ಹೊಸ ಪಡಿತರ ಚೀಟಿ ವಿತರಣೆ. ಇಲ್ಲಿದೆ ಸಂಪೂರ್ಣ ಮಾಹಿತಿ:
ಕನ್ನಡ ನೀಡ್ಸ್ ಓದುಗರಿಗೆ ಎಲ್ಲರಿಗೂ ನಮಸ್ಕಾರ. ಇಂದಿನ ವರದಿಯ ಮುಖ್ಯಾಂಶವೇನೆಂದರೆ, ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ರೇಷನ್ ಕಾರ್ಡ್ ವಿತರಣೆಯ, ದಿನಾಂಕ ಈಗಾಗಲೇ ಪ್ರಕಟಣೆಯಾಗಿದೆ. ಪ್ರತಿದಿನ ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಇದೆ ತರಹದ ಉಚಿತ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಗಳನ್ನು ಪಡೆಯಲು ಕೆಳಗಡೆ ಬಲಭಾಗದಲ್ಲಿರುವ ರೆಡ್ ಬಟನ್ ಅನ್ನು ಕ್ಲಿಕ್ ಮಾಡುವ ಮುಖಾಂತರ ನಮ್ಮನ್ನು ಫಾಲೋ ಮಾಡಿಕೊಳ್ಳಬಹುದು.
ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿಯನ್ನು ಸಲ್ಲಿಸಿ, ಹಲವಾರು ದಿನಗಳಿಂದ ಕಾರ್ಡ್ ಯಾವಾಗ ನಮ್ಮ ಕೈ ಸೇರುತ್ತೋ ಎಂದು ಕಾಯುತ್ತಿರುವ ರಾಜ್ಯದ ಜನರಿಗೆ ಈ ವಿಷಯವು ಸಂತಸ ತಂದಿರುತ್ತದೆ. ರಾಜ್ಯದ 2.5 ಲಕ್ಷಕ್ಕೂ ಹೆಚ್ಚು ಜನರು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದ ಕಾಡಿನ ಸ್ಥಿತಿಗತಿಗಳ ಬಗ್ಗೆ ಚೆಕ್ ಮಾಡುವುದರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ, ಈಗಲು ಆ ಕಾರ್ಯ ನಡೆಯುತ್ತಿದೆ. ಆಹಾರ ಮತ್ತು ನಾಗರಿಕ ಇಲಾಖೆಯು (Department of Food and Civil )ಯಾರೆಲ್ಲಾ ಹೊಸ ಬಿಪಿಎಲ್ ಕಾರ್ಡ್ ಗೆ ಅರ್ಹರು ಅವರಿಗೆ ಬಿಪಿಎಲ್ ರೇಷನ್ ಕಾರ್ಡ್ ಮೊದಲು ನೀಡಲು ಮುಂದಾಗಿದೆ. ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಚೀಟಿಯು ಬಹುಬೇಗನೆ ದೊರೆಯಲಿದೆ. ವಿಷಯಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಳನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಿ.
ಪಡಿತರ ಚೀಟಿ ವಿತರಣೆ ದಿನಾಂಕ ಯಾವಾಗ?
ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಇಂದಿನ ಸರ್ಕಾರವು ಅರ್ಜಿ ಸಲ್ಲಿಸಿದ 2.95 ಲಕ್ಷ ಕಾರ್ಡ್ಗಳನ್ನು ವಿತರಣೆ ಮಾಡದೆ ಹಾಗೆಯೇ ತನ್ನ ಬಳಿ ಉಳಿಸಿಕೊಂಡಿತ್ತು. ಈಗಿನ ಸರ್ಕಾರವು ಉಳಿದುಕೊಂಡಿರುವ ಕಾರ್ಡ್ಗಳನ್ನು ಮತ್ತೆ ಪರಿಶೀಲನೆ ಮಾಡಿ, ಅದರಲ್ಲಿ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಯಾವುದು ಎಂದು ಪರಿಶೀಲನೆ ನಡೆಸಿ. ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಿರುವ ಅರ್ಜಿಗಳನ್ನು ಮಾರ್ಚ್ 31ರೊಳಗೆ ಪರಿಶೀಲನೆ ನಡೆಸಿ ಏಪ್ರಿಲ್ 01 ರಿಂದ ವಿತರಣೆ ಮಾಡಲಾಗುವುದೆಂದು ಈಗಿನ ಆಹಾರ ಸಚಿವರಾದ ಕೆ.ಎಚ್. ಮುನಿಯಪ್ಪನವರು ಸ್ಪಷ್ಟ ಪ್ರತಿಕ್ರಿಯೆ ತಿಳಿಸಿದ್ದಾರೆ.
ಸಚಿವರು, ಸರ್ಕಾರದ ಬಳಿ ಉಳಿದುಕೊಂಡಿರುವ ಕಾರ್ಡ್ಗಳನ್ನು ಪರಿಶೀಲನೆ ಮಾಡಿ ಈಗಾಗಲೇ 57,000 ಹೊಸಪಡಿತರ ಚೀಟಿಗಳನ್ನು ಹಂಚಲಾಗಿದೆ ಎಂದು ಹೇಳಿದ್ದಾರೆ. ಮೆಡಿಕಲ್ ಫೆಸಿಲಿಟಿಗಾಗಿ ಅರ್ಜಿ ಕೊಟ್ಟವರ ರೇಷನ್ ಕಾರ್ಡ್ ಗಳನ್ನು ಆದಷ್ಟು ಬೇಗ ವಿತರಿಸಲು ಸೂಚಿಸಿದ್ದೇವೆ ಹಾಗೆಯೇ ಈಗಾಗಲೇ ಒಟ್ಟು 744 ಫಲಾನುಭವಿಗಳಿಗೆ ಆರೋಗ್ಯ ತುರ್ತು ಕಾರಣಕ್ಕೆ ಬಿಪಿಎಲ್ ಕಾರ್ಡ್ ಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ. ಅರ್ಜಿ ಸಲ್ಲಿಸಿದ ಎಲ್ಲಾ ಅರ್ಹ ಫಲಾನುಭವಿಗಳಿಗೆ ಕಾರ್ಡ್ ಸಿಗಲಿದೆ ಎಂದು ಸಚಿವರು ಹೇಳಿದ್ದಾರೆ.
ಯಾವೆಲ್ಲ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಬಿಪಿಎಲ್ ಕಾರ್ಡುಗಳನ್ನು ಪಡೆಯಬಹುದು.
ಅಭ್ಯರ್ಥಿಯು ಬಿಪಿಎಲ್ ಕಾರ್ಡ್ಗಳನ್ನು ಪಡೆಯಲು ಇರಬೇಕಾದ ಅರ್ಹತೆಗಳೇನೆಂದರೆ, ಮಾಹಿತಿಯು ಕೆಳಕಂಡಂತಿವೆ:
- ಅಭ್ಯರ್ಥಿಯು ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಿ, ತಿಂಗಳಿಗೆ ರೂ.6,400/- ಕ್ಕಿಂತ ಕಡಿಮೆ ಹಾಗೂ ನಗರ ಪ್ರದೇಶಗಳಲ್ಲಿ ರೂ.11,850/- ಕ್ಕಿಂತ ಕಡಿಮೆ ಗಳಿಸುತ್ತಿರಬೇಕು
- ಅಭ್ಯರ್ಥಿಯು ಯಾವುದೇ ವೈಟ್ ಬೋರ್ಡ್ ಕಾರ್ ಗಳನ್ನು ಹೊಂದಿರಬಾರದು.
- ಸರ್ಕಾರಿ ನೌಕರಿಯಲ್ಲಿ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳು ಬಿಪಿಎಲ್ ಕಾರ್ಡ ಗೆ ಅರ್ಹರಾಗಿರುವುದಿಲ್ಲ.
- ಅಭ್ಯರ್ಥಿಯು ಆದಾಯ ತೆರಿಗೆಯನ್ನು ಪಾವತಿಸುತ್ತಿದ್ದರೆ ಅವನು ಅರ್ಹನಾಗಿರುವುದಿಲ್ಲ.
ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮೇಲಿನ ಯಾವುದೇ ವೃತ್ತಿಯಲ್ಲಿ ಅಥವಾ ಆದಾಯದ ಮೂಲಗಳನ್ನು ಮೀರಿ ಸಾಗುತ್ತಿದ್ದರೆ ಅವನು ಪಡಿತರ ಚೀಟಿಗೆ ಅರ್ಹನಾಗಿರುವುದಿಲ್ಲ. ಜೊತೆಗೆ ಇನ್ನು ಕೆಲವು ಅಭ್ಯರ್ಥಿಗಳಿಗೆ ಬಿಪಿಎಲ್ ಕಾರ್ಡ್ ವಿತರಿಸುವುದಿಲ್ಲ. ಮಾಹಿತಿಯು ಕೆಳಗಿನಂತಿದೆ .
- ವಕೀಲರು ಮತ್ತು ಲೆಕ್ಕ ಪರಿಶೋಧಕರು.
- ಸಹಕಾರಿ ಸಂಸ್ಥೆಗಳ ಕಾಯಂ ಉದ್ಯೋಗಿಗಳು.
- ಆಸ್ಪತ್ರೆಗಳಲ್ಲಿನ ವೈದ್ಯರು.
- ವ್ಯಾಪಾರಸ್ಥರು (ಸಣ್ಣ ಅಂಗಡಿಗಳು ಸೈಕಲ್ ಗಳು ಅಥವಾ ತಳ್ಳು ಗಾಡಿಗಳನ್ನು ಹೊರತುಪಡಿಸಿ)
- ವ್ಯಾಪಾರಿಗಳು ಅಥವಾ ವ್ಯಾಪಾರಸ್ಥರು.
ಈ ಮೇಲಿನ ಮಾಹಿತಿಯಲ್ಲಿರುವ ಅಭ್ಯರ್ಥಿಗಳು ಬಿಪಿಎಲ್ ಕಾರ್ಡ್ ಗಳನ್ನು ಪಡೆದುಕೊಳ್ಳಲು ಅರ್ಹರಾಗಿರುವುದಿಲ್ಲ. ನಿಯಮಗಳನ್ನು ಮೀರಿ ಕಾರ್ಡ್ ಗಳನ್ನು ಪಡೆದುಕೊಂಡಿದ್ದರೆ, ಅವರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಹೊಸ ಪಡಿತರ ಚೀಟಿ (New Ration Card):
ಅಭ್ಯರ್ಥಿಗಳು ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಿ, ಅದಕ್ಕಾಗಿ ಕಾಯುತ್ತಿರುವ ಸಮಯವು 2 ರಿಂದ 3 ವರ್ಷಕ್ಕೆ ಮುಟ್ಟಿದೆ. ಈಗ ಈ ಮಾಹಿತಿಯಿಂದ ಅವರಿಗೆ ಸಂತಸದ ಭರವಸೆಯು ಮೂಡಿದೆ. ಮಾರ್ಚ್ 31ರ ಒಳಗೆ ಎಲ್ಲಾ ಅರ್ಜಿಗಳನ್ನು ಪರಿಶೀಲನೆ ಮಾಡಿ, ಹೊಸ ಪಡಿತರ ಚೀಟಿ ವಿತರಣೆ ಮಾಡಲಾಗುವುದು ಎಂದು ಆಹಾರ ಇಲಾಖೆಯ ಸಚಿವರಾದ ಕೆ.ಎಚ್. ಮುನಿಯಪ್ಪ ಅವರು ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ.
ಸರ್ಕಾರವು ಕೆಲವು ತುರ್ತು ಅಗತ್ಯತೆಗಳನ್ನು ಪೂರೈಸಲು ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಈ ಅರ್ಹ ಫಲಾನುಭವಿಗಳು ಮಾತ್ರ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು, ಮಾಹಿತಿಯು ಕೆಳಗಿನಂತಿವೆ.
- ಮದುವೆ ಆದ ನಂತರ ಪ್ರತ್ಯೇಕವಾಗಿ ವಾಸಿಸುವ ದಂಪತಿಗಳು ಅರ್ಜಿ ಸಲ್ಲಿಸಬಹುದು.
- ಹೊಸದಾಗಿ ಮದುವೆಯಾಗಿ ಸಂಸಾರ ಆರಂಭಿಸುವ ದಂಪತಿಗಳು ಅರ್ಜಿ ಸಲ್ಲಿಸಬಹುದು.
- ಕುಟುಂಬದಿಂದ ಬೇರೆಯಾಗಿ ಜೀವನ ನಡೆಸುವ ದಂಪತಿಗಳು ಅರ್ಜಿಯನ್ನು ಸಲ್ಲಿಸಬಹುದು.
- ಪಡಿತರ ಚೀಟಿ ಹೊಂದಿದ ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸುವ ದಂಪತಿಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದು
- ವೈಯಕ್ತಿಕ ಜೀವನವನ್ನು ನಡೆಸುವ ಅಭ್ಯರ್ಥಿಗಳು ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಬಹುದು.
ಪಡಿತರ ಚೀಟಿಯಲ್ಲಿ ಯಾವೆಲ್ಲಾ ತಿದ್ದುಪಡಿಗೆ ಅವಕಾಶಗಳಿವೆ: (Ration card correction):
ರೇಷನ್ ಕಾರ್ಡ್ ಗಳಲ್ಲಿರುವ ತಿದ್ದುಪಡಿ ಅವಕಾಶಗಳು ಕೆಳಗಿನಂತಿವೆ:
- ಹೊಸ ಸದಸ್ಯರ ಸೇರ್ಪಡೆ
- ತಪ್ಪುಗಳ ತಿದ್ದುಪಡಿ
- ವಿಳಾಸ ಬದಲಾವಣೆ ಸೇರಿದಂತೆ ಇನ್ನಿತರ ಅಂಶಗಳನ್ನು ರೇಷನ್ ಕಾರ್ಡ್ ಗಳಲ್ಲಿ ಬದಲಾವಣೆ ಮಾಡಲು ಸರ್ಕಾರವು ಅವಕಾಶಗಳನ್ನು ಕಲ್ಪಿಸಿದೆ. ಜೊತೆಗೆ ಹೊಸ ರೇಷನ್ ಕಾರ್ಡ್ ಗಳಿಗೆ ಆಧೀಸಲ್ಲಿಸಲು ಸಹ ಅವಕಾಶಗಳನ್ನು ನೀಡಲಾಗಿದೆ.
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರವು ರೂಪಿಸಿರುವ ವಿವಿಧ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಅವುಗಳು ಯಾವುದೆಂದರೆ, ಗ್ರಾಮ ಒನ್ (Gram one),ಬೆಂಗಳೂರು ಒನ್(Bengaluru one)ಮತ್ತು ಇತರ ಸರ್ಕಾರಿ ಸೇವಾ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಇಲ್ಲವೇ ನೀವು ಆನ್ಲೈನ್(Online) ಮೂಲಕ ಸೇವಾ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಆನ್ಲೈನ್ ಪೋರ್ಟಲ್ ಗಳು ನಿರ್ದಿಷ್ಟ ಸಮಯದಲ್ಲಿ ಮಾತ್ರ ಚಾಲ್ತಿಯಲ್ಲಿ ಇರುತ್ತದೆ. ಸೇವಾ ಕೇಂದ್ರದ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡು ಅರ್ಜಿಯನ್ನು ಸಲ್ಲಿಸಿ. ಅರ್ಜಿ ಸಲ್ಲಿಸುವಾಗ ಯಾವುದೇ ತೊಂದರೆಗಳಾದಲ್ಲಿ ಹತ್ತಿರವಿರುವ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ.
ಉತ್ತಮ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ಹಾಗೂ ಬಂಧುಗಳೆಲ್ಲರಿಗೂ ಶೇರ್ ಮಾಡಿ. ಮಾಹಿತಿಯನ್ನು ಓದಿದ ಎಲ್ಲರಿಗೂ ಧನ್ಯವಾದಗಳು.
ಪ್ರತಿದಿನ ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಎಲ್ಲ ತರಹದ ಸರ್ಕಾರಿ ಯೋಜನೆಗಳು, ಉದ್ಯೋಗ ವಾರ್ತೆಗಳು ಹಾಗೂ ಇನ್ನಿತರ ಪ್ರಚಲಿತ ಘಟನೆಗಳ ಮಾಹಿತಿಗಳನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಸೇರಿಕೊಳ್ಳಿ. ಸೇರಲುಇಲ್ಲಿ ಕ್ಲಿಕ್ ಮಾಡಿ.
ಓದುಗರ ಗಮನಕ್ಕೆ: ನಮ್ಮ ಕನ್ನಡ ನೀಡ್ಸ್ ತಂಡವು ತನ್ನೆಲ್ಲ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಒದಗಿಸುತ್ತದೆ ಯಾವುದೇ ಸುಳ್ಳು ಅಥವಾ ಅನಧಿಕೃತ ಮಾಹಿತಿಗಳನ್ನು ಒದಗಿಸುವುದಿಲ್ಲ.
ನಾವು ಈ ವೆಬ್ಸೈಟ್ ಮಾಡಿರುವ ಉದ್ದೇಶ ನಿಮ್ಮಿಂದ ಯಾವುದೇ ರೀತಿ ಹಣವನ್ನು ಪಡೆಯುವುದು ಅಲ್ಲ. ನಮ್ಮೆಲ್ಲ ಮಾಹಿತಿಗಳನ್ನು ಓದಲು ನೀವು ಯಾವುದೇ ರೀತಿ ಹಣವನ್ನು ಪಾವತಿಸಬೇಕಾಗಿಲ್ಲ. ಎಲ್ಲಾ ಮಾಹಿತಿಯು ನಿಮಗೆ ಉಚಿತವಾಗಿ ದೊರೆಯುತ್ತದೆ. ನಿಖರವಾದ ಮಾಹಿತಿಗಳನ್ನು ಒದಗಿಸುವುದು ನಮ್ಮ ವೆಬ್ಸೈಟ್ ನ ಪ್ರಮುಖ ಉದ್ದೇಶವಾಗಿದೆ.