Borewell Subsidy: ಬೋರ್ವೆಲ್ ಕೊರೆಸಲು ಸರ್ಕಾರದಿಂದ ಅರ್ಜಿ ಆಹ್ವಾನ! ಇಂದೇ ಅರ್ಜಿ ಸಲ್ಲಿಸಿ.
ಕರ್ನಾಟಕದ ಆರ್ಯ ವೈಶ್ಯ ಸಮುದಾಯದ ಅಭಿವೃದ್ಧಿ ನಿಗಮದ ಸಹಾಯಧನದಲ್ಲಿ ಕೊಳವೆಬಾವಿ/ಬೋರ್ವೆಲ್ ಅನ್ನು ಕೊರೆಸುವ (Borewell Subsidy) ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತ ಅಧಿಕೃತ ಅನುಮೋದನೆಯನ್ನು ನೀಡಲಾಗಿದೆ.
ಸರ್ಕಾರದ ಈ ಯೋಜನೆಗೆ(Borewell Subsidy Scheme) ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಹೇಗೆ ಅರ್ಜಿ ಸಲ್ಲಿಸಬೇಕು? ವೆಬ್ ಸೈಟ್ ಲಿಂಕ್ (Website link) ಎಲ್ಲಿದೆ? ಅಗತ್ಯವಿರುವ ದಾಖಲೆಗಳು ಸೇರಿದಂತೆ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗುವುದು.
ರಾಜ್ಯ ಸರ್ಕಾರ ಕರ್ನಾಟಕದ ಆರ್ಯ ವೈಶ್ಯ ಸಮುದಾಯದ ಅಭಿವೃದ್ಧಿ ನಿಗಮದ ಮೂರು ಯೋಜನೆಗಳಿಗೆ ಅನುಮೋದನೆ ನೀಡಿದೆ, ಆರ್ಯ ವೈಶ್ಯ ಆಹಾರ ವಾಹಿನಿ ಯೋಜನೆ, ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಮತ್ತು ವಾಸವಿ ಜಲ ಶಕ್ತಿ ಯೋಜನೆಗಳಿಗೆ(Borewell Subsidy Scheme) ಫಲಾನುಭವಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ವಾಸವಿ ಜಲ ಶಕ್ತಿ ಯೋಜನೆಯ ಉದ್ದೇಶ;
ಈ ಯೋಜನೆಯಡಿ ರೈತರು ಹೊಂದಿರುವ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಇಲ್ಲದಿದ್ದಲ್ಲಿ ಕೊಳವೆಬಾವಿ ಕೊರೆಸುವುದು, ವಿದ್ಯುದ್ದಿಕರಣ ಮಾಡುವುದು ಮತ್ತು ಪಂಪ್ಸೆಟ್ ಅಳವಡಿಸಲು ಅತಿ ಕಡಿಮೆ ಬಡ್ಡಿದರ 4% ರಂತೆ ಗರಿಷ್ಠ 2 ಲಕ್ಷ ರೂಪಾಯಿವರೆಗೆ ಸಾಲ ಹಾಗೂ ವಿದ್ಯುದ್ದಿಕರಣಕ್ಕೆ ರೂ.50,000/-ಸಹಾಯಧನ ನೀಡಿ ಕೃಷಿಗೆ ಅನುಕೂಲ ವಾಗುವಂತೆ ನೆರವು ನೀಡುವುದಾಗಿದೆ.
ಅರ್ಜಿ ಸಲ್ಲಿಸುವಿಕೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭವಾಗುವ ದಿನಾಂಕ | 12 July 2024 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 31 August 2024 |
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
https://aryavysya.karnataka.gov.in/KACDC_Data/Main/VJ
ಫಲಾನುಭವಿಗಳು ಮೇಲೆ ಕಾಣಿಸಿದ ಅಧಿಕೃತ ಲಿಂಕ್ ಮೂಲಕ, ಜುಲೈ 12ರ ನಂತರ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು? ಇರಬೇಕಾದ ಅರ್ಹತೆಗಳು
- ಸಾಮಾನ್ಯ ವರ್ಗದ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು
- ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 6 ಲಕ್ಷಕ್ಕಿಂತ ಒಳಗೆ ಇರಬೇಕು.
- 21 ವರ್ಷ ಮೇಲ್ಪಟ್ಟ 50 ವರ್ಷ ಒಳಗಿನವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
- ಅರ್ಜಿದಾರರು ಸಣ್ಣ ರೈತ ಕುಟುಂಬಕ್ಕೆ ಸೇರಿದವರಾಗಿದ್ದರೆ, ಅವರು ಒಂದೇ ಸ್ಥಳದಲ್ಲಿ 2 ಮತ್ತು ಗರಿಷ್ಠ 5 ಎಕರೆ ಜಮೀನು ಹೊಂದಿರಬೇಕು.
- ಅರ್ಜಿದಾರರು ಕರ್ನಾಟಕದವರಾಗಿರಬೇಕು, ಅವರ ಕಾಯಂ ವಿಳಾಸ ಕರ್ನಾಟಕವಾಗಿರಬೇಕು .
- ಸರ್ಕಾರ ಅರ್ಜಿ ಸಲ್ಲಿಕೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ 33% ಮಹಿಳಾ ಫಲಾನುಭವಿಗಳು, 5% ವಿಶೇಷ ಚೇತನರು ಮತ್ತು 5% ತೃತೀಯ ಲಿಂಗ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ.
- ಯೋಜನೆಯ ಸಾಲವನ್ನು ಭದ್ರತಾ ಸಹಿತವಾಗಿ ನೀಡಲಾಗುತ್ತದೆ.
- ಫಲಾನುಭವಿಯು ತಾನು ಸಣ್ಣ ರೈತನಾಗಿರುವ ಬಗ್ಗೆ ಹಾಗೂ ನೀರಾವರಿ ಸೌಲಭ್ಯ ಹೊಂದಿಲ್ಲವೆಂದು ಇರುವ ದೃಢೀಕರಣ ಪತ್ರವನ್ನು ಕಂದಾಯ ಅಧಿಕಾರಿಗಳಿಂದ ಪಡೆದಿರಬೇಕು.
- ಸಾಲದ ಘಟಕವು ರೂ.2 ಲಕ್ಷಕ್ಕಿಂತ ಹೆಚ್ಚಿದ್ದಲ್ಲಿ, ಫಲಾನುಭವಿಯು ತನ್ನ ಸ್ವಂತ ವೆಚ್ಚವನ್ನು ಬರಿಸುವುದಾಗಿ ಸ್ವಯಂ ಘೋಷಣಾ ಪತ್ರವನ್ನು ನೀಡಬೇಕು.
ವಾಸವಿ ಜಲ ಶಕ್ತಿ ಯೋಜನೆಯನ್ನು ಪಡೆಯಲು ಇತರ ಷರತ್ತುಗಳು;
• ಅರ್ಜಿದಾರನು ಯೋಜನೆಯ ನಿಗಮದಿಂದ ಪಡೆದ ಸಾಲ/ಸಹಾಯಧನವನ್ನು ಕಡ್ಡಾಯವಾಗಿ ನಿಗಮದ ಹೆಸರು ಮತ್ತು ಲಾಂಛನವನ್ನು ತನ್ನ ಕೃಷಿ ಭೂಮಿಯ ಫಲಕದಲ್ಲಿ ಅಳವಡಿಕೆ ಮಾಡಿ ಪ್ರದರ್ಶಿಸಬೇಕಾಗುತ್ತದೆ.
• ನಿಗಮದ ವತಿಯಿಂದ ಆಯೋಜಿಸುವ ಕೃಷಿ ಸಂಬಂಧಿಸಿದ್ದ ಟ್ರೈನಿಂಗ್ ಅಥವಾ ಮಾರ್ಕೆಟಿಂಗ್ ತರಬೇತಿಗಳಿಗೆ (Marketing training) ಫಲಾನುಭವಿಯು ಕಡ್ಡಾಯವಾಗಿ ಹಾಜರಿರಬೇಕು.
• ಫಲಾನುಭವಿಯು ಕಡ್ಡಾಯವಾಗಿ ISI ಗುರುತು ಹೊಂದಿರುವ ಕೃಷಿ ಉಪಕರಣಗಳನ್ನು ಬಳಸಬೇಕು.
• ಅರ್ಜಿದಾರನು ಕಡ್ಡಾಯವಾಗಿ Bureau Energy Efficiency ಅವರು ದೃಢೀಕರಿಸಿದ 4 ಅಥವಾ 5 ರೇಟಿಂಗ್ ಸಬ್ಮರ್ಸಿಬಲ್ ಪಂಪ್ಸೆಟ್ಟುಗಳನ್ನು ಅಳವಡಿಸಿರಬೇಕು, ಹಾಗೂ ಎಲ್ಲಾ ಉಪಕರಣಗಳು ISI ಗುಣಮಟ್ಟದ್ದಾಗಿರಬೇಕು.
ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.