PM Kisan 18th Installment: ಇಂತಹ ರೈತರಿಗೆ ಪಿಎಮ್ ಕಿಸಾನ್ ಹಣ ಬರುವುದಿಲ್ಲ. ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿಕೊಳ್ಳಿ, ಇಲ್ಲಿದೆ ಸಂಪೂರ್ಣ ಮಾಹಿತಿ.

PM Kisan 18th Installment: ಇಂತಹ ರೈತರಿಗೆ ಪಿಎಮ್ ಕಿಸಾನ್ ಹಣ ಬರುವುದಿಲ್ಲ. ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿಕೊಳ್ಳಿ, ಇಲ್ಲಿದೆ ಸಂಪೂರ್ಣ ಮಾಹಿತಿ.

ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ರೈತರಿಗೆ, ವಾರ್ಷಿಕವಾಗಿ 3 ಕುಂತುಗಳಲ್ಲಿ ಒಟ್ಟಾರೆ ರೂ.6000 ಸಿಗಲಿದೆ. ನಿನ್ನೆ ಅಕ್ಟೋಬರ್ 5ರಂದ ದೇಶದ ಎಲ್ಲಾ ಫಲಾನುಭವಿ ರೈತರ ಖಾತೆಗಳಿಗೆ ನರೇಂದ್ರ ಮೋದಿಯವರು 18ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದರು. ಈ ಯೋಜನೆಯು ಕೃಷಿ ಭೂಮಿಯನ್ನು ಹೊಂದಿದ ರೈತ ಫಲಾನುಭವಿಗಳಿಗೆ ಸೌಲಭ್ಯವು ಸಿಗಲಿದೆ. ಆದರೆ ರೈತರಾಗಲು ಕೆಲ ಮಾನದಂಡಗಳಿವೆ. ಅವುಗಳ ಮಾಹಿತಿಯು ಕೆಳಗಿನಂತಿವೆ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಥವಾ ಪಿಎನ್ ಕಿಸನ್ (PM Kisan Scheme) ಯೋಜನೆಯಡಿಯಲ್ಲಿ ನಿನ್ನೆ ನಡೆದ ಸಭೆ ಸಮಾರಂಭದಲ್ಲಿ 18ನೇ ಕಂತಿನ ಹಣವನ್ನು ಪ್ರಧಾನ ಮಂತ್ರಿ ಇವರು ಬಿಡುಗಡೆ ಮಾಡಿದರು. 9.40 ಲಕ್ಷ ಕೋಟಿ ರೈತರ ಖಾತೆಗೆ ಒಟ್ಟಾರೆಯಾಗಿ ರೂ.20,000 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದಾರೆ. ಪ್ರತಿ ರೈತರ ಖಾತೆಗಳಿಗೆ ರೂ.2000 ಜಮಾ ಆಗಲಿದೆ. 2019ರಲ್ಲಿ ಆರಂಭವಾದ ಈ ಯೋಜನೆಯಡಿಯಲ್ಲಿ ಸರಿಸುಮಾರು 17 ಕಂತುಗಳು ಪೂರ್ತಿಯಾಗಿ 18ನೇ ಕಂತಿನ ಹಣವು ಅರ್ಹ ಫಲಾನುಭವಿ ರೈತರ ಖಾತೆಗಳಿಗೆ ಜಮಾ ಆಗಿದೆ. ಒಟ್ಟಾರೆಯಾಗಿ 18ನೇ ಕಂತಿನ ಯೋಜನೆಗೆ ಒಟ್ಟಾರೆಯಾಗಿ 3.45 ಲಕ್ಷ ಕೋಟಿ ವೆಚ್ಚವಾಗಿದೆ. ಈ ಹಣವನ್ನು ಸರ್ಕಾರವು ನೇರವಾಗಿ ರೈತರ ಖಾತೆಗೆ ಜಮಾ ಮಾಡುತ್ತಿದೆ. ದೇಶದ ಅತಿ ದೊಡ್ಡ ಡಿ ಬಿ ಟಿ ಮೂಲಕ ನೇರವಾಗಿ ಹಣ ವರ್ಗಾವಣೆ ಆಗುವ ಯೋಜನೆ ಇದಾಗಿದೆ, ಸರ್ಕಾರ ಈ ಯೋಜನೆಯನ್ನು ರೈತರಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ಜಾರಿಗೆ ತಂದಿದೆ.

WhatsApp Group Join Now
Telegram Group Join Now

ಇದನ್ನು ಓದಿ:Gram Panchayat Recruitment| ಚಾಮರಾಜನಗರ ಜಿಲ್ಲೆಯ ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿ 2024

ಪಿಎಂ ಕಿಸಾನ್ ಯೋಜನೆ ಅಂದರೆ ಏನು?

ಈಗಿನ ವಾತಾವರಣಗಳ ಏರುಪೇರುಗಳಿಂದ ಸರಿಯಾದ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ, ಇದೇ ಉದ್ದೇಶದಿಂದ ಸರ್ಕಾರವು ರೈತರಿಗೆ ಆರ್ಥಿಕ ನೆರವಾಗಲೆಂದು ಪಿಎಂ ಕಿಸಾನ್(PM Kisan) ಸಮ್ಮಾನ್ ನಿಧಿ ಯೋಜನೆಯನ್ನು ಆರಂಭಿಸಿದೆ. ವರ್ಷಕ್ಕೆ ಮೂರು ಬಾರಿ ಅಂದರೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರಿಗೆ ಈ ಸಹಾಯಧನವು ನೇರವಾಗಿ ಡಿಬಿಟಿ ಮೂಲಕ ಜಮಾ ಆಗುತ್ತದೆ. ಜಮೀನು ಮಾಲಿಕತ್ವ ಹೊಂದಿರುವ ರೈತರು ಈ ಯೋಜನೆಯ ಹಣವನ್ನು ಪಡೆಯಲು ಅರ್ಹರಾಗಿರುತ್ತಾರೆ. ಇದರಿಂದ ರೈತರು ವ್ಯವಸಾಯಕ್ಕೆ ಬೇಕಾಗಿರುವ ಧಾನ್ಯ ಕಾಳುಗಳನ್ನು ಖರೀದಿ ಮಾಡಿ, ಬೆಳೆ ಬೆಳೆಯಲು ಸಾಧ್ಯವಾಗುತ್ತದೆ.

ಇದನ್ನು ಓದಿ:BSNL: ಬಿಎಸ್ಏನ್ಎಲ್ ಗ್ರಾಹಕರಿಗೆ 24 ಜಿಬಿ ಉಚಿತ ಡಾಟಾ! ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಪಿಎಂ ಕಿಸಾನ್ ಸ್ಕೀಮ್ನಲ್ಲಿ ರೈತರ ಅರ್ಹತಾ ಮಾನದಂಡಗಳಿವು

ರೈತರು ಈ ಯೋಜನೆಯ ಸೌಲಭ್ಯವನ್ನು ಪಡೆಯಬೇಕೆಂದರೆ, ಅವರು ಕೃಷಿ ಭೂಮಿಯ ಮಾಲಿಕತ್ವವನ್ನು ಹೊಂದಿರಬೇಕು. ಯಾರು ಈ ಯೋಜನೆಗೆ ಅರ್ಹರಲ್ಲ ಎಂಬ ಮಾಹಿತಿಯು ಕೆಳಗಿನಂತಿವೆ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಿ.

  • ಪಿಎಂ ಕಿಸಾನ್ ಸಮ್ಮಾನ್ ನಿಧೀ ಯೋಜನೆಗೆ ಸಾಂಸ್ಥಿಕ ಭೂ ಮಾಲೀಕರು (Institutional land holders ಅರ್ಹರಾಗಿರುವುದಿಲ್ಲ.
  • ಕುಟುಂಬದಲ್ಲಿ ಹಾಲಿ ಅಥವಾ ಮಾಜಿ ಸಚಿವ ಸ್ಥಾನವನ್ನು ಪಡೆದಿರುವ, ಲೋಕಸಭಾ ಸಂಸದರು, ರಾಜ್ಯಸಭಾ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಹಾಪೌರರು, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಾಜಿ ಮತ್ತು ಹಾಲಿ ಅಧ್ಯಕ್ಷರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
  • ಕೇಂದ್ರ ಮತ್ತು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಹಾಲಿ ಮತ್ತು ನಿವೃತ್ತ ಉದ್ಯೋಗಿಗಳು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
  • ಸ್ಥಳೀಯ ಹಾಗೂ ಸ್ವಾಯತ್ತ ಸಂಸ್ಥೆಯ ಉದ್ಯೋಗಿಗಳು, ಈ ಯೋಜನೆಗೆ ಅರ್ಹರಾಗಿರುವುದಿಲ್ಲ. ಯೋಜನೆಗೆ ನಾಲ್ಕನೇ ದರ್ಜೆ ಅಥವಾ ಡಿ ದರ್ಜೆಯ ಉದ್ಯೋಗಿಗಳಿಗೆ ಯಾವುದೇ ತೊಂದರೆ ಇಲ್ಲ.
  • ತಿಂಗಳಿಗೆ ರೂ.10000 ಕ್ಕಿಂತ ಹೆಚ್ಚಿನ ಮೊತ್ತದ ಪಿಂಚಣಿ ಪಡೆಯುವ ನಿವೃತ್ತ ನೌಕರರು ಕುಟುಂಬದಲ್ಲಿ ಇದ್ದರೆ ಅವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
  • ಇಂದಿನ ಹಣಕಾಸಿನ ವರ್ಷದಲ್ಲಿ, ಆದಾಯ ತೆರಿಗೆ ಪಾವತಿ ಮಾಡಿದ ವ್ಯಕ್ತಿಯ ಕುಟುಂಬವು ಯೋಜನೆಗೆ ಅರ್ಹರಾಗಿರುವುದಿಲ್ಲ.
  • ವೈದ್ಯ, ವಕೀಲ, ಇಂಜಿನಿಯರ್, ಸಿ ಎ, ಆರ್ಕಿಟೆಕ್ಟ್, ಇತ್ಯಾದಿ ವೃತ್ತಿಪರರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.

ಇದನ್ನು ಓದಿ: PM Kisan scheme 18th installment: ಇಂದು ಪಿಎಂ ಕಿಸಾನ್ ಹಣ ಬಿಡುಗಡೆ, ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.

ಮೇಲಿನ ವಿವರಣೆಯಲ್ಲಿ ಇರುವ ಹಾಗೆ, ಯಾವುದೇ ವ್ಯಕ್ತಿಯು ನಿಮ್ಮ ಕುಟುಂಬದಲ್ಲಿ ಸದಸ್ಯನಾಗಿದ್ದರೆ, ಆ ಕುಟುಂಬಕ್ಕೆ ಪಿಎಂ ಕಿಸಾನ್ ಯೋಜನೆ ಹಣ ಬರುವುದಿಲ್ಲ. ಆದ್ದರಿಂದ ಕೊನೆಯಲ್ಲಿ ನಮಗೆ ಯಾಕೆ ಯೋಚನೆ ಹಣ ಬಂದಿಲ್ಲ ಗೊಂದಲದಲ್ಲಿದ್ದರೆ ಈ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಿ.

ಕೇಂದ್ರ ಸರ್ಕಾರವು ಈ ಯೋಜನೆಯನ್ನು ಅರ್ಹ ರೈತರಿಗಾಗಿಯೇ ಜಾರಿಗೆ ತಂದಿದೆ ಏಕೆಂದರೆ ಅವರು ಆರ್ಥಿಕವಾಗಿ ಹಿಂದುಳಿಯುತ್ತಾರೆ, ಇದರಿಂದ ಅವರಿಗೆ ಸರಿಯಾದ ವ್ಯವಸಾಯವನ್ನು ಮಾಡಲು ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕಾಗಿ ಕೇಂದ್ರ ಸರ್ಕಾರವು ಅವರ ಬಿತ್ತನೆ ಬೀಜಗಳಿಗೆ ಈ ರೀತಿಯ ಹಣವು ಸಹಾಯವಾಗಲಿ ಎಂದು ಈ ರೀತಿಯ ಯೋಜನೆಯನ್ನು ಜಾರಿಗೆ ತಂದಿದೆ.

ಕೇಂದ್ರದ ಪಿಎಂ ಕಿಸಾನ್ ಯೋಜನೆಯಿಂದ ಹಲವಾರು ರೈತರಿಗೆ ಸಹಾಯವಾಗಿದೆ, ಅವರು ಆರ್ಥಿಕವಾಗಿ ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳಲು ಯೋಜನೆ ಹಣ ಅವರಿಗೆ ನೆರವಾಗಲಿದೆ. ನೀವೇನಾದರೂ ನಕಲಿ ಪ್ರಮಾಣ ಪತ್ರವನ್ನು ಹೊಂದಿ ಯೋಜನೆಯ ಫಲವನ್ನು ಪಡೆಯುತ್ತಿದ್ದರೆ ಅದು ನಿಮಗೆ ಸರಿಯಾದುದ್ದಲ್ಲ ಆದ್ದರಿಂದ ಯೋಜನೆಯ ಹಣ ಸರಿಯಾದ ವ್ಯಕ್ತಿಗಳಿಗೆ ತಲುಪುವಂತೆ ನಿಮ್ಮಿಂದ ಸ್ವಲ್ಪ ಸಹಾಯವಾಗಲಿ ಎಂದು ಈ ಮಾಹಿತಿಯನ್ನು ಎಲ್ಲರಿಗೆ ತಲುಪಿಸುವಂತೆ ಮಾಡಿ.

ಇದನ್ನು ಓದಿ: Sukanya Samriddhi: ಸುಕನ್ಯಾ ಸಮೃದ್ಧಿ ಯೋಜನೆಗಳಲ್ಲಿ ಹೊಸ ಬದಲಾವಣೆ! ಇಲ್ಲಿದೆ ಸಂಪೂರ್ಣ ಮಾಹಿತಿ.

ಓದುಗರ ಗಮನಕ್ಕೆ: ನಮ್ಮ ಸಿಹಿವಾಣಿ ತಂಡವು ತನ್ನೆಲ್ಲ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಒದಗಿಸುತ್ತದೆ ಯಾವುದೇ ಸುಳ್ಳು ಅಥವಾ ಅನಧಿಕೃತ ಮಾಹಿತಿಗಳನ್ನು ಒದಗಿಸುವುದಿಲ್ಲ.

 

ಕನ್ನಡ ನೀಡ್ಸ್ ವೆಬ್ ಸೈಟ್ ಗೆ ಯಾವುದೇ ರೀತಿಯ ಸರ್ಕಾರಿ ಸಂಬಂಧವಿಲ್ಲ, ಹಾಗೂ ನಮ್ಮ ವೆಬ್ಸೈಟ್ ಯಾವುದೇ ತರಹದ ಸರ್ಕಾರಿ ಪ್ರಚಾರದ ಜಾಲತಾಣವಲ್ಲ.

ನಾವು ಈ ವೆಬ್ಸೈಟ್ ರಚಿಸಿರುವುದರ ಹಿಂದಿನ ಉದ್ದೇಶವೇನೆಂದರೆ, ನಿಮ್ಮಿಂದ ಯಾವುದೇ ರೀತಿಯ ಹಣವನ್ನು ಪಡೆಯುವುದು ಅಲ್ಲ. ನಮ್ಮ ಎಲ್ಲಾ ಸುದ್ದಿಗಳನ್ನು ಓದಲು ನೀವು ಯಾವುದೇ ರೀತಿ ಹಣವನ್ನು ಪಾವತಿಸಬೇಕಾಗಿಲ್ಲ. ಎಲ್ಲ ಮಾಹಿತಿಯು ನಿಮಗೆ ಉಚಿತವಾಗಿ ದೊರೆಯುತ್ತದೆ. ನಿಖರವಾದ ಅಥವಾ ಸತ್ಯವಾದ ಮಾಹಿತಿಗಳನ್ನು ಒದಗಿಸುವುದೇ ನಮ್ಮ ವೆಬ್ ಸೈಟ್ ನ ಪ್ರಮುಖ ಉದ್ದೇಶವಾಗಿದೆ.

ಇದನ್ನು ಓದಿ: DLSA RECRUITMENT| ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ನೇಮಕಾತಿ 2024

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment