Free Bus: ಉಚಿತ ಬಸ್ ಸಂಬಂಧಿಸಿದ ಹಾಗೆ ಸಚಿವರಿಂದ ಮಹತ್ವದ ಘೋಷಣೆ! ಇಲ್ಲಿದೆ ಸಂಪೂರ್ಣ ಮಾಹಿತಿ.!!
ರಾಜ್ಯ ಸರ್ಕಾರವು ಮಹಿಳೆಯರ ಅಭಿವೃದ್ಧಿಗಾಗಿಯೇ ಎರಡು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿತ್ತು, ಒಂದು ಗೃಹಲಕ್ಷ್ಮಿ ಯೋಜನೆ ಮತ್ತೊಂದು ಶಕ್ತಿ ಯೋಜನೆಯಾಗಿದೆ. ಈ ಎರಡು ಯೋಜನೆಗಳಿಂದ ಮಹಿಳೆಯರು ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ. ಆದರೆ ಈಗ ಶಕ್ತಿ ಯೋಜನೆಯು ರದ್ದಾಗುತ್ತದೆ ಎಂದು ಎಲ್ಲೆಡೆ ಪಿಸು ಮಾತುಗಳು ಕೇಳಿ ಬರುತ್ತಿವೆ. ಉಚಿತ ಬಸ್ (Free Bus) ವಿಚಾರಕ್ಕೆ ಸಂಬಂಧಿಸಿದ ಹಾಗೆ ಸಾರಿಗೆ ಸಚಿವರು ಸ್ಪಷ್ಟಣೆಯನ್ನು ತಿಳಿಸಿದ್ದಾರೆ.
ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ಬಳಿಕ, ಕಾಂಗ್ರೆಸ್ ಸರ್ಕಾರವು ಕಡಿಮೆ ಸ್ಥಾನಗಳನ್ನು ಗಳಿಸಿದೆ. ಕಾಂಗ್ರೆಸ್ ಮುಖಂಡರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಶಾಲಿ ಆಗದಿದ್ದರೆ ಖಾತ್ರಿ ಯೋಜನೆಗಳು ರದ್ದು ಮಾಡುವುದಾಗಿ ಹೇಳಿದ್ದರು, ಆದರೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಡಿಮೆ ಸೀಟುಗಳನ್ನು ಗೆದ್ದುಕೊಂಡಿತ್ತು ಇದು ಖಾತ್ರಿ ಯೋಜನೆಗಳ (Guarantee Schemes) ಮೇಲೆ ಪರಿಣಾಮ ಬೀರದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ನಿರ್ಧಿಷ್ಟವಾಗಿ ಹೇಳುವುದಾದರೆ ಶಕ್ತಿ ಯೋಜನೆಯನ್ನು ರದ್ದು ಮಾಡುವುದರ ಕುರಿತು ಎಲ್ಲೆಡೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ.
ಶಕ್ತಿ ಯೋಜನೆಯ ಕುರಿತು, ಸಿಎಂ ಸಿದ್ದರಾಮಯ್ಯನವರ ಸ್ಪಷ್ಟಣೆ!
ಗ್ಯಾರಂಟಿ ಯೋಜನೆಗಳ ಬಗ್ಗೆ ಹಲವಾರು ಬಾರಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು, ಎಲ್ಲಾ ಖಾತ್ರಿ ಯೋಜನೆಗಳು ಬಡವರ ಪರವಾದ ಯೋಜನೆಯಾಗಿದೆ ಆದ್ದರಿಂದ ಯಾವುದೇ ಕಾರಣಕ್ಕೂ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ, ಇತರ ಕಾಂಗ್ರೆಸ್ ನಾಯಕರು ಕೂಡ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುವುದಿಲ್ಲ ಎಂದು ಹೇಳುತ್ತಿದ್ದಾರೆ. ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ವಿದ್ಯುತ್ ಯೋಜನೆ ಇಲ್ಲವಾ ಎಂದು ಮಾಹಿತಿಯನ್ನು ನೀಡಿದ್ದಾರೆ.