸ್ಥಿರ ಆದಾಯವನ್ನು ಪಡೆಯುತ್ತಿದ್ದಾರೆ.
ಅಂಚೆ ಇಲಾಖೆಯು ಪರಿಚಯಿಸಿದ, ಪ್ರತಿ ಉಳಿತಾಯ ಯೋಜನೆಯು ಕೂಡ ಅಪಾಯಮುಕ್ತವಾಗಿದೆ. ಈ ಪೋಸ್ಟ್ ಆಫೀಸ್ ಯೋಜನೆಗಳು ಜನರಿಗೆ ಕಡಿಮೆ ಪ್ರೀಮಿಯಂ(Low Premium) ನಲ್ಲಿ ಹೂಡಿಕೆಗೆ(Investment) ಅವಕಾಶವನ್ನು ನೀಡುತ್ತಿದೆ, ಈಗ ಅಂಚೆ ಇಲಾಖೆಯು(Post Office) ಹಿರಿಯ ನಾಗರೀಕರಿಗಾಗಿ(senior citizens) ವಿಶೇಷ ಉಳಿತಾಯ ಯೋಜನೆಯನ್ನು ಪರಿಚಯಿಸಿದೆ. ಈ ಉಳಿತಾಯ ಯೋಜನೆಯಡಿ ಹೂಡಿಕೆ ಮಾಡಿ, ಹಿರಿಯ ನಾಗರಿಕರು ಹೆಚ್ಚಿನ ಆದಾಯವನ್ನು ಗಳಿಸಬಹುದಾಗಿದೆ.
60 ವರ್ಷ ಮೇಲ್ಪಟ್ಟ ಎಲ್ಲರಿಗೂ ಸಿಹಿ ಸುದ್ದಿ.!
ಅಂಚೆ ಇಲಾಖೆಯು ಪ್ರತಿ ವಯಸ್ಸಿನವರೆಗೂ ಕೂಡ ವಿವಿಧ ಸಣ್ಣ ಉಳಿತಾಯ ಯೋಜನೆಗಳನ್ನು(Small Savings Schemes) ನೀಡುತ್ತದೆ, ಪೋಸ್ಟ್ ಆಫೀಸ್(Post Office) ವಿಶೇಷವಾಗಿ ಹಿರಿಯ ನಾಗರೀಕರಿಗಾಗಿ Senior Citizen Savings Scheme ಅನ್ನು ಪ್ರಾರಂಭಿಸಿದೆ. ಈ ಯೋಜನೆಯನ್ನು ಇತರ ಬ್ಯಾಂಕ್ ಗಳಲ್ಲಿನ(Banks) ಎಫ್ ಡಿಗೆ(FD) ಹೋಲಿಸಿದರೆ ಹೆಚ್ಚಿನ ಬಡ್ಡಿಯನ್ನು(intrest) ನೀಡುವುದಲ್ಲದೆ ಅದರಲ್ಲಿ ನಿಯಮಿತ ಆದಾಯವನು ಪಡೆಯಬಹುದು.
ಒಬ್ಬ ವ್ಯಕ್ತಿಯು ತಿಂಗಳಿಗೆ ರೂ.20,000 ವರೆಗೆ ಗಳಿಸುವ ಅವಕಾಶವಿದೆ, ಇನ್ನು ಸರ್ಕಾರವು Senior Citizen Savings Scheme ನಲ್ಲಿ ಹೂಡಿಕೆ ಮಾಡುವವರಿಗೆ 1 ಜನವರಿ 2024 ರಿಂದ 8.2% ಬಡ್ಡಿ ದರವನ್ನು(Intrest Rates) ನೀಡುತ್ತಿದೆ. ಪೋಸ್ಟ್ ಆಫೀಸ್ನಲ್ಲಿ ಖಾತೆ ತೆರೆಯುವ ಮೂಲಕ ಕನಿಷ್ಠ 1,000 ರೂ.ಗಳಿಂದ ನಿಮ್ಮ ಹೂಡಿಕೆಯನ್ನು (Investment) ಆರಂಭಿಸಬಹುದು. ಈ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ(senior citizens shaving schemes) ಗರಿಷ್ಠ ಹೂಡಿಕೆ ಮಿತಿಯನ್ನು 30 ಲಕ್ಷ ರೂ.ಗೆ ನಿಗದಿಪಡಿಸಲಾಗಿದೆ, ಈ ಪೋಸ್ಟ್ ಆಫೀಸ್(Post Office) ಯೋಜನೆಯು ನಿವೃತ್ತಿಯ ನಂತರ ಆರ್ಥಿಕವಾಗಿ ಸಮೃದ್ಧವಾಗಿ ಉಳಿಯಲು ಬಯಸುವವರಿಗೆ ತುಂಬಾ ಸಹಕಾರಿಯಾಗಲಿದೆ.
ಈಗ ಮನೆಯಲ್ಲೇ ಕುಳಿತು ಆದಾಯ ಗಳಿಸಬಹುದು
ಹೂಡಿಕೆದಾರರು ಈ ಸರ್ಕಾರಿ ಯೋಜನೆಯಲ್ಲಿ(Govt Schemes) ಕೇವಲ 1000 ರೂ ಹೂಡಿಕೆಯನ್ನು ಪ್ರಾರಂಭಿಸಬಹುದು ಮತ್ತು ಗರಿಷ್ಠ 30 ಲಕ್ಷ ರೂ. ಹೂಡಿಕೆ(Invest) ಮಾಡಬಹುದು. ಹೂಡಿಕೆಯ ಠೇವಣಿ ಮೊತ್ತವನ್ನು 1000 ರೂಪಾಯಿಗಳ ಗುಣಾಕಾರಗಳಲ್ಲಿ ನಿರ್ಧರಿಸಲಾಗುತ್ತದೆ, ಈ ಯೋಜನೆಯಿಂದ 20,000 ರೂಪಾಯಿಗಳ ನಿಯಮಿತ ಗಳಿಕೆಯ ಲೆಕ್ಕಾಚಾರವನ್ನು ನೋಡುವುದಾದರೆ, ನಂತರ 8.2% ಬಡ್ಡಿಯಲ್ಲಿ, ಒಬ್ಬ ವ್ಯಕ್ತಿಯು ಸುಮಾರು 30 ಲಕ್ಷ ರೂಪಾಯಿಗಳನ್ನು ಹೂಡಿಕೆ(Invest) ಮಾಡಿದರೆ, ರೂ.2.46 ಲಕ್ಷ ವಾರ್ಷಿಕ ಬಡ್ಡಿಯನ್ನು(Yearly Intrest) ಪಡೆಯುತ್ತಾನೆ. ಈ ಬಡ್ಡಿಯನ್ನು ತಿಂಗಳ ಆಧಾರದ ಮೇಲೆ ನೋಡುವುದಾದರೆ, ಮಾಸಿಕ ಸುಮಾರು ರೂ.20,000 ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ.