Gold Rate: ಚಿನ್ನ ಖರೀದಿದಾರರಿಗೆ ಸಿಹಿ ಸುದ್ದಿ! ದೇಶದಲ್ಲಿ ಜಾರಿಗೆ ಬರಲಿದೆ ಒಂದು ದೇಶ, ಒಂದು ಚಿನ್ನದ ದರ!

Gold Rate: ಚಿನ್ನ ಖರೀದಿದಾರರಿಗೆ ಸಿಹಿ ಸುದ್ದಿ! ದೇಶದಲ್ಲಿ ಜಾರಿಗೆ ಬರಲಿದೆ ಒಂದು ದೇಶ, ಒಂದು ಚಿನ್ನದ ದರ!

ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಭಾರಿ ಏರಿಕೆಯಾಗುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ, ಕಳೆದ ವರ್ಷದ ಚಿನ್ನದ ಬೆಲೆಗೆ ಹೋಲಿಕೆ ಮಾಡಿದರೆ ಈ ವರ್ಷ ಚಿನ್ನದ ಬೆಲೆಯು ದುಪ್ಪಟ್ಟು ಏರಿಕೆಯಾಗಿದೆ. ಇದೇ ತಿಂಗಳ ಕಳೆದ ವರ್ಷದಲ್ಲಿ ಚಿನ್ನದ ಬೆಲೆಯು ರೂ.54,740 ದೃಷ್ಟಿತ್ತು, ಆದರೆ ಈಗ ಅದೇ ಚಿನ್ನದ ಬೆಲೆಯು 67,000 ಗಡಿ ದಾಟಿದೆ. ಸದ್ಯ ಚಿನ್ನದ ಬೆಲೆಯು 67,860 ರೂ. ತಲುಪಿದೆ.

ಅಂದರೆ ಚಿನ್ನದ ಬೆಲೆಯು ಒಂದು ವರ್ಷದಲ್ಲಿ ಬರೋಬ್ಬರಿ 13,000 ಏರಿಕೆಯಾಗಿದೆ. ನೀವು ಚಿನ್ನ ಖರೀದಿ ಮಾಡಲು ಬಯಸಿದರೆ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ, ಇದು ಬಡವರಿಗಂತೂ ಕೈ ಸಿಗದಂತಹ ವಸ್ತುವಾಗಿದೆ. ಈ ಬೆಲೆ ಏರಿಕೆಯ ಮಧ್ಯೆ ಕೇಂದ್ರ ಸರ್ಕಾರವು ಚಿನ್ನ ಖರೀದಿ ಮಾಡುವವರಿಗೆ ಒಂದು ಸಿಹಿ ಸುದ್ದಿ ನೀಡಿದೆ, ಜನಸಾಮಾನ್ಯರು ಚಿನ್ನ ಖರೀದಿಸಲು ಸಹಾಯವಾಗುವಂತೆ ಸರ್ಕಾರವು ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಿದೆ.

WhatsApp Group Join Now
Telegram Group Join Now

ಚಿನ್ನ ಖರೀದಿದಾರರಿಗೆ ಸಿಹಿ ಸುದ್ದಿ!

