FID NUMBER UPDATE:
ಸರ್ಕಾರವು ಈ FID NUMBER ಅನ್ನು ಬಿಡುಗಡೆ ಮಾಡಲು ಕಾರಣವೇನು, ಈ FID NUMBER ಅಂದರೇನು, ಇದರ ಉಪಯೋಗ ಹಾಗೂ ಇದಕ್ಕೆ ಹೇಗೆ ನೋಂದಣಿಯನ್ನು ಮಾಡಿಕೊಳ್ಳಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ, ಇದೇ ತರಹದ ಇನ್ನೂ ಹಚ್ಚಿನ ಕೃಷಿ ಚಟುವಟಿಕೆ ಅಡಿಕೆ ಧಾರಣೆ ಹಾಗೂ ಇನ್ನಿತರ ಕೃಷಿ ವಿಷಯದ ಬಗ್ಗೆ ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ಎಫ್ ಐ ಡಿ (FRUITS ID) ನಂಬರ್ ಅಂದರೆ, ರೈತರು ತಮ್ಮ ಕೃಷಿ ಜಮೀನಿನ ಮಾಹಿತಿಯನ್ನು ಪೋರ್ಟಲ್ ನಲ್ಲಿ ನೊಂದಾಯಿಸಿದಾಗ, ಆತನಿಗೆ FID NUMBER ದೊರೆಯುತ್ತದೆ, ಹೇಗೆ ಒಬ್ಬ ವ್ಯಕ್ತಿಗೆ ಆಧಾರ್ ಕಾರ್ಡ್ ಗುರುತಿನ ಚೀಟಿಯಾಗಿದೆಯೋ, ಅದರಂತೆ ಕೃಷಿ ಜಮೀನಿಗೆ FID ಗುರುತಿನ ಚೀಟಿ ಇದ್ದಂತೆ. ಈ ಪೋರ್ಟಲ್ ಕೃಷಿಕನ ಜಾಗದ ವಿವರ ಹಾಗೂ ತಾನು ಬೆಳೆದ ಬೆಳೆಗಳ ವಿವರಗಳನ್ನು ಒಳಗೊಂಡ ಪೋರ್ಟಲ್ ಆಗಿರುತ್ತದೆ, ಸರ್ಕಾರದಿಂದ ದೊರೆಯುವ ಕೃಷಿ ಸೌಲಭ್ಯವನ್ನು ಪಡೆದುಕೊಳ್ಳಲು ರೈತರು ಇಲ್ಲಿ ತಮ್ಮ ಮಾಹಿತಿಯನ್ನು ನೊಂದಾಯಿಸಿಕೊಳ್ಳಬೇಕು.
ಈ FID NUMBER ಅನ್ನು ಏಕೆ ನೋಂದಾಯಿಸಿಕೊಳ್ಳಬೇಕು?
ರೈತರು ಸರ್ಕಾರದ ಆದೇಶದಂತೆ ಈ ಪೋರ್ಟಲ್ ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳದೆ ಇದ್ದರೆ ಆತನಿಗೆ ಸರ್ಕಾರದಿಂದ ಸಿಗುವ ಯಾವುದೇ ಬೆಳೆ ಸಾಲ, ಬೆಳವಿಮೆ, ಮಕ್ಕಳಿಗೆ ಸಿಗುವ ವಿದ್ಯಾನಿಧಿ, ಕೃಷಿಗೆ ಪೂರಕವಾದ ಯಾವುದೇ ಸೌಲಭ್ಯಗಳು ದೊರೆಯುವುದಿಲ್ಲ. ಸದ್ಯ ಮಂಡಿಸಿದ ಬಜೆಟ್ ನಲ್ಲಿ ರಾಜ್ಯದ ಮುಖ್ಯಮಂತ್ರಿಗಳು, ರೈತ ಶಕ್ತಿ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ರೈತನಿಗೆ ಒಂದು ಎಕರೆಗೆ ರೂ.250 ಅಂತೆ 5 ಎಕರೆಗೆ ರೂ.1250 ಗಳನ್ನು ಇಂಧನ ವೆಚ್ಚವಾಗಿ ಕೃಷಿಕನ ಖಾತೆಗೆ ನೇರವಾಗಿ ಜಮಾ ಆಗಲಿದೆ ಎಂದು ಘೋಷಿಸಿದ್ದಾರೆ. ರೈತನ ಬಳಿ ಎಲ್ಲಾ ದಾಖಲೆಗಳಿದ್ದು, ಆದರೆ ಅವನು ಫ್ರೂಟ್ಸ್ ಪೋರ್ಟಲ್(FRIUTS PORTAL) ನಲ್ಲಿ ತನ್ನ ಹೆಸರನ್ನು ನೋಂದಾಯಿಸಿಕೊಳ್ಳದಿದ್ದರೆ ಸರ್ಕಾರ ಸಿಗುವ ಎಲ್ಲಾ ಸೌಲಭ್ಯಗಳಿಂದ ವಂಚಿತನಾಗುತ್ತಾನೆ.
ಈ ವಿಷಯಕ್ಕಾಗಿಯೇ ರೈತರು ಕೂಡಲೇ, ಫ್ರೂಟ್ಸ್ ಪೋರ್ಟಲ್ ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು, ನಿಮ್ಮ ಎಫ್ ಐಡಿ ನಂಬರ್ (FID NUMBER) ಪಡೆದುಕೊಳ್ಳಿ ಹಾಗೂ ಅದನ್ನು ಸರ್ಕಾರದ ಸೌಲತ್ತುಗಳನ್ನು ಪಡೆಯಲು ಬಳಸಿಕೊಳ್ಳಬಹುದು.
FID NUMBER ಗೆ ನೋಂದಣಿ ಮಾಡುವುದು ಹೇಗೆ?
ರೈತರು ಈ ನಂಬರ್ ಅನ್ನು ನೋಂದಾಯಿಸಿಕೊಳ್ಳಲು ನಿಮ್ಮ ಹತ್ತಿರವಿರುವ ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ರೇಷ್ಮೆ ಇಲಾಖೆ ಪಶು ಸಂಗೋಪನ ಇಲಾಖೆ ಕಂದಾಯ ಇಲಾಖೆ, ಸಂಬಂಧಿಸಿದ ಯಾವುದಾದರೂ ಒಂದು ಇಲಾಖೆಗೆ ಭೇಟಿ ನೀಡಿ, ರೈತರು RTC ಉತಾರ್, ರಾಷ್ಟ್ರೀಕೃತ ಬ್ಯಾಂಕಿನ ಪಾಸ್ ಬುಕ್ ಪ್ರತಿ, ಆಧಾರ್ ಕಾರ್ಡ್, ಪಾಸ್ಪೋರ್ಟ್ ಅಳತೆಯ ಫೋಟೋ, ಮೊಬೈಲ್ ನಂಬರ್ ನೀಡಿದರೆ ಕೇವಲ 24 ಗಂಟೆಯೊಳಗೆ ನಿಮ್ಮ ಹೆಸರು ಫ್ರುಟ್ಸ್ ಪೋರ್ಟಲ್ನಲ್ಲಿ(Fruits Portal) ನೋಂದಣಿಯಾಗುತ್ತದೆ.
FID NUMBER ಅನ್ನು ಮೊಬೈಲ್ ನಲ್ಲಿ ನೋಂದಣಿ ಮಾಡುವುದು ಹೇಗೆ?
https://fruits.karnataka.gov.in/OnlineUserLogin.aspx
- ಮೊದಲು ಮೇಲೆ ಕಾಣಿಸಿದ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಂತರ ‘Citizen Registration’ ಮೇಲೆ ಕ್ಲಿಕ್ ಮಾಡಬೇಕು.
- ನಂತರ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹಾಗೆ ನಿಮ್ಮ ಹೆಸರು ಮತ್ತು ಆಧಾರ್ ನಂಬರ್ ಬಳಸಿ,I agree ಮೇಲೆ ಕ್ಲಿಕ್ ಮಾಡಿ ನಂತರ ಸಬ್ಮಿಟ್ ಮಾಡಿ.
- ನಂತರ ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ಹಾಕಿ Proceed ಮೇಲೆ ಕ್ಲಿಕ್ ಮಾಡಿ.
- ನಂತರ ನಿಮಗೆ ನೋಂದಾಯಿಸಿದ ಮೊಬೈಲ್ ನಂಬರ್ ಗೆ ಒಂದು OTP ಬರುತ್ತದೆ ಅದನ್ನು SUBMIT ಮಾಡಬೇಕು.
- ನಂತರ ಒಂದು ಪಾಸ್ವರ್ಡ್ ಕ್ರಿಯೇಟ್ ಮಾಡಿ ಲಾಗಿನ್ ಆಗಿ, ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿದ್ದರೆ ಮಾತ್ರ ನಿಮಗೆ FID NUMBER ದೊರೆಯುತ್ತದೆ.
- ಕೊನೆಯಲ್ಲಿ ಕೃಷಿ ಇಲಾಖೆ, ರೇಷ್ಮೆ ಇಲಾಖೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಪರಿಶೀಲನೆ ಮಾಡಿ Approve ಮಾಡಿದರೆ ನಿಮಗೆ FID NUMBER ದೊರೆಯುತ್ತದೆ.
ಈ ಸೃಜನಶೀಲ FID NUMBER ಅನ್ನು ನೀವು ಬೆಳೆ ಸಾಲ, ಬೆಳೆ ವಿಮೆ, ಪಿಎಂ ಕಿಸಾನ್ ಹಾಗೂ ಸರ್ಕಾರದ ಸೌಲತ್ತುಗಳನ್ನು ಪಡೆಯಲು ಬಳಸಬಹುದಾಗಿದೆ.