Jio Offer: ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ! ಕೇವಲ ರೂ.10ಕ್ಕೆ 2ಜಿಬಿ 5ಜಿ ಡಾಟಾ; 98 ದಿನಗಳಿಗೆ ರೂ.999 ರ ಹೊಸ ರಿಚಾರ್ಜ್ ಪ್ಲಾನ್!
ದೇಶದ ಅತಿ ದೊಡ್ಡ ಖಾಸಗಿ ಕಂಪನಿಯಾದ ರಿಲಯನ್ಸ್ ಜಿಯೋ (Reliance Jio) ತನ್ನೆಲ್ಲ ಗ್ರಾಹಕರಿಗೆ ಮಗದೊಂದು ಸಿಹಿ ಸುದ್ದಿ ಒಂದನ್ನು ನೀಡಿದೆ. ಇದೀಗ ಅತಿ ಹೆಚ್ಚು ದಿನಗಳ ದೀರ್ಘಾವಧಿಯ ರಿಚಾರ್ಜ್ ಪ್ಲಾನ್ (Jio Offer) ಅನ್ನು ಘೋಷಣೆ ಮಾಡಿದೆ. ನೀವು ಅತಿ ಕಡಿಮೆ ಬೆಲೆಗೆ ಹೆಚ್ಚು ದಿನಗಳ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಯಾಕ್ ಅನ್ನು ಪಡೆಯಬಹುದು.
999 ರೂಪಾಯಿಗಳಿಗೆ 98 ದಿನಗಳ ವ್ಯಾಲಿಡಿಟಿ!
5G ಅನಿಯಮಿತ ಇಂಟರ್ನೆಟ್ ಸೌಲಭ್ಯ ಹೊಂದಿರುವ ರೂ.999 ರಿಚಾರ್ಜ್ ಪ್ಲಾನ್ ಇದಾಗಿದ್ದು, 98 ದಿನಗಳ ದೀರ್ಘಾವಧಿಯ ವ್ಯಾಲಿಡಿಟಿ ಹೊಂದಿದೆ. ಇದರಲ್ಲಿ ಒಟ್ಟು 196 ಜಿಬಿ ಡಾಟಾ(GB Data) ದೊರೆಯಲಿದೆ, ಅಂದರೆ ದಿನಕ್ಕೆ 2GB ಡಾಟಾ ಕೇವಲ 10ರೂ. ಗೆ ನಿಮಗೆ ಸಿಗಲಿದೆ. ನಿಮ್ಮ ದೈನಂದಿನ ಡಾಟಾ ಖಾಲಿಯಾದರೆ, ಡಾಟ 65 kbps ಗೆ ಸ್ಪೀಡ್ ಸೀಮಿತಗೊಳ್ಳಲಿದೆ. ಜೊತೆಗೆ ದಿನಕ್ಕೆ 100 ಎಸ್ ಎಂ ಎಸ್(SMS) ಗಳು ಜೊತೆಗೆ ಅನಿಯಮಿತ ಕರೆ(Unlimited Calls) ಸೌಲಭ್ಯ ಉಚಿತವಾಗಿ ದೊರೆಯಲಿದೆ
ಜಿಯೋ ಕೊಡಲಿದೆ ಉಚಿತ ಸೌಲಭ್ಯ!
ರೂಪಾಯಿ.999 ರಿಚಾರ್ಜ್ ಪ್ಲಾನ್ ನಲ್ಲಿ ನಿಮಗೆ ಜಿಯೋ ಕ್ಲೌಡ್(Jio Cloud), ಜಿಯೋ ಸಿನಿಮಾ (Jio Cinema) ಮತ್ತು ಜಿಯೋ ಟಿವಿ (Jio TV) ಉಚಿತ ಚಂದದಾರಿಕೆಯನ್ನು ನಿಮಗೆ ನೀಡಲಿದೆ. ಆದರೆ ನೀವು ಜಿಯೋ ಸಿನಿಮಾ ಪ್ರೀಮಿಯಂ(Jio Cinema Premium) ಅನ್ನು ಮಾತ್ರ ಉಚಿತವಾಗಿ ಪಡೆಯಲು ಸಾಧ್ಯವಿಲ್ಲ ಎಂಬುದನ್ನು ನೆನಪಿಡಿ.
ದೀಪಾವಳಿ ಹಬ್ಬಕ್ಕೆ ಧಮಾಕ ಆಫರ್!
ದೀಪಾವಳಿಯ ಪ್ರಯುಕ್ತ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ, ಜಿಯೋ ಏರ್ ಫೈಬರ್ (Jio Air Fiber) ಸಂಪರ್ಕವನ್ನು ಒಂದು ವರ್ಷದವರೆಗೆ ಉಚಿತವಾಗಿ ಕೊಡಲಾಗುವುದು ಎಂದು ಕಂಪನಿ(Comapany) ಘೋಷಣೆ ಮಾಡಿದೆ. ಆದರೆ ಈ ಕೊಡುಗೆ ರಿಲಯನ್ಸ್ ಜಿಯೋ(Relaince ಜಿಯೋ) ಅಥವಾ ಮೈ ಜಿಯೋ ಆಪ್(My jio App) ನಲ್ಲಿ 20 ಸಾವಿರ ರೂಪಾಯಿಗಳವರೆಗಿನ ಖರೀದಿ ಮಾಡಿದವರಿಗೆ ಈ ಆಫರ್(Offer) ಲಭ್ಯವಿದೆ. ಈ ಕೊಡುಗೆ ಸೆಪ್ಟೆಂಬರ್ 18 ರಿಂದ ನವೆಂಬರ್ 3, 2024 ರವರೆಗೆ ಮಾತ್ರ ಚಾಲ್ತಿಯಲ್ಲಿರಲಿದೆ, ಹೆಚ್ಚಿನ ಮಾಹಿತಿಗೆ ಹತ್ತಿರವಿರುವ ಜಿಯೋ ಆಫೀಸ್ ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ.