PM Kisan scheme 18th installment: ಇಂದು ಪಿಎಂ ಕಿಸಾನ್ ಹಣ ಬಿಡುಗಡೆ, ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.

PM Kisan scheme 18th installment: ಇಂದು ಪಿಎಂ ಕಿಸಾನ್ ಹಣ ಬಿಡುಗಡೆ, ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.

ದೇಶದಾದ್ಯಂತ ಪ್ರಧಾನಿಯವರು ರೈತರಿಗೆ ಒಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ, ಅದೇನೆಂದರೆ ದೇಶದಾದ್ಯಂತ 18ನೇ ಕಂತಿನ ಪಿಎಂ ಕಿಸಾನ್ ಯೋಜನೆಯ ಹಣವನ್ನು ಅಕ್ಟೋಬರ್ 05 ರಂದು ಬಿಡುಗಡೆ ಮಾಡಲಿದ್ದಾರೆ. ಈ ಹಿಂದೆ 17ನೇ ಕಂತಿನ ಹಣವನ್ನು ಪ್ರಧಾನಿಯವರು ಉತ್ತರಪ್ರದೇಶದಿಂದ ಬಿಡುಗಡೆ ಮಾಡಿದ್ದರು, ಈಗ 18ನೇ ಕಂತಿನ ಹಣವನ್ನು ಮಹಾರಾಷ್ಟ್ರದಲ್ಲಿ ಬಿಡುಗಡೆ ಮಾಡಲು ಪ್ರಧಾನಿಯವರು ಮುಂದಾಗಿದ್ದಾರೆ. ದೇಶದಾದ್ಯಂತ 9 ಕೋಟಿಗೂ ಹೆಚ್ಚಿನ ರೈತರ ಖಾತೆಗೆ ಪಿಎಂ ಕಿಸಾನ್ ಹಣ ರೂ .2000 ಅಕ್ಟೋಬರ್  05 ರಂದು ಜಮಾ ಆಗಲಿದೆ, ಜಮಾ ಆಗಲಿರುವ ಮಾಹಿತಿಯನ್ನು ಚೆಕ್ ಮಾಡುವುದು ಹೇಗೆ? ಮತ್ತು ಪಿಎಮ್ ಕಿಸಾನ್ (PM Kissan) ಯೋಜನೆಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಿ.

ದೇಶದಾದ್ಯಂತ  9 ಕೋಟಿಗೂ ಹೆಚ್ಚಿನ ಅರ್ಹ ರೈತರು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 18ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದರು, ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದಲ್ಲಿ 18ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ, ಅಕ್ಟೋಬರ್ 5ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರ ರಾಜಕ್ಕೆ ಭೇಟಿ ನೀಡಿ ಅಲ್ಲಿನ ಸಭೆ ಸಮಾರಂಭದಲ್ಲಿ ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ.

WhatsApp Group Join Now
Telegram Group Join Now

ಇದನ್ನು ಓದಿ: Sukanya Samriddhi: ಸುಕನ್ಯಾ ಸಮೃದ್ಧಿ ಯೋಜನೆಗಳಲ್ಲಿ ಹೊಸ ಬದಲಾವಣೆ! ಇಲ್ಲಿದೆ ಸಂಪೂರ್ಣ ಮಾಹಿತಿ.

ಅಕ್ಟೋಬರ್ 5ರಂದು 9.4 ಕೋಟಿ ಅರ್ಹ ರೈತರ  ಖಾತೆಗೆ ಪಿಎಂ ಕಿಸಾನ್ ಯೋಜನೆಯ ರೂ.2000 ಜಮಾ ಆಗಲಿದೆ, ಕೇಂದ್ರದಿಂದ ಪಿಎಂ ಕಿಸಾನ್ ಯೋಜನೆಯ ರೂ. 20,000 ಕೋಟಿ ಹಣ ಬಿಡುಗಡೆಯಾಗಲಿದೆ. 2019 ರಲ್ಲಿ ಆರಂಭವಾದ ಈ ಪಿಎಂ ಕಿಸಾನ್ ಯೋಜನೆಯ ಹಣಕ್ಕಾಗಿ ಕೇಂದ್ರವು ಸುಮಾರು ಮೂರು ಲಕ್ಷ ಕೋಟಿಗು ಅಧಿಕ ಹಣವನ್ನು ದೇಶದ ರೈತರ ಏಳಿಗೆಗಾಗಿ ವ್ಯಯ ಮಾಡಿದೆ. ಇಂದಿನ ದಿನ ಅಕ್ಟೋಬರ್ 05 ರಂದು ಬಿಡುಗಡೆ ಮಾಡುವ ಹಣ ಸೇರಿ ಒಟ್ಟಾರೆಯಾಗಿ, ರೂ.3.45 ಲಕ್ಷ ಕೋಟಿ ಹಣವನ್ನು ರೈತರ ಪಿಎಂ ಕಿಸಾನ್ ಯೋಜನೆಗೆ ಖರ್ಚು ಮಾಡಿದೆ.

18 ಜೂನ್ 2024 ರಂದು ಪ್ರಧಾನ ಮಂತ್ರಿ ಅವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದರು, ಸುಮಾರು 9.26 ಕೋಟಿ ಅರ್ಹ ರೈತರ ಖಾತೆಗಳಿಗೆ 21,000 ಕೋಟಿ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಜಮಾ ಮಾಡಿದ್ದರು.

ಇದನ್ನು ಓದಿ: DLSA RECRUITMENT| ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ನೇಮಕಾತಿ 2024

ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ, ರೈತರಿಗೆ ವರ್ಷಕ್ಕೆ ರೂ. 6000 ಹಣವನ್ನು ಸಹಾಯಧನವಾಗಿ ನೀಡುತ್ತದೆ. ರೂ.2000 ಗಳಂತೆ ವರ್ಷಕ್ಕೆ ಮೂರು ಕಂತುಗಳಲ್ಲಿ ರಾಜ್ಯದ ರೈತರ ಖಾತೆಗೆ ಕೇಂದ್ರ ಸರ್ಕಾರವು ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತದೆ. ರೈತರ ಬೇಸಾಯಕ್ಕೆ ಸಹಾಯವಾಗಲಿ ಇಂದು ಸರ್ಕಾರವು ರೈತರಿಗೆ ಆರ್ಥಿಕ ನೆರವನ್ನು ನೀಡುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ದೇಶದ ರೈತರ ಖಾತೆಗೆ DBT ಮೂಲಕ ಹಣವನ್ನು ವರ್ಗಾಯಿಸಲಾಗುತ್ತದೆ. ವಿಶ್ವದ ಯಾವುದೇ ದೇಶದಲ್ಲೂ ಇಷ್ಟು ದೊಡ್ಡ ಮೊತ್ತದ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದಿಲ್ಲ. ಅಷ್ಟರಮಟ್ಟಿಗೆ ಕೇಂದ್ರದ ಪಿಎಂ ಕಿಸಾನ್ ಯೋಜನೆಯು ಹೆಸರು ಮಾಡಿದೆ.

ಇದನ್ನು ಓದಿ: PDO RECRUITMENT| ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆ ನೇಮಕಾತಿ 2024

ಪಿ ಎಮ್ ಕಿಸಾನ್ ಯೋಜನೆಯ, ಹಣವನ್ನು ಅರ್ಹ ಫಲಾನುಭವಿಗಳು ಚೆಕ್ ಮಾಡುವುದು ಹೇಗೆ?

http://pmkisan.gov.in/

  • ಮೊದಲು ಮೇಲೆ ನೀಡಲಾದ ಅಧಿಕೃತ ವೆಬ್ ಟ್ ಗೆ ಭೇಟಿ ನೀಡಿ, ನೀವು ವಿವಿಧ ಆಯ್ಕೆಗಳನ್ನು ಕಾಣಬಹುದು.
  • ಅಧಿಕೃತ ವೆಬ್ಸೈಟ್ನ ಮುಖಪುಟದಲ್ಲಿ ಸ್ವಲ್ಪ ಕೆಳಗೆ ಸ್ಕ್ರೋಲ್ ಮಾಡಿದರೆ ನಿಮಗೆ ಫಾರ್ಮರ್ಸ್ ಕಾರ್ನರ್ ಕಾಣುತ್ತದೆ.
  • ಅಲ್ಲಿ ನೀವು ಬೆನ್ನಿಪಿಸಿರಿ ಲಿಸ್ಟ್ ಟ್ಯಾಬ್ ಅನ್ನೋ ಕ್ಲಿಕ್ ಮಾಡಿ.
  • ನಂತರ ನಿಮ್ಮ ರಾಜ್ಯ ಜಿಲ್ಲೆ, ಉಪಜಿಲ್ಲೆ ಬ್ಲಾಕ್ ಮತ್ತು ಗ್ರಾಮವನ್ನು ಆರಿಸಿಕೊಳ್ಳಿ.
  • ಕೊನೆಯ ಹಂತದಲ್ಲಿ ಗೆಟ್ ರಿಪೋರ್ಟ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  • ನಂತರ ನಿಮಗೆ ನೀವು ಆರಿಸಿಕೊಂಡಿರುವ ಗ್ರಾಮದ ಎಲ್ಲಾ ಫಲಾನುಭವಿಗಳ ಪಟ್ಟಿ ಕಾಣುತ್ತದೆ, ಅದರಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿಕೊಳ್ಳಿ.

ಇತ್ತೀಚಿನ ದಿನಗಳಲ್ಲಿ ನೋಂದಾಯಿಸಿಕೊಂಡ ರೈತರಿಗೆ ಪಿಎಂ ಕಿಸಾನ್ ಹಣ ಯೋಜನೆಯ ಪಟ್ಟಿಯಲ್ಲಿ ಹೆಸರು ಬಂದಿಲ್ಲದೆ ಇರಬಹುದು, ಆಗ ನೀವು ಪಿಎಂ ಕಿಸಾನ್ನ ಅಧಿಕೃತ ವೆಬ್ಸೈಟ್ ಮುಖಪುಟದ ಬಲಬದಿಯಲ್ಲಿರುವ ನೋ ಯುವರ್ ಸ್ಟೇಟಸ್ ಮೂಲಕ ನಿಮ್ಮ ಬೆನಿಫಿಶಿಯರಿ ಸ್ಟೇಟಸ್ ಪರಿಶೀಲಿಸಿಕೊಳ್ಳಬಹುದು.

ಇದನ್ನು ಓದಿ:Zilla Panchayat Recruitment| ಜಿಲ್ಲಾ ಪಂಚಾಯತ್ ನೇಮಕಾತಿ 2024

ಈ ಲೇಖನವನ್ನು ಓದಿತ್ತಿರುವ ಯಾವುದೇ ವ್ಯಕ್ತಿಯಾಗಲಿ ಅವರು ರೈತರಾಗಿದ್ದರೆ ಪಿಎಂ ಕಿಸಾನ್ ಯೋಜನೆಗೆ ನೋಂದಾಯಿಸದೆ ಇದ್ದಲ್ಲಿ ಈಗಲೂ ಕೂಡ ನೋಂದಾಯಿಸುವ ಅವಕಾಶವಿದೆ, ಇದೆ ಮುಖಾಂತರ ಹೊಸದಾಗಿ ನೀವು ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಈಗ ನೀವು ನಿಮ್ಮ ಹೆಸರನ್ನು ನೋಂದಾಯಿಸಿಕೊಂಡರೆ ನಿಮಗೆ 18ನೇ ಕಂತಿನ ಹಣ ದೊರೆಯುವುದಿಲ್ಲ, ಮುಂದಿನ ಕಂತುಗಳ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ.

ಕೇಂದ್ರ ಸರ್ಕಾರವು ಈ ಯೋಜನೆಯನ್ನು ರೈತರು ಯಾವುದೇ ಆರ್ಥಿಕ ತೊಂದರೆ ಇಲ್ಲದೆ ಹೆಚ್ಚಿನ ವ್ಯವಸಾಯದಲ್ಲಿ ತೊಡಗಿಕೊಂಡು, ದೇಶದ ಅಭಿವೃದ್ಧಿಯನ್ನು ರೈತರಿಂದಲೇ ಆಗಬೇಕು ಎನ್ನುವ ಉದ್ದೇಶಕ್ಕಾಗಿ ಈ ರೀತಿಯ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಸರ್ಕಾರವು ಯೋಜನೆಯನ್ನು ಜಾರಿಗೆ ತಂದಿರುವುದರಿಂದ ಹಲವು ರೈತರಿಗೆ ಅನುಕೂಲವಾಗಿದೆ, ಹೆಚ್ಚಿನ ರೈತರು ಈ ಸಹಾಯದಿಂದ ಬಿತ್ತನೆ ಬೀಜಗಳನ್ನು ಕರೆದಿಸಿ ವ್ಯವಸಾಯವನ್ನು ಮಾಡುತ್ತಿದ್ದಾರೆ. ಹೆಚ್ಚಿನ ರೈತರು ಪ್ರಧಾನಮಂತ್ರಿಯವರಿಗೆ ಚಿರಋಣಿಯಾಗಿದ್ದಾರೆ. ಹೀಗೆಯೇ ದೇಶದ ಪ್ರಧಾನಿಯವರು ಇನ್ನೂ ಹೆಚ್ಚಿನ ಒಳ್ಳೆ ಒಳ್ಳೆಯ ಯೋಜನೆಯನ್ನು ಜಾರಿಗೆ ತರ್ಲಿ ಎಂದು ದೇಶದ ಜನತೆಯು ಹಾರೈಸುತ್ತಿದೆ.

ಇದನ್ನು ಓದಿ: Jio Offer: ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ! ಕೇವಲ ರೂ.10ಕ್ಕೆ 2ಜಿಬಿ 5ಜಿ ಡಾಟಾ; 98 ದಿನಗಳಿಗೆ ರೂ.999 ರ ಹೊಸ ರಿಚಾರ್ಜ್ ಪ್ಲಾನ್!

ಓದುಗರ ಗಮನಕ್ಕೆ: ನಮ್ಮ ಸಿಹಿವಾಣಿ ತಂಡವು ತನ್ನೆಲ್ಲ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಒದಗಿಸುತ್ತದೆ ಯಾವುದೇ ಸುಳ್ಳು ಅಥವಾ ಅನಧಿಕೃತ ಮಾಹಿತಿಗಳನ್ನು ಒದಗಿಸುವುದಿಲ್ಲ.

ಕನ್ನಡ ನೀಡ್ಸ್ ವೆಬ್ ಸೈಟ್ ಗೆ ಯಾವುದೇ ರೀತಿಯ ಸರ್ಕಾರಿ ಸಂಬಂಧವಿಲ್ಲ, ಹಾಗೂ ನಮ್ಮ ವೆಬ್ಸೈಟ್ ಯಾವುದೇ ತರಹದ ಸರ್ಕಾರಿ ಪ್ರಚಾರದ ಜಾಲತಾಣವಲ್ಲ.

ನಾವು ಈ ವೆಬ್ಸೈಟ್ ರಚಿಸಿರುವುದರ ಹಿಂದಿನ ಉದ್ದೇಶವೇನೆಂದರೆ, ನಿಮ್ಮಿಂದ ಯಾವುದೇ ರೀತಿಯ ಹಣವನ್ನು ಪಡೆಯುವುದು ಅಲ್ಲ. ನಮ್ಮ ಎಲ್ಲಾ ಸುದ್ದಿಗಳನ್ನು ಓದಲು ನೀವು ಯಾವುದೇ ರೀತಿ ಹಣವನ್ನು ಪಾವತಿಸಬೇಕಾಗಿಲ್ಲ. ಎಲ್ಲ ಮಾಹಿತಿಯು ನಿಮಗೆ ಉಚಿತವಾಗಿ ದೊರೆಯುತ್ತದೆ. ನಿಖರವಾದ ಅಥವಾ ಸತ್ಯವಾದ ಮಾಹಿತಿಗಳನ್ನು ಒದಗಿಸುವುದೇ ನಮ್ಮ ವೆಬ್ ಸೈಟ್ ನ ಪ್ರಮುಖ ಉದ್ದೇಶವಾಗಿದೆ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment