ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ (ನರೇಗಾ) ಕೇಂದ್ರ ಸರ್ಕಾರವು ಕೂಲಿಯ ದರವನ್ನು ಪರಿಷ್ಕರಣೆ ಮಾಡಿದೆ, ವಿವಿಧ ರಾಜ್ಯಗಳಿಗೆ ಅನುಗುಣವಾಗಿ ಅಂದಾಜು ಶೇಕಡ 4ರಿಂದ ಶೇಕಡ 10ರಷ್ಟು ದರವನ್ನು ಏರಿಕೆ ಮಾಡಿದೆ. ಉಚಿತ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ. ಸೇರಲು, ಇಲ್ಲಿ ಕ್ಲಿಕ್ ಮಾಡಿ.
ಕರ್ನಾಟಕ, ಗೋವಾ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ನರೇಗಾ ಯೋಜನೆಯಡಿ ನೀಡುವ ಕೂಲಿಯ ದರ ಅಂದಾಜು ಶೇ 10 ರಷ್ಟು ಏರಿಕೆಯಾಗಿದೆ. ಕರ್ನಾಟಕದಲ್ಲಿ ಮೊದಲು ಈ ಯೋಜನೆಯಡಿಯಲ್ಲಿ ದಿನಕ್ಕೆ 316 ರೂಪಾಯಿಗಳನ್ನು ನೀಡುತ್ತಿದ್ದರು. ಈಗ ರೂ.349 ಕ್ಕೆ ಏರಿಕೆಯಾಗಿದೆ, ಒಟ್ಟು 33 ರೂ. ಹೆಚ್ಚಿದಂತಾಗಿದೆ.
ದೇಶದಲ್ಲಿಯೇ ಅತಿ ಹೆಚ್ಚು ದಿನಗೂಲಿ ಪಡೆಯುವ ರಾಜ್ಯ ಹರಿಯಾಣ ಆಗಿದೆ. ಅಲ್ಲಿ ದಿನಕ್ಕೆ ರೂ.374 ನೀಡಲಾಗುತ್ತದೆ. ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ಅತ್ಯಂತ ಕಡಿಮೆ ದಿನಗೂಲಿ ಪಡೆಯುವ ರಾಜ್ಯವಾಗಿದೆ, ಅಲ್ಲಿ ದಿನಕ್ಕೆ ರೂ.234 ನೀಡಲಾಗುತ್ತದೆ. ಸಿಕ್ಕಿಂ ರಾಜ್ಯದ ಲಾಚೆಂಗ, ಗ್ನಾಥಾಂಗ ಮತ್ತು ಲಾಚೇನ್ ಪಂಚಾಯಿತಿಗಳಲ್ಲಿ ದಿನಕ್ಕೆ 374ರೂ. ಕೂಲಿ ಇದೆ ಎಂದು ಹೇಳಲಾಗಿದೆ.
ಹೊಸ ಆಯೋಗದ ಅನುಮತಿ:
ದೇಶದಲ್ಲಿ ಲೋಕಸಭೆಯ ಚುನಾವಣೆಯ ಕಾರಣ ನೀತಿ ಸಂಹಿತೆ ಜಾರಿ ಇರುವ ಕಾರಣ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಚುನಾವಣೆ ಆಯೋಗದಿಂದ ಅನುಮತಿಯನ್ನು ಪಡೆದುಕೊಂಡು ನರೇಗಾ ಕೂಲಿ ಪರಿಷ್ಕರಣೆಯ ಅಧಿಸೂಚನೆಯನ್ನು 27 ಮಾರ್ಚ್ ರಂದು ಬಿಡುಗಡೆ ಮಾಡಿದೆ.
ಅಧಿಸೂಚನೆ ಅನುಗುಣವಾಗಿ ಗೋವಾ ರಾಜ್ಯದಲ್ಲಿ ಕೂಲಿ ದರವು ಅತಿ ಹೆಚ್ಚು ಪರಿಷ್ಕರಣೆಯಾಗಿದೆ. ಅಂದರೆ ಅಲ್ಲಿನ ಕೂಲಿ ದರದಲ್ಲಿ ರೂಪಾಯಿ 34 ಏರಿಕೆಯಾಗಿದ್ದು, ದಿನದ ಕೂಲಿ ರೂ.356 ಕ್ಕೆ ತಲುಪಿದೆ. ಆಂಧ್ರ ಪ್ರದೇಶದಲ್ಲಿ 28 ರೂಪಾಯಿ ಹೆಚ್ಚಳವಾಗಿದೆ, ಉತ್ತರ ಪ್ರದೇಶ ಮತ್ತು ಉತ್ತರಖಂಡದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ರೂ.7 ಅನ್ನು ಪರಿಷ್ಕರಣೆ ಮಾಡಲಾಗಿದೆ, ಆ ಎರಡು ರಾಜ್ಯಗಳಲ್ಲಿ ನರೇಗಾ ಕೂಲಿಯಾ ದರ ದಿನಕ್ಕೆ ರೂ.237 ಆಗಿದೆ. ಅತಿ ಹೆಚ್ಚು ಕೂಲಿ ಹೊಂದಿರುವ ರಾಜ್ಯಗಳ ಪೈಕಿ ಹರಿಯಾಣ ಮೊದಲ ಸ್ಥಾನದಲ್ಲಿದ್ದರೂ, ಅಲ್ಲಿ ಕೂಲಿ ದರದಲ್ಲಿ ಕೇವಲ 4ರಷ್ಟು ಮಾತ್ರ ಏರಿಕೆ ಮಾಡಲಾಗಿದೆ.
ಹೊಸ ಅನುಮತಿಗೆ, ಕಾಂಗ್ರೆಸ್ ತರಾಟೆ
ಕೇಂದ್ರ ಸರ್ಕಾರ ರೂಪಿಸಿರುವಂತಹ ಈ ಹೊಸ ಯೋಜನೆಯನ್ನು, ಕಾಂಗ್ರೆಸ್ ಸರ್ಕಾರ ತರಾಟೆಗೆ ತೆಗೆದುಕೊಂಡಿದೆ, ಇಷ್ಟು ದೊಡ್ಡ ಮೊತ್ತದಲ್ಲಿ ಏನು ಮಾಡಿವಿರಿ ಎಂದು ಈಗ ಅವರು ಕೇಳಬಹುದು,700 ಕೋಟಿ ರೂಪಾಯಿಗಳನ್ನು ತಿಳಿಸಿ ನಿಮ್ಮ ಹೆಸರಿನಲ್ಲಿ ಥ್ಯಾಂಕ್ಯೂ ಮೋದಿಜಿ ಎಂಬ ಅಭಿಯಾನವನ್ನು ನಡೆಸಬಹುದು ಎಂದು ರಾಹುಲ್ ಗಾಂಧಿಯವರು ವ್ಯಂಗ್ಯವಾಡಿದ್ದರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರವು ಇನ್ನೊಂದು ಪೋಸ್ಟ್ ನಲ್ಲಿ ಪ್ರಧಾನ ಕಾರ್ಯದರ್ಶಿ ಜೈ ರಾಮ್ ರಮೇಶ್ ಅವರು ಉದ್ಯೋಗ ಖಾತ್ರಿ ಯೋಜನೆಯ ಕೂಲಿಯನ್ನು ಪ್ರತಿ ವರ್ಷ ಏಪ್ರಿಲ್ ಒಂದರಿಂದ ಜಾರಿಗೆ ಬರುವಂತೆ ಪರಿಸ್ಕರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.