ರಾಜ್ಯ ಸರ್ಕಾರವು, ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಹಾಯವಾಗುವಂತೆ ಕೃಷಿಗಳಿಗೆ ನಿರಂತರ ಹಾಗೂ ಸಮರ್ಪಕ ವಿದ್ಯುತ್ ಕಲ್ಪಿಸುವ ನಿಟ್ಟಿನಲ್ಲಿ 80ರಷ್ಟು ಸಹಾಯಧನದಲ್ಲಿ ಸೋಲಾರ್ ವಿದ್ಯುತ್ ಘಟಕ ಅಳವಡಿಸಲು ಅರ್ಹ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗುತ್ತಿದೆ. ಸೋಲಾರ್ ಪಂಪ್ ಸೆಟ್ ಅಳವಡಿಕೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ ಮಾಹಿತಿಯನ್ನು ಸಂಪೂರ್ಣವಾಗಿ ಓದಿ. ಇದೇ ತರಹದ ಇನ್ನು ಹೆಚ್ಚಿನ ಕೃಷಿ ವಿಷಯಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ. ಸೇರಲು ಇಲ್ಲಿ ಕ್ಲಿಕ್ ಮಾಡಿ.
ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿರುವ ಉದ್ದೇಶವೇನೆಂದರೆ, ರೈತರಿಗೆ ಕೃಷಿ ಚಟುವಟಿಕೆಗಳಿಗಾಗಿ ನಿರಂತರ ಕರೆಂಟ್ ಒದಗಿಸುವ ಮಹತ್ವಕಾಂಕ್ಷಿ ಯೋಜನೆಯಾಗಿದೆ. ಯೋಜನೆಯ ಹೆಸರಿನೆಂದರೆ ‘ಕುಸುಮ-ಬಿ ‘ ಯೋಜನೆ, ಯೋಜನೆಯ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಾಯೋಜಿತ ಯೋಜನೆಯಾಗಿದೆ, ಈ ಯೋಜನೆ ಅಡಿಯಲ್ಲಿ ಎಲ್ಲಾ ಅರ್ಹ ರೈತರಿಗೆ ಪ್ರಯೋಜನವನ್ನು ನೀಡಲಾಗುತ್ತದೆ.
ಸೌರಘಟಕಗಳನ್ನು ಅಳವಡಿಸಲು ತಗಲುವ ವೆಚ್ಚ;
ಸರ್ಕಾರವು ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಹಾಯವಾಗುವಂತೆ ನಿರಂತರ ವಿದ್ಯುತ್ತನ್ನು ಕಲ್ಪಿಸುವ ನಿಟ್ಟಿನಲ್ಲಿ, ಜೊತೆಗೆ ರೈತರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ, ರಾಜ್ಯ ಮತ್ತು ಕೇಂದ್ರ ಸರ್ಕಾರವು ಜೊತೆಗೂಡಿ ಶೇಕಡ 80 ರಷ್ಟು ಸಹಾಯಧನವನ್ನು ನೀಡಲಿದೆ. ಇದರಲ್ಲಿ ರಾಜ್ಯ ಸರ್ಕಾರವು ಶೇಕಡಾ 50 ರಷ್ಟು ಸಹಾಯಧನವನ್ನು ಮತ್ತು ಕೇಂದ್ರ ಸರ್ಕಾರವು ಶೇಕಡಾ 30 ರಷ್ಟು ಸಹಾಯಧನವನ್ನು ನೀಡುತ್ತದೆ. ರೈತರು ಸೋಲಾರ್ ಘಟಗಳನ್ನು ಅಳವಡಿಸಲು ಕೇವಲ 20 ರಷ್ಟು ಹಣವನ್ನು ಮಾತ್ರ ಬರಿಸಬೇಕಾಗುತ್ತದೆ.
ಯಾವ ರೈತರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿದೆ;
- ರಾಜ್ಯ ರೈತರು ಈ ಯೋಜನೆಯನ್ನು ಪಡೆಯಬೇಕೆಂಬ ಉದ್ದೇಶದಿಂದ 10,000 ಕ್ಕಿಂತ ಹೆಚ್ಚಿನ ಅಧಿಕ ಮೊತ್ತವನ್ನು ಪಾವತಿಸಿ ಅರ್ಜಿಯನ್ನು ಸಲ್ಲಿಸಿದ್ದಾರೆ, ಆದರೆ ಸರ್ಕಾರವು ಕೊರೆದ ಅಥವಾ ತೆರೆದ ಬಾವಿಗಳ ಟ್ರಾನ್ಸ್ಫಾರ್ಮರ್ ಕೇಂದ್ರದಿಂದ 500 ಮೀಟರ್ ಗಿಂತ ಹೆಚ್ಚಿನ ದೂರದಲ್ಲಿರುವ ರೈತರಿಗೆ ಮೊದಲ ಆದ್ಯತೆಯನ್ನು ನೀಡುತ್ತದೆ.
- ರಾಜ್ಯದ ಹಲವು ರೈತರು 50 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಿ, ಪಂಪ್ಸೆಟ್ ಗಳನ್ನು ಅಳವಡಿಸಲು ಈ ಯೋಜನೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ,ಆದರೆ ಸರ್ಕಾರವು ಕೊರೆದ ಅಥವಾ ತೆರೆದ ಬಾವಿಗಳ ಟ್ರಾನ್ಸ್ಫಾರ್ಮರ್ ಕೇಂದ್ರದಿಂದ 500 ಮೀಟರ್ ಗಿಂತ ಹೆಚ್ಚಿನ ದೂರದಲ್ಲಿರುವ ರೈತರಿಗೆ ಎರಡನೇ ಆದ್ಯತೆಯನ್ನು ನೀಡುತ್ತದೆ.
- ರೈತರು ಸೋಲಾರ್ ಪಂಪ್ ಸೆಟ್ ಗಳನ್ನು ಅಳವಡಿಕೆ ಮಾಡಲು ಹಣವನ್ನು ಪಾವತಿಸಿದ್ದಾರೆ ಆದರೆ ಸರ್ಕಾರವು ಕೊರೆದು ಅಥವಾ ತೆರೆದ ಬಾವಿಗಳ ಟ್ರಾನ್ಸ್ಫಾರ್ಮರ್ ಕೇಂದ್ರದಿಂದ 500 ಮೀಟರ್ ಗಿಂತ ಹೆಚ್ಚಿನ ದೂರದಲ್ಲಿರುವ ರೈತರಿಗೆ ಮೂರನೇ ಆದ್ಯತೆಯನ್ನು ನೀಡುತ್ತದೆ.
- ಈ ಯೋಜನೆ ಅಡಿಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿದ್ದ ರೈತರು 20 % ಹಣವನ್ನು ಪಾವತಿಸಿ ಹಾಗೂ ಕೊರೆದ ಅಥವಾ ತೆರೆದ ಬಾವಿಗಳು 500 ಮೀಟರ್ ಗಿಂತ ಒಳಗಿದ್ದು, ಅಂತಹ ರೈತರಿಗೆ ನಾಲ್ಕನೇ ಆದ್ಯತೆಯನ್ನು ನೀಡಲಾಗುತ್ತದೆ.
- ಸರ್ಕಾರವು ಈ ವರ್ಗದಲ್ಲಿ ನೋಂದಾಯಿಸುವ ರೈತರಿಗೆ, ಮೊದಲು ನೋಂದಾಯಿಸಿದವರಿಗೆ ಮೊದಲು ನೀಡುವ ಆಧಾರದ ಮೇಲೆ ಸೋಲಾರ್ ಪಂಪ್ ಸೆಟ್ ಗಳನ್ನು ಅಳವಡಿಕೆ ಮಾಡಲು ನಿರ್ಧರಿಸಿದೆ.
ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
https://souramitra.com/solar/beneficiary/register/Kusum-Yojana-Component-B
ಮೇಲೆ ಕಾಣಿಸಿದ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡುವ ಮುಖಾಂತರ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.