ಅಡಿಕೆ ಬೇಸಾಯ: ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿ ಗಂಗಾಧರಪ್ಪ ಗೌಡ ಬಿರಾದಾರ್ ಅವರು, ಪ್ರಸ್ತುತ ಕೃಷಿ ವಲಯದಲ್ಲಿ ರೈತರು ಕೆಲವು ಮಿಶ್ರ ಬೆಳೆಯನ್ನು ಬೆಳೆಯುತ್ತಿದ್ದು ಅದರ ಕುರಿತಾಗಿ ಕೆಲವು ವಿಶೇಷ ಸಲಹೆಗಳನ್ನು ನೀಡಿದ್ದಾರೆ. ಹಾಗೆಯೇ ರೈತರು ಮಿಶ್ರ ಬೆಳೆಯನ್ನು ಸರಿಯಾದ ಮಾಹಿತಿ ಇಲ್ಲದೆ ಬೆಳೆಯುವುದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತದೆ, ಎಂಬ ಮಾಹಿತಿಯನ್ನು ಸಮಗ್ರವಾಗಿ ತಿಳಿಸಿದ್ದಾರೆ. ಬೇಸಾಯ ಮಾಡುವಾಗ ರೈತರು ಸರಿಯಾದ ಮಾಹಿತಿ ಇಲ್ಲದೆ ನಾಟಿ ಮಾಡುವುದರಿಂದ ಸಸಿಗಳ ನಾಶ ಉಂಟಾಗುತ್ತದೆ ಅದನ್ನು ತಡೆಯಲು ಕೆಲವು ಸೂಕ್ತ ಕ್ರಮಗಳನ್ನು ಕೂಡ ತಿಳಿಸಿದ್ದಾರೆ.ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
ಯಾವ ಬೆಳೆಗಳಿಗೆ ಹಾನಿಗೆ ಒಳಗಾಗುತ್ತದೆ, ಅದಕ್ಕೆ ಪರಿಹಾರವೇನು?
ಇತ್ತೀಚಿನ ದಿನದಲ್ಲಿ ರೈತರು ಹೆಚ್ಚಿನ ಆದಾಯವನ್ನು ಗಳಿಸುವ ತರಾತುರಿಯಲ್ಲಿ ಮಿಶ್ರ ಬೆಳೆಯನ್ನು ಬೆಳೆಯುತ್ತಿದ್ದಾರೆ, ಅಂದರೆ ಅಡಿಕೆ ತೋಟದಲ್ಲಿ ಪಪ್ಪಾಯವನ್ನು ಬೆಳೆಯುತ್ತಿದ್ದಾರೆ ಅದರಿಂದ ರೈತರಿಗೆ ಲಾಭ ಉಂಟಾಗುತ್ತಿರುವುದು ಸತ್ಯವಾದರೂ, ಅದನ್ನು ಸರಿಯಾದ ಮಾಹಿತಿ ಇಲ್ಲದೆ ನಾಟಿ ಮಾಡುವುದರಿಂದ ಹಲವು ರೀತಿಯ ರೋಗ ಲಕ್ಷಣಗಳು ಸಸಿಗಳಲ್ಲಿ ಕಂಡು ಬರುತ್ತಿದೆ, ರೋಗದ ಲಕ್ಷಣಗಳು ಹೇಗಿರುತ್ತದೆ ಎಂದರೆ, ಸಸಿಗಳ ಎಲೆಯ ಮತ್ತು ಬೇರಿನ ಮೇಲೆ ಗಾಯ ಆಗಿರುವ ರೀತಿಯ ಕಲೆಗಳು ಕಾಣ ಸಿಗುತ್ತದೆ. ಈ ರೋಗದ ಲಕ್ಷಣಗಳಿಂದ ಸಸಿಗಳಲ್ಲಿ ಡ್ಯಾಂಪಿಂಗ್ ಆಫ್ ಶಿಲೀಂದ್ರ ಎಂಬ ರೋಗವು ಉಲ್ಬಣಿಸುತ್ತದೆ. ಇದರಿಂದ ಸಸಿಗಳು ಕ್ರಮೇಣವಾಗಿ ನಿಧಾನಗತಿಯಲ್ಲಿ ಸಾವನ್ನಪ್ಪುತ್ತದೆ.
ರೋಗವನ್ನು ತಡೆಗಟ್ಟಲು ಇರುವ ಉಪಾಯಗಳು:
- ರೈತರು ನಾಟಿ ಮಾಡುವ ಮೊದಲು ಸಸಿಗಳನ್ನು ಪ್ರತಿಷ್ಠಿತ ನರ್ಸರಿಗಳಿಂದ ಖರೀದಿ ಮಾಡಬೇಕು.
- ರೋಗನಿರೋಧಕ ಶಕ್ತಿಯನ್ನು ಹೊಂದಿರುವಂತಹ ತಳಿಯ ಸಸಿಯನ್ನು ಆರಿಸಿ ನಾಟಿ ಮಾಡಬೇಕು.
- ಸಸಿಗಳನ್ನು ನಾಟಿ ಮಾಡುವ ಮೊದಲು ಮಣ್ಣಿಗೆ ಶಿಲೀಂದ್ರ ನಾಶಕಗಳನ್ನು ಸೇರಿಸಬೇಕು.
- ಡ್ಯಾಂಪಿಂಗ್ ಆಫ್ ಶಿಲೀಂದ್ರ ರೋಗಗಳು ಇರುವಂತಹ ಸಸಿಗಳನ್ನು ಹೆಚ್ಚಿನ ತಾಪಮಾನದಲ್ಲಿ ಇಟ್ಟಾಗ, ಸಸಿಗಳ ಕಾಂಡ ಅಂಗಾಂಶ ಕುಸಿತ ಉಂಟಾಗಿ ಸಾವನ್ನಪ್ಪುತ್ತದೆ.
- ಸಸಿಗಳನ್ನು ನಾಟಿ ಮಾಡಿದ ನಂತರ ರೋಗದ ಲಕ್ಷಣಗಳು ಕಂಡುಬಂದಲ್ಲಿ ಪ್ರತಿ ಲೀಟರ್ ನೀರಿಗೆ ಎರಡು ಗ್ರಾಂ ಅಷ್ಟು ಶಿಲೀಂದ್ರ ನಾಶಕವನ್ನು ಸೇರಿಸಿ ಸಿಂಪಡಿಸಬೇಕು.
ರೈತರು ಮೇಲಿನ ಎಲ್ಲಾ ಉಪಯೋಗಗಳನ್ನು ಮಾಡಿಯೂ ಸಹ ರೋಗಗಳು ಹತೋಟಿಗೆ ಸಿಗದೇ ಹೋದಾಗ ಕ್ಯಾಪ್ರಾಟ್ರಾನ್ 50wp (carpratron 50wp) ಎಂಬ ಶಿಲೀಂದ್ರ ನಾಶಕಗಳನ್ನು ಸಸಿಗಳ ಬುಡದಲ್ಲಿ ಅಂದರೆ, ಬೇರುಗಳನ್ನು ನೆನೆಯುವಂತೆ ನೀರಿನೊಂದಿಗೆ ಸೇರಿಸಿ ಸಿಂಪಡಿಸಬೇಕು. ಇದರ ಜೊತೆಗೆ ಅಡಿಕೆ ಸಸಿಗಳಿಗೆ ದಿನನಿತ್ಯ ಹಾಯಿಸುವ ನೀರಿನಿಂದ, ಪಪ್ಪಾಯಿ ಸಸಿಗಳಿಗೆ ಶೀತವನ್ನು ಉಂಟು ಮಾಡುತ್ತದೆ. ಆದ್ದರಿಂದ ಪ್ರತಿ ಎರಡು ದಿನಕ್ಕೊಮ್ಮೆ ಸಸಿಗಳಿಗೆ ನೀರು ಹಾಯಿಸಬೇಕು. ಈ ರೀತಿಯ ಬೇಸಾಯ ಕ್ರಮವನ್ನು ಅನುಸರಿಸುವುದರಿಂದ ಸಸಿಗಳು ಚೆನ್ನಾಗಿ ಬೆಳೆಯುತ್ತದೆ ಹಾಗೂ ಒಳ್ಳೆಯ ಫಲವನ್ನು ಕೂಡ ನೀಡುತ್ತದೆ ಎಂದು ಗಂಗಾಧರಪ್ಪ ಗೌಡ ಅವರು ತಿಳಿಸಿದ್ದಾರೆ.
ಅಡಿಕೆ ಬೇಸಾಯದ ಕ್ರಮಗಳು, ಪ್ರತಿನಿತ್ಯದ ಅಡಿಕೆ ರೇಟುಗಳು, ಹಾಗೂ ಅಡಿಕೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಈ ಜಾಲತಾಣದಲ್ಲಿ ಪ್ರಸಾರ ಮಾಡಲಾಗುತ್ತದೆ. ಎಲ್ಲ ಮಾಹಿತಿಗಳನ್ನು ನೀವು ಮೊದಲು ತಿಳಿಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಕೆಳಗೆ ಕ್ಲಿಕ್ ಮಾಡಿ.