Canara Bank: ನಿಯಮದ ಬದಲಾವಣೆ! ಕೆನರಾ ಬ್ಯಾಂಕಿನಲ್ಲಿ ಮಿನಿಮಮ್ ಬ್ಯಾಲೆನ್ಸ್ ಎಷ್ಟಿರಬೇಕು? ನಿಮಗೆ ಗೊತ್ತಾ?
ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಬ್ಯಾಂಕಿಂಗ್(Bank) ಕ್ಷೇತ್ರಗಳು ಹೆಚ್ಚು ಹೆಚ್ಚು ಪ್ರಗತಿಯನ್ನು ಸಾಧಿಸುತ್ತಿದೆ, ಏಕೆಂದರೆ 2014ರ ಲೋಕಸಭಾ ಚುನಾವಣೆಯ ಬಳಿಕ ಪ್ರಧಾನಿ ಮೋದಿ ಅವರು ಜಾರಿಗೆ ತಂದಿರುವಂತಹ ಹೊಸ ಹೊಸ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು(National Banks) ಸರ್ಕಾರದ ಯೋಜನೆಯ ಹಣವನ್ನು ನೇರವಾಗಿ ಗ್ರಾಹಕರ ಖಾತೆಗೆ ಜಮಾ(DBT) ಮಾಡುತ್ತಿದೆ. ಹೊಸ ಹೊಸ ಯೋಜನೆಗಳಿಂದ ಗ್ರಾಹಕರು ಹೆಚ್ಚು ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆಯುತ್ತಿದ್ದಾರೆ.
ಭಾರತವು ಇನ್ನೂ ಡಿಜಿಟಲೀಕರಣ ಹೊಂದಿರುವ ಕಾರಣ, ಎಲ್ಲೆಡೆ ಉದ್ಯೋಗ ಸೃಷ್ಟಿಯಾಗುತ್ತಿದೆ. ಉದ್ಯೋಗಿಗಳು ಕೂಡ ತಮ್ಮ ಸೇವಿಂಗ್ ಅಕೌಂಟ್ (Savings Account) ಹೊಂದಲು ಬ್ಯಾಂಕುಗಳಲ್ಲಿ ಖಾತೆಯನ್ನು ತೆರೆಯಲು ಆರಂಭ ಮಾಡಿದ್ದಾರೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಈಗ ಪ್ರಗತಿಯಲ್ಲಿ ಹೊಂದಿರುವ ಬ್ಯಾಂಕುಗಳಲ್ಲಿ ಕೆನರಾ ಬ್ಯಾಂಕ್ (Canara Bank) ಕೂಡ ಒಂದಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಈ ರಾಷ್ಟ್ರೀಕೃತ ಬ್ಯಾಂಕ್ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದ ಅತ್ಯಂತ ಸುರಕ್ಷಿತ ಹಾಗೂ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾಗಿದೆ, ನಿಮ್ಮ ಸುತ್ತಮುತ್ತಲಿನ ಊರುಗಳಲ್ಲಿಯೂ ಸಹ ನೀವು ಕೆನರಾ ಬ್ಯಾಂಕ್ (Canara Bank) ಅನ್ನು ನೋಡಬಹುದು.
ನೀವು ನಿಮ್ಮ ಬ್ಯಾಂಕ್ ಖಾತೆಯನ್ನು(Bank Account) ಕೆನರಾ ಬ್ಯಾಂಕಿನಲ್ಲಿ ಆರಂಭಿಸಿರಬಹುದು, ಕೆಲವು ಜನರಿಗೆ ಕೆನರಾ ಬ್ಯಾಂಕಿನಲ್ಲಿ ಎಷ್ಟು ಮಿನಿಮಮ್ ಬ್ಯಾಲೆನ್ಸ್(Minimum Balance) ಇಡಬೇಕು ಎನ್ನುವುದು ತಿಳಿದಿರುವುದಿಲ್ಲ. ಅದರಲ್ಲೂ ಹಿರಿಯ ವಯಸ್ಕರಿಗೆ ಈ ಮಾಹಿತಿ ತಿಳಿದಿರುವುದಿಲ್ಲ. ಕೆಲವೊಂದು ಬಾರಿ ನೀವು ಮಿನಿಮಮ್ ಬ್ಯಾಲೆನ್ಸ್ ಮೆಂಟೆನೆನ್ಸ್ (Minimum balance Maintenance) ಮಾಡದೆ ಹೋದರೆ, ಮುಂದಿನ ಉಳಿತಾಯದಲ್ಲಿ ಹೆಚ್ಚುವರಿ ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ ಅನ್ನುವುದನ್ನು ನೀವು ತಿಳಿದಿರಬೇಕಾಗುತ್ತದೆ.
ನೀವು ಉಳಿತಾಯ ಖಾತೆಯನ್ನು ಹೊಂದಿದ್ದರೆ, ಅಲ್ಲಿ ಮಿನಿಮಮ್ ಬ್ಯಾಲೆನ್ಸ್ ಮೈಂಟೆನನ್ಸ್ ಮಾಡದೆ ಹೋದರೆ ನಿಮಗೆ ಹೆಚ್ಚುವರಿ ಶುಲ್ಕದ ಚಾರ್ಜ್ ಮಾಡಲಾಗುತ್ತದೆ. ಕೆನರಾ ಬ್ಯಾಂಕಿನ (Canara Bank) ಉಳಿತಾಯ ಖಾತೆಯಲ್ಲಿ ಎಷ್ಟು ಮಿನಿಮಮ್ ಬ್ಯಾಲೆನ್ಸ್ ಇರಬೇಕು ಎನ್ನುವ ಮಾಹಿತಿಯನ್ನು ತಿಳಿಯೋಣ ಬನ್ನಿ.
ಕೆನರಾ ಬ್ಯಾಂಕಿನಲ್ಲಿ ಮಿನಿಮಮ್ ಬ್ಯಾಲೆನ್ಸ್ ಎಷ್ಟಿರಬೇಕು?
ನೀವು ಹಳ್ಳಿಯಲ್ಲಿ ಕೆನರಾ ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ತೆರೆದರೆ, ರೂ.500 ಮಿನಿಮಮ್ ಬ್ಯಾಲೆನ್ಸ್ ಹೊಂದಿರಬೇಕು ಹಾಗೂ ನಗರ ಹಾಗೂ ಉಪನಗರ ಮತ್ತು ಮೆಟ್ರೋ ನಗರಗಳಲ್ಲಿ ನೀವು ಕೆನರಾ ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ತೆರೆದರೆ ರೂ.1,000 ಮಿನಿಮಮ್ ಬ್ಯಾಲೆನ್ಸ್ ಮೆಂಟೇನೆನ್ಸ್ ಮಾಡಬೇಕಾಗುತ್ತದೆ…
ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.