ಭಾರತದ ಪ್ರಮುಖ ಚಿನ್ನದ ವ್ಯಾಪಾರಿಗಳು ದೇಶದಾದ್ಯಂತ, ಒಂದು ರಾಷ್ಟ್ರ ಒಂದು ಚಿನ್ನದ ದರ ನೀತಿಯನ್ನು(ONOR) ಅಳವಡಿಸಿಕೊಳ್ಳಲು ಅನುಮೋದನೆಯನ್ನು ನೀಡಿದ್ದಾರೆ. ಈ ನೀತಿಯ ಕ್ರಮವಾಗಿ ದೇಶದಾದ್ಯಂತ ಚಿನ್ನದ ಬೆಲೆಯನ್ನು(ಗೋಲ್ಡ್ Rate) ಪ್ರಮಾಣಿಕರಿಸುತ್ತದೆ ಮತ್ತು ಜ್ಯುವೆಲ್ಲರಿ ಕೌನ್ಸಿಲ್ ಬೆಂಬಲವನ್ನು ಹೊಂದಿದೆ ಎಂದುb ವರದಿ ಮೂಲಕ ತಿಳಿದುಬಂದಿದೆ. ಇದಕ್ಕೂ ಮೊದಲು ಜ್ಯವೇಲರಿ ಕೌನ್ಸಿಲ್(CJS) ಮತ್ತು ಜೆಮ್ ದೇಶದಾದ್ಯಂತ ಒಂದೇ ಚಿನ್ನದ ದರವನ್ನು(Gold Rate) ಜಾರಿಗೊಳಿಸುವ ಬಗ್ಗೆ, ಭಾರತದ ಹೆಸರಾಂತ ಆಭರಣ ತಯಾರಿಗಳಿಂದ ಅಭಿಪ್ರಾಯವನ್ನು ಕೇಳಿತ್ತು, ಈ ಅಧಿಕೃತ ಮಾಹಿತಿಯ ಕುರಿತು, ಸೆಪ್ಟೆಂಬರ್ ತಿಂಗಳಿನಲ್ಲಿ ಮುಂಬರುವ ಸಭೆಯಲ್ಲಿ ಮಾಡಲಾಗುವುದು ಎಂದು ವರದಿ ತಿಳಿಸಿದೆ.

ONOR ದೇಶದಲ್ಲಿ ಯಾವಾಗ ಜಾರಿಗೆ ಬರಲಿದೆ…?

ದೇಶದ ಪ್ರಸಿದ್ಧ ರಿದ್ದಿಸಿದ್ಧಿ ಬುಲಿಯನ್ಸ್ ಲಿಮಿಟೆಡ್(RSBL) ಪ್ರಧಾನ ವ್ಯವಸ್ಥಾಪಕರಾದ ಪೃಥ್ವಿರಾಜ್ ಕೊಠಾರಿ ಅವರು ಅಧಿಕೃತ ಹೇಳಿಕೆಯನ್ನು ನೀಡಿದ್ದಾರೆ. ಒಂದೇ ಚಿನ್ನದ ದರ ಎಲ್ಲಾ ಗ್ರಾಹಕರನ್ನು(Customers) ಸಮಾನವಾಗಿ ಪರಿಗಣಿಸುತ್ತದೆ, ಅವರು ಸ್ಥಳವನ್ನು ಲೆಕ್ಕಿಸದೆ ಒಂದೇ ಬೆಲೆಗೆ ಆಭರಣಗಳನ್ನು ಖರೀದಿಸಬಹುದು ಎಂದು ಖಚಿತಪಡಿಸುತ್ತದೆ. ಶ್ರೀ ರಾಷ್ಟ್ರವ್ಯಾಪಿ ದರವು ಚಿನ್ನದ ಮಾರುಕಟ್ಟೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ ಮತ್ತು ಹೆಚ್ಚು ಕಾರ್ಯದರ್ಶಿಕ ಮತ್ತು ಸಮಾನವಾದ ಚಿನ್ನದ ಮಾರುಕಟ್ಟೆಯತ್ತ ಇಟ್ಟಿರುವ ಮಹತ್ವದ ಹೆಜ್ಜೆಯಾಗಲಿದೆ. ಒಂದು ದೇಶ ಒಂದು ದರ (One Nation, One Rate) ಈ ನೀತಿಯಿಂದ ಗ್ರಾಹಕರು ಹಲವಾರು ಪ್ರಯೋಜನಗಳನ್ನು ನಿರೀಕ್ಷಿಸಬಹುದು. ಇದರ ಬಗ್ಗೆ ಸೆಪ್ಟೆಂಬರ್ ನಲ್ಲಿ ನಡೆಯುವ ಅಧಿಕೃತ ಸಭೆಯಲ್ಲಿ ಮಾಹಿತಿಯು ಹೊರಬೀಳಲಿದೆ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment