ಪಿಎಂ ಸ್ವನಿಧಿ ಯೋಜನೆ: ಕೇಂದ್ರ ಸರ್ಕಾರವು ಯಾವುದೇ ಗ್ಯಾರಂಟಿಗಳಿಲ್ಲದೆ ಬೀದಿಬದಿ ವ್ಯಾಪಾರಿಗಳಿಗೆ 50,000 ವರೆಗೆ ಸಾಲವನ್ನು ನೀಡಲಿದೆ.

ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ 2024

ಕನ್ನಡ ನೀಡ್ಸ್ ಓದುಗರಿಗೆ ಎಲ್ಲರಿಗೂ ನಮಸ್ಕಾರ. ಇಂದಿನ ವರದಿಯ ಮುಖ್ಯಾಂಶವೇನೆಂದರೆ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಮೂಲಕ ಬೀದಿಬದಿ ವ್ಯಾಪಾರಿಗಳಿಗೆ ಯಾವುದೇ ಗ್ಯಾರಂಟಿಗಳಿಲ್ಲದೆ ಸಾಲ ಸೌಲಭ್ಯವನ್ನು ನೀಡಲಿದೆ. ಪ್ರತಿದಿನ ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಇದೆ ತರಹದ ಎಲ್ಲಾ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಗಳನ್ನು ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ. ಸೇರಲು ಇಲ್ಲಿ ಕ್ಲಿಕ್ ಮಾಡಿ.

ಪ್ರಧಾನಮಂತ್ರಿಯವರು ಬೀದಿಬದಿ ವ್ಯಾಪಾರಿಗಳಿಗೆ ಆತ್ಮ ನಿರ್ಭರ ನಿಧಿ(PM SVANIdhi) ಎಂಬ ಯೋಜನೆಯ ಮೂಲಕ ಕೈಗೆಟುಕುವ, ಬಂಡವಾಳ ಸಾಲವನ್ನು ಒದಗಿಸುವ ಉದ್ದೇಶದಿಂದ 01 ಜೂನ್ 2020ರಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ‘ಮೈಕ್ರೋ ಕ್ರೆಡಿಟ್’ ವಿಶೇಷ ಸಾಲ ಸೌಲಭ್ಯವನ್ನು ಪ್ರಾರಂಭಿಸಿದೆ. ಕೋವಿಡ್ 19 ಸಾಂಕ್ರಾಮಿಕ ರೋಗ ಮತ್ತು ಭೀಕರ ಲಾಕ್ ಡೌನ್ ನಿಂದಾಗಿ ಬೀದಿಬದಿ ವ್ಯಾಪಾರಿಗಳ  ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಕೇಂದ್ರ ಸರ್ಕಾರವು ಆತ್ಮ ನಿರ್ಭರ ಯೋಜನೆಯ ಮೂಲಕ ಬೀದಿಬದಿ ವ್ಯಾಪಾರಿಗಳ ಜೀವನೋಪಾಯದ ಬೆಂಬಲದ ಅಗತ್ಯವನ್ನು ಸಶಕ್ತ ಗೊಳಿಸುವ ಪ್ರಯತ್ನದಲ್ಲಿ, ಉತ್ಪನ್ನದ ಮೊದಲ ಸಾಲ ಚಕ್ರದಲ್ಲಿ ರೂಪಾಯಿ 10,000 ದಿಂದ ಮೂರನೇ ಸಾಲಿನ ಚಕ್ರದಲ್ಲಿ ರೂಪಾಯಿ 50,000 ಸಾಲವನ್ನು ಒದಗಿಸುವ ಗುರಿಯನ್ನು ಹೊಂದಿದೆ.

WhatsApp Group Join Now
Telegram Group Join Now

ವ್ಯಾಪಾರಿಗಳು ತೆಗೆದುಕೊಂಡ ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದರೆ ಸರ್ಕಾರವು ಇದಕ್ಕೆ ಯಾವುದೇ ರೀತಿಯ ದಂಡವನ್ನು ಹೇರುವುದಿಲ್ಲ. ಈ ಯೋಜನೆಯಿಂದ ಬಡವರನ್ನು ಸ್ವಾವಲಂಬಿಯಾಗಿ ಮಾಡುವುದೇ ಇದರ ಉದ್ದೇಶವಾಗಿದೆ. ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ಮೂಲಕ ವಿವಿಧ ಪ್ರದೇಶದಲ್ಲಿನ ಬೀದಿಬದಿ ವ್ಯಾಪಾರಿಗಳು, ಚಮ್ಮಾರರು, ಕ್ಷೌರಿಕರು ಹಾಗೂ ಇತರ ಸಣ್ಣಪುಟ್ಟ ಕೆಲಸಗಳನ್ನು ಮಾಡುವ ಜನರಿಗೆ ತಮ್ಮ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಸರ್ಕಾರದಿಂದ 50,000 ವರೆಗೆ ಸಾಲವನ್ನು ನೀಡಲಾಗುತ್ತದೆ. ಸ್ವಂತ ಉದ್ಯೋಗವನ್ನು ಆರಂಭಿಸಬೇಕೆಂದವರು ಈ ಯೋಜನೆಯಿಂದ ಸಣ್ಣ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಇದರಿಂದ ಸಣ್ಣಪುಟ್ಟ ವ್ಯಾಪಾರವನ್ನು ಮಾಡಲು ಸಹಾಯವಾಗುತ್ತದೆ.

ನಮ್ಮ ದೇಶದಲ್ಲಿ ಸರಿಸುಮಾರು 50 ಲಕ್ಷಕ್ಕಿಂತ ಹೆಚ್ಚಿನ ಜನರು ಈ ಯೋಜನೆಯಿಂದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಈ ಯೋಜನೆಗೆ ವಿಶೇಷ ಕ್ರೆಡಿಟ್ ಯೋಜನೆ ಎಂದು ಕರೆಯಲಾಗುತ್ತದೆ. ಇದುವರೆಗೂ ಈ ಯೋಜನೆಗೆ ಒಟ್ಟು 71,683 ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದಾರೆ.  ಈ ಯೋಜನೆಯಿಂದ ಸಹಾಯವನ್ನು ಪಡೆದುಕೊಳ್ಳಬೇಕೆಂದಿದ್ದರೆ ನೀವು ಸಹ ಅರ್ಜಿಯನ್ನು ಸಲ್ಲಿಸಬಹುದು. ರಾಷ್ಟ್ರೀಯ ಬಜೆಟ್ ಮಂಡನೆಯಲ್ಲಿ ಯೋಜನೆಗೆ 5000 ಕೋಟಿ ಹಣವನ್ನು ಮೀಸಲಿಡಲಾಗಿದೆ. ಆದ್ದರಿಂದ ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರವನ್ನು ಆರಂಭಿಸಲು ಇನ್ನಷ್ಟು ಸಹಾಯವಾಗಲಿದೆ.

ಈ ಯೋಜನೆಯಿಂದ ಸಹಾಯವನ್ನು ಪಡೆದುಕೊಂಡ ವ್ಯಕ್ತಿಯನ್ನು ನೋಡುವುದಾದರೆ: ಕೇಂದ್ರ ಸರ್ಕಾರದ ಸ್ವ ನಿಧಿ ಯೋಜನೆಯ ಮೂಲಕ ಹಾವೇರಿ ನಗರದ ಇಸ್ಮಾಯಿಲ್ ಜಬಿವುಲ್ಲಾ ಶಿವಮೊಗ್ಗ ಎನ್ನುವ ವ್ಯಾಪಾರಿ, ಯೋಜನೆಯಡಿಯಲ್ಲಿ 20,000 ಸಾಲವನ್ನು ಪಡೆದು ತಮ್ಮ ಸ್ವಂತ ವ್ಯಾಪಾರವನ್ನು ಪ್ರಾರಂಭ ಮಾಡಿದ್ದಾರೆ.

ನೀವು ಸಹ ಯೋಜನೆಯಿಂದ ಸಹಾಯವನ್ನು ಪಡೆದುಕೊಳ್ಳಬೇಕೆಂದಿದ್ದರೆ ನೇರವಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಈ ಯೋಜನೆ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಲೇಖನದಲ್ಲಿ ವಿವರಿಸಲಾಗುತ್ತದೆ, ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಿ.

ಈ ಯೋಜನೆಯಿಂದ (PM SVANIdhi) ಸಿಗುವ ಪ್ರಯೋಜನಗಳು ಏನು?

ಪ್ರಧಾನಮಂತ್ರಿಯವರು ರೂಪಿಸಿರುವಂತಹ ಪಿಎಂ ಸ್ವ ನಿಧಿ ಯೋಜನೆ ಅಡಿಯಲ್ಲಿ ದೇಶದ 50 ಲಕ್ಷ ಕ್ಕೂ ಹೆಚ್ಚಿನ ಜನರು ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಯೋಜನೆಯ ಸಾಲವನ್ನು ಪಡೆದುಕೊಳ್ಳಬೇಕೆಂದಿರುವ ಅಭ್ಯರ್ಥಿಯು ಯಾವುದೇ ದಾಖಲಾತಿ ಪ್ರಕ್ರಿಯೆ ಮೂಲಕ ಹೋಗಬೇಕಾಗಿಲ್ಲ. ಹಾಗೆಯೇ ಯಾವುದೇ ಫಲಾನುಭವಿಯು ಈ ಯೋಜನೆಯಿಂದ ಸಾಲವನ್ನು ಪಡೆದು ಮರುಪಾವತಿ ಮಾಡಲು ಸಾಧ್ಯವಾಗದಿದ್ದರೆ ಸರ್ಕಾರವು ಅವನಿಗೆ ಯಾವುದೇ ರೀತಿಯ ದಂಡವನ್ನು ವಿವರಿಸುವುದಿಲ್ಲ. ಅಭ್ಯರ್ಥಿಯು ಈ ಯೋಜನೆಯಡಿ,  ಮಾಸಿಕ ಕಂತನ್ನು ಪ್ರತಿ ತಿಂಗಳು ಸರಿಯಾಗಿ ಪಾವತಿಸಿದರೆ ಇದಕ್ಕಾಗಿ ಸಾಲದ ಮೇಲೆ 7% ಸಹಾಯಧನವನ್ನು ನೀಡಲಾಗುತ್ತದೆ. ಹಾಗೆಯೇ ಮೊತ್ತದ ಸಬ್ಸಿಡಿಯನ್ನು ಆರು ತಿಂಗಳಲ್ಲಿ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.

ಈ ಯೋಜನೆಗೆ ಯಾವೆಲ್ಲ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ:

ಅಭ್ಯರ್ಥಿಯ ಈ ಯೋಜನೆಯ ಫಲಾನುಭವಿಯಾಗಲು ಬಯಸಿದ್ದರೆ ಮೊದಲು ಅವನು ಭಾರತೀಯ ನಿವಾಸಿ ಆಗಿರಬೇಕು. ಬೀದಿ ಬದಿ ವ್ಯಾಪಾರವನ್ನು ಮಾಡುವ ಅಭ್ಯರ್ಥಿಗಳು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಜೊತೆಗೆ ಕೊರೋನಾದಂತಹ ಸಾಂಕ್ರಾಮಿಕ ರೋಗದಿಂದ  ವ್ಯಾಪಾರಕ್ಕೆ ಹಾನಿಗೊಳಗಾದ ಅಭ್ಯರ್ಥಿಯು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಯಾವೆಲ್ಲಾ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದು ಕೆಳಗಿನ ಮಾಹಿತಿಯಲ್ಲಿ ನೀಡಲಾಗಿದೆ.

  1. ಹಣ್ಣು ಮಾರಾಟಗಾರರು
  2. ಸಣ್ಣ ಪುಟ್ಟ ವ್ಯಾಪಾರಿಗಳು
  3. ತರಕಾರಿ ಮಾರಾಟಗಾರರು
  4. ಕ್ಷೌರಿಕ ಅಂಗಡಿಗಳು
  5. ಪುಸ್ತಕ ಲೇಖನ ಸಾಮಗ್ರಿಗಳು
  6. ಲಾಂಡ್ರಿ ಅಂಗಡಿಗಳು
  7. ಚಮ್ಮಾರರು
  8. ಟೀ ಅಂಗಡಿಗಳು
  9. ಕುಶಲಕರ್ಮಿ ಉತ್ಪನ್ನಗಳು
  10. ಪಾನ್ ಶಾಪ್ ಗಳು

ಹಾಗೆಯೇ ಇತರ ಸಣ್ಣಪುಟ್ಟ ವ್ಯಾಪಾರವನ್ನು ಮಾಡುತ್ತಿರುವ ಬೀದಿಬದಿ ವ್ಯಾಪಾರಿಗಳು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.

ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:

ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಡೆ ನೀಡಲಾದ ಎಲ್ಲಾ ದಾಖಲೆಗಳನ್ನು ಸರಿಯಾಗಿ ಲಗತ್ತಿಸಬೇಕು.

  • ಮತದಾರರ ಗುರುತಿನ ಚೀಟಿ ( Votting Card)
  • ಪಡಿತರ ಚೀಟಿ ( Ration Card)
  • ಆಧಾರ್ ಕಾರ್ಡ್ ( Adhar Card)
  • ಪಾಸ್ ಬುಕ್ ಫೋಟೋ ಕಾಪಿ ( Bank Passbook Xerox)
  • ಪಾಸ್ಪೋರ್ಟ್ ಅಳತೆಯ ಭಾವಚಿತ್ರ

ಯಾವೆಲ್ಲ ಸಂಸ್ಥೆಗಳು ಈ ಯೋಜನೆಯಡಿ ಸಾಲವನ್ನು ನೀಡುತ್ತದೆ.

ಸ್ವ ನಿಧಿ ಯೋಜನೆಯಡಿಯಲ್ಲಿ ಸಾಲವನ್ನು ನೀಡುವ ಸಂಸ್ಥೆಗಳು;

  • ಸಹಕಾರಿ ಬ್ಯಾಂಕ್
  • ಪ್ರಾದೇಶಿಕ ಗ್ರಾಮೀಣ ಬ್ಯಾಂಕ್.
  • ಸಣ್ಣ ಹಣಕಾಸು ಬ್ಯಾಂಕ್
  • ಬ್ಯಾಂಕಿಂಗಲ್ಲದ ಹಣಕಾಸು ಕಂಪನಿಗಳು
  • ಸೂಕ್ಷ್ಮ ಹಣಕಾಸು ಸಂಸ್ಥೆಗಳು ಮತ್ತು SHG ಬ್ಯಾಂಕ್ ಗಳು
  • ನಿಗದಿತ ವಾಣಿಜ್ಯ ಬ್ಯಾಂಕ್.

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಕೇಂದ್ರ ಸರ್ಕಾರದ ಈ ಯೋಜನೆಯಿಂದ ಸಹಾಯವನ್ನು ಪಡೆದುಕೊಳ್ಳಬೇಕೆಂದಿರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಇದಕ್ಕಾಗಿ ಸರ್ಕಾರವು ಪ್ರತ್ಯೇಕವಾದ ಪೋರ್ಟಲ್ ಅನ್ನು ಬಿಡುಗಡೆ ಮಾಡಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಡೆ ನೀಡಲಾದ ಎಲ್ಲಾ ಸೂಚನೆಗಳನ್ನು ಸರಿಯಾಗಿ ಪಾಲಿಸುವ ಮುಖಾಂತರ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ನಿಮ್ಮ ಮೊಬೈಲ್ ನಲ್ಲಿ ಉಚಿತವಾಗಿ ಅರ್ಜಿಯನ್ನು ಸಲ್ಲಿಸಬಹುದು.

  1. https://pmsvanidhi.mohua.gov.in/  ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಈ ಅಧಿಕೃತ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ.
  2. ಅಧಿಕೃತ ವೆಬ್ಸೈಟ್ ಕ್ಲಿಕ್ ಮಾಡಿದ ನಂತರ ಯೋಜನೆಯ ಮುಖಪುಟ ತೆರೆದುಕೊಳ್ಳುತ್ತದೆ, ಅದರಲ್ಲಿ ರೂ.10,000 ರೂ.20000 ಮತ್ತು ರೂ.50,000 ಸಾಲವನ್ನು ಆಯ್ಕೆ ಮಾಡಿ.
  3. ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ನೀಡಿದ ಮೊಬೈಲ್ ಸಂಖ್ಯೆಗೆ ಒಂದು OTP ರವಾನೆ ಆಗುತ್ತದೆ. ಅದನ್ನು ಮುಖಪುಟದಲ್ಲಿ ನಮೂದಿಸಬೇಕು.
  4. ಓಟಿಪಿ ನಂತರ ನಿಮಗೆ ಅರ್ಜಿ ನಮೂನೆಯ ಫಾರ್ಮ್ ಕಾಣಸಿಗುತ್ತದೆ, ಅಲ್ಲಿ ಕೇಳಲಾಗಿರುವ ಎಲ್ಲಾ ಅಗತ್ಯ ದಾಖಲಾತಿಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ಜೊತೆಗೆ ಭರ್ತಿ ಮಾಡಿದ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
  5. ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿದ ನಂತರ ಪುನಃ ಪರಿಶೀಲಿಸಿ ಏನಾದರೂ ತಪ್ಪಿದ್ದರೆ ಸರಿಪಡಿಸಬೇಕು.
  6. ಅರ್ಜಿ ನಮೂನೆ ಪೂರ್ಣಗೊಂಡ ನಂತರ ‘ಸಲ್ಲಿಸು ಬಟನ್’ ಅನ್ನು ಕ್ಲಿಕ್ ಮಾಡಿ. ಅರ್ಜಿ ಸಲ್ಲಿಸುವಿಕೆ ಪೂರ್ಣಗೊಳ್ಳುತ್ತದೆ.
  7. ನಂತರ ಭರ್ತಿ ಮಾಡಿದ ಆರ್ಥಿಕ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಇಟ್ಟುಕೊಳ್ಳಿ, ಅದನ್ನು ಕೇಂದ್ರ ಸರ್ಕಾರ ಸ್ಥಾಪಿಸಿರುವ ಸ್ವಯಂ ಧನ ಸಹಾಯ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ, ಅರ್ಜಿ ನಮೂನೆ ಸೇರಿದಂತೆ ಅಗತ್ಯವಿರುವ ಎಲ್ಲಾ ದಾಖಲಾತಿಗಳನ್ನು ನೀಡಬೇಕು.

ಅಭ್ಯರ್ಥಿಯು ಸಲ್ಲಿಸಿದ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ಇಲಾಖೆಯು ಪರಿಶೀಲಿಸಿ, ನಂತರ ಅವರಿಗೆ ಸ್ವನಿಧಿ ಯೋಜನೆಯಡಿ ಸಾಲದ ಮೊತ್ತವು ಅವರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಈ ಯೋಜನೆಯ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಿಮ್ಮ ಹತ್ತಿರವಿರುವ ನಗರ ಪಾಲಿಕೆಯನ್ನು ಸಂಪರ್ಕಿಸಬಹುದು.

ಉತ್ತಮ ಮಾಹಿತಿಯನ್ನು ಹೊಂದಿದ ಲೇಖನವನ್ನು ನಿಮ್ಮ ಸ್ನೇಹಿತರಿಗೆ ಬಂಧುಗಳಿಗೆ ಹಾಗೂ ಅಗತ್ಯವಿರುವ ಎಲ್ಲರಿಗೂ ಶೇರ್ ಮಾಡಿ. ಲೇಖನವನ್ನು ಓದಿದ ಎಲ್ಲರಿಗೂ ಧನ್ಯವಾದಗಳು.

ಪ್ರತಿದಿನ ನಮ್ಮ ಜಾಲತಾಣದಲ್ಲಿ ಪ್ರಸಾರವಾಗುವ ಎಲ್ಲಾ ತರಹದ ಸರ್ಕಾರಿ ಯೋಜನೆಗಳು, ಉದ್ಯೋಗ ವಾರ್ತೆಗಳು ಹಾಗೂ ಇನ್ನಿತರ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿಗಳನ್ನು ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ. ಸೇರಲು ಇಲ್ಲಿ ಕ್ಲಿಕ್ ಮಾಡಿ.

ಓದುಗರ ಗಮನಕ್ಕೆ: ನಮ್ಮ ಕನ್ನಡ ನೀಡ್ಸ್ ತಂಡವು ತನ್ನೆಲ್ಲ ಓದುಗರಿಗೆ ನಿಖರವಾದ ಮತ್ತು ಸತ್ಯವಾದ ಮಾಹಿತಿಗಳನ್ನು ಒದಗಿಸುತ್ತದೆ, ಯಾವುದೇ ಸುಳ್ಳು ಅಥವಾ ಅನಧಿಕೃತ ಮಾಹಿತಿಗಳನ್ನು ಒದಗಿಸುವುದಿಲ್ಲ.

ನಮ್ಮ ವೆಬ್ ಸೈಟ್ ಗೆ ಯಾವುದೇ ರೀತಿಯ ಸರ್ಕಾರಿ ಸಂಬಂಧವಿಲ್ಲ ಹಾಗೂ ನಮ್ಮ ವೆಬ್ಸೈಟ್ ಯಾವುದೇ ರೀತಿಯ ಸರ್ಕಾರಿ ಪ್ರಚಾರದ ಜಾಲತಾಣವಲ್ಲ.

ನಾವು ಈ ವೆಬ್ಸೈಟ್ ರಚಿಸಿರುವ ಹಿಂದಿನ ಉದ್ದೇಶವೇನೆಂದರೆ ನಿಮ್ಮಿಂದ ಯಾವುದೇ ರೀತಿ ಹಣವನ್ನು ಪಡೆಯುವುದು ಅಲ್ಲ. ನಮ್ಮ ಎಲ್ಲಾ ಮಾಹಿತಿಗಳನ್ನು ಓದಲು ನೀವು ಯಾವುದೇ ರೀತಿ ಹಣವನ್ನು ನೀಡಬೇಕಾಗಿಲ್ಲ, ಎಲ್ಲ ಮಾಹಿತಿಯನ್ನು ನಿಮಗೆ ಉಚಿತವಾಗಿ ತಲುಪಿಸುತ್ತೇವೆ. ನಿಖರವಾದ ಮತ್ತು ಸತ್ಯವಾದ ಮಾಹಿತಿಗಳನ್ನು ಒದಗಿಸುವುದು ನಮ್ಮ ವೆಬ್ಸೈಟ್ನ ಪ್ರಮುಖ ಉದ್ದೇಶವಾಗಿದೆ.

Read More:

  1. WCD Kalaburagi Recruitment| ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ 2024
  2. RRB Technician Recruitment| ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿ 2024, ಇಲ್ಲಿದೆ ಸಂಪೂರ್ಣ ವಿವರಗಳು.
  3. GRAMA PANCHAYAT RECRUITMENT| ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗಳ ನೇರ ನೇಮಕಾತಿ 2024
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment