ಇಂದು ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ವಾಹನಗಳ ಸುರಕ್ಷತೆ ದೃಷ್ಟಿಯಿಂದ ಸಾರಿಗೆ ಇಲಾಖೆಯು ಕೆಲವೊಂದು ಹೊಸ ಹೊಸ ನಿಯಮಗಳನ್ನು(NEW RULES) ಜಾರಿಗೆ ತರುತ್ತಲೇ ಇದೆ. ಈಗಾಗಲೇ ಟ್ರಾಫಿಕ್ ನಿಯಮಗಳನ್ನು ಮತ್ತಷ್ಟು ತೀವ್ರಗೊಳಿಸಿದ್ದು ವಾಹನ ಸವಾರರಿಗೆ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದೇ ರೀತಿ ಇಂದು ದೇಶಾದ್ಯಂತ ವಾಹನ ನೋಂದಣಿ ಸಂಖ್ಯೆ ಫಲಕ(HSRP) ಕಡ್ಡಾಯವಾಗಿ ಅಳವಡಿಕೆ ಮಾಡಬೇಕು ಎನ್ನುವ ನಿಯಮಗಳನ್ನು ಕೂಡ ರಾಜ್ಯ ಸರ್ಕಾರವು ಜಾರಿಗೆ ಮಾಡಿದೆ. ಇನ್ನು ಹೆಚ್ಚಿನ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ಇನ್ನು ನೋಂದಣಿ ಮಾಡಿಲ್ಲ?
ಈ ಬಗ್ಗೆ ನೋಂದಣಿ ಮಾಡುವ ಕುರಿತಂತೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಹೆಚ್ಚಿನ ವಾಹನ ಮಾಲೀಕರು ಈ ಬಗ್ಗೆ ಮನದಟ್ಟು ಮಾಡಿಕೊಂಡಿಲ್ಲ. ಈ ಹಿಂದೆ 2023ರ ನವೆಂಬರ್ 17ರ ವರೆಗೆ ಎಚ್.ಎಸ್.ಆರ್.ಪಿ(HSRP) ಅಳವಡಿಕೆ ಮಾಡುವಂತೆ ಸೂಚನೆಯನ್ನು ನೀಡಲಾಗಿತ್ತು. ಅದರ ಬಳಿಕ ಫೆಬ್ರವರಿ 17 ಕೊನೆಯ ದಿನಾಂಕ ಎಂದು ಹೇಳಲಾಗಿತ್ತು, ಬಳಿಕ ಮತ್ತೆ ಸಮಯಾವಕಾಶವನ್ನು ನೀಡಲಾಗಿದೆ, ಅದೇ ರೀತಿ ಈಗ ಕೊನೆಯದಾಗಿ ಮೇ 31ರ ಒಳಗೆ HSRP Number Plate ಅಳವಡಿಕೆ ಮಾಡಲು ಅವಕಾಶವನ್ನು ನೀಡಲಾಗಿದೆ.
ಕಡ್ಡಾಯ ನಿಯಮ ಜಾರಿ!
ಈಗಾಗಲೇ ಸುಮಾರು 52 ಲಕ್ಷ ವಾಹನಗಳು HSRP ನೋಂದಣಿ ಅಳವಡಿಕೆ ಮಾಡಿಕೊಂಡಿದ್ದು ಇನ್ನು ಶೇಕಡ. 75ರಷ್ಟು ಅಂದರೆ 1.48 ಕೋಟಿ ವಾಹನಗಳು HSRP ಅಳವಡಿಸಿಕೊಳ್ಳಬೇಕಿದೆ. 2019ರ ಏಪ್ರಿಲ್ 01 ರ ಮೊದಲು ವಾಹನ ಖರೀದಿ ಮಾಡಿದ್ದವರು, ಈ ನಂಬರ್ ಪ್ಲೇಟ್ ಕಡ್ಡಾಯವಾಗಿ ಅಳವಡಿಕೆ ಮಾಡಬೇಕು. ವಾಹನದ ಭದ್ರತೆ ಹಾಗೂ ಸುರಕ್ಷತೆ ಮೋಟಾರ್ ಕಾಯಿದೆ 1989 ಸೆಕ್ಷನ್ 90 ಹಾಗೂ 51ರ ಅನ್ವಯ ಈ ನಿಯಮ ಕಡ್ಡಾಯ ಎಂಬುದನ್ನು ಜಾರಿ ಮಾಡಲಾಗಿದೆ.
HSRP ಬಳಕೆಯಿಂದ ವಾಹನವನ್ನು ಕಳುವು ಮಾಡಿದರೆ ಅಥವಾ ವಾಹನಕ್ಕೆ ನಕಲಿ HSRP Number Plate ಹಾಕಿದರೆ ಪತ್ತೆ ಹಚ್ಚುವುದು ಸುಲಭ ಹಾಗಾಗಿ ಈ ನಿಯಮವನ್ನು ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಹೊಸ ವಾಹನ ಖರೀದಿ ಮಾಡಿದರೆ show room ನವರೇ ನಂಬರ್ ಪ್ಲೇಟ್ ಹಾಕಿಸಿಕೊಡಬೇಕು ಎಂಬ ನಿಯಮ ಕೂಡ ಜಾರಿಗೆ ಬಂದಿದೆ.
ದಂಡ ವಿಧಿಸಲಾಗುತ್ತದೆ
ಈಗಾಗಲೇ ವಾಹನ ನೋಂದಣಿ ಮಾಡಲು ರಾಜ್ಯ ಸಾರಿಗೆ ಇಲಾಖೆಯು ಹಲವು ಬಾರಿ ಅವಕಾಶ ನೀಡಿದ್ದು, ಇದೀಗ ಮೇ 31ರವರೆಗೆ HSRP ಪಡೆಯಲು ಮತ್ತು ನೋಂದಣಿಯನ್ನು ಮಾಡಿಕೊಳ್ಳಲು ಅವಕಾಶವನ್ನು ನೀಡಿದೆ. ಇಷ್ಟು ಬಾರಿ ಅವಕಾಶ ನೀಡಿದರು ಕೂಡ ವಾಹನ ನೋಂದಣಿ ಮಾಡಲು ವಾಹನ ಸವಾರರು ನಿರಾಸಕ್ತಿ ಹೂಡಿದ್ದು, ಜೂನ್ 01 ರಿಂದ HSRP ಇಲ್ಲದ ವಾಹನಗಳಿಗೆ ದಂಡ ವಿಧಿಸಲು ಈಗಾಗಲೇ ನಿರ್ಧರಿಸಲಾಗಿದೆ. ಹಾಗಾಗಿ HSRP ಇಲ್ಲದ ವಾಹನಗಳಿಗೆ ನಿಯಮದಂತೆ ರೂ.500 ರಿಂದ 1,000 ದಂಡ ವಿದಿಸುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ಈಗಾಗಲೇ ಮಾಹಿತಿಯನ್ನು ನೀಡಿದ್ದಾರೆ. HSRP ನಂಬರ್ ಪ್ಲೇಟ್ ಅಳವಡಿಸಿಕೊಂಡದೆ ಇರುವವರು ನಂಬರ್ ಪ್ಲೇಟ್ ಹಾಕಿಸಿದರೆ ಒಳ್ಳೆಯದು. ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಮ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.