ರಾಜ್ಯದಲ್ಲೆಡೆ ಸರಿಯಾದ ಸಮಯಕ್ಕೆ ಹಿಂಗಾರು ಮುಂಗಾರು ಮಳೆಯಾಗದೆ ಕಾರಣ ರೈತರ ಬೆಳೆದ ಬೆಳೆಯು ನಾಶ ಆಗಿದ್ದು, ರೈತರು ಕಂಗಾಲಾಗಿದ್ದಾರೆ, ಜೊತೆಗೆ ಜಲಕ್ಷಾಮ ಎದುರಾಗಿರುವ ಕಾರಣ ರಾಜ್ಯದಲ್ಲಿ ತೀವ್ರ ಬರಗಾಲ ಉಂಟಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರವು ನೆರವು ನೀಡುವ ಸಲುವಾಗಿ ರೈತರ ಸಾಲದ ಮೇಲಿರುವಂತಹ ಬಡ್ಡಿಯನ್ನು ತೆರೆವುಗೊಳಿಸಲು ಮುಂದಾಗಿದೆ. ರೈತರು ಬ್ಯಾಂಕುಗಳಲ್ಲಿ ಕೃಷಿಗೆಂದು, ತೆಗೆದುಕೊಂಡಿರುವ ಸಾಲದ ಮೇಲಿರುವ ಬಡ್ಡಿಯನ್ನು ಸರ್ಕಾರವು ತೆರವುಗೊಳಿಸುವ ಯೋಜನೆಯನ್ನು ಜಾರಿ ಮಾಡಿದೆ. ಮುಂದೆ ಬರುವ ಎಲ್ಲಾ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ಸಾಲ ತೆಗೆದುಕೊಂಡ ರೈತರಿಗೆ ಸಂತಸದ ಸುದ್ದಿ!
12 ಡಿಸೆಂಬರ್ 2023ರ ಅವಧಿ ಒಳಗಿನ ಸಮಯದಲ್ಲಿ ರೈತರು ಕೃಷಿ ಚಟುವಟಿಕೆಗಳಿಗೆ ಸಾಲವನ್ನು ತೆಗೆದುಕೊಂಡಿದ್ದಾರೆ, ಕೃಷಿ ಸಹಕಾರ ಸಂಘ ಸಂಸ್ಥೆಗಳು, ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಪ್ರಾಥಮಿಕ ಸಹಕಾರಿ ಸಂಘಗಳು, ಲ್ಯಾಮ್ಸ್ ಸಹಕಾರ ಸಂಘಗಳು ಇವುಗಳಿಂದ ರೈತರು ಕೃಷಿ ಚಟುವಟಿಕೆಗಳಿಗೆ ಸಾಲವನ್ನು ತೆಗೆದುಕೊಂಡಿದ್ದಾರೆ. ರೈತರು ಪಡೆದಿರುವಂತಹ ದೀರ್ಘಾವಧಿ, ಮಧ್ಯಮಾವದಿ ಮತ್ತು ಮಧ್ಯಂತರ ಸಾಲಗಳ ಮೇಲೆ ಇರುವಂತಹ ಬಡ್ಡಿಯನ್ನು ಮನ್ನಾ ಮಾಡುವಂತೆ ಸರ್ಕಾರವು ಹೊಸ ಆದೇಶವನ್ನು ಹೊರಡಿಸಿದೆ.
ಸಾಲದ ಮೇಲಿನ ಬಡ್ಡಿ ಮನ್ನಾ:
ರಾಜ್ಯ ಸರ್ಕಾರ ಹೊರಡಿಸಿದ ಆದೇಶ ಕ್ರಮ ಸಂಖ್ಯೆ ಒಂದರಂತೆ (1), ರೈತರು ಕೃಷಿ ಚಟುವಟಿಕೆಗಳಿಗೆ ಬ್ಯಾಂಕು ಮತ್ತು ಇತರ ಸಂಘ-ಸಂಸ್ಥೆಗಳಿಂದ ತೆಗೆದುಕೊಂಡಿರುವ ಸಾಲದ ಅಸಲನ್ನು ಪಾವತಿ ಮಾಡಿದರೆ ಅಂಥವರ ಸಾಲದ ಮೇಲಿನ ಬಡ್ಡಿಯನ್ನು ಮನ್ನ ಮಾಡುವಂತೆ ಸೂಚನೆಯನ್ನು ನೀಡಲಾಗಿದೆ. ಈ ಆದೇಶಕ್ಕೆ ಸಂಬಂಧಿಸಿದಂತೆ, ಶರತ್ತಿನ ಮಂಜೂರಾತಿಯೊಂದಿಗೆ ಮೊಬಲಗನ್ನು ನೀಡುವಂತೆ ಸಹಕಾರಿ ಸಂಘಗಳಿಗೆ ಸರ್ಕಾರವು ಆದೇಶ ಪತ್ರವನ್ನು ರವಾನಿಸಿದೆ ಅದರ ಗಡವು 29 ಫೆಬ್ರವರಿ 2024 ಆಗಿದೆ.
ರಾಜ್ಯ ಸರ್ಕಾರ ಹೊರಡಿಸಿದ ಆದೇಶ ಎರಡರಂತೆ (2), ಸರ್ಕಾರವು ಸುಸ್ತಿಯಾಗಿರುವ ಸಾಲದ ಮೇಲೆ ಸಹಕಾರಿ ಸಂಘ ನಿಬಂಧಕರ ಪ್ರಸ್ತಾವನೆಯ ಸದರಿ ಯೋಜನೆಯಲ್ಲಿ 29 ಫೆಬ್ರವರಿ 2024ರ ಸಹಕಾರ ಸಂಘಗಳ ಮಾಹಿತಿಯನ್ನು ನೀಡಿರುವ ಅನ್ವಯದಂತೆ 29,450 ರಷ್ಟು ರೈತರು ತಮ್ಮ ಸಾಲವನ್ನು ಮಾಡಿದ್ದು, ಅವರು ಪಡೆದಿರುವಂತಹ ಸಾಲದ ಮೇಲಿನ ಬಡ್ಡಿಯನ್ನು ತೆರವುಗೊಳಿಸಲಾಗಿದೆ. ಸರ್ಕಾರವು ಇದುವರೆಗೆ ಸರಿಸುಮಾರು 214.50 ಕೋಟಿಗಳಷ್ಟು ಬಡ್ಡಿಯನ್ನು ತೆರವುಗೊಳಿಸಿದ್ದು ರೈತರು ಪಾವತಿ ಮಾಡಿರುವಂತಹ ಹಣದ ಮೊತ್ತ 281.88 ಕೋಟಿ ಅಷ್ಟಿದೆ.
ರಾಜ್ಯದಲ್ಲಿ ಸದ್ಯಕ್ಕೆ ಇರುವಂತಹ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡು ನಿಬಂಧಕರು ಈ ಯೋಜನೆಯ ಅವಧಿಯನ್ನು ವಿಸ್ತರಿಸುವಂತೆ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ. ಸರ್ಕಾರವು ನಿಬಂಧಕರು ನೀಡಿರುವ ಆ ಮನವಿಯನ್ನು ಪರಿಶೀಲಿಸಿ ಪ್ರಸ್ತಾವನೆಯನ್ನು ವಿವರಿಸುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರದ ಆದೇಶ ಸಂಖ್ಯೆ: ಸಿಒ 291 ಸಿಎಲ್ಎಸ್ 2023, ದಿನಾಂಕ 20 ಜನವರಿ 2024ರ ಆದೇಶದಲ್ಲಿ ತಿಳಿಸಲಾಗಿರುವ ಮಾಹಿತಿಯಂತೆ, ಅಸಲನ್ನು ಪಾವತಿ ಮಾಡಿದರೆ ಬಡ್ಡಿಮನ್ನ ಎಂಬ ಯೋಜನೆಗೆ ನೀಡಿರುವಂತಹ ಸಮಯದ ಗಡುವನ್ನು 29 ಫೆಬ್ರವರಿ 2024 ರಿಂದ 31 ಮಾರ್ಚ್ 2024ರ ವರೆಗೆ ಗಡುವನ್ನು ವಿಸ್ತರಣೆ ಮಾಡುವಂತೆ ಆದೇಶವನ್ನು ನೀಡಲಾಗಿದೆ.