ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್(NTPC) ನ ಖಾಲಿ ಇರುವ ಹುದ್ದೆಗಳಿಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿದೆ. ಬಗ್ಗೆ ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ದಿನನಿತ್ಯ ಇದೇ ತರಹದ ಉಚಿತ ಉದ್ಯೋಗದ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ,
ಈ ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವೇತನ ಶ್ರೇಣಿ, ಅರ್ಜಿ ಶುಲ್ಕದ ವಿವರ, ಅರ್ಜಿ ಸಲ್ಲಿಸುವಿಕೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು ಹಾಗೂ ಸುದ್ದಿಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ. ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ನಂತರ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ.
ಹುದ್ದೆಗಳಿಗೆ ಸಂಬಂಧಿಸಿದ ವಿವರಗಳು:
ಇಲಾಖೆಯ ಹೆಸರು | ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NTPC) |
ಖಾಲಿ ಇರುವ ಹುದ್ದೆಗಳು | 20 |
ಹುದ್ದೆಯ ಹೆಸರು | ಕಾರ್ಯನಿರ್ವಾಹಕ ಹುದ್ದೆಗಳು |
ವೇತನ ಶ್ರೇಣಿ | ಅಧಿಸೂಚನೆಯ ಪ್ರಕಾರ |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ ಮುಖಾಂತರ |
ಉದ್ಯೋಗ ಸ್ಥಳ | ಭಾರತದಾದ್ಯಂತ |
ಖಾಲಿ ಇರುವ ಹುದ್ದೆಗಳು:
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ನ ಅಧಿಸೂಚನೆಯ ಪ್ರಕಾರ ಒಟ್ಟು 20 ಕಾರ್ಯನಿರ್ವಾಹಕ ಹುದ್ದೆಗಳು ಖಾಲಿ ಇವೆ, ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಶೈಕ್ಷಣಿಕ ಅರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಅಧಿಸೂಚನೆ ಆಧಾರದ ಮೇಲೆ, ಮಾನ್ಯತೆ ಪಡೆದ ಸಂಸ್ಥೆಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ, MSW, MBA ಪದವಿಯನ್ನು ಪೂರ್ಣಗೊಳಿಸಬೇಕು.
ವಯೋಮಾನ ಪ್ರಕ್ರಿಯೆ:
NTPC ಯ ಅದಿ ಸೂಚನೆಯ ಆಧಾರದ ಮೇಲೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ 21 ವರ್ಷ ವಯೋಮಿತಿಯನ್ನು ಪೂರೈಸಿರಬೇಕು ಹಾಗೂ ಗರಿಷ್ಠವಾಗಿ 35 ವರ್ಷ ವಯೋಮಿತಿಯನ್ನು ಮೀರಿರಬಾರದು.
ಪ್ರವರ್ಗದ ಆಧಾರದ ಮೇಲೆ ವಯಸ್ಸಿನ ಸಡಿಲಿಕೆ;
- ಒಬಿಸಿ (OBC) ಅಭ್ಯರ್ಥಿಗಳಿಗೆ 03 ವರ್ಷ,
- ಪರಿಶಿಷ್ಟ ಜಾತಿ(SC) /ಪರಿಶಿಷ್ಟ ಪಂಗಡ(ST) ಅಭ್ಯರ್ಥಿಗಳಿಗೆ 05 ವರ್ಷ,
- ಪಿಡಬ್ಲ್ಯೂಡಿ (PWD) ಅಭ್ಯರ್ಥಿಗಳಿಗೆ 10 ವರ್ಷಗಳ ಕಾಲ ವಯಸ್ಸಿನ ಸಡಿಲಿಕೆಯನ್ನು ಮಾಡಲಾಗಿದೆ.
ಅರ್ಜಿ ಶುಲ್ಕದ ವಿವರಗಳು:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರವರ್ಗದ ಆಧಾರದ ಮೇಲೆ ಅರ್ಜಿ ಶುಲ್ಕವನ್ನು ಪಾವತಿಸಬೇಕು.
- ಸಾಮಾನ್ಯ/EWS/OBC ಅಭ್ಯರ್ಥಿಗಳು ರೂ.300 ಅರ್ಜಿ ಶುಲ್ಕವನ್ನು ಪಾವತಿಸಬೇಕು.
- SC/ST/PWBD/XSM/ಮಹಿಳಾ ಅಭ್ಯರ್ಥಿಗಳು ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
- ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮುಖಾಂತರ ಪಾವತಿಸಬೇಕು.
ವೇತನ ಶ್ರೇಣಿ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಧಿಸೂಚನೆಯ ಆದಾರದ ಮೇಲೆ ರೂಪಾಯಿ 90,000 ಮಾಸಿಕ ವೇತನವನ್ನು ನೀಡಲಾಗುತ್ತದೆ.
ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ಲಿಂಕ್ ಗಳು:
ಅಧಿಕೃತ ವೆಬ್ಸೈಟ್ | ntpc.co.in |
ಅಧಿಕೃತ ಅಧಿಸೂಚನೆ | ಡೌನ್ಲೋಡ್ ಮಾಡಿಕೊಳ್ಳಿ |
ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ. |