Employees Salary:ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! ಸಂಬಳದಲ್ಲಿ ಭರ್ಜರಿ ಏರಿಕೆ!
23 ಜುಲೈ 2024ರಂದು ಈ ಬಾರಿಯ ಕೇಂದ್ರದ ಬಜೆಟ್ ಮಂಡನೆ ಯಾಗಲಿದೆ, ಹಣಕಾಸು ಸಚಿವಯಾದ ನಿರ್ಮಲ ಸೀತಾರಾಮನ್ ಅವರು ಬಜೆಟ್ ಅನ್ನು ಮಡಿಸಲಿದ್ದಾರೆ. ಈ ಬರಿಯ ಬಜೆಟ್ ಮೇಲೆ ಎಲ್ಲರೂ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಸತತವಾಗಿ ಮೂರನೇ ಬಾರಿ ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರದ ಹೊಸ ಅವಧಿಯ ಮೊದಲ ಸಾಮಾನ್ಯ ಬಜೆಟ್ ಮಂಡನೆ ಮಾಡಿ ಹಲವು ಘೋಷಣೆಗಳನ್ನು ಹೊರಡಿಸಲು ಸರ್ಕಾರವು ನಿರ್ಧರಿಸಿದೆ.
ಈ ಬಾರಿಯ ಬಜೆಟ್ ಮಂಡನೆಯಿಂದ ಹಲವು ವರ್ಗದವರಿಗೆ ಅನುಕೂಲವಾಗಲಿದೆ, ಸರ್ಕಾರಿ ನೌಕರರಿಗಾಗಿಯೇ ಮೂರು ವಿಶೇಷ ಘೋಷಣೆಯನ್ನು ಹೊರಡಿಸಲಿದೆ. ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ಯಾವೆಲ್ಲಾ ವಿಶೇಷ ಘೋಷಣೆಗಳನ್ನು ಹೊರಡಿಸಲಿದೆ ಎಂದು ಈ ಲೇಖನದ ಮೂಲಕ ತಿಳಿದುಕೊಳ್ಳಿ.
ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ!
ಈ ಬಾರಿಯ ಬಜೆಟ್ ನಲ್ಲಿ ಸರ್ಕಾರವು ತುಟ್ಟಿ ಭತ್ಯೆಯನ್ನು ಹೆಚ್ಚಿಸಬಹುದು ಎಂದು ನಂಬಲಾಗಿದೆ, ಇದಲ್ಲದೆ ಎಂಟನೇ ವೇತನ ಆಯೋಗವು(8thPay Commission) ಕೂಡ ಜಾರಿಯಾಗುವ ನಿರೀಕ್ಷೆ ಇದೆ. ಈ ಬಾರಿಯೂ ಬಾಕಿ ಉಳಿದಿರುವ 18 ತಿಂಗಳ ತುಟಿ ಭತ್ಯೆ (DA) ಯನ್ನು ಘೋಷಿಸುವ ಸಾಧ್ಯತೆ ಇದೆ ಎಂದು ಎನ್ನಲಾಗುತ್ತಿದೆ.
ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್, ಮೂರು ನಿರ್ಧಾರಗಳನ್ನು ಇಟ್ಟುಕೊಂಡು ಸರ್ಕಾರಿ ನೌಕರರಿಗೆ ವಿಶೇಷ ಉಡುಗೊರೆಯನ್ನು ನೀಡಬಹುದೆನ್ನಲಾಗುತ್ತಿದೆ. ಈ ಬಾರಿಯ ಬಜೆಟ್ (Budget) ಉದ್ಯೋಗಿಗಳಿಗೆ ಬಹಳ ಮಹತ್ವದ್ದಾಗಿದೆ. ಅಧಿಕೃತವಾಗಿ ಯಾವ ಘೋಷಣೆಯು ಆಗಿಲ್ಲದಿದ್ದರು ವರದಿಗಳನ್ನು ನಂಬುವುದಾದರೆ ಸರ್ಕಾರಿ ನೌಕರರ ವೇತನ ಎಷ್ಟು ಹೆಚ್ಚಾಗುತ್ತದೆ ಎನ್ನುವ ಬಗ್ಗೆ ನೋಡೋಣ.
ಸರ್ಕಾರಿ ನೌಕರರ ಸಂಬಳ ಭರ್ಜರಿ ಏರಿಕೆ!
ಕೇಂದ್ರದ ನೌಕರರು ಮತ್ತು ಪಿಂಚಣಿದಾರರಿಗೆ ದೊಡ್ಡ ಉಡುಗೊರೆ ನೀಡಲು ಕೇಂದ್ರದ ಕೇಂದ್ರ ಸರ್ಕಾರ ಸರ್ಕಾರ ನಿರ್ಧರಿಸಿದೆ, ಸರ್ಕಾರವು ತುಟ್ಟಿ ಭತ್ಯೆಯನ್ನು 4% ರಷ್ಟು ಹೆಚ್ಚಿಸಬಹುದು. ಇದಾದ ನಂತರ ನೌಕರರಿಗೆ ನೀಡಲಾಗುವ ಡಿಎ 54% ಕ್ಕೆ ಏರಿಕೆಯಾಗಲಿದ್ದು, ವೇತನವೂ ಕೂಡಾ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಲಿದೆ.
ಕೇಂದ್ರ ಸರ್ಕಾರವು ಪಿಂಚಣಿ ದಾರರಿಗೆ ಮತ್ತು ನೌಕರರ ಖಾತೆಗಳಿಗೆ ಬಾಕಿ ಉಳಿದಿರುವ 18 ತಿಂಗಳ ತುಟ್ಟಿ ಭತ್ಯೆಯನ್ನು(DA) ಜಮಾ ಮಾಡಬಹುದು, ಹಿಂದಿನ ಬಜೆಟ್ ನಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಂಡಿದ್ದರೆ ಅದು ಆಗುವುದು ಖಚಿತ ಎಂದು ಪರಿಗಣಿಸಲಾಗಿದೆ, ಇದರಿಂದ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳಿಗೆ ತುಂಬಾ ಅನುಕೂಲವಾಗಲಿದೆ.
ಕೇಂದ್ರ ಸರ್ಕಾರವು ಎಂಟನೇ ವೇತನ ಆಯೋಗವನ್ನು ರಚಿಸಬಹುದು, ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರಚಿಸಲಾಗುತ್ತದೆ, ಇದು ಕೂಡ ಎರಡು ವರ್ಷಗಳ ನಂತರ ಜಾರಿಗೆ ಬರುತ್ತದೆ, ಈಗ 8ನೇ ವೇತನ ಆಯೋಗ (8thPay Commission) ಜಾರಿಯಾದರೆ, ಅದು 2026 ರಲ್ಲಿ ಜಾರಿಗೆ ಬರಲಿದೆ.