Cash Limit: ಮನೆಯಲ್ಲಿ ಎಷ್ಟು ಕ್ಯಾಶ್ ಇಟ್ಟುಕೊಳ್ಳಬಹುದು? ಮಿತಿಮೀರಿ ಇದ್ದರೆ ಬೀಳುತ್ತೆ ದಂಡ!
ಭಾರತ ಹೆಚ್ಚು ಪ್ರಗತಿ ಹೊಂದಿ, ಡಿಜಿಟಲ್ ಇಂಡಿಯಾ(Digitel India) ಆಗಿದ್ದರೂ ಕೂಡ ಹೆಚ್ಚಿನ ಜನರು ಇನ್ನು ಹಣದ ವ್ಯವಹಾರಕ್ಕೆ(Business) ಹಾಗೂ ಇನ್ನಿತರ ಮುಖ್ಯ ಕೆಲಸಗಳಿಗೆ ಬಳಕೆ ಮಾಡುತ್ತಿದ್ದಾರೆ. ಅಂಥವರು ತಮ್ಮ ಖರ್ಚಿಗಾಗಿ ಮನೆಯಲ್ಲಿ ಒಂದಿಷ್ಟು ಪ್ರಮಾಣದ ಹಣವನ್ನು (Cash) ಇಟ್ಟುಕೊಂಡಿರುತ್ತಾರೆ.
ಹೆಚ್ಚಿನ ಜನರು ಎಟಿಎಂ(ATM) ನಿಂದ ಹಣವನ್ನು ವಿತ್ ಡ್ರಾ(Withdrawal) ಮಾಡಿ ಮನೆಯಲ್ಲಿ ತಂದು ಇಟ್ಟುಕೊಳ್ಳುತ್ತಾರೆ, ಆದರೆ ಮನೆಯಲ್ಲಿ ಎಷ್ಟು ಪ್ರಮಾಣದ ಹಣವನ್ನು(Cash) ಇಟ್ಟುಕೊಳ್ಳಬೇಕು ಎನ್ನುವುದಕ್ಕೂ ಕೂಡ ಒಂದು ಲಿಮಿಟ್(Cash Limit) ಇದೆ.
ಒಂದು ವೇಳೆ ನಿಮ್ಮ ಮನೆಯಲ್ಲಿ ಲಿಮಿಟ್(Limit) ಗಿಂತ ಮೀರಿ ಹೆಚ್ಚು ಹಣ ಇದ್ದರೆ ನಿಮ್ಮ ಮೇಲೆ ಐಟಿಆರ್ (ITR) ಸಲ್ಲಿಕೆ ಆಗಬಹುದು, ಹಾಗಾಗಿ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಹಾಗೆ ಒಂದಿಷ್ಟು ಮಾಹಿತಿಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು.
ಮನೆಯಲ್ಲಿ ಎಷ್ಟು ಹಣ ಇಟ್ಟುಕೊಳ್ಳಬಹುದು?
ಇನ್ಕಮ್ ಟ್ಯಾಕ್ಸ್ ಇಲಾಖೆಯು ಜಾರಿಗೆ ತಂದಿರುವ ನಿಯಮಗಳ ಪ್ರಕಾರ ನಿಮ್ಮ ಮನೆಯಲ್ಲಿ ಎಷ್ಟು ಕ್ಯಾಶ್ ಬೇಕಾದರೂ ಇಟ್ಟುಕೊಳ್ಳಬಹುದು, ಇದಕ್ಕೆ ಯಾವುದೇ ನಿಯಮವಿಲ್ಲ.
ಆದರೆ ನಿಮ್ಮ ಮನೆಗೆ ಐಟಿ ದಾಳಿ (IT Raid) ನಡೆದರೆ, ಐಟಿ ಅಧಿಕಾರಿಗಳು (IT Officers) ಬಂದು ಪರಿಶೀಲನೆ ನಡೆಸಿದಾಗ ಹೆಚ್ಚಿನ ನಾಗದು ಸಿಕ್ಕಿದರೆ, ಆಗ ನೀವು ಆ ಹಣದ(Money) ಮೂಲ ಯಾವುದು ಎನ್ನುವುದು ತಿಳಿಸಬೇಕು ಮತ್ತು ಸರಿಯಾದ ದಾಖಲೆಗಳು ಸಾಕ್ಷಿಗಳನ್ನು ಅವರಿಗೆ ಸಲ್ಲಿಕೆ ಮಾಡಬೇಕು, ಆ ಹಣಕ್ಕೆ ಸರಿಯಾಗಿ ಟ್ಯಾಕ್ಸ್ ಪಾವತಿ(Tax Pay) ಮಾಡಿದ್ದರೆ ಯಾವುದೇ ಚಿಂತೆ ಪಡುವ ಅಗತ್ಯವಿಲ್ಲ.
ಎಷ್ಟು ದಂಡ ಕಟ್ಟಬೇಕು?
ನಿಮ್ಮ ಮನೆಯಲ್ಲಿ ಹೆಚ್ಚು ಕ್ಯಾಶ್(More Cash) ಇದ್ದು, ಅದನ್ನು ಐಟಿ(IT) ಅಧಿಕಾರಿಗಳು ದಾಳಿ ನಡೆಸಿದಾಗ, ಅವರಿಗೆ ಸರಿಯಾದ ದಾಖಲೆಗಳನ್ನು ಮತ್ತು ಸಾಕ್ಷಿಗಳನ್ನು ಸಲ್ಲಿಸಲು ಆಗದಿದ್ದಾಗ, ನಿಮ್ಮ ಒಟ್ಟು ಹಣ ಸೀಜ್ ಆಗಬಹುದು, ಅದರ ಜೊತೆಗೆ ನಿಮ್ಮ ಮೇಲೆ ಭಾರಿ ದಂಡ ವಿಧಿಸಲಾಗುತ್ತದೆ.
ಸಿಜ್ ಆಗಿರುವ ಒಟ್ಟು ಮೊತ್ತದ ಆಧಾರದ ಮೇಲೆ 137% ದಂಡ ವಿಧಿಸುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ನೀವು ಬೇರೆ ಬೇರೆ ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗುತ್ತದೆ.
ಒಂದು ವರ್ಷಕ್ಕೆ ಒಬ್ಬ ವ್ಯಕ್ತಿಯು ಹಿಮ್ಪಡೆಯಬಹುದಾದ ಮೊತ್ತವೆಷ್ಟು?
ತೆರಿಗೆ ಇಲಾಖೆಯ(Income Tax Department) ನಿಯಮದ ಪ್ರಕಾರ ಒಬ್ಬ ವ್ಯಕ್ತಿಯು ಒಂದೇ ಬಾರಿ 50,000 ಕ್ಕಿಂತ ಹೆಚ್ಚು ಹಣ ಪಡೆದರೆ ಅದಕ್ಕೆ ಅಗತ್ಯವಿರುವ ಪಾನ್ ಕಾರ್ಡ್ ಮಾಹಿತಿಯನ್ನು ನೀಡಬೇಕಾಗುತ್ತದೆ.
ಹಾಗೆಯೇ ಒಂದು ವರ್ಷದ ಅವಧಿಯಲ್ಲಿ ಒಬ್ಬ ವ್ಯಕ್ತಿಯು 20 ಲಕ್ಷದವರೆಗೆ ನಿಶ್ಚಿತ ಠೇವಣಿಯನ್ನು(Fixed Deposit) ಇಡಬಹುದು ಅಥವಾ ಅಷ್ಟೇ ಮೊತ್ತವನ್ನು ಕೂಡ ಹಿಂಪಡೆಯಬಹುದು. ಎರಡು ಲಕ್ಷಕ್ಕಿಂತ ಹೆಚ್ಚಿನ ಹಣಕಾಸಿನ ವಹಿವಾಟು ನಡೆದರೆ, ನಿಮ್ಮ ಪಾನ್ ಕಾರ್ಡ್ (Pan Card) ಮತ್ತು ಆಧಾರ್ ಕಾರ್ಡ್ (Aadhar Card) ಮಾಹಿತಿಯನ್ನು ನೀಡಬೇಕಾಗಿ ಬರುತ್ತದೆ.
ತೆರಿಗೆ ಇಲಾಖೆಯ ಇನ್ನಿತರ ನಿಯಮಗಳು;
- ಒಬ್ಬ ವ್ಯಕ್ತಿಯು ಒಂದೇ ಬಾರಿ 50,000 ಕ್ಕಿಂತ ಹೆಚ್ಚಿನ ಮೊತ್ತವನ್ನು ಪಡೆದುಕೊಂಡರೆ ಅದಕ್ಕೆ ಅಗತ್ಯವಿರುವ ಪಾನ್ ಕಾರ್ಡ್ ತೋರಿಸಬೇಕು.
- ವರ್ಷದಲ್ಲಿ ಒಬ್ಬ ವ್ಯಕ್ತಿ 20 ಲಕ್ಷಕ್ಕಿಂತ ಹೆಚ್ಚಿನ ಹಣಕಾಸಿನ ವಹಿವಾಟು ನಡೆಸಿದರೆ, ಆತ TDS ಪಾವತಿ ಸಲ್ಲಿಸಬೇಕು. ಇದು ಸೆಕ್ಷನ್ 194N ಅಡಿಯಲ್ಲಿ ಅಡಕವಾಗಿದೆ, ಈ ನಿಯಮ ಎಲ್ಲರಿಗೂ ಅಡಕವಾಗುವುದಿಲ್ಲ. ಮೂರು ವರ್ಷಗಳಿಂದ ITR ಸಲ್ಲಿಕೆ ಮಾಡಿರುವವರಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ.
- ITR ಸಲ್ಲಿಕೆ ಮಾಡದೆ ಇರುವ ವ್ಯಕ್ತಿಯು ಒಂದು ವರ್ಷದಲ್ಲಿ 20 ಲಕ್ಷದ ಹಣಕಾಸಿನ ವಹಿವಾಟು ನಡೆಸಿದರೆ, 2% TDS ಪಾವತಿ ಮಾಡಬೇಕಾಗುತ್ತದೆ, 1 ಕೋಟಿ ವರಗಿನ ವಹಿವಾಟು ನಡೆಸಿದರೆ 5% TDS ಪಾವತಿ ಮಾಡಬೇಕಾಗುತ್ತದೆ, ಇದರಲ್ಲಿ ITR ಸಲ್ಲಿಕೆ ಮಾಡಿರುವರಿಗೆ ಮಾತ್ರ ವಿನಾಯಿತಿ ಸಿಗುತ್ತದೆ.
- ಕ್ರೆಡಿಟ್ ಕಾರ್ಡ್(Credit Card) ಅಥವಾ ಡೆಬಿಟ್ ಕಾರ್ಡ್(Debit Card) ಮೂಲಕ ಒಂದು ಲಕ್ಷಕ್ಕಿಂತ ಹೆಚ್ಚು ಹಣಕಾಸಿನ ವಹಿವಾಟು(Money Transcay) ನಡೆಸಿದರೆ, ಆಗ ನಿಮ್ಮ ಮತ ಪರಿಶೀಲನೆಗೆ ಒಳಪಡುತ್ತದೆ. ಯಾವುದೇ ಖರೀದಿಗೆ 2 ಲಕ್ಷಕ್ಕಿಂತ ಹೆಚ್ಚಿನ(above) ಮೊತ್ತ ಬಳಕೆ ಮಾಡುವುದಾದರೆ ನಿಮ್ಮ ಆಧಾರ್ ಕಾರ್ಡ್ (Aadhaar Card) ಮತ್ತು ಪ್ಯಾನ್ ಕಾರ್ಡ್ ತೋರಿಸಬೇಕು.
ಹೆಚ್ಚಿನ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಲು ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.