Mobile Traffic: ಮೋದಿ ಅವರು Airtel, jio, VI ರಿಚಾರ್ಜ್ ಶುಲ್ಕ ಕಡಿಮೆ ಮಾಡಲಿದ್ದಾರಾ? ಇಲ್ಲಿದೆ ಸಂಪೂರ್ಣ ಮಾಹಿತಿ
ದೇಶದಲ್ಲಿನ ಕೆಲವು ಟೆಲಿಕಾಂ ಕಂಪನಿಗಳು ಕಳೆದ ಕೆಲ ದಿನಗಳಿಂದ ಎಲ್ಲಾ ಗ್ರಾಹಕರಿಗೂ ರಿಚಾರ್ಜ್ ಗಳ ಬೆಲೆಯೇರಿಕೆಯ ಬಿಸಿ ಮುಟ್ಟಿಸಿದೆ. ರಿಲಯನ್ಸ್ ಜಿಯೋ(Reliance Jio) ಹಾಗೂ ಏರ್‌ಟೆಲ್ (Airtel) ಕಂಪನಿಗಳು ಪ್ರಿಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಬೆಲೆಗಳನ್ನು ಏರಿಕೆ ಮಾಡಿದ ಬೆನ್ನಲಿಯೇ, ವೋಡಾಫೋನ್ ಐಡಿಯಾ(Vodafone Idea, VI) ಸಂಸ್ಥೆಯೂ ಕೂಡಾ ರಿಚಾರ್ಜ್ ಬೆಲೆಯೇರಿಕೆ ಮಾಡಿದೆ. ಇದರಿಂದ ನೊಂದ ಗ್ರಾಹಕರು ಕೇಂದ್ರ ಸರ್ಕಾರವು (Central Government) ಇದರ ಮಧ್ಯಪ್ರವೇಶಿಸಿ, ರಿಚಾರ್ಜ್ ಶುಲ್ಕವನ್ನು ಕಡಿಮೆ ಮಾಡಬೇಕು ಎಂಬ ಆಗ್ರಹವು ಎಲ್ಲೆಡೆ ಕೇಳಿಬರುತ್ತಿವೆ. ಇದೇ ವಿಚಾರಕ್ಕೆ ಸಂಬಂಧಿಸಿದ ಹಾಗೆ ಕೇಂದ್ರ ಸರ್ಕಾರವು, ಯಾವುದೇ ವಿಷಯಕ್ಕೂ ಖಾಸಗಿ ಟೆಲಿಕಾಂ(Telicom) ಗಳ ಮಧ್ಯೆ ಪ್ರವೇಶ ಮಾಡುವುದಿಲ್ಲ ಎಂಬ ಸ್ಪಷ್ಟಣೆಯನ್ನು ನೀಡಿದೆ.
ಯಾವುದೇ ಖಾಸಗಿ ಓಡೆತನದ ಕಂಪನಿಯ ಬೆಲೆ ಏರಿಕೆಯ ವಿರುದ್ಧ ಸರ್ಕಾರವು ಮಧ್ಯ ಪ್ರವೇಶಿಸಲು ಆಗುದಿಲ್ಲ. ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (TRAI) ನಿಯಮಗಳ ಅನ್ವಯ ಖಾಸಗಿ ಟೆಲಿಕಾಂ ಕಂಪನಿಗಳು ಬೆಲೆಯೇರಿಕೆ ಸೇರಿ, ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ. ಹಾಗಿರುವಾಗ ಕೇಂದ್ರ ಸರ್ಕಾರವು ಇಂತಹ ಸಮಯದಲ್ಲಿ ಮಧ್ಯ ಪ್ರವೇಶಿಸಲು ಸಾಧ್ಯವಾಗುವುದಿಲ್ಲ, ಎಂದು ಸರ್ಕಾರವು ತನ್ನ ಪ್ರಕಟಣೆಯನ್ನು ತಿಳಿಸಿದೆ. ಸಾರ್ವಜನಿಕರು ಮೂರೂ ಅಗತ್ಯ ಟೆಲಿಕಾಂ ಕಂಪನಿಗಳ ಬೆಲೆ ಏರಿಕೆಯನ್ನು ತಗ್ಗಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದರು.
ತಿಂಗಳ ರಿಚಾರ್ಜ್ ಪ್ಲಾನ್ ಗಳ ಹೊರೆ ಜಾಸ್ತಿಯಾಗಿದೆ!
ಖಾಸಗಿ ಟೆಲಿಕಾಂ ಕಂಪನಿಗಳ ರಿಚಾರ್ಜ್ ಪ್ಲಾನ್ ಗಳು; 28 ದಿನಗಳ 2GB Data (ಪ್ರತಿದಿನ ಅಲ್ಲ), ಅನ್‌ಲಿಮಿಟೆಡ್ ಕರೆಗಳು ಇರುವ 155 ಪ್ಲಾನ್‌ಗೆ ಇನ್ನು 189 ರೂ. ಏರಿಕೆಯಾಗಿದೆ. ಹಾಗೆಯೇ, ಪ್ರತಿದಿನ 1 ಜಿಬಿ ಇಂಟರ್‌ನೆಟ್ ಪ್ಲಾನ್‌ಗೆ(Internet Plan) 28 ದಿನಗಳಿಗೆ 209 ರೂ. ಬದಲು 249 ರೂ. ಪಾವತಿಸಬೇಕು, ನಿತ್ಯ 1.5GB ಪ್ಲಾನ್‌ಗೆ 239 ರೂ. ಬದಲು 299 ರೂ. ಆಗಿದೆ, 2 ಜಿಬಿ ಪ್ಲಾನ್‌ಗೆ 299 ರೂ. ಬದಲು 349ರೂ. ಗೆ ಏರಿಕೆಯಾಗಿದೆ, 2.5 ಜಿಬಿಗೆ 349 ರೂ. ಬದಲು 399 ರೂ. ಹಾಗೂ 3 ಜಿಬಿಗೆ 399 ರೂ. ಬದಲು 449 ರೂಪಾಯಿಗಳನ್ನು ನೀವು ಪಾವತಿಸಬೇಕು.
ಎರಡು ಹಾಗೂ ಮೂರು ತಿಂಗಳ ರಿಚಾರ್ಜ್ ಪ್ಲಾನ್!
ಎರಡು ಹಾಗೂ ಮೂರು ತಿಂಗಳ ಪ್ಲಾನ್‌ಗಳ ಬೆಲೆಯಲ್ಲಿಯೂ ಏರಿಗೆಯಾಗಿದೆ. ಪ್ರತಿ ದಿನ 1.5GB ಇಂಟರ್‌ನೆಟ್, ಅನ್‌ಲಿಮಿಟೆಡ್ ಕರೆಗಳಿಗೆ(Unlimited Calls) ಇನ್ನು 479 ರೂ. ಬದಲು 579 ರೂ. ಪಾವತಿಸಬೇಕು, 2 ಜಿಬಿಗೆ 533 ರೂ. ಬದಲು 629 ಕ್ಕೆ ಏರಿಕೆ, 3 ತಿಂಗಳು ಅನ್‌ಲಿಮಿಟೆಡ್ ಕರೆ(Unlimited Calls) 6 ಜಿಬಿ ಇಂಟರ್‌ನೆಟ್ (Not every Day) ಪ್ಲಾನ್‌ಗೆ 395 ರೂ. ಬದಲಾಗಿ 479 ರೂ. ಪಾವತಿಸಬೇಕಾಗುತ್ತದೆ, ಮೂರು ತಿಂಗಳು ಪ್ರತಿ ದಿನ 1.5 ಜಿಬಿ ಇಂಟರ್ನೆಟ್, ಅನ್‌ಲಿಮಿಟೆಡ್ ಕಾಲ್ಸ್ ಪ್ಲಾನ್‌ಗೆ(Unlimited Calls Plan) 666 ರೂ. ಬದಲಾಗಿ 799 ರೂ. ಪಾವತಿ ಮಾಡಬೇಕು, 2 ಜಿಬಿಗೆ 719 ರೂ. ಬದಲು 859 ರೂ. ಗೆ ಏರಿಕೆ, 3 ಜಿಬಿ(GB)ಗೆ 999 ರೂ. ಬದಲಾಗಿ 1,199 ರೂ. ಏರಿಕೆಯಾಗಿದೆ.
ವರ್ಷದ ಹಾಗೂ Data Add On ಗಳ ಬೆಲೆ ಏರಿಕೆ!
336 ದಿನಗಳವರೆಗೆ ಅನ್‌ಲಿಮಿಟೆಡ್ ಕರೆಗಳು, 24 ಜಿಬಿ ಡೇಟಾ (Not every Day) ಪ್ಲಾನ್‌ಗೆ 1,559 ರೂ. ಬದಲಾಗಿ 1,899 ರೂ.ಗೆ ಹೆಚ್ಚಳವಾಗಿದೆ, ಒಂದು ವರ್ಷಕ್ಕೆ ನಿತ್ಯ 2.5 ಜಿಬಿ ಡೇಟಾ ಪ್ಲಾನ್‌ಗೆ 2,999 ರೂ. ಬದಲು 3,599 ರೂ. ಗಳನ್ನು ನೀವು ಪಾವತಿಸಬೇಕಾಗುತ್ತದೆ. ಡೇಟಾ ಆ್ಯಡ್ ಆನ್(Data Add On) ಪ್ಲಾನ್‌ಗಳು ಸಹ ಕಡಿಮೆ ಇಲ್ಲ. 1 ಜಿಬಿ ಡೇಟಾಗೆ 15 ರೂ.ನಿಂದ 19 ರೂ.ಗೆ ಹೆಚ್ಚಿಸಲಾಗಿದೆ. ಇನ್ನು 2 ಜಿಬಿ ಡೇಟಾಗೆ 25 ರೂ.ನಿಂದ 29 ರೂ. ಹಾಗೂ 6 ಜಿಬಿ ಡೇಟಾಗೆ 61 ರೂ.ನಿಂದ 69 ರೂ.ಗೆ ಹೆಚ್ಚಳವಾಗಿದೆ. ಭಾರತದಲ್ಲಿ ಹೆಚ್ಚಿನ ಜನರು ರಿಲಯನ್ಸ್ ಜಿಯೋ ಟೆಲಿಕಾಂ ಕಂಪನಿಯ ರಿಚಾರ್ಜ್ ಪ್ಲಾನ್ ಗಳನ್ನು ಉಪಯೋಗಿಸುತ್ತಾರೆ ಹಾಗಾಗಿ ರಿಲಯನ್ಸ್ ಜಿಯೋ (Reliance jio) ದೇಶದ ಅತಿ ದೊಡ್ಡ ಟೆಲಿಕಾಂ(Telicom) ಕಂಪನಿಯಾಗಿದೆ.
ಏರ್ಟೆಲ್ ಮೊಬೈಲ್ ರಿಚಾರ್ಜ್ ದರ ಏರಿಕೆಯ ಪಟ್ಟಿ ಕೆಳಗಿನಂತಿವೆ;
ಡೇಟಾ ಪ್ಲಾನ್ | ದಿನಗಳು | ಹಿಂದಿನ ದರ | ಈಗಿನ ದರ |
ವಾಯ್ಸ್ ಕಾಲ್ ಫ್ಯಾನ್ಸ್ (Voice Call Plan) | |||
2GB | 28 | 179 | 199 |
8GB | 84 | 455 | 509 |
ಡೇಲಿ ಡೇಟಾ ಪ್ಲಾನ್(Daily Data Plan) | |||
1.5 GB | 28 | 299 | 349 |
2.5 GB | 28 | 359 | 409 |
3 GB | 28 | 399 | 449 |
Data Add-on Plan | |||
1 | 1 | 19 | 22 |
2 | 1 | 29 | 33 |
ವೋಡಾಫೋನ್-ಐಡಿಯಾ ಬೆಳೆಯು ಕೂಡ ದುಪ್ಪಟ್ಟಾಗಿದೆ!
ಜುಲೈ 4ರಿಂದ ವೋಡಾಫೋನ್ ಐಡಿಯಾ(VI) ಶುಲ್ಕಗಳನ್ನು ಶೇ.10ರಷ್ಟು ಹಾಗೂ ಶೇ.23ರಷ್ಟು ಹೆಚ್ಚಿಸಿದೆ, 28 ದಿನಗಳ ರಿಚಾರ್ಜ್ ಪ್ಲಾನ್‌ಗೆ 179 ರೂ. ಬದಲಾಗಿ 199 ರೂ. ಹೆಚ್ಚಿಗೆ ಪಾವತಿಸಬೇಕು, ಹಾಗೆಯೇ, 84 ದಿನಗಳವರೆಗೆ 1.5 ಜಿಬಿ ಪ್ಲಾನ್‌ಗೆ 719ರ ಬದಲಾಗಿ 859 ರೂ. ಗಳನ್ನು ನೀವು ಪಾವತಿಸಬೇಕಾಗುತ್ತದೆ. ಹಾಗೆಯೇ, ವಾರ್ಷಿಕ ಯೋಜನೆಯ ಮೊತ್ತವನ್ನು 2,899 ರೂ.ನಿಂದ 3,499 ರೂ.ಗೆ ಹೆಚ್ಚಿಸಲಾಗಿದೆ. ಆದರೆ, 365 ದಿನಗಳವರೆಗೆ ಅನ್‌ಲಿಮಿಟೆಡ್ ಕರೆಗಳು ಹಾಗೂ 24 ಜಿಬಿ (Not Every days) ಇಂಟರ್‌ನೆಟ್ ಪ್ಲಾನ್ ಬೆಲೆಯೇರಿಕೆ ಮಾಡಿಲ್ಲ, ಅದು ಮೊದಲಿನಂತೆ 1,799 ರೂ. ಗೆ ನಿಮಗೆ ಸಿಗಲಿದೆ.