Electricity Bill: ಕರೆಂಟ್ ಬಿಲ್ ಸಂಬಂಧಿಸಿದ ಹಾಗೆ ಬಿಗ್ ಅಪ್ಡೇಟ್ ಜಾರಿ!
ವಿದ್ಯುತ್ ಇಲಾಖೆಯ ಕರೆಂಟ್ ಬಿಲ್ ಸಂಬಂಧಿಸಿದ ಹಾಗೆ ಹೊಸ ನಿಯಮವನ್ನು ಜಾರಿಗೆ ತಂದಿದೆ, ಅದು ಏನೆಂದರೆ ಮೊದಲೆಲ್ಲ ವರ್ಷಕ್ಕೊಮ್ಮೆ ಅಡಿಷನಲ್ ಸೆಕ್ಯೂರಿಟಿ ಡೆಪಾಸಿಟ್(additional security deposit) ಹಣವನ್ನು ಪಡೆದುಕೊಳ್ಳುತ್ತಿತ್ತು. ಆದರೆ ಈ ವಿಚಾರವಾಗಿ ವಿದ್ಯುತ್ ಇಲಾಖೆಯು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಪ್ರತಿ ತಿಂಗಳು ವಿದ್ಯುತ್ ಬಿಲ್(Electricity Bill) ತುಂಬುವ ಹಣದಲ್ಲಿ, ಎಲ್ಲವನ್ನು ಸೇರಿಸಿ, ಪ್ರತಿ ತಿಂಗಳು ಕಂತಿನ ರೂಪದಲ್ಲಿ ಸೆಕ್ಯೂರಿಟಿ ಡೆಪೋಸಿಟ್ ಹಣ ಪಡೆದುಕೊಳ್ಳಲಾಗುತ್ತದೆ ಎನ್ನುವ ಮಾಹಿತಿಯು ಹೊರ ಬಿದ್ದಿದೆ. ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಿ.
ವಿದ್ಯುತ್ ಇಲಾಖೆಯ ಸೆಕ್ಯೂರಿಟಿ ಬಿಲ್(Security Bill) ಅಂದರೆ, ವಿದ್ಯುತ್ ಪಡೆಯುವ ಗ್ರಾಹಕರ ವಾರ್ಷಿಕ ಬಿಲ್(Yearly Bill) ಆಧಾರದ ಮೇಲೆ ಪಡೆದುಕೊಳ್ಳಲಾಗುತ್ತದೆ, ಆದರೆ ಈಗ ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ, ಇದರ ಮೂಲಕ ಪ್ರತಿ ತಿಂಗಳು ಕಂತಿನ ರೂಪದಲ್ಲಿ ಹಣವನ್ನು ಪಡೆದುಕೊಳ್ಳುವ ನಿರ್ಧಾರವನ್ನು ಮಾಡಿದ್ದಾರೆ, ಆದರೆ ವಿದ್ಯುತ್ ಇಲಾಖೆಯ(Electric Department) ಈ ಮಹತ್ವದ ನಿರ್ಧಾರದಿಂದ ಗ್ರಾಹಕರಲ್ಲಿ ಸಾಕಷ್ಟು ಗೊಂದಲಗಳಿವೆ.
ಸೆಕ್ಯೂರಿಟಿ ಹಣವನ್ನು ಪಾವತಿ ಮಾಡದವರಿಗೆ ನೋಟಿಸ್!
ವಿದ್ಯುತ್ ಇಲಾಖೆಗೆ ಸಂಬಂಧಿಸಿದ ಸೆಕ್ಯೂರಿಟಿ ಹಣವನ್ನು ಪಾವತಿ ಮಾಡಿದವರ ಸಂಖ್ಯೆ ಹೆಚ್ಚಾಗಿದೆ, ಇದರಿಂದ ವಿದ್ಯುತ್ ಇಲಾಖೆಯ ಇವರಿಗೆ ವಾರ್ಷಿಕವಾಗಿ ಒಂದೇ ಬಾರಿ ಹಣವನ್ನು ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಕ್ಕಾಗಿ, ಪ್ರತಿ ತಿಂಗಳು ಸೆಕ್ಯೂರಿಟಿ ಹಣವನ್ನು (Security Money) ಕಂತಿನ ರೂಪದಲ್ಲಿ ಕಟ್ಟಿಸಿಕೊಳ್ಳುವ ನಿರ್ಧಾರವನ್ನು ಜಾರಿಗೆ ತಂದಿದೆ.
ವಿದ್ಯುತ್ ಇಲಾಖೆಯು, ಇದುವರೆಗೂ ಸೆಕ್ಯೂರಿಟಿ ಡೆಪಾಸಿಟ್ ಹಣವನ್ನು ದೊಡ್ಡ ಮೊತ್ತದಲ್ಲಿ ಬಾಕಿ ಉಳಿಸಿಕೊಂಡಿರುವವರಿಗೆ ಇಲಾಖೆಯು ನೋಟಿಸ್(Notice) ಜಾರಿ ಮಾಡಿದೆ. ಇದೇ ಕಾರಣಕ್ಕಾಗಿ ವಿದ್ಯುತ್ ಇಲಾಖೆಯು 2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ ಹೊಸ ನಿಯಮವನ್ನು ಜಾರಿಗೆ ತರುವಂತಹ ಕೆಲಸವನ್ನು ಮಾಡಿದೆ.
ಸೆಕ್ಯೂರಿಟಿ ಹಣ ಅಂದರೆ ಏನು?
ಗ್ರಾಹಕರು ಪಾವತಿಸುವ ಈ ಸೆಕ್ಯೂರಿಟಿ ಹಣ ಎಂದರೆ, ಇದನ್ನು ವಿದ್ಯುತ್ ಇಲಾಖೆಯು ಸುರಕ್ಷಿತವಾಗಿ ಇಟ್ಟುಕೊಳ್ಳುತ್ತದೆ ಹಾಗೂ ಒಂದು ವೇಳೆ ಗ್ರಾಹಕರ ಕನೆಕ್ಷನ್ ಕಟ್(Connection cut) ಮಾಡುವ ಸಂದರ್ಭ ಎದುರಾದಾಗ, ಉಳಿಸಿಕೊಂಡಿರುವ ಸೆಕ್ಯೂರಿಟಿ ಹಣವನ್ನು ಬಡ್ಡಿಯ ಜೊತೆಗೆ ವಾಪಸ್ ಕೊಡಲಾಗುತ್ತದೆ.
ಗ್ರಾಹಕರು ವಿದ್ಯುತ್ ಬಿಲ್ (Electricity Bill) ಕಟ್ಟುವುದನ್ನು ಬಾಕಿ ಉಳಿಸಿಕೊಂಡಿದ್ದರೆ, ಆ ಸೆಕ್ಯೂರಿಟಿ ಹಣದಲ್ಲಿ ವಿದ್ಯುತ್ ಬಿಲ್ ಕಟ್ ಮಾಡಿ ಉಳಿದ ಹಣವನ್ನು ಗ್ರಾಹಕರಿಗೆ ವಾಪಸ್ ನೀಡುತ್ತದೆ.
ವಿದ್ಯುತ್ ಇಲಾಖೆಯು, ಗ್ರಾಹಕರಿಗೆ ನೀಡುವ ಕರೆಂಟ್ ಬಿಲ್ ತಯಾರಿ ಮಾಡಲು ಏಳು ದಿನಗಳು ಬೇಕಾಗುತ್ತದೆ, ಅದನ್ನು ಗ್ರಾಹಕರಿಗೆ ತಲುಪಿಸಲು 15 ದಿನಗಳು ಬೇಕಾಗುತ್ತದೆ ಹಾಗೂ ಉಳಿದ ಎಲ್ಲಾ ಪ್ರಕ್ರಿಯೆಯು ಮುಗಿಯುವ ವೇಳೆಗೆ, ಗ್ರಾಹಕರು 45 ದಿನಗಳ ಹೆಚ್ಚುವರಿ ವಿದ್ಯುತ್ತನ್ನು ಬಳಕೆ ಮಾಡುತ್ತಾರೆ. ಆ ಸಂದರ್ಭದಲ್ಲಿ ಗ್ರಾಹಕರು ಬಳಸಿರುವ ಹೆಚ್ಚುವರಿ ವಿದ್ಯುತ್ ಮೇಲೆ ಸೆಕ್ಯೂರಿಟಿ ಡೆಪೋಸಿಟ್ ಹಣವನ್ನು ಚಾರ್ಜ್ ಮಾಡಲಾಗುತ್ತದೆ.
ಇನ್ನು ಹೆಚ್ಚಿನ ಸರ್ಕಾರಿ ವಿಷಯಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.