Kotak Suraksha Scholership: 2024-25 ನೇ ಸಾಲಿನ ಕೋಟಕ್ ಸೆಕ್ಯೂರಿಟಿ ಅಡಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಕೋಟಕ್ ಸುರಕ್ಷಾ ಸ್ಕಾಲರ್ಶಿಪ್ ಪ್ರೋಗ್ರಾಮ್ ಅನ್ನು ಘೋಷಣೆ ಮಾಡಿದೆ. ಶಾಲಾ ವಿದ್ಯಾರ್ಥಿಗಳು ಆರ್ಥಿಕವಾಗಿ ಮುಂದೆ ಬಂದು, ತಮ್ಮ ಶೈಕ್ಷಣಿಕ ಗುರಿಯನ್ನು ಅಭಿವೃದ್ಧಿಪಡಿಸಲು, ಸಹಾಯವಾಗುವಂತೆ, ಈ ಸ್ಕಾಲರ್ಶಿಪ್ ಅನ್ನು ಕೋಟಕ್ ಸೆಕ್ಯೂರಿಟಿ ಕಂಪನಿಯು ಜಾರಿಗೆ ತಂದಿದೆ. ಈ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ ಮಾಹಿತಿಯನ್ನು ಸರಿಯಾಗಿ ಓದಿ, ಇನ್ನೂ ಹೆಚ್ಚಿನ ವಿದ್ಯಾರ್ಥಿ ವೇತನದ ಅಪ್ಡೇಟ್ಗಾಗಿ ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ. ಸೇರಲು ಇಲ್ಲಿ ಕ್ಲಿಕ್ ಮಾಡಿ.
ವಿದ್ಯಾರ್ಥಿ ವೇತನದ ವಿವರಗಳು:
ಇಲಾಖೆಯ ಹೆಸರು | ಕೋಟಕ್ ಸೆಕ್ಯೂರಿಟೀಸ್ |
ವಿದ್ಯಾರ್ಥಿ ವೇತನದ ಹೆಸರು | ಕೋಟಕ್ ಸುರಕ್ಷಾ ಸ್ಕಾಲರ್ಶಿಪ್ ಪ್ರೋಗ್ರಾಮ್ |
ವಿದ್ಯಾರ್ಥಿ ವೇತನದ ಮೊತ್ತ | ರೂ.50,000 |
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
- ಈ ವಿದ್ಯಾರ್ಥಿ ವೇತನಕ್ಕೆ 9 ರಿಂದ 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
- ಹಿಂದಿನ ತರಗತಿಯಲ್ಲಿ 50% ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು.
- ವಿಕಲಚೇತನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
- ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ.3,20,000 ಗಿಂತ ಹೆಚ್ಚಿರಬಾರದು.
- ಯಾವುದೇ ಪಿಡಬ್ಲ್ಯೂಡಿ ಅರ್ಜಿ ಸಲ್ಲಿಸಬಹುದು.
- ಈ ವಿದ್ಯಾರ್ಥಿ ವೇತನಕ್ಕೆ ಕೋಟಕ್ ಸೆಕ್ಯೂರಿಟಿ ಸಿಬ್ಬಂದಿಗಳ ಮಕ್ಕಳು ಅರ್ಹರಲ್ಲ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
- ರೇಷನ್ ಕಾರ್ಡ್ /ಆಧಾರ್ ಕಾರ್ಡ್/ ವೋಟರ್ ಐಡಿ ಯಾವುದಾದರೊಂದು ಗುರುತಿನ ಚೀಟಿ ಹೊಂದಿರಬೇಕು.
- ಈಗಿನ ವರ್ಷದ ಶಿಕ್ಷಣದ ಪ್ರವೇಶ ದಾಖಲೆ ಇರಬೇಕು.
- ಹಿಂದಿನ ವರ್ಷದಲ್ಲಿ ತೇರ್ಗಡೆಯಾದ ಶೈಕ್ಷಣಿಕ ಅಂಕಪಟ್ಟಿ.
- ಆದಾಯ ಪ್ರಮಾಣ ಪತ್ರ
- ಅಂಗವಿಕಲ ವಿದ್ಯಾರ್ಥಿ ಎಂಬ ಪ್ರಮಾಣ ಪತ್ರ.
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
https://www.buddy4study.com/page/kotak-suraksha-scholarship-program
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಮೇಲೆ ಕಾಣಿಸಿದ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡುವ ಮುಖಾಂತರ, ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ ಸರಿಯಾದ ದಾಖಲೆಗಳನ್ನು ನೀಡಿ.