ಕಂದಾಯ ಇಲಾಖೆ ನೇಮಕಾತಿ 2024:
ಕಂದಾಯ ಇಲಾಖೆಯಲ್ಲಿ, ಗ್ರಾಮ ಆಡಳಿತ ಅಧಿಕಾರಿ ಅಥವಾ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳು ಖಾಲಿ ಇದ್ದು, ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಈ ಹುದ್ದೆಗಳ ಬಗ್ಗೆ ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಇದೇ ತರಹದ ಎಲ್ಲಾ ಜೋಗ ವಾರ್ತೆಗಳನ್ನು ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆಯೂ ಬಿಡುಗಡೆಯಾಗಿದೆ, ಅಧಿಸೂಚನೆಯ ಪ್ರಕಾರ ಶೈಕ್ಷಣಿಕ ಅರ್ಹತೆ, ವೇತನ ಶ್ರೇಣಿ, ವಯೋಮಾನ ಪ್ರಕ್ರಿಯೆ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಸುಕಿಗೆ ಸಂಬಂಧಪಟ್ಟ ದಿನಾಂಕಗಳು, ಆಯ್ಕೆಯ ವಿಧಾನ ಹಾಗೂ ಹುದ್ದೆಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ ಅಭ್ಯರ್ಥಿಗಳು ಮಾಹಿತಿಯನ್ನು ಸರಿಯಾಗಿ ಓದಿ ಅರ್ಥೈಸಿಕೊಳ್ಳಿ ನಂತರ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ.
ಹುದ್ದೆಗಳಿಗೆ ಸಂಬಂಧಿಸಿದ ವಿವರಗಳು;
ಇಲಾಖೆಯ ಹೆಸರು | ಕರ್ನಾಟಕ ಕಂದಾಯ ಇಲಾಖೆ |
ಹುದ್ದೆಯ ಹೆಸರು | ಗ್ರಾಮ ಲೆಕ್ಕಾಧಿಕಾರಿ/ಗ್ರಾಮ ಆಡಳಿತ ಅಧಿಕಾರಿ |
ಖಾಲಿ ಇರುವ ಹುದ್ದೆಗಳು | 1000 |
ಉದ್ಯೋಗ ಸ್ಥಳ | ಕರ್ನಾಟಕ |
ವೇತನ ಶ್ರೇಣಿ | ಅಧಿಸೂಚನೆಯ ಪ್ರಕಾರ |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ ಮುಖಾಂತರ |
ಖಾಲಿ ಇರುವ ಹುದ್ದೆಗಳು:
ಕಂದಾಯ ಇಲಾಖೆಯು ಹೊರಡಿಸಿದ ಅಧಿಸೂಚನೆಯ ಪ್ರಕಾರ ಒಟ್ಟು 1000 ಗ್ರಾಮ ಆಡಳಿತ ಅಧಿಕಾರಿ /ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳು ಖಾಲಿ ಇವೆ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ವಿವರ: ಹುದ್ದೆಗಳನ್ನು ಜಿಲ್ಲಾ ವಾರ ವಿಂಗಡಿಸಲಾಗಿದೆ ಮಾಹಿತಿಯು ಕೆಳಗಿನಂತಿವೆ;
ಜಿಲ್ಲೆಗಳು | ಖಾಲಿ ಇರುವ ಹುದ್ದೆಗಳು |
ತುಮಕೂರು | 73 |
ಕಲಬುರಗಿ | 67 |
ಮೈಸೂರು | 66 |
ಮಂಡ್ಯ | 60 |
ಚಾಮರಾಜನಗರ | 55 |
ಹಾಸನ | 54 |
ರಾಮನಗರ | 51 |
ದಕ್ಷಿಣ ಕನ್ನಡ | 50 |
ಕೋಲಾರ | 45 |
ಚಿಕ್ಕಬಳ್ಳಾಪುರ | 42 |
ಬೆಂಗಳೂರು ಗ್ರಾಮಾಂತರ | 34 |
ಹಾವೇರಿ | 34 |
ಬೆಂಗಳೂರು ನಗರ | 32 |
ಚಿತ್ರದುರ್ಗ | 32 |
ಶಿವಮೊಗ್ಗ | 31 |
ಗದಗ | 30 |
ಬೀದರ್ | 24 |
ಚಿಕ್ಕಮಂಗಳೂರು | 23 |
ಉಡುಪಿ | 22 |
ಬಾಗಲಕೋಟೆ | 22 |
ಕೊಪ್ಪಳ | 19 |
ಬಳ್ಳಾರಿ | 17 |
ಧಾರವಾಡ | 12 |
ಯಾದಗಿರಿ | 09 |
ವಿಜಯಪುರ | 07 |
ಕೊಡಗು | 06 |
ರಾಯಚೂರು | 04 |
ವಿಜಯನಗರ | 13 |
ಉತ್ತರ ಕನ್ನಡ | 02 |
ಶೈಕ್ಷಣಿಕ ಅರ್ಹತೆ:
ಕಂದಾಯ ಇಲಾಖೆಯು ಹೊರಡಿಸಿದ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಅಥವಾ ವಿಶ್ವವಿದ್ಯಾಲಯದಿಂದ ದ್ವಿತೀಯ ಪಿಯುಸಿ ಇಲ್ಲವೇ ತತ್ಸಮಾನ, ಮೂರು ವರ್ಷಗಳ ಡಿಪ್ಲೋಮಾ ಮತ್ತು ಎರಡು ವರ್ಷಗಳ ಐಟಿಐ ಕೋರ್ಸ್ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.
ವಯೋಮಾನ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯ ಪ್ರಕಾರ ಕನಿಷ್ಠ 18 ವರ್ಷ ವಯೋಮಿತಿಯನ್ನು ಪೂರೈಸಿರಬೇಕು ಹಾಗೂ ಗರಿಷ್ಠವಾಗಿ 35 ವರ್ಷ ವಯೋಮಿತಿಯನ್ನು ಮೀರಿರಬಾರದು.
ಪ್ರವರ್ಗದ ಆಧಾರದ ಮೇಲೆ ವಯಸ್ಸಿನ ಸಡಿಲಿಕೆ:
- ಹಿಂದುಳಿದ ಅಭ್ಯರ್ಥಿಗಳಿಗೆ 03 ವರ್ಷಗಳ ಕಾಲ,
- ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 05 ವರ್ಷಗಳ ಕಾಲ ವಯಸ್ಸಿನ ಸಡಿಲಿಕೆಯನ್ನು ಮಾಡಲಾಗಿದೆ.
ಅರ್ಜಿ ಶುಲ್ಕದ ವಿವರಗಳು:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯ ಪ್ರಕಾರ ಪ್ರವರ್ಗದ ಆಧಾರದ ಮೇಲೆ ಅರ್ಜಿ ಶುಲ್ಕವನ್ನು ಪಾವತಿಸಬೇಕು.
- ಸಾಮಾನ್ಯ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂಪಾಯಿ.750/-
- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಪ್ರವರ್ಗ-1, ಮಾಜಿ ಸೈನಿಕ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ರೂಪಾಯಿ.500/-
- ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮುಖಾಂತರ ಪಾವತಿಸಬೇಕು.
ಶುಲ್ಕ ಪಾವತಿಸುವ ವಿಧಾನಗಳು:
- ಯುಪಿಐ (UPI)
- ನೆಟ್ ಬ್ಯಾಂಕಿಂಗ್ (NET BANKING)
- ಕ್ರೆಡಿಟ್ ಕಾರ್ಡ್ (CREDIT CARD)
- ಡೆಬಿಟ್ ಕಾರ್ಡ್ (DEBIT CARD)
ಅರ್ಜಿ ಸಲ್ಲಿಸುವಿಕೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ | 05 ಏಪ್ರಿಲ್ 20 24 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 04 ಮೇ 2024 |
ಶುಲ್ಕ ಪಾವತಿಸಲು ಕೊನೆಯ ದಿನಾಂಕ | 07 ಮೇ 2024 |
ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಡೆ ನೀಡಲಾದ ಎಲ್ಲಾ ಸೂಚನೆಗಳನ್ನು ಸರಿಯಾಗಿ ಪಾಲಿಸುವ ಮುಖಾಂತರ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಮಾಹಿತಿಯು ಕೆಳಗಿನಂತಿವೆ.
- ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸರಿಯಾಗಿ ಓದಿ ಅರ್ಥೈಸಿಕೊಂಡು ನಂತರ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ.
- ಅರ್ಜಿ ಸಲ್ಲಿಸುವ ದಿನಾಂಕವು 05 ಏಪ್ರಿಲ್ 2024 ರಿಂದ ಆರಂಭವಾಗಿ 04 ಮೇ ಚಾಲ್ತಿಯಲ್ಲಿ ಇರುತ್ತದೆ.
- ಅಭ್ಯರ್ಥಿಯು ಅರ್ಜಿಯನ್ನು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಸಲ್ಲಿಸಬೇಕು.
- ಕೆಳಗಡೆ ನೀಡಲಾದ ಅಧಿಕೃತ ಲಿಂಕ್ ಇಲ್ಲವೇ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.
- ಮೊದಲು ಅಧಿಕೃತ ಲಿಂಕ ಓಪನ್ ಮಾಡಿಕೊಳ್ಳಿ.
- ನಂತರ ಅಧಿಕೃತ ಪೇಜ್ ತೆರೆದುಕೊಳ್ಳುತ್ತದೆ, ಪೇಜ್ ನಲ್ಲಿ ಕೇಳಲಾಗಿರುವ ಎಲ್ಲ ದಾಖಲೆಗಳನ್ನು ಸರಿಪಡಿಸಿಕೊಂಡು ಇಟ್ಟುಕೊಳ್ಳಿ.
- ನಂತರ ಎಲ್ಲಾ ದಾಖಲೆಗಳನ್ನು ಸರಿಯಾಗಿ ಲಗತ್ತಿಸಬೇಕು.
- ಲಗತ್ತಿಸಿದ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ದಾಖಲೆಗಳ ಜೊತೆಗೆ ಅಭ್ಯರ್ಥಿಯ ಸಹಿ ಭಾವಚಿತ್ರ ಹೆಬ್ಬೆರಳಿನ ತಂಬ ಕೂಡ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ಮುಂದಿನ ಹಂತಕ್ಕೆ ಹೋಗುವ ಮೊದಲು ಲಗತ್ತಿಸಿದ ಎಲ್ಲಾ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿ ಏನಾದರೂ ತಪ್ಪಿದ್ದರೆ ಸರಿಪಡಿಸಬೇಕು.
- ನಂತರ ನಿಮ್ಮ ಪ್ರವರ್ಗದ ಆಧಾರದ ಮೇಲೆ ಅರ್ಜಿ ಶುಲ್ಕವನ್ನು ಪಾವತಿಸಿ.
- ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣ ಗೊಂಡೆ ನಂತರ, ಕೊನೆಯಲ್ಲಿ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ.
- ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯವೇನೆಂದರೆ ಅರ್ಜಿಯನ್ನು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಸಲ್ಲಿಸಬೇಕು ನಂತರ ಸಲ್ಲಿಸಿದ ಯಾವುದೇ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.
- ಭರ್ತಿ ಮಾಡಿದ ಅರ್ಜಿಯ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಇಟ್ಟುಕೊಳ್ಳಿ ಪರಿಚಯ ಸಮಯದಲ್ಲಿ ನಿಮಗೆ ಸಹಕಾರಿಯಾಗುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಮೇಲಿನ ಎಲ್ಲ ಸೂಚನೆಗಳನ್ನು ಸರಿಯಾಗಿ ಪಾಲಿಸುವ ಮುಖಾಂತರ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಆತ್ಮೀಯ ಸ್ಪರ್ಧಾರ್ಥಿಗಳೇ, ನೀವೇನಾದರೂ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಯಸಿದರೆ ಈಗಿನಿಂದಲೇ ಅಧ್ಯಯನವನ್ನು ನಡೆಸುವುದು ಒಳ್ಳೆಯದು, ಏಕೆಂದರೆ ಪರೀಕ್ಷೆ ಸಮಯದಲ್ಲಿ ಹೆಚ್ಚಿನ ಅಂಕಗಳನ್ನು ಪಡೆದುಕೊಂಡು ಹುದ್ದೆಗಳನ್ನು ಪಡೆಯಲು ಸಹಕಾರಿಯಾಗುತ್ತದೆ ಇಲ್ಲದಿದ್ದಲ್ಲಿ ನೀವು ಸಲ್ಲಿಸಿದ ಅರ್ಜಿ ನಮೂನೆಗೆ ಯಾವುದೇ ಮೌಲ್ಯ ಇಲ್ಲದಂತಾಗುತ್ತದೆ, ಆದ್ದರಿಂದ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಸರಿಯಾಗಿ ಅಧ್ಯಯನನ್ನು ನಡೆಸಿ ಪರೀಕ್ಷೆ ಕೇಂದ್ರಕ್ಕೆ ತೆರಳಿ ಒಳ್ಳೆಯ ಗಳನ್ನು ಪಡೆದು ಹುದ್ದೆಗಳನ್ನು ಪಡೆದುಕೊಳ್ಳಿ.
ಆಯ್ಕೆಯ ವಿಧಾನ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ ನಂತರ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಅಭ್ಯರ್ಥಿಗಳಿಗೆ ನೇರ ಸಂದರ್ಶನ ಮಾಡುವ ಮುಖಾಂತರ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ವೇತನ ಶ್ರೇಣಿ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಧಿಸೂಚನೆಯ ಪ್ರಕಾರ ಮಾಸಿಕವಾಗಿ ರೂಪಾಯಿ.21,400 ರಿಂದ 42,000ದವರೆಗೆ ವೇತನವನ್ನು ನೀಡಲಾಗುತ್ತದೆ.
ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ಲಿಂಕ್ ಗಳು:
ಅಧಿಕೃತ ವೆಬ್ಸೈಟ್ | kandaya.karnataka.gov.in |
ಅಧಿಕೃತ ಅಧಿಸೂಚನೆ | ಡೌನ್ಲೋಡ್ ಮಾಡಿಕೊಳ್ಳಿ |
ಜಿಲ್ಲಾ ವಾರು ಹುದ್ದೆಗಳ ವಿವರ | ಡೌನ್ಲೋಡ್ ಮಾಡಿಕೊಳ್ಳಿ |
ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ. |
ಓದುಗರ ಗಮನಕ್ಕೆ: ನಮ್ಮ ಕನ್ನಡ ನೀಡ್ಸ್ ತಂಡವು ತನ್ನೆಲ್ಲ ಓದುಗರಿಗೆ ನಿಖರವಾದ ಮತ್ತು ಸತ್ಯವಾದ ಮಾಹಿತಿಗಳನ್ನು ಒದಗಿಸುತ್ತದೆ ಯಾವುದೇ ಸುಳ್ಳು ಅಥವಾ ಅನಧಿಕೃತ ಮಾಹಿತಿಗಳನ್ನು ಒದಗಿಸುವುದಿಲ್ಲ.
ನಮ್ಮ ವೆಬ್ ಸೈಟ್ ನಿಖರವಾದ ಮತ್ತು ಸತ್ಯವಾದ ಮಾಹಿತಿಗಳನ್ನು ಒದಗಿಸುತ್ತದೆ ಯಾವುದೇ ಅನಧಿಕೃತ ಸುದ್ದಿಗಳನ್ನು ಪ್ರಚಾರ ಮಾಡುವುದಿಲ್ಲ.
ಇದನ್ನು ಓದಿ:
- Free Laptop: ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್! ಯಾರಿಗೆಲ್ಲ ಲ್ಯಾಪ್ಟಾಪ್ ಸಿಗುತ್ತೆ? ಅರ್ಜಿ ಸಲ್ಲಿಸಲು ಇಲ್ಲಿ ಮಾಡಿ.
- Electricity Bill: ಗೃಹಜೋತಿ ಇದ್ದರೂ ಸಹ ನಿಮ್ಮ ಕರೆಂಟ್ ಬಿಲ್ ಹೆಚ್ಚಿಗೆ ಬರುತ್ತಿದೆಯಾ? ಕೂಡಲೇ ಈ ಕೆಲಸವನ್ನು ತಪ್ಪದೆ ಮಾಡಿ!
- HAL RECRUITMENT| ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ 2024
- HSRP NUMBER PLATE: ಹೊಸದಾಗಿ ಬೈಕ್ ಕಾರ್ ಖರೀದಿಸುವವರಿಗೆ HSRP ವಿಚಾರವಾಗಿ, ಸುಪ್ರೀಂಕೋರ್ಟ್ ನಿಂದ ಮಹತ್ವದ ಆದೇಶ!
- HSRP Number Plate: ಇದುವರೆಗೂ HSRP ನಂಬರ್ ಪ್ಲೇಟ್ ಹಾಕದವರಿಗೆ, RTO ಹೊಸ ನಿರ್ಧಾರವನ್ನು ಕೈಗೆತ್ತಿಕೊಂಡಿದೆ.