Ration Card: ರೇಷನ್ ಕಾರ್ಡ್ ಹೊಂದಿದವರಿಗೆ ಸಿಹಿ ಸುದ್ದಿ! ಮೋದಿ ಅವರಿಂದ ಹೊಸ ಯೋಜನೆಗೆ ಚಾಲನೆ!
ದೇಶದಲ್ಲಿ ಕರೋನ ಸಂದರ್ಭದಲ್ಲಿ ಲಾಕ್ಡೌನ್ ಎದುರಾದಾಗ, ಪ್ರಧಾನಮಂತ್ರಿಯವರು ಬಡವರಿಗಾಗಿ PMGKY ಯೋಜನೆಯಡಿ ಪ್ರತಿಯೊಬ್ಬರಿಗೂ ಐದು ಕೆಜಿ ಅಕ್ಕಿಯನ್ನು ವಿತರಿಸುತ್ತಿದ್ದರು, ದೇಶದ 80 ಕೋಟಿ ಜನರು ಈ ಉಚಿತ ಅಕ್ಕಿಯ ಪ್ರಯೋಜನವನ್ನು ಪಡೆದಿದ್ದರು.
ಪ್ರಧಾನಮಂತ್ರಿಯವರು ಜಾರಿಗೆ ತಂದ Pradhan Mantri Garib Kalyan ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ಕಳೆದ ನಾಲ್ಕು ವರ್ಷಗಳಿಂದಲೂ ದೇಶದ ಬಡಜನತೆಗೆ ಉಚಿತ ಅಕ್ಕಿಯನ್ನು ವಿತರಿಸುತ್ತಾ ಬಂದಿದೆ. ಯೋಜನೆಗೆ ಸಂಬಂಧಿಸಿದ ಹಾಗೆ ಕೇಂದ್ರದಿಂದ ಬಿಗ್ ಅಪ್ಡೇಟ್ ಒಂದು(Big Update) ಹೊರಬಿದ್ದಿದೆ. ಏನದು ಆ ಬಿಗ್ ಅಪ್ಡೇಟ್? ಎಂದು ಈ ಲೇಖನದ ಮೂಲಕ ತಿಳಿಯೋಣ.
ಉಚಿತ ಪಡಿತರ ಯೋಜನೆ!
ಪ್ರಧಾನಮಂತ್ರಿಯವರು ಒಂದು ದೇಶ ಒಂದು ರೇಷನ್ ಕಾರ್ಡ್(One Nation One Ration Card) ಎಂಬ ಯೋಜನೆಯನ್ನು ಮುಂದಿಟ್ಟುಕೊಂಡು ಯಾವೊಬ್ಬ ಬಡವರು ಕೂಡ ಈ ಯೋಜನೆಯಿಂದ ವಂಚಿತವಾಗಬಾರದೆಂದು ನಿರ್ಧರಿಸಿದ್ದರು, ಈಗಲೂ ಕೂಡ ಸಾಕಷ್ಟು ಬಡ ಕುಟುಂಬಗಳು PMGKY ಯೋಜನೆಯಡಿ ಉಚಿತ ಅಕ್ಕಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರವು ಲೋಕಸಭಾ ಚುನಾವಣೆಗೂ ಮುನ್ನ ನೀಡುತ್ತಿರುವ 5 ಕೆಜಿ ಅಕ್ಕಿಯನ್ನು, ಮುಂದಿನ ಐದು ವರ್ಷಗಳವರೆಗೂ ನೀಡಲಾಗುತ್ತದೆ ಎಂದು ಮೋದಿ ಸರ್ಕಾರ ಘೋಷಣೆಯನ್ನು ಹೊರಡಿಸಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದ ಹಾಗೆ ಕೇಂದ್ರ ಸಚಿವರಾದ ಪ್ರಹಲ್ಲಾದ್ ಜೋಶಿ ಅವರು ಅಧಿಕೃತ ಘೋಷಣೆಯನ್ನು ಹೊರಡಿಸಿದ್ದಾರೆ.
ಈ ಯೋಜನೆಗೆ ಯಾರೆಲ್ಲಾ ಅರ್ಹರು?
ಈಗ ನೀಡುತ್ತಿರುವ ಉಚಿತ ಪಡಿತರ ವಿತರಣೆಯನ್ನು ಮುಂದಿನ ಐದು ವರ್ಷಗಳ ಕಾಲ ಹೀಗೆಯೇ ಮುಂದುವರೆಯುತ್ತದೆ ಎಂದು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಅಧಿಕೃತ ಘೋಷಣೆ ಹೊರಡಿಸಿದ್ದಾರೆ, ಈ ಯೋಜನೆ(Scheem) ಅಡಿ ಯಾರೆಲ್ಲಾ ಆರ್ಥಿಕವಾಗಿ ಹಿಂದುಳಿದಿದ್ದಾರೋ ಅವರೆಲ್ಲ ಇಷ್ಟ ಅಕ್ಕಿಯನ್ನು ಪಡೆಯಬಹುದು. ಮುಂದಿನ ಐದು ವರ್ಷಗಳವರೆಗೂ ಈ ಯೋಜನೆಯು ಮುಂದುವರೆಯಲಿದೆ ಎಂದು ಕೇಂದ್ರ ಸರ್ಕಾರವು ಅಧಿಕೃತ ಘೋಷಣೆಯನ್ನು ಮಾಡಿದೆ.
ಆರ್ಥಿಕವಾಗಿ ಹಿಂದುಳಿದು, ಬಡತನ ರೇಖೆಗಿಂತ ಕೆಳಗಿರುವ(Below Powerty line) ಕುಟುಂಬದವರು ಉಚಿತ ಪಡಿತರ ಯೋಜನೆಯನ್ನು ಪಡೆದುಕೊಳ್ಳಬಹುದು, ಸ್ವಂತ ಜಮೀನು ಇಲ್ಲದವರು ಬಡ ಕೂಲಿ ಕಾರ್ಮಿಕರು ಕುಶಲಕರ್ಮಿಗಳು ನೇಕಾರರು ಕಮ್ಮಾರರು ದಿನಗೂಲಿ ನೌಕರರು ಈ (PMGKY) ಯೋಜನೆಯ ಲಾಭವನ್ನು ಪಡೆಯಬಹುದು.