Gruha Lakshmi Scheme: ಗೃಹಲಕ್ಷ್ಮಿ ಯೋಜನೆ ಬಂದ್? ಜುಲೈ 31ರ ಬಳಿಕ ಯೋಜನೆಗೆ ಹೊಸ ರೂಲ್ಸ್ ಜಾರಿ! ಇಲ್ಲಿದೆ ಸಂಪೂರ್ಣ ಮಾಹಿತಿ!

Gruha Lakshmi Scheme: ಗೃಹಲಕ್ಷ್ಮಿ ಯೋಜನೆ ಬಂದ್? ಜುಲೈ 31ರ ಬಳಿಕ ಯೋಜನೆಗೆ ಹೊಸ ರೂಲ್ಸ್ ಜಾರಿ! ಇಲ್ಲಿದೆ ಸಂಪೂರ್ಣ ಮಾಹಿತಿ!

ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎನ್ನುವ ಕಾರಣಕ್ಕಾಗಿ ಯೋಜನೆಯನ್ನು ಜಾರಿಗೆ ತಂದಿತು, ಈ ಯೋಜನೆಯಡಿ ಎಲ್ಲಾ ಫಲಾನುಭವಿಗಳ ಖಾತೆಗೆ ಪ್ರತಿ ತಿಂಗಳು ರೂ. 2,000 ಹಣವನ್ನು ಜಮಾ ಮಾಡಲಾಗುತ್ತದೆ.

ಗೃಹಲಕ್ಷ್ಮಿ ಯೋಜನೆಯ ಬಗ್ಗೆ ರಾಜ್ಯ ಸರ್ಕಾರದ ವಿಶೇಷತೆ ಏನೆಂದರೆ, ಈ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಕಡಿಮೆ ಸೀಟುಗಳನ್ನು ಗೆದ್ದುಕೊಂಡರು ಕೂಡ, ರಾಜ್ಯ ಸರ್ಕಾರವು ಈ ಯೋಜನೆಗಳನ್ನು ಮುಂದುವರಿಸಿಕೊಳ್ಳುತ್ತಾ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾವು ಅಧಿಕಾರದಲ್ಲಿ ಇರುವವರೆಗೂ ಈ ಯೋಜನೆ ಕಡ್ಡಾಯವಾಗಿ ಜಾರಿಯಲ್ಲಿ ಇರುತ್ತದೆ ಎನ್ನುವುದಾಗಿ ಕಡ ಖಂಡಿತವಾಗಿ ಹೇಳಿದ್ದಾರೆ.

WhatsApp Group Join Now
Telegram Group Join Now

ಕೆಲವೊಂದು ಕಡೆ ಈ ಯೋಜನೆಯ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳನ್ನು ಕೇಳಿದರೆ ಸ್ವಲ್ಪಮಟ್ಟಿಗೆ ತಲೆ ಕೆಡಿಸುವಂತಹ ಕೆಲಸವನ್ನು ಮಾಡಿದೆ ಎಂದು ಹೇಳಬಹುದು. ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ಪ್ರತಿಕ್ರಿಸಿದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಯಾವುದೇ ಅನುಮಾನವಿಲ್ಲದೆ ಯಾರ ಖಾತೆಗೆ ಹಣ ಜಮಾ ಆಗಿಲ್ಲವೋ, ಅವರ ಖಾತೆಗೆ ಹಣವನ್ನು ಶೀಘ್ರದಲ್ಲಿಯೇ ವರ್ಗಾವಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಯಾರು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ, ಎನ್ನುವ ಭರವಸೆಯನ್ನು ಕೂಡ ನೀಡಿದ್ದಾರೆ.

ಸರ್ಕಾರದ ಹೊಸ ನಿರ್ದಾರವನೆಂದರೆ, ಇಂತಹ ಸಂದರ್ಭದಲ್ಲಿ ಕೆಲವು ಜನರ ಹೆಸರುಗಳನ್ನು ಗೃಹಲಕ್ಷ್ಮಿ ಯೋಜನೆಯ(Gruha Lakshmi) ಲಿಸ್ಟ್ ನಿಂದ ಡಿಲೀಟ್ (Delete) ಮಾಡುವಂತಹ ಸಾಧ್ಯತೆ ಕೂಡ ದಟ್ಟವಾಗಿದೆ ಎಂದು ತಿಳಿದು ಬಂದಿದ್ದು, ಈ ವಿಚಾರದ ಬಗ್ಗೆ ಮಾಹಿತಿಗಳನ್ನು ಪಡೆಯೋಣ.

ಜುಲೈ 31ರ ಬಳಿಕ ಹೊಸ ರೂಲ್ಸ್ ಜಾರಿ!

ಜುಲೈ 31 ಅಂದರೆ, ವಾರ್ಷಿಕವಾಗಿ ಟ್ಯಾಕ್ಸ್ ರಿಟರ್ನ್ಸ್(Tax Returns) ಕಟ್ಟುವುದಕ್ಕೆ ಕೊನೆಯ ದಿನಾಂಕವಾಗಿದೆ, ಆ ಸಮಯದಲ್ಲಿ ಟ್ಯಾಕ್ಸ್ ಕಟ್ಟುವಂತಹ ಮಹಿಳೆಯರು ಸರ್ವೇ ಸಾಮಾನ್ಯವಾಗಿ ಉತ್ತಮವಾಗಿರುವಂತಹ ಆರ್ಥಿಕ ವ್ಯವಸ್ಥೆಯನ್ನು ಹೊಂದಿರುವ ಮಹಿಳೆಯರಾಗಿರುತ್ತಾರೆ.

ಟ್ಯಾಕ್ಸ್ ರಿಟರ್ನ್ಸ್ ಕಟ್ಟುವ ಮಹಿಳೆಯರಿಗೆ ಯೋಜನೆಯನ್ನು ಜಾರಿಗೆ ತಂದಿರಲಾಗುವುದಿಲ್ಲ, ಇದೇ ಕಾರಣಕ್ಕಾಗಿಯೇ ಅಂತ ಬಾರ ಹೆಸರನ್ನು ಗೃಹಲಕ್ಷ್ಮಿ ಯೋಜನೆಯ ಲಿಸ್ಟ್ (list) ನಿಂದ ತೆಗೆದುಹಾಕುವ ಕೆಲಸವನ್ನು ಇಲಾಖೆಯು ಮಾಡುತ್ತದೆ ಎನ್ನುವುದು ಈಗಾಗಲೇ ತಿಳಿದು ಬಂದಿದ್ದು ಈ ನಿಯಮವನ್ನು ಜುಲೈ 31ರ ನಂತರ ಪರಿಗಣಿಸಲಾಗುತ್ತದೆ ಎನ್ನುವ ಮಾಹಿತಿ ಸಿಕ್ಕಿದೆ.

ಇದೇ ಕಾರಣಕ್ಕಾಗಿ ಯಾರೆಲ್ಲಾ ನಕಲಿ ದಾಖಲೆ ಪತ್ರಗಳನ್ನು ಬಳಸಿಕೊಂಡು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಅದರಿಂದ ಫಲವನ್ನು ಪಡೆದುಕೊಳ್ಳುತ್ತಿದ್ದಾರೋ ಅಂತ ಅವರ ಹೆಸರು ಡಿಲೀಟ್ ಆಗುವ ಸಂದರ್ಭ ಬಂದಿದೆ ಎಂದು ಹೇಳಬಹುದು.

 

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment