Kisan Credit Card: ಇನ್ಮುಂದೆ ಎಲ್ಲ ರೈತರಿಗೂ ಪಶು ಕಿಸಾನ್ ಕಾರ್ಡ್ ಸೌಲಭ್ಯ, 03 ಲಕ್ಷದವರೆಗೆ ಸಾಲ

Kisan Credit Card: ಇನ್ಮುಂದೆ ಎಲ್ಲ ರೈತರಿಗೂ ಪಶು ಕಿಸಾನ್ ಕಾರ್ಡ್ ಸೌಲಭ್ಯ, 03 ಲಕ್ಷದವರೆಗೆ ಸಾಲ

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವೆರಡು, ದೇಶದಲ್ಲಿ ರೈತರ ಮುಂದುವರಿಯಬೇಕು ಅವರು ಆರ್ಥಿಕವಾಗಿ ಸಬಲರಾಗಬೇಕು, ಎಂದು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ, ಹೆಚ್ಚಿನ ಅಪ್ಡೇಟ್ ಗಾಗಿ ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ಈಗ ಸರ್ಕಾರವು ಕೃಷಿ ಜೊತೆಯಲ್ಲಿ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ರೈತರಿಗೆ ಸಹಾಯ ಮಾಡುವ ಸಲುವಾಗಿ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಅನ್ನು ಜಾರಿಗೆ ತಂದಿದೆ, ಇದರಿಂದ ಜಾನುವಾರುಗಳನ್ನು ಸಾಕಾಣಿಕೆ ಮಾಡುವವರಿಗೆ ಆರ್ಥಿಕ ನೆರವು(financial Support) ನೀಡಿದಂತಾಗುತ್ತದೆ. ಏನಿದು ಹೊಸ ಪಶು ಕಿಸಾನ್ ಕಾರ್ಡ್ ಯೋಜನೆ? ಇದರ ಉಪಯೋಗವೇನು? ಸೌಲಭ್ಯವನ್ನು ಪಡೆಯುವುದು ಹೇಗೆ? ಎಲ್ಲಾ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

WhatsApp Group Join Now
Telegram Group Join Now

ಪಶು ಕಿಸಾನ್ ಕ್ರೆಡಿಟ್ ಕಾರ್ಡ್;

ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅಂದರೆ, ನೀವು ಸರ್ಕಾರದಿಂದ ಸಾಲ ಪಡೆಯಲು ಕೊಡುವ ಕಾರ್ಡ ಆಗಿರುತ್ತದೆ. ನೀವು ಹಸು ಮತ್ತು ಎಮ್ಮೆಗಳ ಸಾಕಾಣಿಕೆಯನ್ನು ಮಾಡಲು ಈ ಕ್ರೆಡಿಟ್ ಕಾರ್ಡ್ ಮೂಲಕ ಸರ್ಕಾರದಿಂದ ಸಾಲವನ್ನು ಪಡೆಯಬಹುದು. ನೀವು ಬ್ಯಾಂಕುಗಳಲ್ಲಿ(Banks) ಅರ್ಜಿಯನ್ನು(Application) ಸಲ್ಲಿಸಿ, ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (kisan Credit Card) ಅನ್ನು ಪಡೆದು ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ನೀವು ಪಶು ಕ್ರೆಡಿಟ್ ಕಾರ್ಡ್ ಮೂಲಕ ಪಡೆದ ಸಾಲಕ್ಕೆ ಯಾವುದೇ ರೀತಿಯ ಗ್ಯಾರಂಟಿ ಇರುವುದಿಲ್ಲ, ದೇಶದ ಹಲವು ರಾಜ್ಯಗಳಲ್ಲಿ ಈ ಕಾಡುಗಳನ್ನು ನೀಡಲಾಗಿದ್ದು ಇದರಿಂದ ಪಶುಗಳ ನಿರ್ವಹಣೆಗೆ ಬೇಕಾದ ಎರಡರಿಂದ ಮೂರು ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು.

ಪಶು ಕಿಸಾನ್ ಕಾರ್ಡ್ ನಿಂದ ಸಿಗುವ ಸಾಲ;

ಈ ಕಾರ್ಡ್ ನಿಂದ ಒಂದು ಎಮ್ಮೆ ಸಾಕಾಣಿಕೆ ಮಾಡಲು 60,249 ರೂಪಾಯಿ ಸಾಲ ಸಿಗಲಿದೆ, ಹಾಗೆಯೇ ಒಂದು ಆಕಳನ್ನು ನಿರ್ವಹಣೆ ಮಾಡಲು 40,783 ರೂಪಾಯಿ ಸಾಲಗಳನ್ನು ನೀಡಲಾಗುತ್ತದೆ.

ನಿಮ್ಮ ಬಳಿ ಎಷ್ಟು ಎಮ್ಮೆ ಮತ್ತು ಎಷ್ಟು ಹಸು ಇದೆಯೋ ಅಷ್ಟಕ್ಕೆ ನೀವು ಸಾಲವನ್ನು ಪಡೆದುಕೊಳ್ಳಬಹುದು, 1.6 ಲಕ್ಷದವರೆಗಿನ ಸಾಲಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ನೀವು ಪಶು ಸಾಕಾಣಿಕೆ ಮಾಡಲು ಯಾವುದೇ ಕ್ರೆಡಿಟ್ ಕಾರ್ಡ್ ಇಲ್ಲದೆ ಸಾಲ ಪಡೆದರೆ 7% ಬಡ್ಡಿ ಕಟ್ಟಬೇಕಾಗುತ್ತದೆ, ಆದರೆ ಪಶು ಕಿಸಾನ್ ಕಾರ್ಡ್ ಮೂಲಕ ಪಡೆದ ಸಾಲಕ್ಕೆ 4% ಬಡ್ಡಿ ಕಟ್ಟಬೇಕಾಗುತ್ತದೆ.

ಯಾವ ಬ್ಯಾಂಕ್ಗಳಲ್ಲಿ ಸಾಲ ಸಿಗುತ್ತದೆ.

ದೇಶದ ಬಹುತೇಕ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ರೈತರಿಗೆ ಸಾಲ ಸಿಗುತ್ತದೆ. ಆಕ್ಸಿಸ್ ಬ್ಯಾಂಕ್(Axix Bank) ಹೆಚ್ ಡಿ ಎಫ್ ಸಿ ಬ್ಯಾಂಕ್(HDFC Bank) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State Bank Of INDIA) ಈ ಎಲ್ಲಾ ಬ್ಯಾಂಕ್ ಗಳಲ್ಲಿ, ಪಶು ಕಿಸಾನ್ ಕ್ರೆಡಿಟ್ ಕಾರ್ಡ(Kisan Credit Card) ಮೂಲಕ ಸಾಲವನ್ನು ನೀಡಲಾಗುತ್ತದೆ .

ಪಶು ಕಿಸಾನ್ ಕ್ರೆಡಿಟ್ ಕಾರ್ಡ ಪಡೆಯಲು ನೀವು ಬ್ಯಾಂಕಿಗೆ ಹೋಗಿ, ಅಪ್ಲಿಕೇಶನ್ ಫಾರ್ಮ್(Aplication Farm) ಅನ್ನು ಪಡೆದು, ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿ, KYC ಗೆ ಬೇಕಾಗಿರುವ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬೇಕು. ಬ್ಯಾಂಕ್ ಅಧಿಕಾರಿಗಳು ನೀವು ನೀಡಿದ ಎಲ್ಲಾ ದಾಖಲೆಗಳನ್ನು ಸರಿಯಾಗಿ ಚೆಕ್ ಮಾಡಿ, ಕೆಲವು ಸರಿ ಇದ್ದರೆ ಪಶು ಕಿಸಾನ್ ಕ್ರೆಡಿಟ್ ಕಾರ್ಡ(Kisan Card)ನ್ನು ನಿಮಗೆ ನೀಡುತ್ತಾರೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

  • ಭೂಮಿಯ ದಾಖಲೆಗಳು
  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ವೋಟರ್ ಐಡಿ
  • ಜಾನುವಾರಗಳ ಆರೋಗ್ಯದ ಬಗ್ಗೆ ಸರ್ಟಿಫಿಕೇಟ್
  • ಬ್ಯಾಂಕ್ ಅಕೌಂಟ್ ಡೀಟೇಲ್ಸ್
  • ಪಾಸ್ಪೋರ್ಟ್ ಸೈಜ್ ಫೋಟೋ

ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಂಡು, ಹತ್ತಿರವಿರುವ ಬ್ಯಾಂಕ್ ಶಾಖೆಗೆ(Bank Center) ಭೇಟಿ ನೀಡಿ, ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (kisan Credit Card) ಫಾರ್ಮ್ ಪಡೆದು ಅರ್ಜಿಯನ್ನು ಸಲ್ಲಿಸಿ ಸಾಲು ಸೌಲಭ್ಯವನ್ನು ಪಡೆದುಕೊಳ್ಳಬಹುದು.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment