ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಯಿಂದ, ಹಲವು ಫಲಾನುಭವಿಗಳಿಗೆ ಹಣ ಜಮಾ ಆಗಿದೆ ಆದರೆ ಇನ್ನು ಕೆಲವು ಫಲಾನುಭವಿಗಳಿಗೆ ಒಂದು ಕಂತಿನ ಹಣ ಕೂಡ ಜಮಾ ಆಗಿಲ್ಲ, ಜಮಾ ಆಗದೇ ಇರುವ ಫಲಾನುಭವಿಗಳು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಶೇಕಡ 20 ರಷ್ಟು ಮಹಿಳೆಯರಿಗೆ ಒಂದು ಕಂತಿನ ಹಣ ಕೂಡ ಜಮೆಯಾಗಿಲ್ಲ, ಯೋಜನೆಯ ಹಣ ಜಮಾ ಆಗದೇ ಇರಲು ಹಲವು ಕಾರಣಗಳಿವೆ, ಅದರಲ್ಲಿ ದಾಖಲೆಗಳ ಸರಿಯಾಗಿ ಅಪ್ಡೇಟ್ ಆಗದೆ ಇರುವ ವಿಚಾರಕ್ಕೆ ಸಂಬಂಧಿಸಿದ ಕಾರಣವೂ ಒಂದು ಇದೆ. ಇದೇ ತರಹದ ಹೆಚ್ಚಿನ ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಜಮಾ:
ಯೋಜನೆಗೆ ಅರ್ಜಿ ಸಲ್ಲಿಸಿದ ಶೇಕಡ 80 ರಷ್ಟು ಮಹಿಳೆಯರಿಗೆ 06 ಕಂತಿನ ಹಣ ಜಮಾ ಆಗಿದೆ. ಇನ್ನು ಕೆಲವು ಮಹಿಳೆಯರಿಗೆ 07 ನೇ ಕಂತಿನ ಹಣವು ಕೂಡ ಜಮಾ ಆಗಿದೆ. ಒಂದು ಕಂತಿನ ಹಣ ಜಮಾ ಆಗದೇ ಇರುವ ಫಲಾನುಭವಿಗಳಿಗೆ ಈ ತಿಂಗಳ ಒಳಗಾಗಿ ಎಲ್ಲಾ ಹಣ ಜಮಾ ಆಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾದ, ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟಣೆಯನ್ನು ನೀಡಿದ್ದಾರೆ.
ಹಣ ಬರದೆ ಇದ್ದವರು ಈ ಕೆಲಸವನ್ನು ಮಾಡಿ:
ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒಂದು ಕಂತಿನ ಹಣ ಬಾರದೆ ಇರುವ ಮಹಿಳೆಯರ ಖಾತೆಗೆ ಏಳು ಕಂತಿನ ಹಣ ಸಮಯ ಆಗುವುದು ಎಂದು ಹೇಳಿದ್ದಾರೆ, ಅದಕ್ಕಿಂತ ಮೊದಲು ಹಣ ಬಾರದೆ ಇರುವ ಫಲಾನುಭವಿಗಳ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಬೇಕು ಎಂದು ಹೇಳಿದ್ದಾರೆ. ಅದಕ್ಕಾಗಿ ನೀವು ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಹಾಗೂ ರೇಷನ್ ಕಾರ್ಡನ್ನು ತೆಗೆದುಕೊಂಡು ಹತ್ತಿರವಿರುವ ಸೇವ ಕೇಂದ್ರಕ್ಕೆ ಭೇಟಿ ಕೊಡಿ, ಅವರು ನಿಮ್ಮ ದಾಖಲೆಗಳನ್ನು ಪರಿಶೀಲನೆ ಮಾಡುತ್ತಾರೆ, ಆಗ ನಿಮ್ಮ ಸಮಸ್ಯೆ ಏನೆಂದು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಬ್ಯಾಂಕ್ ಪಾಸ್ ಬುಕ್ ಅಪ್ಡೇಟ್ ನಲ್ಲಿ ಏನಾದರೂ ತೊಂದರೆ ಇದ್ದರೆ ನೀವು ಇನ್ನೊಂದು ಬ್ಯಾಂಕ್ ಖಾತೆಯನ್ನು ಅಥವಾ ಪೋಸ್ಟ್ ಆಫೀಸ್ ಮೂಲಕ ಹೊಸ ಖಾತೆಯನ್ನು ತೆರೆಯುವುದು ಒಳ್ಳೆಯದು. ನೀವು ಸಲ್ಲಿಸಿದ ದಾಖಲೆಗಳಲ್ಲಿ ಏನಾದರೂ ತೊಂದರೆ ಇದ್ದರೆ ಅದನ್ನು ಪುನಃ ಅಪ್ಡೇಟ್ ಮಾಡಿ ಮತ್ತೊಮ್ಮೆ ಅರ್ಜಿ ಸಲ್ಲಿಕೆ ಮಾಡಿ.
ಪ್ರತಿಯೊಬ್ಬ ಫಲಾನುಭವಿಗಳಿಗೂ ಹಣ ಜಮಾ ಆಗಲಿದೆ:
ಮಹಾಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ 80 ರಷ್ಟು ಫಲಾನುಭವಿಗಳಿಗೆ ಎಲ್ಲಾ ಹಣ ಆಗಿದೆ, ಆದರೆ ಸರಿಯಾದ ದಾಖಲೆಗಳನ್ನು ನೀಡದೇ ಇರುವ ಫಲಾನುಭವಿಗಳಿಗೆ ಇನ್ನೂ ಒಂದು ಕಂತಿನ ಹಣ ಕೂಡ ಜಮಾ ಆಗಿಲ್ಲ. ಅದಕ್ಕಾಗಿ ಸಚಿವರು ನಿಮ್ಮ ದಾಖಲೆಗಳನ್ನು ಅಪ್ಡೇಟ್ ಮಾಡಿ ಮತ್ತೊಮ್ಮೆ ಅರ್ಜಿ ಸಲ್ಲಿಸಿದರೆ ಪ್ರತಿಯೊಬ್ಬರಿಗೂ ಹಣ ಜಮಾ ಆಗಲಿದೆ ಎಂದು ಸಚಿವರು ಸ್ಪಷ್ಟಣೆಯನ್ನು ನೀಡಿದ್ದಾರೆ.