PM Kisan: ಕೇಂದ್ರ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ! ಇನ್ನು ಮುಂದೆ ಪ್ರತಿ ತಿಂಗಳು ಸಿಗಲಿದೆ ಪಿಎಂ ಕಿಸಾನ್ ಹಣ..!
ಈ ಬಾರಿಯ ಬಜೆಟ್(Union Budget 2024) ಮಂಡನೆಯು ವಿಭಿನ್ನವಾಗಿದೆ, ಸತತ 7ನೇ ಬಾರಿಗೆ ಬಜೆಟ್ ಮಂಡಿಸಿದ ಕೀರ್ತಿಗೆ ನಿರ್ಮಲಾ ಸೀತಾರಾಮನ್ ಅವರು ಪಾತ್ರರಾಗಿದ್ದಾರೆ. ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಮಹಿಳಾ ಸಚಿವೆ ಎಂಬ ಹೆಗ್ಗಳಿಕೆಗೆ ಪಾತರಾಗಿದ್ದಾರೆ.
ಈ ಬಾರಿಯ ಯೂನಿಯನ್ ಬಜೆಟ್ (Union Budget) ಮಂಡಳಿಯ ಬಗ್ಗೆ ರೈತರು ಅತಿ ಹೆಚ್ಚು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು, ಕೇಂದ್ರ ಸರ್ಕಾರವು ಗ್ರಾಮೀಣ ಭಾಗದ ಜನರಿಗೆ ಉಡುಗೊರೆಯನ್ನು ನೀಡಬಹುದು ಎನ್ನಲಾಗಿತ್ತು, ಈ ಬಾರಿಯ ಬಜೆಟ್ ನಲ್ಲಿ ಕಿಸಾನ್(PM Kisan) ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಹೊರ ಬಿದ್ದಿದೆ ಎಂದು ಹೇಳಬಹುದು.
ಕೇಂದ್ರದಿಂದ ಕಿಸಾನ್ ಫಲಾನುಭವಿಗಳಿಗೆ ಸಿಹಿ ಸುದ್ದಿ.!!
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಬಹುದು ಎಂದು ನಂಬಲಾಗಿದೆ, ಕಂತಿನ ಮೊತ್ತವನ್ನು 6,000 ದಿಂದ 12 ಸಾವಿರಕ್ಕೆ ಹೆಚ್ಚಿಸಬಹುದು ಎಂದು ಎಲ್ಲೆಡೆ ಕೇಳಿ ಬರುತ್ತಿತ್ತು, ರೈತರಿಗೆ ಮೂರು ತಿಂಗಳ ಹಣ ನೀಡುವ ಬದಲು ಪ್ರತಿ ತಿಂಗಳು(Every Month) ರೂ.1000 ನೀಡಬೇಕು ಎಂಬ ಯೋಜನೆಯನ್ನು ಸರ್ಕಾರವು ರೂಪಿಸುತ್ತಿದೆ. ಬಜೆಟ್ ನಲ್ಲಿ ಈ ಹೇಳಿಕೆಯು ಘೋಷಣೆಯಾದರೆ ರೈತರಿಗೆ ಮಾಸಿಕ ಲಾಭವು ದೊರೆಯಲಿದೆ.
ಹಣಕಾಸು ಬಜೆಟ್ ಮಂಡನೆಯು, ಪಿಎಂ ಕಿಸಾನ್(PM Kisan) ಸನ್ಮಾನ ನಿಧಿಗೆ ಸಂಬಂಧಿಸಿದ ಎಲ್ಲಾ 12 ಕೋಟಿ ರೈತರ ಮೇಲೆ ಕೇಂದ್ರೀಕರಿಸುತ್ತಿದೆ, ರೈತ ಸಂಘಟನೆಗಳು ಕೇಂದ್ರದ ವಿರುದ್ಧ ಹಲವಾರು ಬಾರಿ ಕಂತಿನ ಮೊತ್ತ ಹೆಚ್ಚಿಸುವಂತೆ ಒತ್ತಾಯಿಸಿದರು ಕೂಡ ಯಾವುದೇ ನಿರ್ಧಾರವನ್ನು ಸರ್ಕಾರವು ಸರ್ಕಾರವು ಕೈಗೊಂಡಿರಲಿಲ್ಲ, ಈ ಬಾರಿಯ ಬಜೆಟ್(Budget) ನಲ್ಲಿ ಸರ್ಕಾರವು ವಿಭಿನ್ನ ಯೋಜನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡಿದೆ ಎಂದು ಹೇಳಬಹುದು.
ಇನ್ನು ಮುಂದೆ ರೈತರಿಗೆ ಪ್ರತಿ ತಿಂಗಳು ಸಿಗಲಿದೆ, ಕಿಸಾನ್ ಹಣ.?
ಕೇಂದ್ರ ಸರ್ಕಾರವು, ರೈತರಿಗೆ ಮೂರು ಕಂತುಗಳ ಬದಲು, ಪ್ರತಿ ತಿಂಗಳು ರೂ.1000 ಹಣವನ್ನು ಜಮಾ ಮಾಡಲು ನಿರ್ಧಾರವನ್ನು ಕೈಗೊಂಡಿದೆ, ಇದು ಜಾರಿಯಾದರೆ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಸಂಬಂಧಿಸಿ ದಂತೆ ರೈತರ ಖಾತೆಗೆ ವಾರ್ಷಿಕವಾಗಿ ರೂ.12,000 ಜಮಾ ಆಗಲಿದೆ.
ಈ ಹಿಂದೆ ಸರ್ಕಾರವು ವಾರ್ಷಿಕವಾಗಿ, ಮೂರು ಕಂತುಗಳಲ್ಲಿ ರೈತರಿಗೆ ರೂ 6,000 ರೂಪಾಯಿಯನ್ನು ಜಮಾ ಮಾಡುತ್ತಿತ್ತು, ಅಂದರೆ ಪ್ರತಿ ಕಂತುಗಳಲ್ಲಿ ರೂ.2,000 ಹಣ. ಪಿಎಂ ಕಿಸಾನ್ ಯೋಜನೆಯಿಂದ ರೈತರು ಹೆಚ್ಚಿನ ಲಾಭವನ್ನು ಪಡೆಯುತ್ತಿದ್ದಾರೆ, ಇನ್ನು ಮುಂದೆ ಈ ಯೋಜನೆಯ ದ್ವಿಗುಣಗೊಳ್ಳಲಿದೆ, ಈ ಬಾರಿಯ ಬಜೆಟ್ ನಿಂದ ಹೆಚ್ಚಿನ ಮಟ್ಟದ ಲಾಭ ಸಿಗಬಹುದು.