HSRP UPDATE:
ಎಲ್ಲಾ ವಾಹನಗಳಿಗೂ HSRP ನಂಬರ್ ಪ್ಲೇಟ್ ಅನ್ನು ಕಡ್ಡಾಯ ಮಾಡಲಾಗುತ್ತಿದ್ದು ಇದು ದೇಶದಾದ್ಯಂತ ಬಹಳ ಪ್ರಚಲಿತವಾದ ಸುದ್ದಿಯಾಗಿದೆ ಎನ್ನಬಹುದು, ಹಿಂದಿನ ಆದೇಶದಂತೆ ಹಳೆಯ ನೊಂದಾಯಿತ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಮಾಡಲಾಗಿತ್ತು. ಸರ್ಕಾರವು ಈ ನಂಬರ್ ಪ್ಲೇಟ್ ಅಳವಡಿಕೆಯ ವಿಧಾನವನ್ನು ಕಡ್ಡಾಯವೆಂದು ಅನೇಕ ಬಾರಿ ತಿಳಿಸಿದರು ಕೂಡ, ಪೂರ್ಣ ಪ್ರಮಾಣದಲ್ಲಿ ವಾಹನಕ್ಕೆ ನಂಬರ್ ಪ್ಲೇಟ್ ಅಳವಡಿಕೆ ಮಾಡಲಿಲ್ಲ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿದೆ, ಹೊಸ ಆದೇಶ ಏನೆಂಬುದನ್ನು ತಿಳಿಯೋಣ ಬನ್ನಿ. ಇದೇ ತರದ ಇನ್ನೂ ಹೆಚ್ಚಿನ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ. ಸೇರಲುಇಲ್ಲಿ ಕ್ಲಿಕ್ ಮಾಡಿ.
2019 ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಅನೇಕ ವಾಹನಗಳಿಗೆ HSRP (High Security Registration Plate) ಅಗತ್ಯವಾಗಿದ್ದು, ಈ ನಂಬರ್ ಪ್ಲೇಟ್ ನಲ್ಲಿ ನೂತನ ವ್ಯವಸ್ಥೆ ಜಾರಿಯಲ್ಲಿ ಇರಲಿದೆ. ಸರ್ಕಾರದ ಆದೇಶದಂತೆ ಹಳೆ ವಾಹನಗಳಿಗೆ ಇದನ್ನು ಅಳವಡಿಕೆ ಮಾಡಿಕೊಳ್ಳುವಂತೆ, ಹೊಸ ವಾಹನಕ್ಕೆ ಕಂಪನಿಯು ಅಳವಡಿಕೆ ಮಾಡಿಕೊಡುತ್ತಿದೆ. ಸರ್ಕಾರ ಹೊಸ ವಾಹನಗಳಿಗೂ ಕೂಡ ನಂಬರ್ ಪ್ಲೇಟ್ ಕಡ್ಡಾಯ ಮಾಡಲು ಸೂಚನೆ ನೀಡುತ್ತಿದ್ದಂತೆ ಈ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ಹೊರಡಿಸಿದೆ.
ಏನಿದು ಹೊಸ ಆದೇಶ? ಮಂಡಿಸಿದವರು ಯಾರು?
ಎಲ್ಲಾ ವಾಹನಗಳಿಗೂ HSRP ನಂಬರ್ ಪ್ಲೇಟ್ ಅನ್ನು ಕಡ್ಡಾಯವಾಗಿ ಅಳವಡಿಸುವಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿದೆ. ನಂಬರ್ ಪ್ಲೇಟ್ ಹೊಂದಿಲ್ಲದ ಹಳೆಯ ವಾಹನದ ಮಾಲೀಕರು ಆನ್ಲೈನ್ ಮೂಲಕ ರಿಜಿಸ್ಟ್ರೇಷನ್ ಮಾಡಿ ಡೀಲರ್ ಅಥವಾ ಹೋಂ ಡೆಲಿವರಿ ಮಾಡಿಕೊಳ್ಳಬಹುದು. ಅದರಂತೆಯೆ ಹೊಸ ವಾಹನಗಳಿಗೂ ಕೂಡ HSRP ನಂಬರ್ ಪ್ಲೇಟ್ ಕಡ್ಡಾಯವಾಗಿದ್ದು, ಅದನ್ನು ಆಯಾ ಕಂಪನಿಯ ಶೋ ರೂಮ್ ನವರು ಮಾಡಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿದೆ.
ಆದೇಶವನ್ನು ಪಾಲಿಸದಿದ್ದರೆ ಸೂಕ್ತ ಕ್ರಮ ಜಾರಿ
ಈ ವಿಚಾರಕ್ಕೆ ಸಂಬಂಧಿಸಿದಂತೆ ಪರಿಶೀಲನೆಯನ್ನು ಮಾಡಲು ಸರ್ಕಾರವು ಸೂಕ್ತ ತಂಡವನ್ನು ಸಿದ್ಧವಾಗಿಸಿದೆ. ಮೋಟಾರ್ ವಾಹನಗಳ ತಪಾಸಣೆಯ ಅಧಿಕಾರಿಗಳನ್ನು ಬಳಸಿಕೊಂಡು ಎಲ್ಲೆಲ್ಲಿ ನಿಯಮಗಳ ಉಲ್ಲಂಘನೆ ಆಗುತ್ತದೆ ಎಂಬ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಹೊಸ ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಸಿದೆ ಇರುವ ಶೋ ರೂಮ್ ನವರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದ್ದಾರೆ.
ಭಾರಿ ದಂಡ ವಿಧಿಸಲಾಗುತ್ತದೆ
ಸರ್ಕಾರವು ಹೊಸದಾಗಿ ವಾಹನಗಳನ್ನು ಖರೀದಿ ಮಾಡಿದ ಗ್ರಾಹಕರಿಗೆ ಶೋ ರೂಮ್ ನವರು HSRP ನಂಬರ ಪ್ಲೇಟ್ ಹಾಕಿಸಿಕೊಡಬೇಕು, ಅದೇ ತರಹ ಹಳೆ ವಾಹನ ಮತ್ತು ವಾಹನ ಖರೀದಿ ಮಾಡಿ ಒಂದೆರಡು ವರ್ಷವಾಗಿದ್ದರೆ ಅಂತವರ ವಾಹನಕ್ಕೆ ಹೊಸ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು, ಇಲ್ಲವಾದರೆ ಅವರ ವಿರುದ್ಧ ಭಾರಿ ದಂಡ ವಿಧಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿದೆ.