ರಾಜ್ಯದಲ್ಲಿ ಹೊಸ ಸರ್ಕಾರವು ಜಾರಿಗೆ ಬಂದ ನಂತರ ಅವರು ನೀಡಿದಂತಹ ಐದು ಗ್ಯಾರಂಟಿಗಳನ್ನು ಪೂರ್ಣ ಮಾಡಲು ಹಲವು ರೀತಿಯಾದಂತಹ ಯೋಜನೆಗಳನ್ನು ಜಾರಿ ಮಾಡಿದರು, ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕೆಂದು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದರು, ಅದರ ಮೂಲಕವಾಗಿ ಮನೆಯ ಯಜಮಾನಿಗೆ ಮನೆಯ ಆರ್ಥಿಕತೆಯನ್ನು ಸರಿದೂಗಿಸಿಕೊಂಡು ಹೋಗುವಂತೆ, ಪ್ರತಿ ತಿಂಗಳು ರೂ.2000 ಆರ್ಥಿಕ ನೆರವನ್ನು ಒದಗಿಸಲಾಯಿತು. ಪ್ರತಿ ದಿನ ಇನ್ನು ಹೆಚ್ಚಿನ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
8 ನೇ ಕಂತಿನ ಹಣದ ಹೊಸ ಅಪ್ಡೇಟ್
ಮಹಾಲಕ್ಷ್ಮಿ ಯೋಜನೆಯ ಆರಂಭವಾಗಿ ಈಗಾಗಲೇ ಏಳು ತಿಂಗಳುಗಳು ಕಳೆದಿದೆ, ಆದರೆ ಕೆಲವೊಬ್ಬರಿಗೆ ಇನ್ನು 6ನೇ ಮತ್ತು 7ನೇ ಕಂತಿನ ಹಣ ಇನ್ನು ಸಿಕ್ಕಿಲ್ಲ, ಸರ್ಕಾರವು ಈ ಯೋಜನೆ ಅಡಿಯಲ್ಲಿ ರಿಜಿಸ್ಟರ್ ಮಾಡಿಸಿಕೊಂಡಿರುವ ಪ್ರತಿ ಮಹಿಳೆಗೂ ಕೂಡ ಅವರವರ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಸೂಚನೆಯನ್ನು ನೀಡಿತ್ತು. ಇನ್ನು ಸರ್ಕಾರದ ಸೂಚನೆಯಂತೆ ಹಲವರು ತಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಿ ಅಪ್ಡೇಟ್ ಮಾಡಿಕೊಂಡಿದ್ದಾರೆ.
ಇನ್ನು ಕೆಲವರಿಗೆ ಖಾತೆಗೆ ಹಣ ಬಂದಿದ್ದಾಗಿಯೂ ಅದರ ಕುರಿತಾಗಿ ಮೆಸೇಜ್ ಬಂದಿಲ್ಲ ಎಂದು ತಿಳಿದಿದ್ದರು, ಅಂಥವರು ಅವರ ಬ್ಯಾಂಕ್ ಪಾಸ್ ಬುಕ್ ಎಂಟ್ರಿ ಮಾಡಿಸಿದಾಗ ಅವರ ಖಾತೆಗೆ ಹಣ ಬಂದಿರುವುದು ತಿಳಿದುಬಂದಿದೆ, ಇನ್ನು ಕೆಲವರ ದಾಖಲೆಗಳು ಸರಿಯಾದ ರೀತಿಯಲ್ಲಿ ಅಂದರೆ, ಬ್ಯಾಂಕ್ ಪಾಸ್ ಬುಕ್ ಗೆ ಆಧಾರ್ ಸೀಡಿಂಗ್ ಮತ್ತು ಸರಿಯಾದ ಮೊಬೈಲ್ ನಂಬರ್, ಆಧಾರ್ ಕಾರ್ಡ್(Adhar Card), ರೇಷನ್ ಕಾರ್ಡ್(Ration Card) ಮತ್ತು ರಿಜಿಸ್ಟರ್ ಆಗಿರುವಂತಹ ಹೆಸರು ಒಂದೇ ರೀತಿಯಾಗಿ ಇರಬೇಕು ಎಂಬ ನಿಯಮವನ್ನು ಸರ್ಕಾರವು ನೀಡಿತ್ತು.
ಇಂಥಹ ದಾಖಲೆಗಳು ಸರಿಯಾದ ರೀತಿಯಲ್ಲಿ, ಸಲ್ಲಿಕೆ ಆಗದೆ ಇರುವ ಕಾರಣ ಇನ್ನು ಕೆಲವೊಂದಿಷ್ಟು ಮಹಿಳೆಯರಿಗೆ ಈ ಯೋಜನೆಯ ಹಣ ಜಮಾ ಆಗಿಲ್ಲ. ದಾಖಲೆಗಳನ್ನು ಅಪ್ಡೇಟ್ ಮಾಡಿಸಿಕೊಳ್ಳಲು ಕಾಲಾವಧಿಯನ್ನು ಕೂಡ ನಿಗದಿಪಡಿಸಲಾಗಿತ್ತು, ಹಾಗೆ ಈಗಲೂ ಸಹ ಹೊಸದಾಗಿ ರಿಜಿಸ್ಟರ್ ಮಾಡಿಸಿಕೊಳ್ಳುವವರೆಗೂ ಕೂಡ ಸರ್ಕಾರವು ಅವಕಾಶವನ್ನು ಕಲ್ಪಿಸಿದೆ. ಮಹಿಳೆಯರು ತಮ್ಮ ದಾಖಲೆಗಳನ್ನು ಅಪ್ಡೇಟ್ ಮಾಡಿಸಿಕೊಂಡರು ಕೂಡ ಹಣ ಜಮಾ ಆಗಿಲ್ಲ ಅನ್ನುವವರಿಗೆ, ಅವರ ಬ್ಯಾಂಕ್ ಖಾತೆಯನ್ನು ಚೆಕ್ ಮಾಡುವಂತೆ ಸರ್ಕಾರ ಸೂಚನೆಯನ್ನು ನೀಡಿತು.
ಈ ಸೂಚನೆಯನ್ನು ಹೊರತುಪಡಿಸಿ ಮಹಿಳೆಯರಿಗೆ ಇನ್ನೂ 6ನೇ ಮತ್ತು 7ನೇ ಕಂತಿನ ಹಣ ಸಿಕ್ಕಿಲ್ಲವೋ ಅಂತವರಿಗೆ ಏಪ್ರಿಲ್ ತಿಂಗಳಲ್ಲಿ ಅಂದರೆ ಎಂಟನೇ ಕಂತಿನ ಹಣದ ಜೊತೆಗೆ 6 ಮತ್ತು 7ನೇ ಕಂತಿನ ಹಣವು ಕೂಡ ಒಟ್ಟಿಗೆ ಜಮಾ ಆಗಲಿದೆ ಎಂದು ಅಧಿಕೃತ ಸೂಚನೆಯನ್ನು ಸರಕಾರವು ತಿಳಿಸಿದೆ. ರೂ.6,000ಗಳನ್ನು ಒಟ್ಟಿಗೆ ಎಂಟನೇ ಕಂತಿನಲ್ಲಿ ನೀಡುವುದಕ್ಕೆ ಸರ್ಕಾರ ಯೋಜನೆಯನ್ನು ಮಾಡಿದೆ. ಸರ್ಕಾರವು 8ನೇ ಕಂತಿನ ಹಣವನ್ನು ಏಪ್ರಿಲ್ ತಿಂಗಳು 20ನೇ ತಾರೀಖಿನ ಒಳಗಾಗಿ ಎಲ್ಲಾ ಫಲಾನುಭವಿಗಳ ಖಾತೆಗೆ ಜಮಾ ಮಾಡಲು ನಿರ್ಧರಿಸಿದೆ.