HMD PULSE ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್‌ಫೋನ್‌ ಲಾಂಚ್‌ ಆಗಿದೆ! ಲಕ್ಷಣಗಳು ಏನಿದೆ?

HMD ಕೊನೆಗೂ ತನ್ನ ಬ್ರ್ಯಾಂಡ್‌(Brand) ಅಡಿಯಲ್ಲಿ ಮೂರು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಪಲ್ಸ್, ಪಲ್ಸ್ + ಮತ್ತು ಪಲ್ಸ್ ಪ್ರೊ ಫೋನ್‌ಗಳನ್ನು (Pulse, Pulse + and Pulse Pro smartphone) ನೀವು ನೋಡಬಹುದಾಗಿದೆ. ಪ್ರತಿನಿತ್ಯ ಹೊಸ ಹೊಸ ಸ್ಮಾರ್ಟ್ ಫೋನ್ ಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ವ್ಯಾಟ್ಸಪ್ ಚಾನೆಲ್ ಜಾಯಿನ್ ಆಗಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

HMD ಇದೀಗ ಪಲ್ಸ್, ಪಲ್ಸ್ ಪ್ಲಸ್‌ ಮತ್ತು ಪಲ್ಸ್ ಪ್ರೊ(Pulse, Pulse + and Pulse Pro smartphone) ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಿದೆ, ಈ ಮೂರು ಮಾದರಿಗಳು ಎಂಟ್ರಿ ಲೆವೆಲ್‌(Entry level) ಲಕ್ಷಣವನ್ನು ಪಡೆದುಕೊಂಡಿವೆ. ಜೊತೆಗೆ ಪಲ್ಸ್ ಪ್ರೊ ಮಾದರಿಯು 50 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮರಾ ಮತ್ತು ಹೊಸ ಸೆಲ್ಫಿ ಗೆಸ್ಚರ್ ನ್ಯಾವಿಗೇಶನ್ ಲಕ್ಷಣದ ಆಯ್ಕೆ ಪಡೆದುಕೊಂಡಿದೆ. ಹಾಗಾದರೆ, ಈ ಮೂರು ಫೋನ್‌ಗಳ ಪ್ರಮುಖ ಫೀಚರ್ಸ್‌ ಮತ್ತು ಇವುಗಳ ಬೆಲೆ ವಿವರಗಳ ಸಂಪೂರ್ಣ ಮಾಹಿತಿ ಕೆಳಕಂಡಂತಿವೆ, ಹೆಚ್ಚಿನ ಮಾಹಿತಿಗೆ ನಮ್ಮ ವ್ಯಾಟ್ಸಪ್ ಚಾನೆಲ್ ಜಾಯಿನ್ ಆಗಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

HMD ಇದೀಗ ಪಲ್ಸ್, ಪಲ್ಸ್ + ಮತ್ತು ಪಲ್ಸ್ ಪ್ರೊ(Pulse, Pulse + and Pulse Pro smartphone) ಸ್ಮಾರ್ಟ್‌ಫೋನ್‌: HMD Pulse ಡಿವೈಸ್‌ಗಳನ್ನು ದುರಸ್ತಿ ಮಾಡುವಂತೆ ಸುಲಭವಾಗಿ ವಿನ್ಯಾಸಗೊಳಿಸಲಾಗಿದೆ. ಹೆಚ್‌ಎಮ್‌ಡಿ(HMD) ಇದನ್ನು ‘ಜನ್ 1 ರಿಪೇರಿಬಿಲಿಟಿ(Gen 1 Reperiblity)’ ಎಂದು ಕರೆಯುತ್ತದೆ. ಇದರರ್ಥ ಮಾಲೀಕರು ಮುರಿದ ಡಿಸ್‌ಪ್ಲೇ(Display), ಬಾಗಿದ ಚಾರ್ಜಿಂಗ್ ಪೋರ್ಟ್(Charging Port) ಅನ್ನು ಹಾಗೂ ಹಳೆಯ ಬ್ಯಾಟರಿಯನ್ನು ಬದಲಾಯಿಸಬಹುದು, ಬಳಕೆದಾರರು ಈ ರಿಪೇರಿಗಳನ್ನು ಮಾಡಲು iFixit ನಿಂದ ಕಿಟ್ ಗಳನ್ನು ಖರೀದಿಸಬಹುದು.

WhatsApp Group Join Now
Telegram Group Join Now

ಹೆಚ್‌ಎಮ್‌ಡಿ ಪಲ್ಸ್, ಹೆಚ್‌ಎಮ್‌ಡಿ ಪಲ್ಸ್ ಪ್ಲಸ್, ಮತ್ತು ಹೆಚ್‌ಎಮ್‌ಡಿ ಪಲ್ಸ್ ಪ್ರೊ (HMD Pulse, Pulse + and Pulse Pro smartphone)ಫೀಚರ್ಸ್‌; ಈ ಸ್ಮಾರ್ಟ್‌ಫೋನ್‌ಗಳು 720p ರೆಸಲ್ಯೂಶನ್, 90Hz ರಿಫ್ರೆಶ್ ದರ ಮತ್ತು 600 ನಿಟ್ಸ್‌ ವರೆಗಿನ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಇರುವ 6.65 ಇಂಚಿನ ಎಲ್‌ಇಡಿ ಡಿಸ್‌ಪ್ಲೇಯನ್ನು ಹೊಂದಿದೆ, ಇದರೊಂದಿಗೆ ಯೂನಿಸೋಕ್‌ T606 ಪ್ರೊಸೆಸರ್‌ನಿಂದ ಕಾರ್ಯವನ್ನು ನಿರ್ವಹಿಸಲಿದೆ.

ಇನ್ನು ಈ ಪಲ್ಸ್ ಮಾದರಿಯಲ್ಲಿ 4GB/6GB RAM ಮತ್ತು ಪಲ್ಸ್ ಪ್ರೊ ಮತ್ತು ಪಲ್ಸ್ ಪ್ಲಸ್ ಮಾದರಿಗಳಲ್ಲಿ 4GB/6GB/8GB RAM ಸ್ಟೋರೇಜ್ ಫೋನ್‌ಗಳನ್ನು ನೀವು ಕಾಣಬಹುದು. ಪ್ರೊ ಮತ್ತು ಪ್ಲಸ್ ಮಾದರಿಗಳು 128GB ವರೆಗೆ ಸಂಗ್ರಹಣೆಯೊಂದಿಗೆ ಬರುತ್ತವೆ, ಆದರೆ ಸಾಮಾನ್ಯ ಪಲ್ಸ್ 64GB ಇಂಟರ್‌ ಸ್ಟೋರೇಜ್‌ ಮಾತ್ರ ಪಡೆದಿದೆ, ಹಾಗೆಯೆ ಈ ಎಲ್ಲಾ ಮೂರು ಫೋನ್‌ಗಳು ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್(SD Card Slat) ಮೂಲಕ 256GB ವರೆಗೆ ವಿಸ್ತರಿಸಬಹುದಾದ ಇಂಟರ್‌ ಸ್ಟೋರೇಜ್‌ ಸೌಲಭ್ಯವನ್ನು ನೀಡಲಿವೆ.

ಈ ಫೋನ್‌ಗಳು ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನಲ್ಲಿ ರನ್‌ ಆಗಲಿದ್ದು, ಹೆಚ್‌ಎಮ್‌ಡಿ(HMD) ಎರಡು ವರ್ಷದ ಪ್ರಮುಖ ಓಎಸ್‌(OS) ನವೀಕರಣಗಳು ಮತ್ತು ಮೂರು ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ನೀಡುವುದಾಗಿ ತಿಳಿಸಿದೆ. ಇನ್ನು ಪಲ್ಸ್(Pulse) 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದ್ದರೆ, ಪ್ಲಸ್(Plus) ಮತ್ತು ಪ್ರೊ(Pro) ಮಾದರಿಗಳು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ.

ಸೆಕೆಂಡರಿ ಕ್ಯಾಮೆರಾವು ಎಲ್ಲಾ ಮೂರು ಫೋನ್‌ಗಳಲ್ಲಿ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್(Megapixel Depth Sensor) ಹೊಂದಿದೆ. ಪಲ್ಸ್(Pulse) ಮತ್ತು ಪಲ್ಸ್ ಪ್ಲಸ್(Pulse Plus) ಸ್ಮರ್ಟ್‌ಫೋನ್‌ಗಳು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದರೆ, ಪಲ್ಸ್ ಪ್ರೊ(Pulse Pro) Smart Phone ಬರೋಬ್ಬರಿ 50 ಮೆಗಾಪಿಕ್ಸೆಲ್ ಕ್ಯಾಮೆರಾ(Megapixel camera)ವನ್ನು ಹೊಂದಿದೆ, ಈ ಮೂಲಕ ಸೆಲ್ಫಿ ಪ್ರಿಯರು ಈ Phone ಅನ್ನು ಸುಲಭವಾಗಿ ಖರೀದಿ ಮಾಡಬಹುದು.

ಇನ್ನು ಬ್ಯಾಟರಿ ವಿಚಾರಕ್ಕೆ ಬಂದರೆ ಪಲ್ಸ್, ಪಲ್ಸ್ ಪ್ಲಸ್ ಮತ್ತು ಪಲ್ಸ್ ಪ್ರೊ(HMD Pulse, Pulse + and Pulse Pro smartphone) ಸ್ಮಾರ್ಟ್ ಫೋನ್ ಗಳು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಪ್ಲಸ್ ಮಾದರಿಯು 20W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಿದರೆ ಸಾಮಾನ್ಯ ಮತ್ತು ಪ್ಲಸ್ ಮಾದರಿಯ Phone 10W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರೊಂದಿಗೆ ಈ ಫೋನ್‌ಗಳು 3.5mm ಹೆಡ್‌ಫೋನ್ ಜ್ಯಾಕ್(Headphone jack), 4G, ವೈ ಫೈ(Wifi) 5 (ac), ಬ್ಲೂಟೂತ್(blutooth) ಆವೃತ್ತಿ 5.0 ಮತ್ತು ಎನ್‌ಎಫ್‌ಸಿ(NFC) ನಂತಹ ಕನೆಕ್ಟಿವಿಟಿ ಆಯ್ಕೆಯನ್ನು ಪಡೆದುಕೊಂಡಿದೆ.

ಹೆಚ್‌ಎಮ್‌ಡಿ ಪಲ್ಸ್(HMD Pulse), ಹೆಚ್‌ಎಮ್‌ಡಿ ಪಲ್ಸ್ ಪ್ಲಸ್(HMD Pulse+), ಮತ್ತು ಹೆಚ್‌ಎಮ್‌ಡಿ ಪಲ್ಸ್ ಪ್ರೊ(HMD Pulse Pro) ಬೆಲೆ, ಪಲ್ಸ್ ಬೆಲೆ ಯುರೋ(Euro) 140 (ಸುಮಾರು 12,500 ರೂ.ಗಳು), ಪಲ್ಸ್ ಪ್ಲಸ್ ಬೆಲೆ ಯುರೋ(Euro) 160 (ಸುಮಾರು 14,500 ರೂ.ಗಳು) ಮತ್ತು ಪಲ್ಸ್ ಪ್ರೊ ಬೆಲೆ ಯುರೋ(Euro) 180 (ಸುಮಾರು 16,000 ರೂ.ಗಳು). ಹೆಚ್‌ಎಮ್‌ಡಿ(HMD) ಡಿವೈಸ್‌ಗಳು ಭಾರತದಲ್ಲಿ ಲಭ್ಯವಿರುತ್ತದೆ ಎಂದು ಈಗಾಗಲೇ ಘೋಷಣೆ ಮಾಡಿರುವುದರಿಂದ ಈ ಫೋನ್‌ಗಳನ್ನು ಶೀಘ್ರದಲ್ಲೇ ಭಾರತದಲ್ಲಿ ನಿರೀಕ್ಷಿಸಬಹುದು. ಇನ್ನು ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಆಗಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment