MOTOR VEHICLE INSPECTOR RECRUITMENT| ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ 2024

MOTOR VEHICLE INSPECTOR RECRUITMENT 2024:

ಕನ್ನಡ ನೀಡ್ಸ್ ಓದುಗರಿಗೆ ಎಲ್ಲರಿಗೂ ನಮಸ್ಕಾರ. ಇಂದಿನ ವರದಿಯ ಮುಖ್ಯಾಂಶವೇನೆಂದರೆ, ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಮೋಟರ್ ವಾಹನ ನಿರೀಕ್ಷಕರು ಹುದ್ದೆಗಳು ಖಾಲಿ ಇದ್ದು ನೇಮಕಾತಿಯಾಗಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

ಇದೇ ತರಹದ ಉಚಿತ ಮಾಹಿತಿಯನ್ನು ಪಡೆಯಲು ನಮ್ಮಟೆಲಿಗ್ರಾಂ ಮತ್ತು ವಾಟ್ಸಾಪ್ ಗ್ರೂಪ್ ಸೇರಿಕೊಳ್ಳಿ ಸೇರಲು ಇಲ್ಲಿ ಕೆಳಗೆ ಕ್ಲಿಕ್ ಮಾಡಿ.

WhatsApp Group Join Now
Telegram Group Join Now

ಕರ್ನಾಟಕ ಸಾರಿಗೆ ಇಲಾಖೆಯ ಖಾಲಿ ಇರುವ ಮೋಟಾರ್ ವಾಹನ ನಿರೀಕ್ಷಕರು ಹುದ್ದೆಗಳಿಗೆ ಸಂಬಂಧಿಸಿದ, ಅಧಿಕೃತ ಅಧಿಸೂಚನೆಯೂ ಈಗಾಗಲೇ ಬಿಡುಗಡೆ ಮಾಡಲಾಗಿದೆ, ಈ ಹುದ್ದೆಗಳ ಬಗ್ಗೆ ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ಅರ್ಥೈಸಿಕೊಂಡು ನಂತರ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವುದು ಒಳ್ಳೆಯದು.

ಈ ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವೇತನ ಶ್ರೇಣಿ, ಆಯ್ಕೆಯ ವಿಧಾನ, ಅರ್ಜಿ ಸಲ್ಲಿಸುವ ಬಗೆ, ಅರ್ಜಿ ಶುಲ್ಕದ ವಿವರ, ವಯೋಮಾನ ಪ್ರಕ್ರಿಯೆ, ಅರ್ಜಿ ಸಲ್ಲಿಸುವುದಕ್ಕೆ ಸಂಬಂಧಿಸಿದ ಪ್ರಮುಖ ದಿನಾಂಕಗಳು ಹಾಗೂ ಹುದ್ದೆಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಳನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ. ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು ಮಾಹಿತಿಯನ್ನು ಸರಿಯಾಗಿ ಓದಿ ಅರ್ಥೈಸಿಕೊಂಡು ನಂತರ ಮುಂದಿನ ಹಂತವಾದ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಕೈಗೊಳ್ಳಿ. ಹೆಚ್ಚಿನ ಮಾಹಿತಿಯು ಕೆಳಗಿನಂತಿವೆ.

ಹುದ್ದೆಗಳಿಗೆ ಸಂಬಂಧಿಸಿದ ವಿವರಗಳು:

  • ಇಲಾಖೆಯ ಹೆಸರು: ಕರ್ನಾಟಕ ಸಾರಿಗೆ ಇಲಾಖೆ
  • ನೇಮಕಾತಿ ಆಯೋಗ: ಕರ್ನಾಟಕ ಲೋಕಸೇವಾ ಆಯೋಗ (KPSC)
  • ಹುದ್ದೆಯ ಹೆಸರು: ಮೋಟಾರ್ ವಾಹನ ನಿರೀಕ್ಷಕರು
  • ಉದ್ಯೋಗ ಸ್ಥಳ: ಕರ್ನಾಟಕ
  • ಖಾಲಿ ಇರುವ ಹುದ್ದೆಗಳು: 76
  • ಅರ್ಜಿ ಸಲ್ಲಿಸುವ ಬಗೆ: ಆನ್ಲೈನ್ ಮುಖಾಂತರ
  • ವೇತನ ಶ್ರೇಣಿ: ಅದಿಸೂಚನೆಯ ಪ್ರಕಾರ

ಖಾಲಿ ಇರುವ ಹುದ್ದೆಗಳು:

ಕರ್ನಾಟಕ ಸಾರಿಗೆ ಇಲಾಖೆಯು ಹೊರಡಿಸಿದ ಅಧಿಸೂಚನೆಯ ಆದಾರದ ಒಟ್ಟು 76 ಮೋಟಾರ್ ವಾಹನ ನಿರೀಕ್ಷಕರ ಹುದ್ದೆಗಳು ಖಾಲಿ ಇವೆ, ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಶೈಕ್ಷಣಿಕ ಅರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಅಧಿಸೂಚನೆ ಆಧಾರದ ಮೇಲೆ ಮನೆ ಪಡೆದ ಸಂಸ್ಥೆಯಿಂದ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ ಜೊತೆಗೆ, ಡಿಪ್ಲೋಮೋ ಇಲ್ಲವೇ ಪದವಿ(degree in automobile engineering, B.Tech automobile engineering or B.Tech mechanical engineering)ಯನ್ನು ಪಡೆದಿರಬೇಕು. ಶೈಕ್ಷಣಿಕ ಅರ್ಹತೆಯ ಜೊತೆಗೆ ಡ್ರೈವಿಂಗ್ ಲೈಸೆನ್ಸ್ (Driving Licence) ಹೊಂದಿರಬೇಕು.

ವಯೋಮಾನ ಪ್ರಕ್ರಿಯೆ:

ಮೋಟಾರ್ ವಾಹನ ನಿರೀಕ್ಷಕರು ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆ ಆಧಾರದ ಮೇಲೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರಬೇಕು ಗರಿಷ್ಠವಾಗಿ 35 ವರ್ಷ ವಯೋಮಿತಿಯನ್ನು ಮೀರಿರಬಾರದು.

ಪ್ರವರ್ಗದ ಆಧಾರದ ಮೇಲೆ ವಯಸ್ಸಿನ ಸಡಿಲಿಕೆ;

  • ಪ್ರವರ್ಗ 2ಎ, 2ಬಿ, 3ಎ, 3 ಬಿ ಅಭ್ಯರ್ಥಿಗಳಿಗೆ 38 ವರ್ಷಗಳವರೆಗೆ,
  • ಪ್ರವರ್ಗ-1, ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 40 ವರ್ಷಗಳವರೆಗೆ ವಯಸ್ಸಿನ ಸಡಿಲಿಕೆಯನ್ನು ಮಾಡಲಾಗಿದೆ.

ಅರ್ಜಿ ಶುಲ್ಕದ ವಿವರಗಳು:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಅಧಿಸೂಚನೆ ಆಧಾರದ ಮೇಲೆ ತಮ್ಮ ಪ್ರವರ್ಗದ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಮಾಹಿತಿಯು ಕೆಳಗಿನಂತಿವೆ:

  • ಸಾಮಾನ್ಯ ಅಭ್ಯರ್ಥಿಗಳಿಗೆ ರೂ.600/-,
  • ಪ್ರವರ್ಗ 2ಎ, 2ಬಿ, 3ಎ, 3 ಬಿ ಅಭ್ಯರ್ಥಿಗಳಿಗೆ ರೂ.300/-,
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50/-
  • ಪ್ರವರ್ಗ-1, ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ  ಶುಲ್ಕದ ವಿನಾಯಿತಿಯನ್ನು ಮಾಡಲಾಗಿದೆ.

ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್ಲೈನ್ ಮುಖಾಂತರ ಪಾವತಿಸಬೇಕು. ಶುಲ್ಕ ಪಾವತಿಸುವ ವಿಧಾನಗಳು ಕೆಳಗಿನಂತಿವೆ;

  • UPI (ಯುಪಿಐ)
  • NET BANKING (ನೆಟ್ ಬ್ಯಾಂಕಿಂಗ್)
  • CREDIT CARD (ಕ್ರೆಡಿಟ್ ಕಾರ್ಡ್)
  • DEBIT CARD ( ಡೆಬಿಟ್ ಕಾರ್ಡ್)

ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕೆಳಗಡೆ ನೀಡಲಾದ ಎಲ್ಲಾ ಸೂಚನೆಗಳನ್ನು ಸರಿಯಾಗಿ ಪಾಲಿಸುವ ಮುಖಾಂತರ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

  • ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸರಿಯಾಗಿ ಓದಿ ಅರ್ಥೈಸಿಕೊಂಡು ನಂತರ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವುದು ಒಳ್ಳೆಯದು.
  • ಅರ್ಜಿ ಸಲ್ಲಿಸುವ ದಿನಾಂಕವು 22 ಏಪ್ರಿಲ್ 2024 ರಿಂದ ಆರಂಭವಾಗಿ 21 ಮೇ 2024 ರವರೆಗೆ ಚಾಲ್ತಿಯಲ್ಲಿ ಇರುತ್ತದೆ.
  • ಅಭ್ಯರ್ಥಿಯು ಅರ್ಜಿಯನ್ನು ನಿಗದಿಪಡಿಸಿದ ಕೊನೆಯ ದಿನಾಂಕದ ಒಳಗೆ ಸಲ್ಲಿಸಬೇಕು ನಂತರ ಸಲ್ಲಿಸಿದ ಯಾವುದೇ ಅರ್ಜಿಯನ್ನು ಇಲಾಖೆಯು ಪರಿಗಣಿಸುವುದಿಲ್ಲ.
  • ಅಭ್ಯರ್ಥಿಯು ಅರ್ಜಿ ಸಲ್ಲಿಸುವಾಗ ಅಧಿಕೃತ ವೆಬ್ಸೈಟ್ ಇಲ್ಲವೇ ಕೆಳಗಡೆ ನೀಡಲಾದ ಆದಿ ಸಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಧಿಕೃತ ಪೇಜ್ ತೆಗೆದುಕೊಳ್ಳುತ್ತದೆ.
  • ಅಧಿಕೃತ ಪೇಜ್ ನ ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲಾ ದಾಖಲಾತಿಗಳನ್ನು ಸರಿಪಡಿಸಿಕೊಂಡು ಇಟ್ಟುಕೊಳ್ಳಬೇಕು.
  • ನಂತರ ಅರ್ಜಿ ಸಲ್ಲಿಸುವಾಗ ಸರಿಪಡಿಸಿಕೊಂಡ ಎಲ್ಲ ದಾಖಲಾತಿಗಳನ್ನು ಭರ್ತಿ ಮಾಡಿ.
  • ಭರ್ತಿ ಮಾಡಿದ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
  • ದಾಖಲೆಗಳ ಜೊತೆಗೆ ಅಭ್ಯರ್ಥಿಯ ಸಹಿ ಭಾವಚಿತ್ರ ಹಾಗೂ ಹೆಬ್ಬೆರಳಿನ THUMB ಅನ್ನು ಕೂಡ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
  • ಎಲ್ಲಾ ದಾಖಲಾತಿಗಳನ್ನು ಭರ್ತಿ ಮಾಡಿದ ನಂತರ ಅರ್ಜಿ ನಮೂನೆಯನ್ನು ಪುನಃ ಪರಿಶೀಲಿಸಿ, ಏನಾದರೂ ತಪ್ಪಿದಲ್ಲಿ ಸರಿಪಡಿಸಬೇಕು.
  • ನಂತರ ನಿಮ್ಮ ಪ್ರವರ್ಗದ ಆಧಾರದ ಮೇಲೆ ಅರ್ಜಿ ಶುಲ್ಕವನ್ನು ಪಾವತಿಸಿ (ಅಗತ್ಯವಿದ್ದರೆ ಮಾತ್ರ).
  • ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯವೇನೆಂದರೆ ಅಭ್ಯರ್ಥಿಯು ಅರ್ಜಿಯನ್ನು 21 ಮೇ 2024ರ ಒಳಗೆ ಸಲ್ಲಿಸಬೇಕು.
  • ಅರ್ಜಿ ನಮೂನೆ ಪೂರ್ಣಗೊಂಡ ನಂತರ ಕೊನೆಯಲ್ಲಿ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡುವ ಮುಖಾಂತರ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
  • ಭರ್ತಿ ಮಾಡಿದ ಅರ್ಜಿ ನಮೂನೆಯ ಪ್ರತಿಯನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ.
  • ಪರೀಕ್ಷೆಯ ಸಮಯದಲ್ಲಿ ಡೌನ್ಲೋಡ್ ಮಾಡಿಕೊಂಡ ಅರ್ಜಿಯ ಪ್ರತಿಯು ಅಗತ್ಯವಿರುತ್ತದೆ.

ಅಭ್ಯರ್ಥಿಯು ಮೇಲಿನ ಎಲ್ಲಾ ಸೂಚನೆಗಳನ್ನು ಸರಿಯಾಗಿ ಪಾಲಿಸುವ ಮುಖಾಂತರ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸುವಿಕೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ: 22 ಏಪ್ರಿಲ್ 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21 ಮೇ 2024.

ಆತ್ಮೀಯ ಸ್ಪರ್ಧಾರ್ಥಿಗಳೆ, ನೀವೇನಾದರೂ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಯಸಿದರೆ ಈಗಿನಿಂದಲೇ ಅಧ್ಯಯನವನ್ನು ನಡೆಸುವುದು ಒಳ್ಳೆಯದು, ಏಕೆಂದರೆ ಪರೀಕ್ಷೆಯ ಸಮಯದಲ್ಲಿ ಹೆಚ್ಚಿನ ಅಂಕಗಳನ್ನು ಪಡೆದುಕೊಂಡು ಹುದ್ದೆಗಳನ್ನು ಪಡೆಯಲು ಸಹಾಯವಾಗುತ್ತದೆ. ಇಲ್ಲದಿದ್ದಲ್ಲಿ ನೀವು ಸಲ್ಲಿಸಿದ ಅರ್ಜಿ ನಮೂನೆಗೆ ಯಾವುದೇ ಮೌಲ್ಯ ಇಲ್ಲದಂತಾಗುತ್ತದೆ, ಆದ್ದರಿಂದ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಸರಿಯಾಗಿ ಅಧ್ಯಯನವನ್ನು ನಡೆಸಿ ಪರೀಕ್ಷಾ ಕೇಂದ್ರಕ್ಕೆ ತೆರಳಿ ಒಳ್ಳೆಯ ಅಂಕಗಳನ್ನು ಪಡೆದುಕೊಳ್ಳಿ.

ಆಯ್ಕೆಯ ವಿಧಾನ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅಧಿಸೂಚನೆ ಆಧಾರದ ಮೇಲೆ ಲಿಖಿತ ಪರೀಕ್ಷೆಯನ್ನು ನಡೆಸುವ ಮುಖಾಂತರ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ವೇತನ ಶ್ರೇಣಿ:

ಕರ್ನಾಟಕ ಸಾರಿಗೆ ಇಲಾಖೆಯ ಅಧಿಸೂಚನೆ ಆಧಾರದ ಮೇಲೆ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂಪಾಯಿ.33,450 ರಿಂದ 62,600 ರ ವರೆಗೆ ವೇತನವನ್ನು ನೀಡಲಾಗುತ್ತದೆ.

ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ಲಿಂಕ್ ಗಳು:

ಇದೇ ತರಹದ ಉಚಿತ ಮಾಹಿತಿಯನ್ನು ಪಡೆಯಲು ನಮ್ಮಟೆಲಿಗ್ರಾಂ ಮತ್ತು ವಾಟ್ಸಾಪ್ ಗ್ರೂಪ್ ಸೇರಿಕೊಳ್ಳಿ ಸೇರಲು ಇಲ್ಲಿ ಕೆಳಗೆ ಕ್ಲಿಕ್ ಮಾಡಿ..

Read more:

  1. KSAAD RECRUITMENT| ಕರ್ನಾಟಕ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ 2024, ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
  2. PDO RECRUITMENT| ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ 2024
  3. BNPL RECRUITMENT| ಭಾರತೀಯ ಪಶುಪಾಲನಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ 2024, ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment