ಈ ಉಚಿತ ಲ್ಯಾಪ್ಟಾಪ್ ಅನ್ನು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (AICTE) ನೀಡಲಿದೆ. ಈ ಯೋಜನೆಯನ್ನು ಎಐಸಿಟಿಇ ಉಚಿತ ಲ್ಯಾಪ್ಟಾಪ್ (AICTE FREE LAPTOP) ಯೋಜನೆ ಎಂದು ಕರೆಯಲಾಗಿದೆ. ನಮ್ಮ ದೇಶದಲ್ಲಿರುವ ಅನೇಕ ವಿದ್ಯಾರ್ಥಿಗಳು ತಮ್ಮ ಆರ್ಥಿಕ ಸ್ಥಿತಿಯ ಕಳಪೆಯಿಂದ ಲ್ಯಾಪ್ಟಾಪ್ ಖರೀದಿಸಲು ಮತ್ತು ತಾಂತ್ರಿಕ ಶಿಕ್ಷಣಕ್ಕೆ ಸೇರಲು ಸಾಧ್ಯವಾಗುತ್ತಿಲ್ಲ.AICTE ಯು ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಉಚಿತ ಲ್ಯಾಪ್ಟಾಪ್ ಯೋಜನೆಯನ್ನು ಜಾರಿಗೆ ತಂದಿದೆ, ಈ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡಲಾಗುತ್ತಿದೆ. ಪ್ರಚಲಿತ ವಿದ್ಯಮಾನಗಳ ಅಪ್ಡೇಟ್ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ. ಸೇರಲು ಇಲ್ಲಿ ಕ್ಲಿಕ್ ಮಾಡಿ.
ಯಾರಿಗೆಲ್ಲ ಈ ಲ್ಯಾಪ್ಟಾಪ್ ಸಿಗಲಿದೆ?
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದಿಂದಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಲ್ಯಾಪ್ಟಾಪ್ ಅತ್ಯಮೂಲ್ಯವಾಗಿದೆ. ಹಾಗಾಗಿ AICTE ಪ್ರಮಾಣ ಪತ್ರ ಪಡೆದ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡಲಾಗುತ್ತಿದೆ, ಈ ಯೋಜನೆಯನ್ನು ಪ್ರತಿ ವಿದ್ಯಾರ್ಥಿ ಯೋಜನೆಗೆ ಒಂದು ಲ್ಯಾಪ್ಟಾಪ್ ಎಂದು ಕರೆಯಲಾಗುತ್ತದೆ. ಉಚಿತ ಲ್ಯಾಪ್ಟಾಪ್ ಹೊಡೆಯುವ ಎಲ್ಲಾ ವಿದ್ಯಾರ್ಥಿಗಳು ಆನ್ಲೈನ್ ನಲ್ಲಿ ಹೊಸ ಕೌಶಲ್ಯಗಳನ್ನು ಕಲಿಯಲು ತಂತ್ರಜ್ಞಾನವನ್ನು ಬಳಸುತ್ತಾರೆ.
ಉಚಿತ ಲ್ಯಾಪ್ಟಾಪ್ ಪಡೆಯಲು ಇರಬೇಕಾದ ಅರ್ಹತೆಗಳು:
ಈ ಯೋಜನೆಯಲ್ಲಿ ಉಚಿತ ಲ್ಯಾಪ್ಟಾಪ್ ಪಡೆಯಲು ವಿದ್ಯಾರ್ಥಿಗಳು ಮೊದಲು ಭಾರತೀಯ ನಾಗರಿಕರಾಗಿರಬೇಕು, ಐಟಿಐ ಪ್ರಮಾಣಿಕೃತ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಉಚಿತ ಲ್ಯಾಪ್ಟಾಪ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಇಂಜಿನಿಯರಿಂಗ್, ಬಿ.ಟೆಕ್, ಕಂಪ್ಯೂಟರ್ ಅಥವಾ ಕೈಗಾರಿಕಾ ಕ್ಷೇತ್ರದಲ್ಲಿ ಪದವಿ ಇಲ್ಲವೇ ಡಿಪ್ಲೋಮೋ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಈ ಅರ್ಜಿದಾರರು ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಕಂಪ್ಯೂಟರ್ ಕೋರ್ಸ್ ಕಲಿಯುತ್ತಿರುವ ಅಥವಾ ಈಗಾಗಲೇ ಓದಿರುವ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಎಲ್ಲ ಜಾತಿಯ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಹರಾಗಿರುತ್ತಾರೆ.
ಯೋಜನೆಗೆ ಅಗತ್ಯ ಇರುವ ದಾಖಲೆಗಳು:
- ಆಧಾರ್ ಕಾರ್ಡ್
- ಕಾಲೇಜು ಐಡಿ ಕಾರ್ಡ್
- ವಿಳಾಸ ಪುರಾವೆ
- ಶೈಕ್ಷಣಿಕ ಅರ್ಹತೆಯ ದಾಖಲೆಗಳು
- ಅಂಗವೈಕಲ್ಯ ಪ್ರಮಾಣ ಪತ್ರ
- ಮೊಬೈಲ್ ಸಂಖ್ಯೆ
- ಇಮೇಲ್ ಐಡಿ
- ಪಾಸ್ಪೋರ್ಟ್ ಗಾತ್ರದ ಫೋಟೋ
ಅರ್ಜಿ ಸಲ್ಲಿಸುವುದು ಹೇಗೆ?
ಈ ಯೋಜನೆಯ ನೇರ ಲಿಂಕನ್ನು ಇನ್ನು ಅಪ್ಡೇಟ್ ಮಾಡಲಿಲ್ಲ, ಶೀಘ್ರದಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಲಿಂಕ್ ಪಡೆದುಕೊಂಡ ನಂತರ ನೀವು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ,
ಹಾಗೂ ಸರ್ಕಾರದಿಂದ ಉಚಿತ ಲ್ಯಾಪ್ಟಾಪ್ ಅನ್ನು ನಿಮ್ಮ ನಿಮ್ಮ ಕಾಲೇಜುಗಳಲ್ಲಿ ವಿತರಿಸುವ ಸಾಧ್ಯತೆ ಇದೆ ಅದರ ಬಗ್ಗೆ ನಿಮ್ಮ ಕಾಲೇಜಿನ ಕ್ಲರ್ಕ್ ರವರನ್ನು ವಿಚಾರಿಸಿ.
ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ನ ಲಿಂಕನ್ನು ಇನ್ನು ಸಹ ಬಿಡುಗಡೆ ಮಾಡಿರುವುದಿಲ್ಲ ಅದು ಬಂದ ಕೂಡಲೇ ನಮ್ಮ ವಾಟ್ಸಾಪ್ ಹಾಗು ಟೆಲಿಗ್ರಾಂ ಚಾನಲ್ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ.