ವಿವಾಹ ನೋಂದಣಿ ಇನ್ನು ಸರಳ:
ರಾಜ್ಯದಲ್ಲಿ ಮದುವೆಯಾದ ದಂಪತಿಗಳು ವಿವಾಹ ನೋಂದಣಿಯನ್ನು ಮಾಡುವುದು ಕಡ್ಡಾಯವಾಗಿದೆ. ವಿವಾಹ ನೊಂದಣಿ ಪತ್ರವು ಇಬ್ಬರ ವ್ಯಕ್ತಿಗಳ ನಡುವಿನ ಮದುವೆಯ ಸ್ವೀಕರಾರ್ಹ ಪುರಾವೆಯಾಗಿ ಕಾರ್ಯವನ್ನು ನಿರ್ವಹಿಸುತ್ತದೆ. ಮೊದಲೆಲ್ಲ ವಿವಾಹದ ನೋಂದಣಿಗಾಗಿ ದಂಪತಿಗಳು ತಮ್ಮ ವಿವಾಹವನ್ನು ನೊಂದಾಯಿಸಲು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಬೇಕಾಗಿತ್ತು. ಆದರೆ ಈಗ ರಾಜ್ಯ ಸರ್ಕಾರವು ವಿವಾಹ ನೋಂದಣಿಯನ್ನು ಮಾಡುವುದು, ಇನ್ನಷ್ಟು ಸುಗಮಗೊಳಿಸಿದೆ. ಏಕೆಂದರೆ, ದಂಪತಿಗಳು ಉಪ ನೋಂದಣಾಧಿಕಾರಿಗಳ ಕಚೇರಿಗೆ ಅಲೆದಾಟ ತಪ್ಪಿಸುವ, ಕ್ರಮವನ್ನು ಕೈಗೊಂಡಿದೆ. ಈ ವಿಷಯಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಳನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ. ಇದೇ ತರಹದ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಗಳನ್ನು ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ರಾಜ್ಯದ ವಿವಾಹ ಪ್ರಮಾಣ ಪತ್ರದ ವಿವರಗಳು:
ರಾಜ್ಯದ ಸಚಿವರಾದ ಕೃಷ್ಣ ಬೈರೇಗೌಡ ಅವರು, ವಿವಾಹವಾದ ದಂಪತಿಗಳು ತಮ್ಮ ಮದುವೆಯ ನೋಂದಣಿಯನ್ನು ಜನಸ್ನೇಹಿಯಾಗಿಸಲು ಕಾವೇರಿ 2.0 ತಂತ್ರಾಂಶದಲ್ಲಿ ಆನ್ಲೈನ್ ಮೂಲಕ ನೊಂದಣಿ ಮಾಡಲು ಮತ್ತು ಗ್ರಾಮ ಪಂಚಾಯಿತಿಯಲ್ಲಿನ ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ-ಒಂದು ಕೇಂದ್ರಗಳಲ್ಲಿಯೂ ಸಹ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರವು ವಿವಾಹದ ಪ್ರಮಾಣಿಕರಣಕ್ಕಾಗಿ ‘ಕಾವೇರಿ ಆನ್ಲೈನ್ ಸೇವೆಗಳ’ ಎಂಬ ಆನ್ಲೈನ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಈ ಸೇವೆಯು ವೆಬ್ಸೈಟ್ ರೂಪದಲ್ಲಿ ಕಾರ್ಯವನ್ನು ನಿರ್ವಹಿಸುತ್ತದೆ, ಈ ಸೇವೆಯನ್ನು ಅಂಚೆ ಚೀಟಿಗಳು ಮತ್ತು ನೋಂದಣಿ ಇಲಾಖೆ ಹಾಗೂ ಕರ್ನಾಟಕ ಸರ್ಕಾರವು ಅಭಿವೃದ್ಧಿಪಡಿಸಿದೆ.
ನಮ್ಮ ರಾಜ್ಯದಲ್ಲಿ ವಿವಾಹದ ನೋಂದಣಿ ಪ್ರತಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು?
ರಾಜ್ಯ ಸರ್ಕಾರವು ವಿವಾಹವಾದ ದಂಪತಿಗಳು ನಿರ್ದಿಷ್ಟವಾದ ಅರ್ಹತೆಗಳನ್ನು ಹೊಂದಿರಬೇಕೆಂದು ತಿಳಿಸಿದೆ. ಹೆಚ್ಚಿನ ಮಾಹಿತಿಯು ಕೆಳಗಿನಂತಿವೆ.
- ವಿವಾಹವನ್ನು ನೊಂದಾಯಿಸಲು ಇಷ್ಟವಿರುವ ಹುಡುಗನ ವಯಸ್ಸು 21 ವರ್ಷಕ್ಕಿಂತ ಹೆಚ್ಚಿರಬೇಕು.
- ವಿವಾಹವನ್ನು ನೋಂದಾಯಿಸಲು ಇಷ್ಟವಿರುವ ಹುಡುಗಿಯ ವಯಸ್ಸು 18 ವರ್ಷಕ್ಕಿಂತ ಹೆಚ್ಚಿರಬೇಕು.
- ಮುಖ್ಯವಾಗಿ ಇಬ್ಬರು ಕರ್ನಾಟಕ ಹಾಗೂ ಭಾರತೀಯ ಪ್ರಜೆಯಾಗಿರಬೇಕು.
ವಿವಾಹದ ನೋಂದಣಿ ಪ್ರತೀಗೆ ಅರ್ಜಿ ಸಲ್ಲಿಸಲು ಇರಬೇಕಾದ ದಾಖಲೆಗಳು:
ಮದುವೆಯ ನೊಂದಣಿಗೆ ಅರ್ಜಿ ಸಲ್ಲಿಸಲು ಇರಬೇಕಾದ ದಾಖಲೆಗಳ ವಿವರಗಳು ಕೆಳಗಿನಂತಿವೆ.
- ಎಲ್ಲ ಮಾಹಿತಿಯನ್ನು ಭರ್ತಿ ಮಾಡಲಾದ, ಹಾಗೂ ವಧು-ವರರಿಂದ ಸಹಿ ಮಾಡಲಾದ ಅರ್ಜಿಯ ನಮೂನೆ.
- ಮದುವೆಯ ಕಾರ್ಡ್ (ಮುಖ್ಯ ಕಾರ್ಡ್), ಡ್ರೈವಿಂಗ್ ಲೈಸೆನ್ಸ್, ಟೆಲಿಫೋನ್ ಬಿಲ್, ಎಲೆಕ್ಟ್ರಿಸಿಟಿ ಬಿಲ್, ವೋಟರ್ ಐಡಿ ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿಗಳಂತಹ ವಧು ಹಾಗೂ ವರನ ನಿವಾಸಿಯ ಪುರಾವೆಗಳು.
- ವಿಳಾಸದ ಪುರಾವೆಯನ್ನು ಸಲ್ಲಿಸುವಾಗ ಆಕಾಂಕ್ಷಿಗಳ ಹೆಸರು ಇರಬೇಕು.
- ಐಡಿ ಪುರಾವೆಯಾದ, ವದು ಹಾಗೂ ವರನ ಆಧಾರ್ ಕಾರ್ಡ್, ಜೊತೆಗೆ 2ಬಿ ಗಾತ್ರದಲ್ಲಿ ತೆಗೆಸಿಕೊಂಡ, ವಧು ಮತ್ತು ವರನ ಭಾವಚಿತ್ರಗಳು.
- ದಂಪತಿಗಳ ವಯಸ್ಸಿನ ಪುರಾವೆಗಳು, ಉದಾ: 10ನೇ ತರಗತಿಯಲ್ಲಿ ವ್ಯಾಸಂಗ ಮಾಡಿದ ಅಂಕಪಟ್ಟಿ ಇಲ್ಲವೇ ಅವರ ಪಾಸ್ಪೋರ್ಟ್.
- ವಧು ಮತ್ತು ವರನ ಎರಡು ಪಾಸ್ಪೋರ್ಟ್ ಅಳೆತೆಯ ಭಾವಚಿತ್ರ.
- ವಧು ಮತ್ತು ವರನ ಎರಡು ಪಾಸ್ ಪೋರ್ಟ್ ಚಿತ್ರ, ಮದುವೆಯ ಉಡುಪಿನೊಂದಿಗೆ ಮತ್ತು ಮದುವೆಯ ಸಮಾರಂಭದಲ್ಲಿ (ಕುಟುಂಬಗಳೊಂದಿಗೆ) ಚಿತ್ರಿಸಿರಬೇಕು.
- ದಂಪತಿಗಳ ವೈಯಕ್ತಿಕ ವಿವಾಹದ ಅಪಿಡವಿಟ್ ಗಳನ್ನು ನಿರ್ದೇಶಿಸಿದ ರೂಪದಲ್ಲಿ ಸಲ್ಲಿಸಿರಬೇಕು.
- ಮದುವೆ ನಂತರ ಹುಡುಗಿಯು ತನ್ನ ಹೆಸರನ್ನು ಬದಲಾಯಿಸುವುದಾದರೆ ಅವಳ ಅಪಿಡವಿಟ್ ಅಗತ್ಯವಿದೆ.
- ಹುಡುಗಿಯ ಹೆಸರು ಬದಲಾವಣೆಯ ಸುದ್ದಿಯನ್ನು ಘೋಷಿಸಿದ ಪ್ರಕಟಣೆ.
ವಿವಾದ ನೊಂದಣಿಗೆ ಅರ್ಜಿ ಸಲ್ಲಿಸಲು ವದು ಮತ್ತು ವರರು ಮೇಲಿನ ಎಲ್ಲ ದಾಖಲಾತಿಗಳನ್ನು ಸರಿಯಾಗಿ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ನೋಂದಣಿಯ ಪ್ರತಿಯು ರಿಜೆಕ್ಟ್ ಆಗುವ ಸಂಭವವಿರುತ್ತದೆ.
ಹೆಚ್ಚಿನ ಮಾಹಿತಿ:
ವಿವಾಹದ ನೋಂದಣಿಯ ಪರಿಶೀಲನೆಯ ದಿನದಂದು, ಎಲ್ಲಾ ಪ್ರಮಾಣ ಪತ್ರಗಳ ಮೂಲ ಪ್ರತಿಯನ್ನು ತೆಗೆದುಕೊಂಡು ಹೋಗಬೇಕು.
ವಿವಾಹದ ನೊಂದಣಿ ಪ್ರತಿಗೆ ಅರ್ಜಿ ಸಲ್ಲಿಸುವುದು ಹೇಗೆ?
ವಿವಾಹದ ನೋಂದಣಿಗೆ ಅರ್ಜಿ ಸಲ್ಲಿಸುವ ದಂಪತಿಗಳು ಕೆಳಗಡೆ ನೀಡಲಾದ ಎಲ್ಲಾ ಸೂಚನೆಗಳನ್ನು ಸರಿಯಾಗಿ ಪಾಲಿಸುವ ಮುಖಾಂತರ ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
https://kaveri.karnataka.gov.in/landing-page
- ಅರ್ಜಿಯನ್ನು ನೋಂದಾಯಿಸುವ ದಂಪತಿಗಳು, ಮೇಲೆ ನೀಡಲಾದ ಅಧಿಕೃತ ಪೇಜ್ ಗೆ ಭೇಟಿ ನೀಡಿ.
- ನೀವು ಅರ್ಜಿ ಸಲ್ಲಿಸಿ ಬಳಕೆದಾರರಾಗಿದ್ದರೆ, ನಿಮ್ಮ ಹೆಸರು ಮತ್ತು ಪಾಸ್ವರ್ಡ್ ಅನ್ನು ಸೇರಿಸುವ ಮೂಲಕ ಲಾಗಿನ್ ಆಗಿ.
- ನೀವು ಹೊಸ ಬಳಕೆದಾರರಾಗಿದ್ದರೆ, ಮೊದಲು ನಿಮ್ಮ ನೋಂದಣಿಯನ್ನು ಪೂರ್ಣಗೊಳಿಸಬೇಕು.ಅದಕ್ಕಾಗಿ ‘ಹೊಸ ಬಳಕೆದಾರರಾಗಿ ನೋಂದಾಯಿಸಿ’ ಎಂಬ ಬಟನ್ ಅನ್ನು ಕ್ಲಿಕ್ ಮಾಡಿ.
- ನೊಂದಣಿ ಫಾರ್ಮನ್ನು ಅಧಿಕೃತ ಪೇಜ ಮೇಲೆ ಪ್ರದರ್ಶಿಸುತ್ತದೆ ಮತ್ತು ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಲಿಂಗ ಮತ್ತು ಇತರ ಮಾಹಿತಿಯನ್ನು ನಮೂದಿಸಬೇಕು.
- ನಂತರ ರಿಜಿಸ್ಟರ್ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ಲಾಗಿನ್ ರುಜುವತುಗಳನ್ನು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ sms ಕಳುಹಿಸಲಾಗುತ್ತದೆ.
- ಈಗ ಪುನಃ ಲಾಗಿನ್ ಮಾಡಿ ಮತ್ತು ಮದುವೆಯ ನೋಂದಣಿ ಪ್ರಮಾಣ ಪತ್ರದಲ್ಲಿ ವಧು ಮತ್ತು ವರನ ಎಲ್ಲಾ ಅಗತ್ಯವಿರುವ ದಾಖಲೆಗಳನ್ನು ಭರ್ತಿ ಮಾಡಬೇಕು.
- ನಿಮ್ಮ ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ, ಮುಂದೆ ಆಕಾಂಕ್ಷಿಗಳು ಸ್ವೀಕೃತಿ ಚೀಟಿಯನ್ನು ಸಲ್ಲಿಸಬೇಕು. ಚೀಟಿಯಲ್ಲಿ ದಂಪತಿಗಳ ತಾತ್ಕಾಲಿಕ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ.
- ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿದ ನಂತರ ಅರ್ಜಿಯ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ. ನಿಗದಿತ ದಿನಾಂಕದಂದು, ನೀವು ಅಗತ್ಯವಿರುವ ಸಾಕ್ಷಿ ಮತ್ತು ಮೂಲ ದಾಖಲೆಗಳೊಂದಿಗೆ ರಿಜಿಸ್ಟರ್ ಕಚೇರಿಗೆ ಭೇಟಿ ನೀಡಬೇಕು.
- ಕೊನೆಯಲ್ಲಿ ವಧು ಮತ್ತು ವರರು ಹಾಗೂ ಸಂಬಂಧಿಸಿದ ಸಾಕ್ಷಿಗಳು ಮದುವೆಯ ನೋಂದಣಿಗೆ ಸಹಿ ಹಾಕಬೇಕು. ನಂತರದ ದಿನಗಳಲ್ಲಿ ಸಂಗಾತಿಗೆ ಕರ್ನಾಟಕ ವಿವಾಹ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.
ಮದುವೆಯನ್ನು ನೊಂದಾಯಿಸಲು ಸಂಬಂಧಿಸಿದ ಸಾಕ್ಷಿಯು ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಯಾವುದೇ ಸಾಕ್ಷಿ, ಸಹಿ ಇಲ್ಲದೆ ದಂಪತಿಗಳು ತಮ್ಮ ಮದುವೆಯನ್ನು ನೋಂದಾಯಿಸಲು ಸಾಧ್ಯವಾಗುವುದಿಲ್ಲ. ಮದುವೆಯನ್ನು ನೊಂದಾಯಿಸಲು ಸಾಕ್ಷಿಯಾಗುವವರಿಗೆ ಸರ್ಕಾರವು ಕೆಲವು ನಿರ್ದಿಷ್ಟ ಅರ್ಹತೆಗಳನ್ನು ರೂಪಿಸಿದೆ.ಅರ್ಹತೆಗಳು ಕೆಳಗಿನಂತಿವೆ.
- ಸಾಕ್ಷಿಗೆ ಸಹಿ ಹಾಕುವ ವ್ಯಕ್ತಿಯು 21 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಯಾಗಿರಬೇಕು.
- ವಧು ಮತ್ತು ವರನ ಮದುವೆಯಲ್ಲಿ ವೈಯಕ್ತಿಕವಾಗಿ ಭಾಗವಹಿಸಿದ ವ್ಯಕ್ತಿ ಮಾತ್ರ ಸಾಕ್ಷಿಯಾಗಬಹುದು.
- ವಧು ಮತ್ತು ವಾರ ಎರಡೂ ಕಡೆಯ ಸಾಕ್ಷಿಯಿಂದ ಹತ್ತಿರದ ಹತ್ತಿರದ ರಕ್ತಸಂಬಂಧವನ್ನು ಆಯ್ಕೆ ಮಾಡಲಾಗುತ್ತದೆ.
ಇಂತಹ ಉತ್ತಮ ಮಾಹಿತಿಯನ್ನು ಹೊಂದಿದ ಲೇಖನವನ್ನು ನಿಮ್ಮ ಸ್ನೇಹಿತರಿಗೆ ಬಂಧುಗಳಿಗೆ ಹಾಗೂ ಅಗತ್ಯವಿರುವವರಿಗೆ ಎಲ್ಲರಿಗೂ ಶೇರ್ ಮಾಡಿ. ಲೇಖನವನ್ನು ಓದಿದ ಎಲ್ಲರಿಗೂ ಧನ್ಯವಾದಗಳು.
ಪ್ರತಿದಿನ ನಮ್ಮ ಜಾಲತಾಣದಲ್ಲಿ ಪ್ರಸಾರವಾಗುವ ಎಲ್ಲ ತರಹದ ಸರ್ಕಾರಿ ಯೋಜನೆಗಳು, ಉದ್ಯೋಗ ವಾರ್ತೆಗಳು ಹಾಗೂ ಇನ್ನಿತರ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿಗಳನ್ನು ಪಡೆಯಲು ನಮ್ಮ ಟೆಲಿಗ್ರಾಮ ಗ್ರೂಪ್ ಸೇರಿಕೊಳ್ಳಿ. ಸೇರಲು ಇಲ್ಲಿ ಕ್ಲಿಕ್ ಮಾಡಿ.
ಓದುಗರ ಗಮನಕ್ಕೆ: ನಮ್ಮ ಕನ್ನಡ ನೀಡ್ಸ್ ತಂಡವು ತನ್ನೆಲ್ಲ ಓದುಗರಿಗೆ ನಿಖರವಾದ ಮತ್ತು ಸತ್ಯವಾದ ಮಾಹಿತಿಗಳನ್ನು ಒದಗಿಸುತ್ತದೆ, ಹಾಗೂ ಯಾವುದೇ ಸುಳ್ಳು ಅಥವಾ ಅನಧಿಕೃತ ಮಾಹಿತಿಗಳನ್ನು ಒದಗಿಸುವುದಿಲ್ಲ.
ನಮ್ಮ ಕನ್ನಡ ನೀಡ್ಸ್ ವೆಬ್ಸೈಟ್ಗೆ ಯಾವುದೇ ರೀತಿಯ ಸರ್ಕಾರಿ ಸಂಬಂಧವಿಲ್ಲ ಹಾಗೂ ನಮ್ಮ ವೆಬ್ಸೈಟ್ ಯಾವುದೇ ರೀತಿಯ ಸರ್ಕಾರಿ ಪ್ರಚಾರದ ಜಾಲತಾಣವಲ್ಲ.
ನಾವು ಈ ವೆಬ್ ಸೈಟ್ ರಚಿಸಿರುವುದ ಹಿಂದಿನ ಉದ್ದೇಶವೇನೆಂದರೆ, ನಿಮ್ಮಿಂದ ಯಾವುದೇ ರೀತಿ ಹಣವನ್ನು ತೆಗೆದುಕೊಳ್ಳುವುದು ಅಲ್ಲ. ನಮ್ಮ ಎಲ್ಲಾ ಮಾಹಿತಿಗಳು ಓದಲು ನೀವು ಯಾವುದೇ ರೀತಿ ಹಣವನ್ನು ಪಾವತಿಸಬೇಕಾಗಿಲ್ಲ, ಎಲ್ಲಾ ಮಾಹಿತಿಯು ನಿಮಗೆ ಉಚಿತವಾಗಿ ತಲುಪಿಸುತ್ತೇವೆ. ನಿಖರವಾದ ಮತ್ತು ಸತ್ಯವಾದ ಮಾಹಿತಿಗಳನ್ನು ಒದಗಿಸುವುದು ನಮ್ಮ ವೆಬ್ಸೈಟ್ನ ಪ್ರಮುಖ ಉದ್ದೇಶವಾಗಿದೆ.
Read More:
- KHPT RECRUITMENT | ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ 2024
- IISc RECRUITMENT 2024| ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಸುವ ಲಿಂಕ್ ಇದೆ ನೋಡಿ.
- SGPGIMS RECRUITMENT| ಸಂಜಯ್ ಗಾಂಧಿ ಪೋಸ್ಟ್ ಗ್ರಾಜುಯೇಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನೇಮಕಾತಿ 2024.