Post Office: ಪೋಸ್ಟ್ ಆಫೀಸ್ನಲ್ಲಿ, ಖಾತೆಯನ್ನು ಹೊಂದಿರುವ ಮಧ್ಯಮವರ್ಗದ ಜನರಿಗೆ ಸಿಹಿ ಸುದ್ದಿ!
ಮಧ್ಯಮ ವರ್ಗದ ಜನರು ತಮ್ಮ ಮುಂದಿನ ಭವಿಷ್ಯಕ್ಕಾಗಿ ಹೂಡಿಕೆಯನ್ನು ಆರಂಭಿಸಬೇಕೆಂದಿದ್ದರೆ, ಪೋಸ್ಟ್ ಆಫೀಸ್ನ(Post Office) ಮಧ್ಯಮಾವಧಿಯ ಹೂಡಿಕೆ(Investment) ಆಯ್ಕೆಯು ಉತ್ತಮವಾಗಿದೆ. ಪೋಸ್ಟ್ ಆಫೀಸ್ ಪಿಕ್ಸೆಡ್ ಡೆಪಾಸಿಟ್(FD) ಎಂದು ಕರೆಯಲ್ಪಡುವ ರಾಷ್ಟ್ರೀಯ ಉಳಿತಾಯ ಸಮಯದ ಠೇವಣಿ ಖಾತೆ (TD), ಹೂಡಿಕೆ ಮಾಡಲು ಜನಪ್ರಿಯವಾದ ಆಯ್ಕೆಯಾಗಿದೆ.
ಎಲ್ಲಾ ಜನರಿಗೂ ಅಂಚೆ ಕಚೇರಿಯು ಕಡಿಮೆ ಅಪಾಯದೊಂದಿಗೆ ಉತ್ತಮ ಆದಾಯವನ್ನು ಅನೇಕ ಯೋಜನೆಗಳಿಗೆ ನೀಡುತ್ತಿದೆ. ಪೋಸ್ಟ್ ಆಫೀಸ್ ಭದ್ರತೆಯ ಜೊತೆಗೆ ಉತ್ತಮ ಲಾಭವನ್ನು ನೀಡುವುದರಿಂದ ಹೆಚ್ಚಿನ ಜನರು ಇಲ್ಲಿ ಹೂಡಿಕೆ ಮಾಡಲು ಆಸಕ್ತಿ ವಹಿಸುತ್ತಾರೆ.
ಇತ್ತೀಚಿನ ದಿನಗಳಲ್ಲಿ ಒಂದು ವರ್ಷ, ಎರಡು ವರ್ಷ, ಮೂರು ವರ್ಷ, ಐದು ವರ್ಷಗಳಂತಹ ವಿಭಿನ್ನ ಅವಧಿಗಳೊಂದಿಗೆ ಸ್ಥಿರ ಠೇವಣಿ(Fixed Deposit) ಯೋಜನೆಗಳನ್ನು ಒಳಗೊಂಡಿದೆ, ಇವುಗಳು ಸರ್ಕಾರದ ಬೆಂಬಲಿತವಾಗಿದೆ ಮತ್ತು ಹೂಡಿಕೆಯ ಅವಧಿಯ ನಂತರ ಉತ್ತಮವಾದ ಲಾಭವನ್ನು ನೀಡುತ್ತದೆ. ಪ್ರಭುಪತಿಯ ಸಮಯದಲ್ಲಿ ಬಡ್ಡಿ (Intrest) ಮತ್ತು ಅಸಲನ್ನು ಮರುಪಾವತಿ ಮಾಡಲಾಗುತ್ತದೆ.
ಈ ಯೋಜನೆಯಲ್ಲಿ ಯಾರು ಎಷ್ಟು ಪ್ರಮಾಣದಲ್ಲಿ ಹೂಡಿಕೆ ಮಾಡಬಹುದು?
ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದ ಸ್ಥಿರ ಠೇವಣಿಯ ಮೇಲೆ, ವಾರ್ಷಿಕವಾಗಿ ಬಡ್ಡಿಯನ್ನು ಪಾವತಿಸಲಾಗುತ್ತದೆ, ಆದರೆ ಮೊತ್ತವನ್ನು(Total Amount) ತ್ರೈಮಾಸಿಕಕ್ಕೆ ಲೆಕ್ಕ ಹಾಕಲಾಗುತ್ತದೆ. ಒಬ್ಬ ವ್ಯಕ್ತಿಯು ಕನಿಷ್ಠ ಅಂದರೆ ರೂ.1,000 ಸ್ಥಿರ ಠೇವಣಿಯನ್ನು(FD) ಮಾಡಬೇಕು, ಇನ್ನು ಹೆಚ್ಚಿನ ಹೂಡಿಕೆಗೆ ಯಾವುದೇ ಮಿತಿ ಇಲ್ಲ.
ಈ ಯೋಜನೆಯಲ್ಲಿ 10 ವರ್ಷ ಪೂರೈಸಿದ ಅಪ್ರಾಪ್ತರ ಹೆಸರಿನಲ್ಲಿ ರಕ್ಷಕ ರಾಗಿ ಖಾತೆ ತೆರೆಯಬಹುದು, 03 ವಯಸ್ಕರ ಜಂಟಿ ಖಾತೆ(Joint Account)ಯನ್ನು ತೆರೆಯಬಹುದು. 5 ವರ್ಷಗಳ ಸ್ಥಿರ ಠೇವಣಿಯ ಮುಕ್ತಾಯದ ಬಳಿಕ, ಮುಂದಿನ 18 ತಿಂಗಳ ಅವರಿಗೆ ವಿಸ್ತರಿಸಬಹುದು.
ರಾಷ್ಟ್ರೀಯ ಉಳಿತಾಯ ಸಮಯದ ಠೇವಣಿಯ ಬಡ್ಡಿ ದರಗಳು
ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಅಧಿಕಾರಾವಧಿಯ ಆಧಾರದ ಮೇಲೆ ಬಡ್ಡಿ ದರಗಳನ್ನು ನೀಡಲಾಗುತ್ತದೆ. ಒಂದು ವರ್ಷದ ಅವಧಿಗೆ 6.9%, ಎರಡು ವರ್ಷಕ್ಕೆ 7.0%, ಮೂರು ವರ್ಷಕ್ಕೆ 7.1% ಮತ್ತು 5 ವರ್ಷದ ಅವಧಿಗೆ 7.5% ಬಡ್ಡಿಯನ್ನು ನೀಡಲಾಗುತ್ತದೆ.
ನೀವು 5 ವರ್ಷಗಳ ಅವಧಿಗೆ 10 ಲಕ್ಷವನ್ನು ಹೂಡಿಕೆ ಮಾಡಿದರೆ, 7.5% ಬಡ್ಡಿ ದರದಲ್ಲಿ 4,49,948 ರೂಪಾಯಿಗಳು ಹೆಚ್ಚುವರಿಯಾಗಿ ಸಿಗುತ್ತದೆ. ಪೂರ್ಣ ಅವಧಿಯ ಬಳಿಕ ನಿಮಗೆ 14,49,948 ರೂಪಾಯಿಗಳು ಸಿಗುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿ, ಒಂದು ಹಣಕಾಸು ವರ್ಷದಲ್ಲಿ ರೂ.1.50 ಲಕ್ಷದವರೆಗೆ ತೆರಿಗೆ ವಿನಾಯಿತಿ ಇದೆ.
ಪೋಸ್ಟ್ ಆಫೀಸ್ ನಲ್ಲಿ ಸಿಗುವ ಈ ರೀತಿಯ ಉತ್ತಮವಾದ ಯೋಜನೆಗಳಲ್ಲಿ ಹೂಡಿಕೆ ಮಾಡಲು ಜನರು ಮುಗಿ ಬೀಳುತ್ತಾರೆ. ಅಲ್ಲದೆ, ಅಲ್ಪಾವಧಿ ಅಥವಾ ದೀರ್ಘಾವಧಿಯ ಬದಲಿಗೆ ಮಧ್ಯಮಾವಧಿಯಲ್ಲಿ ಹೂಡಿಕೆ ಮಾಡಲು ಆಸಕ್ತಿಯುಳ್ಳವರು ಈ ಪೋಸ್ಟಲ್ FD ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಹೆಚ್ಚಿನ ಮಾಹಿತಿಗೆ ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.