SBI ಗ್ರಾಹಕರಿಗೆ ಸಿಹಿ ಸುದ್ದಿ! ಈ 400 ದಿನದ ಸ್ಕೀಮ್ ನಲ್ಲಿ ಹೂಡಿಕೆ ಮಾಡಿ ಅತ್ಯುತ್ತಮ ಆದಾಯ ಗಳಿಸಿ…!
ಹೆಚ್ಚಿನ ಹೂಡಿಕೆದಾರರು ತಮ್ಮ ಹಣವನ್ನು, ಸುರಕ್ಷತೆ ನೀಡುವ ಬಡ್ಡಿ ದರದಲ್ಲಿ ಹೆಚ್ಚಿನ ರಿಟರ್ನ್ಸ್ (Returns) ನೀಡುವ ಸ್ಥಳದಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ, ಹಾಗಾಗಿ ಅವರೆಲ್ಲರ ಮೊದಲ ಆಯ್ಕೆಯೂ ನಿಶ್ಚಿತ ಠೇವಣಿ(Fixed Deposit) ಆಗಿರಲಿದೆ. ಪೋಸ್ಟ್ ಆಫೀಸ್(Post Office) ಗಳು ಹಾಗೂ ಹೆಚ್ಚಿನ ಬ್ಯಾಂಕುಗಳ(Banks) ಪಿಕ್ಸ್ಡ್ ಡೆಪಾಸಿಟ್ ಗಳ ಮೇಲೆ ಹಣವನ್ನು ಹೂಡಿಕೆ ಮಾಡಿದರೆ, ನಿಮ್ಮ ಇನ್ವೆಸ್ಟಿಗೆ ಸುರಕ್ಷತೆ ಒದಗಿಸುವುದರ ಜೊತೆಗೆ ಹೆಚ್ಚಿನ ಲಾಭವನ್ನು ನೀಡುತ್ತಾರೆ. ಹೀಗೆ ನೀವು ಸಹ ಎಫ್ ಡಿ (FD) ಯೋಜನೆಯಲ್ಲಿ ಹೂಡಿಕೆ(invest) ಮಾಡಲು ಬಯಸಿದರೆ, ಈ ಲೇಖನವು ನಿಮಗೆ ಸಿಹಿ ಸುದ್ದಿಯನ್ನು ನೀಡಲಿದೆ.
SBI ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಪಡೆಯಿರಿ:
ಭಾರತದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್ ಆಗಿರುವ SBI ನಲ್ಲಿ ನಾನಾ ತರಹದ ಪಿಕ್ಸ್ ಡೆಪಾಸಿಟ್ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಒಂದಾಗಿರುವ ಅಮೃತ್ ಕಲಾಸ್ ಯೋಜನೆಯು(SBI Amrit Kalash Yojana) ಸೆಪ್ಟೆಂಬರ್ ತಿಂಗಳಿನವರೆಗೂ ಲಭ್ಯವಿದೆ. ಎಸ್ ಬಿಐ ನ ಈ ಯೋಜನೆಯಲ್ಲಿ ಹೂಡಿಕೆ (Invest) ಮಾಡುವವರಿಗೆ ಹೆಚ್ಚಿನ ರಿಟರ್ನ್ಸ್ (More Returns) ಸಿಗಲಿದೆ.
ಅಮೃತ್ ಕಲಾಷ್ ಯೋಜನೆಯಲಿ ಎಷ್ಟು ಬಡ್ಡಿದರ ಸಿಗಲಿದೆ?
ಅಮೃತ್ ಕಲಾಷ್ ಯೋಜನೆಯನ್ನು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 12 ಏಪ್ರಿಲ್ 2023 ರಂದು ಜಾರಿಗೆ ತಂದಿತು, ಇದು400 ದಿನದ FD ಯೋಜನೆಯಾಗಿದೆ. ಈ ಯೋಜನೆಯಲ್ಲಿ ಗ್ರಾಹಕರು ಗರಿಷ್ಠವಾಗಿ ಎರಡು ಕೋಟಿಯವರೆಗೂ ಹೂಡಿಕೆ ಮಾಡಬಹುದು. ನೀವು ಎಸ್ ಬಿ ಐ ನ ಯೋಜನೆಯಲ್ಲಿ ಹೂಡಿಕೆ(Investment) ಮಾಡಿದರೆ ಸಂಪೂರ್ಣ ಸುರಕ್ಷತೆಯ ಜೊತೆಗೆ ಕಡಿಮೆ ತೆರಿಗೆಯನ್ನು (low Tax) ಹಾಕಲಾಗುತ್ತದೆ.
ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಸಾಮಾನ್ಯ ನಾಗರಿಕರಿಗೆ 7.10% ಬಡ್ಡಿಯನ್ನು ನಿಗದಿಪಡಿಸಲಾಗಿದೆ, ಹಾಗೂ ಹಿರಿಯ ನಾಗರಿಕರಿಗೆ .50% ಹೆಚ್ಚಿನ ಬಡ್ಡಿದರ ಅಂದರೆ 7.60% ಹೆಚ್ಚಿನ ಸರಾಸರಿ ಬಡ್ಡಿ ದರ ದೊರೆಯಲಿದೆ.
ಅಮೃತ್ ಕಲಾಷ್ ಯೋಜನೆಯ ಗಡುವು ವಿಸ್ತರಣೆ;
ಹೂಡಿಕೆದಾರ ಅತಿ ಹೆಚ್ಚು ಜನಪ್ರಿಯ ಪಡೆದಿರುವ ಅಮೃತ ಕಲಾಷ ಯೋಜನೆಯನ್ನು ಜೂನ್ 23 2023 ರಂದು ಪರಿಚಯಿಸಲಾಯಿತು ಹಾಗೂ ಇದರ ಗಡುವಿನ ದಿನಾಂಕವನ್ನು ಡಿಸೆಂಬರ್ 31 2023ರವರೆಗೆ ವಿಸ್ತರಿಸಲಾಗಿತ್ತು, ಇದೀಗ ಸಪ್ಟೆಂಬರ್ 31 2024 ಕ್ಕೆ ನಿಗದಿಪಡಿಸಲಾಗಿದೆ. ನೀವು ಈ ಅವಧಿಯೊಳಗೆ FD ಖರಿದಿಸಿ ಹಣವನ್ನು ಹೂಡಿಕೆ ಮಾಡಿದರೆ 7.60% ಬಡ್ಡಿ ದರದ ಲಾಭವನ್ನು ಪಡೆಯಬಹುದು.