ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರದ ಮೇಲೆ ಫ್ರೂಟ್ಸ್ ಐಡಿ (FID) ಹೊಂದಿರುವ ಎಲ್ಲಾ ರೈತರಿಗೆ ಪರಿಹಾರ ತಂತ್ರಾಂಶದ ಮೂಲಕ ಹಂತ ಹಂತವಾಗಿ ಪರಿಹಾರದ ಹಣವನ್ನು ವಿತರಣೆ ಮಾಡಲಾಗುತ್ತಿದೆ, ಸರ್ಕಾರದಿಂದ ರೈತರ ಬ್ಯಾಂಕ್ ಖಾತೆ(Bank Account)ಗಳಿಗೆ ನೇರವಾಗಿ ಪರಿಹಾರದ ಹಣವನ್ನು(DBT) ಜಮೆ ಮಾಡಲಾಗಿದೆ. ಇನ್ನು ಉಳಿದ ಅರ್ಹ ರೈತರಿಗೆ ಪರಿಹಾರದ(Parihara) ಹಣವನ್ನು ಹಂತ ಹಂತವಾಗಿ ಪಾವತಿಸುವ ಕಾರ್ಯವು ಪ್ರಗತಿಯ ಹಂತದಲ್ಲಿದ್ದು ಎಲ್ಲಾ ತುರ್ತು ಕ್ರಮ ಕೈಗೊಳ್ಳಲಾಗುವುದು, ಕೃಷಿ ವಿಷಯಕ್ಕೆ ಸಂಬಂಧಿಸಿದ ಪ್ರತಿ ಮಾಹಿತಿಯನ್ನು ಪಡೆಯಲು ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ಈಗಾಗಲೇ ಅನುಮೋದನೆ ಪಡೆದಿರುವ ರೈತರ ಮಾಹಿತಿಯ ಪಟ್ಟಿಯನ್ನು ಗ್ರಾಮ ಪಂಚಾಯಿತಿಗಳು, ನಾಡ ಕಚೇರಿಗಳು, ರೈತ ಸಂಪರ್ಕ ಕೇಂದ್ರಗಳು ಹಾಗೂ ತಹಶೀಲ್ದಾರ ಕಚೇರಿಗಳ ಸೂಚನಾ ಫಲಕದಲ್ಲಿ ಪರಿಹಾರದ ಪಟ್ಟಿಯನ್ನು ಪ್ರಕಟಿಸಲಾಗಿದೆ.
ರೈತರು ಬೆಳೆ ಹಾನಿ ಪರಿಹಾರವನ್ನು ಪಡೆದುಕೊಳ್ಳಲು ಫ್ರೂಟ್ಸ್ ಐಡಿ(Fruits ID) ಕಡ್ಡಾಯವಾಗಿರುವುದರಿಂದ, ಇದುವರೆಗೂ FID ಎನ್ನು ಮಾಡಿಸಿಕೊಳ್ಳದೆ ಇರುವ ರೈತರು ನಿಗದಿತ ಸಮಯದಲ್ಲಿ ತಮ್ಮ ಆಧಾರ್ ಕಾರ್ಡ್(Adhar Card), ಬ್ಯಾಂಕ್ ಖಾತೆಯ ವಿವರ(Bank Account Details) ಹಾಗೂ ಪಹಣಿ ಮಾಹಿತಿಯನ್ನು ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಫ್ರೂಟ್ಸ್ ಐಡಿ(FID) ಯನ್ನು ಮಾಡಿಕೊಳ್ಳಬಹುದು, FID ನಂಬರ್ ಹೊಂದಿಲ್ಲದ ರೈತರು ಬೆಳೆ ಪರಿಹಾರ(Bele parihara)ವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಸರ್ಕಾರವು ತಿಳಿಸಿದೆ.
ಬೆಳೆ ಹಾನಿ ಪರಿಹಾರ ಪಟ್ಟಿಯಲ್ಲಿ ನಮ್ಮ ಹೆಸರು ಇದೆ ಎಂದು ಚೆಕ್ ಮಾಡುವುದು ಹೇಗೆ?
https://fruitspmk.karnataka.gov.in/MISReport/FarmerDeclarationReport.aspx
- ಮೊದಲು ಮೇಲೆ ಕಾಣಿಸಿದ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಂತರ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾಮವನ್ನು ಸೆಲೆಕ್ಟ್ ಮಾಡಿ ‘ ವೀಕ್ಷಿಸು’ ಮೇಲೆ ಕ್ಲಿಕ್ ಮಾಡಿ.
- ನಂತರ ನಿಮಗೆ ನಿಮ್ಮ FID ನಂಬರ್ ಇರುವ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ನಿಮಗೆ ಬೆಳೆ ಹಾನಿ ಪರಿಹಾರ(Belehani pari)ದ ಪಟ್ಟಿ ಸಿಗಲಿದೆ.