LIC ಯ ಹಲವು ಯೋಜನೆಗಳಲ್ಲಿ ಈ ಯೋಜನೆಯ ಚಲನ ಆಕರ್ಷಿಸುತ್ತದೆ, ಕೇವಲ ಒಂದು ಬಾರಿ ಹೂಡಿಕೆ ಮಾಡಿದರೆ ಜೀವನಪರ್ಯಂತ ಪ್ರತಿ ತಿಂಗಳು 12,000ಕ್ಕೂ ಹೆಚ್ಚಿನ ಹಣವನ್ನು ಪಡೆಯಬಹುದಾಗಿದೆ. ಈ ಯೋಜನೆಗೆ 40 ರಿಂದ 80 ವರ್ಷದ ಹಿರಿಯರು ಅರ್ಜಿ ಸಲ್ಲಿಸಿ ಒಬ್ಬರೇ ಅಥವಾ ಪತಿ-ಪತ್ನಿಯೊಂದಿಗೆ ಜಂಟಿಯಾಗಿ ಈ ಸ್ಕೀಮನ್ನು ಖರೀದಿಸಬಹುದಾಗಿದೆ. ಅಷ್ಟಕ್ಕೂ ಈ ಯೋಜನೆ ಹೆಸರೇನು? ಇದನ್ನು ಹೇಗೆ ಖರೀದಿಸಬಹುದು? ಎಷ್ಟು ಸಾವಿರ ಹೂಡಿಕೆ ಮಾಡಬೇಕು? ಹಾಗೂ ನಮಗೆ ಎಷ್ಟು ಬಡ್ಡಿಯು ದೊರೆಯುತ್ತದೆ? ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ. ಇದೇ ತರಹದ ಇನ್ನು ಹೆಚ್ಚಿನ ಸರ್ಕಾರಿ ಹಾಗೂ ಖಾಸಗಿ ವಿಷಯಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
40 ವರ್ಷ ಮೇಲ್ಪಟ್ಟವರು ಈ ಯೋಜನೆಯನ್ನು ಪಡೆದುಕೊಳ್ಳಬಹುದು
ಪ್ರತಿಯೊಬ್ಬರೂ ಕೂಡ ತಾವು ದುಡಿದಂತಹ ಹಣದಲ್ಲಿ ಸ್ವಲ್ಪ ಭಾಗವನ್ನು ತಮ್ಮ ಮುಂದಿನ ಭವಿಷ್ಯಕೆಂದು ಉಳಿಸಿರುತ್ತಾರೆ ಅಥವಾ ಕೆಲ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಿ ಅದರಿಂದ ಲಾಭವನ್ನು ಪಡೆಯುತ್ತಿರುತ್ತಾರೆ. ಅದರಲ್ಲೂ ಮುಖ್ಯವಾಗಿ 50 ವರ್ಷ ಮೇಲ್ಪಟ್ಟವರು ನಿವೃತ್ತಿಯಾದ ಬಳಿಕ ಇತರರ ಮೇಲೆ ಅವಲಂಬನೆ ಆಗಬಾರದೆಂದು ಇಷ್ಟಪಡುತ್ತಾರೆ, ತಾವು ಸ್ವಲ್ಪ ಸ್ವಲ್ಪ ಹಣವನ್ನು ಹೂಡಿಕೆ ಮಾಡಿ ಉಳಿಸಿಟ್ಟು ನಿವೃತ್ತಿಯ ಬಳಿಕ ಪ್ರತಿ ತಿಂಗಳು ನಿಗದಿತ ಹಣವನ್ನು ಪಿಂಚಣಿಯ(Pension) ರೂಪದಲ್ಲಿ ಪಡೆಯುತ್ತಾರೆ.
ಒಮ್ಮೆ ಹೂಡಿಕೆ ಮಾಡಿದರೆ ಸಾಕು, ಜೀವನ ಪರ್ಯತ ಆದಾಯ.
ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ (LIC) ಪ್ರತಿ ವಯಸ್ಸಿನ ಜನರಿಗೆ ಒಂದೊಂದು ರೀತಿಯಾದಂತಹ ವಿಶೇಷ ಯೋಜನೆಗಳನ್ನು ಬಿಡುತ್ತಿದ್ದು, ಈ ಎಲ್ಲಾ ಯೋಜನೆಗಳಿಗೆ ಹೋಲಿಸಿದರೆ ಒಮ್ಮೆ ಹೂಡಿಕೆ ಮಾಡಿ ಅತಿಹೆಚ್ಚಿನ ಲಾಭವನ್ನು ಪಡೆಯುವಂತಹ ಅದ್ಭುತವಾದ ಯೋಜನೆಯನ್ನು ಹಿರಿಯರಿಗಾಗಿ ಬಿಟ್ಟಿದ್ದಾರೆ. ಅದನ್ನು ಎಲ್ಐಸಿ ಸರಳ ಪಿಂಚಣಿ ಯೋಜನೆ(LIC Saral Pension Scheme) ಎಂದು ಕರೆಯಲಾಗುತ್ತದೆ. ಈ ಯೋಜನೆಯಲ್ಲಿ ಒಮ್ಮೆ ಹಣವನ್ನು ಹೂಡಿಕೆ ಮಾಡಿದರೆ ಸಾಕು ಇತರ ಯೋಜನೆಗಳಂತೆ ಪದೇ ಪದೇ ಪ್ರತಿ ತಿಂಗಳು ಹಣವನ್ನು ಕಟ್ಟುವಂತಹ ಅವಶ್ಯಕತೆ ಇರುವುದಿಲ್ಲ.
40 ರಿಂದ 80 ವರ್ಷ ವಯಸ್ಸಿನವರು ತಮ್ಮ ಸಂಗಾತಿಯೊಂದಿಗೆ ಇಲ್ಲವೇ ಒಂಟಿಯಾಗಿ ಈ ಪಾಲಿಸಿಯನ್ನು ಖರೀದಿಸಬಹುದಾಗಿದೆ, ನೀವೇನಾದರೂ ನಿವೃತ್ತಿಯ ಹಂತದಲ್ಲಿದ್ದರೆ ಪಿಎಫ್ ಫಂಡ್, ಗ್ರಾಜ್ಯುಟಿ ಹಣ ಮತ್ತು ನೀವು ಉಳಿಸಿರುವಂತಹ ಅಲ್ಪ ಸ್ವಲ್ಪ ಹಣ ಸೇರಿಸಿ ಇಲ್ಲಿ ಹೂಡಿಕೆ ಮಾಡಿದರೆ ಸಾಕು ಜೀವನದಿದ್ದಕ್ಕೂ ನಿಗದಿತ ಹಣವನ್ನು ಪ್ರತಿ ತಿಂಗಳು ಪೆನ್ಷನ್ ರೂಪದಲ್ಲಿ ನಿಮ್ಮ ಕೈ ಸೇರುತ್ತದೆ.
ಹೂಡಿಕೆಯ ಮಿತಿ ಇರುವುದಿಲ್ಲ:
ಈ ಯೋಜನೆಯಲ್ಲಿ ಹಣದ ಹೂಡಿಕೆಗೆ ಯಾವುದೇ ಮಿತಿ ಇರುವುದಿಲ್ಲ, ಅಂದರೆ ನೀವು ಈ ಯೋಜನೆಯಲ್ಲಿ ಎಷ್ಟು ಬೇಕಾದಷ್ಟು ಹಣವನ್ನು ಹೂಡಿಕೆ ಮಾಡಬಹುದು, ಅದರ ಅನುಗುಣವಾಗಿ ನೀವು ಪ್ರತಿ ತಿಂಗಳು ಪೆನ್ಷನ್ ಅನ್ನು ಪಡೆಯಬಹುದು. ನೀವು ಈ ಯೋಜನೆಯಲ್ಲಿ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಿ ವಾರ್ಷಿಕ, ಅರ್ಧವಾರ್ಷಿಕ, ತ್ರೈಮಾಸಿಕ ಹಾಗೂ ಮಾಸಿಕ ಆಧಾರದ ಮೇಲೆ ನಿಮ್ಮ ಹೂಡಿಕೆ ಹಣವನ್ನು ಪಿಂಚಣಿಯ ರೂಪದಲ್ಲಿ ಪಡೆಯಬಹುದು.
ಉದಾಹರಣೆಯನ್ನು ನೋಡುವುದಾದರೆ, ಒಬ್ಬ 42 ವರ್ಷದ ವ್ಯಕ್ತಿಯು ಬರಬರಿ 30 ಲಕ್ಷ ರೂಪಾಯಿಗಳನ್ನು ನೀಡಿ ಎಲ್ಐಸಿ ಸರಳ ಪೆನ್ಷನ್ ಯೋಜನೆಯನ್ನು ಖರೀದಿಸಿದರೆ, ಅವನು ಪ್ರತಿ ತಿಂಗಳು 12,388 ರೂಪಾಯಿಗಳನ್ನು ಪೆನ್ಷನ್ ರೀತಿ ಸ್ವೀಕರಿಸುತ್ತಾನೆ. ಈ ಯೋಜನೆ ನಿಮ್ಮ ಜೀವನದಿದ್ದಕ್ಕೂ ಪಿಂಚಣಿಯನ್ನು ಖಾತರಿಪಡಿಸುತ್ತದೆ ಇದರ ಜೊತೆಗೆ ಪಾಲಿಸಿದಾರರು ಎಮರ್ಜೆನ್ಸಿ ಸಂದರ್ಭದಲ್ಲಿ ಆರು ತಿಂಗಳ ಬಳಿಕ ಸಾಲವನ್ನು ಪಡೆದುಕೊಳ್ಳವ ಅವಕಾಶವಿದೆ.
ಇದರ ಹೊರತಾಗಿ ಪಾಲಿಸಿದಾರರು ಮರಣ ಹೊಂದಿದ ಸಂದರ್ಭದಲ್ಲಿ ಅವರ ಹಣವನ್ನು ನಾಮಿನಿಗೆ (Nominee) ಹಿಂತಿರುಗಿಸಲಾಗುತ್ತದೆ, ಹೀಗೆ ನೀವೇನಾದರೂ ಒಮ್ಮೆ ಹಣವನ್ನು ಹೂಡಿಕೆ ಮಾಡಿದರೆ ಜೀವನ ಪರ್ಯಂತ ಆದಾಯವನ್ನು ಪಡೆಯಬಹುದು, ಅದಕ್ಕೆ ನೀವು ಎಲ್ಐಸಿಯ ಸರಳ ಪೆನ್ಷನ್ ಯೋಜನೆಯನ್ನು ಪಡೆದುಕೊಂಡರೆ ಒಳ್ಳೆಯದು. ಅದಕ್ಕಾಗಿ ನೀವು https://www.licindia.in/ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು, 40 ರಿಂದ 80 ವರ್ಷದ ವ್ಯಕ್ತಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.